ಈಗಾಗಲೇ ಸಾಹಿತ್ಯಕ್ಷೇತ್ರದಲ್ಲಿ ಗುರ್ತಿಸಿಕೊಂಡಿರುವ ಲೇಖಕಿ ಶಾರದಾ ವಿ.ಮೂರ್ತಿ ಇವರು ಇದುವರೆಗೂ ೩೦ ಕ್ಕಿಂತ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅನೇಕ ಪ್ರಶಸ್ತಿ, ಸನ್ಮಾನಗಳು ಇವರಿಗೆ ಲಭಿಸಿವೆ. ಪ್ರಸ್ತುತ ನಂಟು ಕೃತಿಯಲ್ಲಿ ಮೂರು ಸೊಗಸಾದ ಕಥೆಗಳಿವೆ. ನಂಟು ಕೃತಿಯ ಕುರಿತು ಲೇಖಕರಾದ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ ಹೆಸರು: ನಂಟು.
ಲೇಖಕರು: ಶಾರದಾ ವಿ.ಮೂರ್ತಿ.
ಮಂಗಳ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೨೦೧೫.
ಪುಟಗಳು:೨೨೨.
ಬೆಲೆ:೧೪೦.

ಮೊದಲನೆಯ ನೀಳ್ಗಥೆಯ ಶೀರ್ಷಿಕೆ:
ನಂಟು
ಸಂಪಗಾರು ಎಂಬ ಕುಗ್ರಾಮದಲ್ಲಿರುವ ದೂರದ ಶಾಲೆಗೆ ಮಳೆಗಾಲ ದಲ್ಲಿ ನಡೆದು ಹೋಗುವುದು ಸಂಜಯನಿಗೆ ತುಂಬಾ ಕಷ್ಟವೆನಿಸುತ್ತಿತ್ತು. ಜೊತೆಗೆ ತಮ್ಮ ಸಂದೀಪ ತಂಗಿ ಸಂಧ್ಯಾ ಕೂಡ ಬರುತ್ತಿದ್ದರು. ತಾನು ಹೇಗಾದರೂ ಓದಿ ಕೆಲಸ ಗಿಟ್ಟಿಸಿ ಪೇಟೆಯಲ್ಲೇ ನೆಲಸ ಬೇಕು ಎಂಬುದು ಸಂಜಯನ ಆಸೆ .
ಅವನ ತಂದೆ ಗೋಪಾಲ ಭಟ್ಟರು ಮೂಲತಃ ಹಾಲಾಡಿ ಎನ್ನುವ ಊರಿನವರಾದರೂ, ಸಂಪಗಾರು ಬಟ್ಟರ ಕುಟುಂಬಕ್ಕೆ ಸೇರಿದ್ದೂ ಒಂದು ಕಥೆ. ಗಂಡು ಮಕ್ಕಳಿರದ ಮೂರು ಹೆಣ್ಣು ಮಕ್ಕಳ ತಂದೆ ವೆಂಕಟಕೃಷ್ಣ ಭಟ್ಟರು ಅಡಿಕೆತೋಟದ ಕೆಲಸದ ಜೊತೆ ಗಣಪತಿ ದೇವಸ್ಥಾನದ ಪೂಜೆಯನ್ನೂ ಮುಂದುವರೆಸಿಕೊಂಡು ಹೋಗ ಬೇಕಾಗಿತ್ತು. ದೂರದ ಬಡ ಬಂಧುಗಳ ಮನೆಯ ತಾಯಿಯಿಲ್ಲದ ಹುಡುಗ ಗೋಪಾಲನನ್ನು ನೋಡಿದಾಗ, ವಾತ್ಸಲ್ಯ ಮೂಡಿ ಅವನ ಜೀವನಕ್ಕೊಂದು ವ್ಯವಸ್ಥೆ ಮಾಡುವ ಭರವಸೆ ನೀಡಿ,ಆತನ ತಂದೆ ನರಸಿಂಹನನ್ನು ಒಪ್ಪಿಸಿ,ವೇದ ಮಂತ್ರ ಕಲಿಸಿ, ಸ್ವಂತ ಮಗನಂತೆ ವೆಂಕಟಕೃಷ್ಣ ಭಟ್ಟರು ಅವನನ್ನು ಸಾಕಿಕೊಂಡಿದ್ದರು. ಮುಂದೆ ಅವರ ಮೂರು ಹೆಣ್ಣು ಮಕ್ಕಳ ಮದುವೆಯಾದ ಮೇಲೆ ,ಗೋಪಾಲನಿಗೂ ಶ್ರೀದೇವಿಯ ಜೊತೆ ಮದುವೆ ಮಾಡಿದ್ದರು.
ಸಾಕುತಂದೆಯ ಮನೆಯನ್ನು ,ಅವರ ಹೆಣ್ಣು ಮಕ್ಕಳ ಜೊತೆಯ ಸೋದರ ಸಂಬಂಧವನ್ನು, ದೇವಸ್ಥಾನದ ಪೂಜೆಯ ಕೆಲಸವನ್ನೂ ಶ್ರದ್ಧೆಯಿಂದ ಮಾಡುತ್ತಾ, ಊರಲ್ಲಿಯೂ ಜನಾನುರಾಗಿಯಾಗಿದ್ದ ಗೋಪಾಲ ಭಟ್ಟರು ಹಳ್ಳಿಯೊಡನೆ ಬಿಡಲಾರದ ನಂಟು ಹೊಂದಿದ್ದರು. ಕಾಲಕ್ರಮದಲ್ಲಿ ಅವರ ಮಕ್ಕಳೆಲ್ಲಾ ಓದಿ ಕೆಲಸಕ್ಕೆ ಸೇರಿ ನಗರದ ಕಡೆ ಮುಖ ಮಾಡಿದಾಗ, ಅವರಿಗೆ ಮನಸ್ಸಿಲ್ಲದಿದ್ದರೂ,ಒಂದು ಹಂತದಲ್ಲಿ ತೋಟ ಮಾರಿ ಮಗನೊಂದಿಗೆ ಬೆಂಗಳೂರಿಗೆ ಹೋಗುವ ನಿರ್ಧಾರವಾಗಿತ್ತು.ಆದರೆ ಸಂಪಗಾರಿನ ಮಣ್ಣಿನೊಂದಿಗೆ ಗೋಪಾಲ
ಭಟ್ಟರ ನಂಟು ಎಲ್ಲರೂ ಅಂದು ಕೊಂಡಿದ್ದಕ್ಕಿಂತಲೂ ಗಟ್ಟಿಯಾಗಿತ್ತು ಎಂದು ಸಾಬೀತಾಗಿದ್ದು ಹೇಗೆ?…
ಪ್ರೀತಿ ಸೌರಭ
ರೇವತಿ ಮತ್ತು ಸ್ವಾತಿ ಗೆಳತಿಯರು.ರೇವತಿಯ ಅಣ್ಣ ಪ್ರಭಾಕರನಿಗೆ ಸ್ವಾತಿಯನ್ನು ಕಂಡರೆ ಇಷ್ಟ.ಮನೆಯಲ್ಲೂ ಎಲ್ಲರಿಗೂ ಸ್ವಾತಿಯ ಗುಣ ನಡತೆ ಮೆಚ್ಚುಗೆಯಾಗಿತ್ತು. ರೇವತಿಯ ಮದುವೆಯಾದ ಮೇಲೆ ಸ್ವಾತಿಯನ್ನು ಸೊಸೆ ಮಾಡಿಕೊಳ್ಳಲು ನಿರ್ಧರಿಸಿದ್ದರು.
ರೇವತಿಗೆ ನೋಡಿದ ಒಂದೆರಡು ಸಂಬಂಧಗಳು ವರದಕ್ಷಿಣೆಯ ಕಾರಣದಿಂದ ತಪ್ಪಿ ಹೋಗಿ, ಅದೇ ಸಮಯಕ್ಕೆ ಅವಳ ತಂದೆಯ ತೀರಿ ಮುಂದಿನ ದಿನಗಳಲ್ಲಿ ಕಷ್ಟಗಳು ಆವರಿಸಿದವು.
ಅವರ ತಂದೆಯ ಸ್ನೇಹಿತರ ಮಗ ಶ್ಯಾಮಸುಂದರ್ ರೇವತಿಯನ್ನು ಮದುವೆಯಾಗಲು ಒಪ್ಪಿದ್ದ.ಆದರೆ ಅವನ ಶರತ್ತೆಂದರೆ ತನ್ನ ಕುಂಟಿಯಾದ ತಂಗಿ ಕಲಾಳನ್ನು ಪ್ರಭಾಕರ ವರಿಸಬೇಕು ಎನ್ನುವುದು.
ಇದಕ್ಕೆ ಸ್ವಾತಿ, ಕಲಾ ಹಾಗೂ ಪ್ರಭಾಕರ ಇವರೆಲ್ಲರ ಅಭಿಪ್ರಾಯ ಏನೇನೆಂಬುದು ಅವರವರ ಮನದ ತಳಮಳವನ್ನು ಮನೋಜ್ಞವಾಗಿ ಲೇಖಕಿ ಕಟ್ಟಿ ಕೊಟ್ಟಿದ್ದಾರೆ.

ಕಾಲಮಿಂಚಿದ ಮೇಲೆ
ಮದುವೆಯಾದ ತನಗೆ ಸಿನಿಮಾದಲ್ಲಿ ನಟಿಸಲು ಒದಗಿ ಬಂದ ಅವಕಾಶಕ್ಕೆ ಹೆಮ್ಮೆ ಪಡುತ್ತಾ, ಸುಂದರಿ ಕೋಕಿಲಾ ಎರಡು ವರ್ಷದ ಮಗ ಹಾಗೂ ಪ್ರೀತಿಸುವ ಗಂಡನನ್ನು ಬಿಟ್ಟು ಚಿತ್ರರಂಗಕ್ಕೆ ಹಾರುತ್ತಾಳೆ.
ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಇಷ್ಟುದಿನ ಕೋಕಿಲಾ ಜೊತೆ ಚೆಂದದ ಸಂಸಾರ ನಡೆಸುತ್ತಿದ್ದ ಅವಳ ಪತಿ ಮೋಹನನಿಗೆ ಈಗ ಏಕಾ ಏಕಿ ಚಿಕ್ಕ ಮಗ ರವಿಯೊಂದಿಗೆ ಮನೆ ಕಚೇರಿ ಹಾಗೂ ಕೆಲಸ ನಿಭಾಯಿಸುವುದು ಕಷ್ಟವಾಗ ತೊಡಗಿತ್ತು.
ಅತ್ತ ಕೋಕಿಲಾ ಕೀರ್ತಿ ಹಣದ ಬೆನ್ನು ಹತ್ತಿ ಯಶಸ್ವಿಯೂ ಆದಳು. ಆದರೆ ಮಗನಿಗೆ ಹುಷಾರಿಲ್ಲದ ಸಮಯದಲ್ಲಿ ಮನೆಗೆ ಹೋಗದೆ ಸ್ವಾರ್ಥಿಯಾದಳು. ಮೋಹನನನ್ನು ಅವಮಾನಿಸಿ ಕೈಗೆಟುಕದ ಗಗನ ಕುಸುಮವಾದಳು. ಆದರೆ ವರ್ಷ ಕಳೆದಂತೆ ಅವಳ ಗರ್ವ ಮುರಿದಿತ್ತು. ತನ್ನ ಆದರ್ಶ ಸಂಸಾರದ ನೆನಪಾಗಿ ಅವಳು ಮತ್ತೆ ಮೋಹನ ಮತ್ತು ಮಗುವಿನ ಜೊತೆ ಇರಲು ಬಯಸಿದಳು. ಅದಕ್ಕೆ ಮೋಹನ ಕೊಟ್ಟ ಉತ್ತರವೇನು?….ತಿಳಿಯಲು ಪುಸ್ತಕವನ್ನು ಓದಿ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ‘ಅಗಸ್ತ್ಯ’ ಕೃತಿ ಪರಿಚಯ
- ‘ಸಾಂದರ್ಭಿಕ’ ಕೃತಿ ಪರಿಚಯ
- ರೇಖಾ ಕಾಖಂಡಕಿ ಅವರು ಕೃತಿ ಪರಿಚಯ
- ಗೌರಿ ಕೃತಿ ಪರಿಚಯ
- ‘ನಿಮ್ಮ ಸಿಮ್ಮ’ ಕೃತಿ ಪರಿಚಯ
- ‘ಪಣಿಯಮ್ಮ’ ಕೃತಿ ಪರಿಚಯ
- ‘ಚಿಗುರಿದ ಕನಸು’ ಕೃತಿ ಪರಿಚಯ
- ‘ಅಶ್ವತ್ಥಾಮೋ ಹತಃ’ ಪರಿಚಯ
- ‘ಹೂ ದಂಡಿ’ ಕೃತಿ ಪರಿಚಯ
- ‘ಬೂದಿ ಮುಚ್ಚಿದ ಕೆಂಡ’ ಕೃತಿ ಪರಿಚಯ
- ‘ಇಲಿಯಡ್’ ಕೃತಿ ಪರಿಚಯ
- ‘ಅಲೆಯೊಳಗಿನ ಮೌನ’ ಕೃತಿ ಪರಿಚಯ
- ‘ಹೂಲಿ ಶೇಖರರ ನಾಟಕಗಳು’ ಕೃತಿ ಪರಿಚಯ
- ‘ನನ್ನಕ್ಕ ನಿಲೂಫರ್’ ಕೃತಿ ಪರಿಚಯ
- ‘ಅರಣ್ಯಕಾಂಡ’ ಕೃತಿ ಪರಿಚಯ
- ‘ವಿಕ್ರಮಾರ್ಜುನ ವಿಜಯ’ ಕೃತಿ ಪರಿಚಯ
- ‘ಸುನೀತಗಳು’ ಕೃತಿ ಪರಿಚಯ
- ‘ಮೈ- ಮನಸ್ಸುಗಳ ಸುಳಿಯಲ್ಲಿ ಸಖಿ!’ ಕೃತಿ ಪರಿಚಯ
- ‘ಪದ್ದಣ ಮನೋರಮೆ’ ಕೃತಿ ಪರಿಚಯ
- ‘ಬ್ರಹ್ಮರಾಕ್ಷಸ’ ಕೃತಿ ಪರಿಚಯ
- ‘ಬದುಕ ಭಿತ್ತಿಯ ಚಿತ್ರಗಳು’ ಕೃತಿ ಪರಿಚಯ
- ‘ಅಮ್ರಪಾಲಿ’ ಪುಸ್ತಕ ಪರಿಚಯ
- ‘ಇದು ಕತೆಯಲ್ಲ ಜೀವನ’ ಕೃತಿ ಪರಿಚಯ
- ‘ಕೇದಗೆ ಪುಷ್ಪ’ ಕೃತಿ ಪರಿಚಯ
- ‘ಬಂಕಿಮಚಂದ್ರರ ಶ್ರೇಷ್ಠ ಕತೆಗಳು’ ಕೃತಿ ಪರಿಚಯ
- ‘ಸೀಳುದಾರಿ’ ಪುಸ್ತಕ ಪರಿಚಯ
- ‘ಲವ್ ಟುಡೆ’ ಕೃತಿ ಪರಿಚಯ
- ‘ಕ್ಲಾಸ್ ಟೀಚರ್’ ಕೃತಿ ಪರಿಚಯ
- ‘ಒಂದು ಎಂಟಾಣೆಯ ಕಥೆ’ ಕೃತಿ ಪರಿಚಯ
- ‘ನಿಮಗ ತಿಳಿಯೋದಿಲ್ಲ ಬಿಡ್ರಿ’ ಕೃತಿ ಪರಿಚಯ
- ‘ಮಾಸದ ವಿಜಯ’ ಕೃತಿಯ ಪರಿಚಯ
- ‘ಅರಳಿಮರ’ ಪುಸ್ತಕ ಪರಿಚಯ
- ‘ಆಸೆಯ ಅಲೆಗಳ ಮೇಲೆ’ ಕೃತಿ ಪರಿಚಯ
- ‘ಬರ್ಬರಿಕ’ ಕೃತಿ ಪರಿಚಯ
- ‘ನನ್ನ ದನಿಗೆ ನಿನ್ನ ದನಿಯು’ ಕೃತಿ ಪರಿಚಯ
- ‘ಅಂತರಂಗ’ ಕೃತಿ ಪರಿಚಯ
- ‘ಕಾಡುಬಳ್ಳಿ’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್ – ಕಿರಿಯ ಸಹಾಯಕರು, ಲೋಕೋಪಯೋಗಿ ಇಲಾಖೆ ಉಪವಿಭಾಗ, ಸಿದ್ದಾಪುರ.
