ಕೇವಲ ಅಂಗಸೌಷ್ಟವವಿದ್ದರೆ ಸಾಲದು ನಮ್ಮ ವ್ಯಕ್ತಿತ್ವ ಸರ್ವಾಂಗ ಸುಂದರವಾಗಿ ರೂಪುಗೊಳ್ಳಬೇಕು. ನಮ್ಮ ವ್ಯಕ್ತಿತ್ವವು ನಮ್ಮ ಮಾತು ನಡೆ ನುಡಿ ನಯ ವಿನಯಗಳಿಂದ ರೂಪುಗೊಳ್ಳಬೇಕೇ ಹೊರತು ನಮ್ಮ ದೈಹಿಕ ಸೌಂದರ್ಯ, ಸಿರಿವಂತಿಕೆ, ದರ್ಪ ದೌಲತ್ತುಗಳಿಂದ ಅಲ್ಲ. ಅಂಕಣಕಾರ್ತಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ನಿಜವಾದ ಸೌಂದರ್ಯ’ ತಪ್ಪದೆ ಮುಂದೆ ಓದಿ…
ಸೂರ್ಯನ ಬಿಸಿಲು ತಾಕುತ್ತಲೇ ಸುಂದರವಾಗಿ ಅರಳುವ ನೈದಿಲೆಯ ಹುಟ್ಟು ಇರುವುದು ಕೆಸರಿನಲ್ಲಿ. ಕೆಸರಿನಲ್ಲಿದ್ದರೂ ಕಮಲ ದೇವರ ಪೂಜೆಗೆ ಅರ್ಪಿತವಾಗುವ ಅತ್ಯಂತ ಶ್ರೇಷ್ಠವಾದ ಪುಷ್ಪ. ಅದರ ಸೌಂದರ್ಯದ ಜೊತೆಗೆ ತನ್ನ ಸುತ್ತ ಇರುವ ಕೊಳಕನ್ನು ತಾಕಿಸಿಕೊಳ್ಳದೆ ಬೆಳೆಯುವ ಕಮಲವನ್ನು ಅದರ ಸೌಂದರ್ಯದ ಜೊತೆ ಜೊತೆಗೆ ಅದರ ಘನತೆ ಕೂಡ ಹೆಚ್ಚಿದ್ದು ಕೇಸರಿನಲ್ಲಿ ಹುಟ್ಟಿದ ಕಮಲ ಎಂಬ ವ್ಯಾಖ್ಯಾನಕ್ಕೆ ಪಾತ್ರವಾಗಿದೆ.
ಅಂತೆಯೇ ವ್ಯಕ್ತಿಯು ಕೂಡ ಅದೆಲ್ಲೇ ಹುಟ್ಟಲಿ, ಅದೆಲ್ಲೇ ಬೆಳೆಯಲಿ ಆತನ ವ್ಯಕ್ತಿತ್ವ ಸುಂದರವಾಗಿ ರೂಪಿಸಿಕೊಳ್ಳುವ ಮೂಲಕ ಚಂದದ ಬದುಕನ್ನು ಸಾಗಿಸಬಹುದು. ನಮ್ಮ ದೇಹದ ಹಾಗೂ ಮುಖದ ಸೌಂದರ್ಯ ಮತ್ತು ಆವರಿಸುವ ತನಕ. ಕೇವಲ ಅಂಗಸೌಷ್ಟವವಿದ್ದರೆ ಸಾಲದು ನಮ್ಮ ವ್ಯಕ್ತಿತ್ವ ಸರ್ವಾಂಗ ಸುಂದರವಾಗಿ ರೂಪುಗೊಳ್ಳಬೇಕು. ನಮ್ಮ ವ್ಯಕ್ತಿತ್ವವು ನಮ್ಮ ಮಾತು ನಡೆ ನುಡಿ ನಯ ವಿನಯಗಳಿಂದ ರೂಪುಗೊಳ್ಳಬೇಕೇ ಹೊರತು ನಮ್ಮ ದೈಹಿಕ ಸೌಂದರ್ಯ, ಸಿರಿವಂತಿಕೆ, ದರ್ಪ ದೌಲತ್ತುಗಳಿಂದ ಅಲ್ಲ.
ವ್ಯಕ್ತಿಯ ಸೌಂದರ್ಯವನ್ನು ಅಳೆಯುವ ಊರುಗೋಲುಗಳು ಹೀಗಿದೆ. ಕರ್ಮ…. ವ್ಯಕ್ತಿಯು ತನ್ನ ಬದುಕಿನಲ್ಲಿ ಹೊಂದಿರುವ ಒಳ್ಳೆಯ ಕರ್ಮಗಳಿಂದ ರೂಪುಗೊಳ್ಳುತ್ತಾನೆ. ನಮ್ಮ ಸನಾತನ ಧರ್ಮದಲ್ಲಿ ಸಂಚಿತ, ಪ್ರಾರಬ್ಧ ಹಾಗೂ ಅರ್ಜಿತ ಕರ್ಮಗಳು ಎಂಬ ಮೂರು ವಿಧಾನಗಳು ಉಂಟು.ಸಂಚಿತಕರ್ಮ ನಮ್ಮ ಹಿಂದಿನ ಜನ್ಮದಿಂದ ಸಂಪಾದಿಸಿದ ಕರ್ಮವಾದರೆ, ಪ್ರಾರಬ್ಧ ಕರ್ಮವು ನಾವು ಮಾಡಿದ ಕ್ರಿಯೆಗಳು ನಮ್ಮನ್ನು ಬೆಂಬಿಡದೆ ಕಾಯುವ / ಕಾಡುವ ಕರ್ಮವಾಗಿರುತ್ತದೆ. ಅರ್ಜಿತ ಕರ್ಮ ಎಂದರೆ ನಾವು ಮಾಡಿದ ಪುಣ್ಯದ ಫಲ.
ಆದರೆ ಇದೆಲ್ಲವನ್ನು ಮಿಗಿಲಾಗಿ ಪ್ರಸ್ತುತದ ವಾಸ್ತವ ಜಗತ್ತಿನಲ್ಲಿ ನಾವು ಮಾಡುತ್ತಿರುವ ಕೆಲಸ ಕಾರ್ಯಗಳು ಕೇವಲ ನಮಗೆ ಮಾತ್ರ ಒಳ್ಳೆಯದನ್ನು ಮಾಡಿದರೆ ಸಾಲದು ಬದಲಾಗಿ ನಮ್ಮ ಕೆಲಸ ಕಾರ್ಯಗಳಿಂದ ಇತರರಿಗೂ ಕೂಡ ಒಳ್ಳೆಯದಾಗಬೇಕು… ಕನಿಷ್ಠ ಪಕ್ಷ ನಮ್ಮ ಕ್ರಿಯೆಗಳಿಂದ ಬೇರೆಯವರಿಗೆ ಒಳ್ಳೆಯದಾಗದಿದ್ದರೂ ಪರವಾಗಿಲ್ಲ ಕೆಡುಕಾಗಬಾರದು ಎಂಬ ಉದ್ದೇಶವನ್ನು ಹೊಂದಿ ನಾವು ನಮ್ಮ ಬದುಕಿನಲ್ಲಿ ಕಾರ್ಯನಿರ್ವಹಿಸಬೇಕು.

ನಮ್ಮ ಯಾವುದೇ ಕಾರ್ಯ ಚಟುವಟಿಕೆಗಳು ಮತ್ತೊಬ್ಬರಿಗೆ ನೋವನ್ನುಂಟು ಮಾಡಬಾರದು ಎಂಬ ಅರಿವು ನಮ್ಮ ಆಂತರಿಕ ಪ್ರಜ್ಞೆಯಲ್ಲಿ ಸದಾ ಜಾಗೃತವಾಗಿರಬೇಕು. ಉತ್ತಮವಾದ ಶಿಕ್ಷಣ, ಒಳ್ಳೆಯ ನಡತೆ, ತೃಪ್ತಿಕರವಾದ ಕೆಲಸ ಕಾರ್ಯಗಳನ್ನು ಮನುಷ್ಯ ಹೊಂದಿರಬೇಕು. ಇದರ ಜೊತೆಗೆ ಸಂಘಜೀವಿಯಾಗಿರುವ ಮನುಷ್ಯ ಗುರು ಹಿರಿಯರೊಂದಿಗೆ ಗೌರವ ಪೂರ್ವಕವಾಗಿಯೂ, ತನ್ನ ವಾರಿಗೆಯ ಜನರೊಂದಿಗೆ ಅಚ್ಚುಮೆಚ್ಚಿನವರಾಗಿ, ಚಿಕ್ಕವರಿಗೆ ಅಕ್ಕರೆಯನ್ನು ತೋರುವ ವ್ಯಕ್ತಿಯಾಗಿಯೂ ಬದುಕಬೇಕು.
ವ್ಯಕ್ತಿಯ ನಿಜವಾದ ಸೌಂದರ್ಯ ಇರುವುದು ಆತನ ವಿಚಾರಗಳಲ್ಲಿ. ಮನದ ತುಂಬಾ ಕೊಳಕು ವಿಚಾರಗಳ ಮಲಿನತೆಯನ್ನು ಇಟ್ಟುಕೊಂಡು ಅದೆಷ್ಟೇ ಸುಂದರವಾಗಿ ಕಂಡರೂ ಪ್ರಯೋಜನವಿಲ್ಲ. ತನು ಮನಗಳಲ್ಲಿ ಪರಿಶುದ್ಧವಾದ ವ್ಯಕ್ತಿಯ ಮುಖದಲ್ಲಿ, ಆತನ ನಡತೆಯಲ್ಲಿ ಪ್ರತಿಪಲಿಸುತ್ತದೆ. ಸದ್ವಿಚಾರ ಸಚಿಂತನೆಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುವ ಮನುಷ್ಯ ಪರುಷ ಸೋಕಿದ ರೀತಿಯಲ್ಲಿ ಚೊಕ್ಕವಾಗುತ್ತಾನೆ. ಬೆಂಕಿಯಲ್ಲಿ ಬೆಂದು ತನ್ನೆಲ್ಲ ಕಶ್ಮಲಗಳನ್ನು ಕಳೆದುಕೊಳ್ಳುವ ಮೂಲಕ ಅಪರಂಜಿ ಚಿನ್ನವಾಗುವ ಬಂಗಾರದ ರೀತಿಯಲ್ಲಿ ಮನುಷ್ಯನು ತನ್ನ ಮನದಲ್ಲಿರುವ ಸಣ್ಣ ವಿಚಾರಗಳು, ಕ್ಷುಲ್ಲಕ ನಡವಳಿಕೆಗಳು ಅಪ್ರಜ್ಞಾಪೂರ್ವಕ ಕೊಂಕುಗಳನ್ನು ನಿವಾರಿಸಿಕೊಂಡು ಪರಿಶುದ್ಧ ಚಿನ್ನದ ಹಾಗೆ ತನ್ನ ವ್ಯಕ್ತಿತ್ವವನ್ನು ಹೊಂದಿ ಪ್ರತಿಫಲಿಸಬೇಕು.
ವ್ಯಕ್ತಿಯ ನಿಜವಾದ ಸೌಂದರ್ಯ ಇರುವುದು ಆತನ ಮಾತುಗಳಲ್ಲಿ. ಮಾತು ಮುತ್ತು ಪೋಣಿಸಿದ ಹಾಗೆ ಇರಬೇಕು ಮಾತು ಸುಗಂಧದ ಹಾರದಂತಿರಬೇಕೇ ಹೊರತು ಕೊಳೆತು ನಾರುವ ಚರಂಡಿ ಅಂತಲ್ಲ ನಮ್ಮ ವಿಶ್ವಜ್ಯೋತಿ ಬಸವಣ್ಣನವರು ಹೇಳಿದಂತೆ ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು ನಮ್ಮ ಮಾತುಗಳು ಅತ್ಯಂತ ಸತ್ಯ ಶುದ್ಧ ಪ್ರಾಮಾಣಿಕತೆಯಿಂದ ಕೂಡಿರಬೇಕು. ನಮ್ಮ ಮಾತುಗಳು ನೊಂದವರಿಗೆ ತಂಪೆರೆಯುವ ಅಮೃತ ಸಿಂಚನ ದಂತಿರಬೇಕು ನಮ್ಮ ಮಾತುಗಳು ಸೋತವರಿಗೆ ಮತ್ತೆ ಪ್ರೋತ್ಸಾಹ ತುಂಬಿ ಗೆಲುವಿನಡೆಗೆ ಕೈಹಿಡಿದು ಕರೆದೊಯ್ಯುವಂತಿರಬೇಕು ನಮ್ಮ ಮಾತು ಅಶಕ್ತರಿಗೆ ವಿರುದ್ಧರಿಗೆ ಅನಾರೋಗ್ಯ ಫೀಲ್ಡಿತರಿಗೆ ಚೈತನ್ಯವನ್ನು ತುಂಬುವ ಔಷದಿಯಂತಿರಬೇಕು ನಮ್ಮ ಮಾತು ಇತರರಿಗೆ ಪೂರ್ತಿಯನ್ನು ತುಂಬುವ ಶಕ್ತಿಯಾಗಬೇಕು…. ಇದೆಲ್ಲವೂ ನಮ್ಮ ಮಾತಿನಿಂದ ಮಾಡಲು ಸಾಧ್ಯವಾಗದಿದ್ದರೆ ಬೇಡ ಆದರೆ ನಮ್ಮ ಮಾತುಗಳಿಂದ ಯಾರಿಗೂ ನೋವನ್ನುಂಟು ಮಾಡಬಾರದು ಎಂಬ ರೀತಿಯಲ್ಲಿ ಇರಬೇಕು.
ವ್ಯಕ್ತಿಯ ಸೌಂದರ್ಯವನ್ನು ಆತನ ವ್ಯವಹಾರದಿಂದ ಗುರುತಿಸಬೇಕು…ವ್ಯವಹಾರವನ್ನು ಎರಡು ರೀತಿಯಲ್ಲಿ ಹೇಳಬಹುದು ಒಂದು ಆತ ಇತರರೊಂದಿಗೆ ನಡೆದುಕೊಳ್ಳುವ ರೀತಿ ನೀತಿಗಳನ್ನು ವ್ಯವಹರಿಸುವುದು ಎಂದು ಹೇಳಿದರೆ ಇನ್ನೊಂದು ವ್ಯವಹಾರ ಆತನ ಉದ್ಯೋಗ ದರ ಕುರಿತಾಗಿರಬಹುದು. ವ್ಯಕ್ತಿಯ ಸೌಂದರ್ಯ ಇರುವುದು ಕರ್ಮ ವಿಚಾರ ಮಾತು,ವ್ಯವಹಾರ,ಸಂಸ್ಕಾರ, ವ್ಯಕ್ತಿತ್ವ, ಚಾರಿತ್ರ್ಯ ಹಾಗೂ’ ಒಳ್ಳೆಯ ಸಂಸ್ಕಾರವಂತ ನಾಗರಿಕ ಸಮಾಜ ನಮ್ಮದಾಗಲಿ ಎಂಬ ಹಾರೈಕೆಯೊಂದಿಗೆ…
- ಹಿಂದಿನ ಸಂಚಿಕೆಗಳು :
- ಬದುಕಿಗೊಂದು ಸೆಲೆ (ಭಾಗ -೧)
- ಬದುಕಿಗೊಂದು ಸೆಲೆ (ಭಾಗ -೨)
- ಬದುಕಿಗೊಂದು ಸೆಲೆ (ಭಾಗ -೩)
- ಬದುಕಿಗೊಂದು ಸೆಲೆ ‘ಕೆಲ ವಿಷಯಗಳಿಗೆ ಕಿವುಡರಾಗಬೇಕು’ (ಭಾಗ – ೪)
- ಬದುಕಿಗೊಂದು ಸೆಲೆ ‘ಉದಾರತೆ ಎಂಬ ಮಾರುಕಟ್ಟೆ ತಂತ್ರ’ (ಭಾಗ- ೫)
- ಬದುಕಿಗೊಂದು ಸೆಲೆ ‘ಹೌದು! ನನಗೆ ವಯಸ್ಸಾಗುತ್ತಿದೆ’ (ಭಾಗ – ೬)
- ಬದುಕಿಗೊಂದು ಸೆಲೆ‘ಕಾಯುತ್ತಿದ್ದಾರೆ ನಿಮ್ಮವರು… ನಿಮಗಾಗಿ’ (ಭಾಗ -೭)
- ಬದುಕಿಗೊಂದು ಸೆಲೆ ‘ಹೆಣ್ಣು ಮಕ್ಕಳೇ ಎಚ್ಚರವಾಗಿ’ (ಭಾಗ – ೮)
- ಬದುಕಿಗೊಂದು ಸೆಲೆ ‘ ಮನೆಯ ಆಹಾರವೂ,ಕೌಟುಂಬಿಕ ಬಂಧವೂ’ (ಭಾಗ – ೯)
- ಬದುಕಿಗೊಂದು ಸೆಲೆ ‘ಶ್ರಾವಣ ಮಾಸ… ಶ್ರವಣ ಮಾಸ’ (ಭಾಗ – ೧೦)
- ಬದುಕಿಗೊಂದು ಸೆಲೆ ‘ಪ್ಯಾರಿಸ್ ಸುಗಂಧದ ಖ್ಯಾತಿಯ ಕೋಕೋ ಚಾನೆಲ್…. ಸತತ ಪ್ರಯತ್ನದ ಸಾಫಲ್ಯ’ (ಭಾಗ – ೧೧)
- ಬದುಕಿಗೊಂದು ಸೆಲೆ ವರಮಹಾಲಕ್ಷ್ಮಿ ಹಬ್ಬ (ಭಾಗ – ೧೨)
- ಬದುಕಿಗೊಂದು ಸೆಲೆ ‘ಸಿತಾರೆ ಜಮೀನ್ ಪರ್’ (ಭಾಗ – ೧೪)
- ಬದುಕಿಗೊಂದು ಸೆಲೆ ‘ಸಾಧನೆಯ ಶಿಖರ ಏರಲು…ಬೇಕು ಬದ್ಧತೆ’ (ಭಾಗ – ೧೫)
- ಬದುಕಿಗೊಂದು ಸೆಲೆ ‘ನನ್ನ ಪ್ರೀತಿಯ ಗಣೇಶ’ (ಭಾಗ – ೧೬)
- ಬದುಕಿಗೊಂದು ಸೆಲೆ ‘ಗಣೇಶ….ವಿಗ್ರಹ ಒಂದು ಸಂಕೇತಗಳು ನೂರು’ (ಭಾಗ – ೧೭)
- ಬದುಕಿಗೊಂದು ಸೆಲೆ ‘ನಮ್ಮ ಬದುಕು ಮತ್ತು ಆಯ್ಕೆಗಳು’ (ಭಾಗ – ೧೮)
- ಬದುಕಿಗೊಂದು ಸೆಲೆ ‘ಸ್ನೇಹ ಬಂಧ ’ (ಭಾಗ-೧೯)
- ಬದುಕಿಗೊಂದು ಸೆಲೆ ‘ಮಕ್ಕಳ ಕುರಿತು ಅತಿ ಕಾಳಜಿ…. ಖಂಡಿತ ಬೇಡ’ (ಭಾಗ-೨೦)
- ಬದುಕಿಗೊಂದು ಸೆಲೆ ‘ಮಕ್ಕಳ ಸಂಸ್ಕಾರದಲ್ಲಿ ತಾಯಿಯ ಪಾತ್ರ’ (ಭಾಗ-೨೧)
- ಬದುಕಿಗೊಂದು ಸೆಲೆ ‘ಮಗನಿಗೆ ಶಿಸ್ತಿನ ಪಾಠದ ಪತ್ರ’ (ಭಾಗ-೨೨)
- ಬದುಕಿಗೊಂದು ಸೆಲೆ ‘ಭಿತ್ತಿಯಲ್ಲಿ ನೆನಪಾಗಿ ಉಳಿದ… ಎಸ್ ಎಲ್ ಭೈರಪ್ಪ’ (ಭಾಗ-೨೩)
- ಬದುಕಿಗೊಂದು ಸೆಲೆ “ದ ಹ್ಯಾಪಿಯಸ್ ಮ್ಯಾನ ಆನ್ ದ ಅರ್ಥ’ (ಭಾಗ-೨೪)
- ಬದುಕಿಗೊಂದು ಸೆಲೆ ‘ಎಲ್ಲ ಏಟಿಗೂ ಇದಿರೇಟು….ಉತ್ತರವಲ್ಲ’ (ಭಾಗ-೨೫)
- ಬದುಕಿಗೊಂದು ಸೆಲೆ ‘ಗಂಡು ಹೆಣ್ಣು…. ಒಂದು ಸಾಮಾಜಿಕ ವಿಶ್ಲೇಷಣೆ’ (ಭಾಗ-೨೬)
- ಬದುಕಿಗೊಂದು ಸೆಲೆ ‘ಮೂಲಭೂತ ಅಭ್ಯಾಸಗಳು ಮತ್ತು ಮಕ್ಕಳು’ (ಭಾಗ-೨೭)
- ಬದುಕಿಗೊಂದು ಸೆಲೆ ‘ಬೆಳಕಿನ ಹಬ್ಬ ದೀಪಾವಳಿ ’ (ಭಾಗ-೨೮)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೨೯)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೩೦)
- ಬದುಕಿಗೊಂದು ಸೆಲೆ ‘ನಿಮ್ಮ ಮಕ್ಕಳ ವರ್ತನೆ ಮಿತಿಯಲ್ಲಿರಲಿ… ಯಾವುದೂ ಅತಿಯಾಗದಿರಲಿ ’ (ಭಾಗ-೩೧)
- ಬದುಕಿಗೊಂದು ಸೆಲೆ ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ (ಭಾಗ-೩೨)
- ಬದುಕಿಗೊಂದು ಸೆಲೆ (ಭಾಗ-೩೩)
- ಬದುಕಿಗೊಂದು ಸೆಲೆ ‘ಪ್ರೀತಿಯ ತೀವ್ರತೆ’ (ಭಾಗ-೩೪)
- ಬದುಕಿಗೊಂದು ಸೆಲೆ ‘ಖಾಲಿ ಕುರ್ಚಿ ಎಂಬ ತತ್ವವೂ…ನಮ್ಮ ಬದುಕೂ’ (ಭಾಗ-೩೫)
- ಬದುಕಿಗೊಂದು ಸೆಲೆ ‘ಒಂದು ಸುತ್ತು….ಋತುಚಕ್ರ ರಜೆಯ ಸುತ್ತ’ (ಭಾಗ-೩೬)
- ಬದುಕಿಗೊಂದು ಸೆಲೆ ‘ಮೌನ ಸಾಧನೆ’ (ಭಾಗ-೩೭)
- ಬದುಕಿಗೊಂದು ಸೆಲೆ ‘ಮಹತ್ವಕಾಂಕ್ಷಿ ಕ್ರೀಡಾ ಯೋಜನೆಗಳು ಹಾಗೂ ಕ್ರೀಡೆಯ ಭವಿಷ್ಯ??’ (ಭಾಗ-೩೮)
- ಬದುಕಿಗೊಂದು ಸೆಲೆ ‘ಮಾಧ್ಯಮಗಳ ವೈಭವೀಕೃತ ಸುದ್ದಿ ನಿರೂಪಣೆ…. ಒಂದು ವಿವೇಚನೆ’ (ಭಾಗ-೩೯)
- ಬದುಕಿಗೊಂದು ಸೆಲೆ ‘ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬನೆ’ (ಭಾಗ-೪೦)
- ಬದುಕಿಗೊಂದು ಸೆಲೆ ‘ಅವರಿವರನ್ನು ಕಂಡು ಕರುಬದಿರಿ… ನೀವು ನೀವಾಗಿಯೇ ಇರಿ’ (ಭಾಗ-೪೧)
- ಬದುಕಿಗೊಂದು ಸೆಲೆ ‘ಶ್ರೀ ಸಿದ್ದೇಶ್ವರ ಸ್ವಾಮಿಗಳು’ (ಭಾಗ-೪೨)
- ಬದುಕಿಗೊಂದು ಸೆಲೆ ‘ಯುವ ಜನತೆಗೆ ಹಣಕಾಸಿನ ಕುರಿತಾದ ಚಿನ್ನದಂತಹ ನಿಯಮಗಳು’ (ಭಾಗ-೪೩)
- ಬದುಕಿಗೊಂದು ಸೆಲೆ ‘ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹೇಗೆ ?’ (ಭಾಗ-೪೪)
- ಬದುಕಿಗೊಂದು ಸೆಲೆ ‘ದಾಂಪತ್ಯದಲ್ಲಿ ಸಮಾನತೆ ’ (ಭಾಗ-೪೫)
- ಬದುಕಿಗೊಂದು ಸೆಲೆ ‘ಹೀಗೊಂದು ವಧು/ವರ ಪರೀಕ್ಷೆ ’ (ಭಾಗ-೪೭)
- ಬದುಕಿಗೊಂದು ಸೆಲೆ ‘ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು’ (ಭಾಗ-೪೮)
- ಬದುಕಿಗೊಂದು ಸೆಲೆ ‘ಹಕ್…… ತನ್ನ ಹಕ್ಕಿಗಾಗಿ ಹೆಣ್ಣು ಮಗಳ ಹೋರಾಟ’ (ಭಾಗ-೪೯)
- ಬದುಕಿಗೊಂದು ಸೆಲೆ ಶಾಂತಿ ಸುಧಾ ಘೋಷ್ (ಭಾಗ- ೫೧)
- ಬದುಕಿಗೊಂದು ಸೆಲೆ ಪೋಲ್ಯಾಂಡ್ ದೇಶದ ಮಕ್ಕಳ ದುರಂತದ ಕತೆ (ಭಾಗ- ೫೨)
- ಬದುಕಿಗೊಂದು ಸೆಲೆ ಕಾಶಿಯ ಲತಾ ಮಂಗಳ ಕಪೂರ್ ಗೆ ಪದ್ಮಶ್ರೀ ಪುರಸ್ಕಾರ (ಭಾಗ- ೫೩)
- ಬದುಕಿಗೊಂದು ಸೆಲೆ ‘ಶಿವರಾತ್ರಿ, ಶಿವನ ಆರಾಧನೆಯ ದಿನ’ (ಭಾಗ- ೫೪)
- ಬದುಕಿಗೊಂದು ಸೆಲೆ ‘ಅಸಹನೀಯವಾಗದಿರಲಿ ವೃದ್ಧಾಪ್ಯ’ (ಭಾಗ- ೫೫)
- ಬದುಕಿಗೊಂದು ಸೆಲೆ ‘ಸಮತೋಲಿತ ಆಹಾರ’ (ಭಾಗ- ೫೬)
- ಬದುಕಿಗೊಂದು ಸೆಲೆ ‘ನವಜಾತ ಶಿಶು ವಿಜ್ಞಾನ ಶಾಸ್ತ್ರದ ಮಹಾತಾಯಿ….ಡಾಕ್ಟರ್ ಅಮಿದಾ ಫರ್ನಾಂಡಿಸ್’ (ಭಾಗ- ೫೭)
- ಬದುಕಿಗೊಂದು ಸೆಲೆ ‘ಬಣ್ಣಗಳ ಹಬ್ಬ…. ಹೋಳಿ’ (ಭಾಗ- ೫೮)
- ಬದುಕಿಗೊಂದು ಸೆಲೆ ‘ಇರಲಿ ಆಸರೆ, ಹಿರಿ ಜೀವಗಳಿಗೆ ’ (ಭಾಗ- ೫೯)
- ಬದುಕಿಗೊಂದು ಸೆಲೆ ‘ಸಂಕಲ್ಪ ಶಕ್ತಿ ಮತ್ತು ಯಶೋಗಾಥೆ ’ (ಭಾಗ- ೬೦)
- ಬದುಕಿಗೊಂದು ಸೆಲೆ ಅನುರಾಧ ಕೊಯಿರಾಲ (ಭಾಗ- ೬೧)
- ಬದುಕಿಗೊಂದು ಸೆಲೆ ‘ಗ್ರಾಮೀಣ ಬದುಕಿನಲ್ಲಿ ಯುಗಾದಿ ಹಬ್ಬದ ಸಂಭ್ರಮ’ (ಭಾಗ- ೬೨)
- ಬದುಕಿಗೊಂದು ಸೆಲೆ ‘ ಯುಥನೇಶಿಯ…. ದಯಾಮರಣಕ್ಕೆ ಅಸ್ತು’ (ಭಾಗ- ೬೩)
- ಬದುಕಿಗೊಂದು ಸೆಲೆ ‘ ವೈರುಧ್ಯಗಳ ನಡುವೆ…. ಹೆಣ್ಣಿನ ಬದುಕು’ (ಭಾಗ- ೬೪)
- ಬದುಕಿಗೊಂದು ಸೆಲೆ ‘ಗೃಹಕೃತ್ಯ…ಕಾನೂನಿನಲ್ಲಿ ಮಾನ್ಯತೆ’ (ಭಾಗ- ೬೫)
- ಬದುಕಿಗೊಂದು ಸೆಲೆ ‘ಹಿಂದಿ ಇರಲಿ ನಮ್ಮ ಪಠ್ಯದ ಭಾಗ’ (ಭಾಗ- ೬೬)
- ಬದುಕಿಗೊಂದು ಸೆಲೆ ‘ಒಂದು ಕಪ್ ಚಹಾ ಮತ್ತು ಒಂಟಿತನ’ (ಭಾಗ- ೬೭)
- ಬದುಕಿಗೊಂದು ಸೆಲೆ ‘ನಿಮ್ಮ ಮನವ ಸಂತೈಸಿಕೊಳ್ಳಿ’ (ಭಾಗ- ೬೮)
- ಬದುಕಿಗೊಂದು ಸೆಲೆ ‘ಸುಡುವ ಸೂರ್ಯನಿಗೊಂದು ಪತ್ರ’ (ಭಾಗ- ೬೯)
- ಬದುಕಿಗೊಂದು ಸೆಲೆ ‘ವೈದ್ಯೆ ಮತ್ತು ಯೋಧ ಮಹಿಳೆ’ (ಭಾಗ- ೭೦)
- ವೀಣಾ ಹೇಮಂತಗೌಡ ಪಾಟೀಲ್ – ಮುಂಡರಗಿ, ಗದಗ
