ಮೊದಲ ಮಹಿಳಾ ಶಸ್ತ್ರಚಿಕಿತ್ಸೆಗಾರ್ತಿ ಭಾರತದ ಮಿಲಿಟರಿ ಇತಿಹಾಸದಲ್ಲಿ ದಾಖಲಾಗಿರುವ ಮೇಜರ್ ಡಾಕ್ಟರ್ ಪಾಯಲ್ ಛಾಬ್ರ ಕುರಿತು ಅಂಕಣಕಾರ್ತಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ವೈದ್ಯೆ ಮತ್ತು ಯೋಧ ಮಹಿಳೆ’ ತಪ್ಪದೆ ಮುಂದೆ ಓದಿ…
ಹರಿಯಾಣದ ಪ್ರಶಾಂತವಾದ ಭೂಮಿತಾಯಿಯ ಅಂಗಳದಲ್ಲಿ ಮನೆ ಮಾಡಿಕೊಂಡಿದ್ದ ಆ ಕುಟುಂಬವು ತಮ್ಮ ಇಡೀ ಬದುಕನ್ನು ರೋಗಿಗಳ ಸೇವೆಗೆ ಅರ್ಪಿಸಿಕೊಳ್ಳುವ ಪ್ರಮಾಣವನ್ನು ಮಾಡಿತ್ತು. ತಂದೆ, ತಾಯಿ, ಸಹೋದರ ಎಲ್ಲರೂ ವೈದ್ಯರಾಗಿದ್ದರು. ಇನ್ನು ಆ ಕುಟುಂಬದ ಮಗಳು ಪಾಯಲ್ ಛಾಬ್ರಾ ಬದುಕು ವಿಭಿನ್ನವಾಗಿರಲು ಹೇಗೆ ಸಾಧ್ಯ? ಕಲ್ಲಿನಲ್ಲಿ ಕೆತ್ತಿದಂತೆ ಆಕೆಯ ಭವಿಷ್ಯ ಅತ್ಯಂತ ನಿಖರವಾಗಿತ್ತು….ಆದರೆ ಓರ್ವ ಎಂಬಿಬಿಎಸ್ ಪದವೀಧರ ವೈದ್ಯೆ, ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಶಸ್ತ್ರಚಿಕಿತ್ಸಕಳಾದಳು. ಸುಸಜ್ಜಿತವಾದ ಆಸ್ಪತ್ರೆಯ ಗೌರವಾನ್ವಿತ ಕ್ಯಾಬಿನ್ ನಲ್ಲಿ ಆಕೆ ತನ್ನನ್ನು ತಾನು ಗುರುತಿಸಿಕೊಂಡ ಆಕೆ ಅಲ್ಲೂ ಕೂಡ ತನ್ನ ವೈಯುಕ್ತಿಕ ಹಿತಾಸಕ್ತಿಗಾಗಿ ಕಾದು ಕುಳಿತಿರಲಿಲ್ಲ… ಬದಲಾಗಿ ಕರ್ತವ್ಯದ ಕರೆಗೆ ಕಾಯುತ್ತಿದ್ದರು.
ಹಿರಿಯ ಸ್ಥಾನಿಕ ವೈದ್ಯಳಾಗಿ ಕಲ್ಪನಾ ಚಾವ್ಲಾ ಗೌರ್ಮೆಂಟ್ ಮೆಡಿಕಲ್ ಕಾಲೇಜಿನಲ್ಲಿ 2020 ರಲ್ಲಿ ಕಾರ್ಯನಿರ್ವಹಿಸಿದ ಪಾಯಲ್ 2021ರ ಜನವರಿ ತಿಂಗಳಲ್ಲಿ ಅದಕ್ಕಿಂತ ಹೆಚ್ಚಿನದನ್ನು ಸಾಧಿಸುವ ಇಚ್ಛೆಯಿಂದ ತಾನು ಧರಿಸಿದ ವೈದ್ಯೆಯ ಬಿಳಿ ಕೋಟಿನ ಜೊತೆಗೆ ಹಸಿರು ಬಣ್ಣದ ಮಿಲಿಟರಿ ಸಮವಸ್ತ್ರವನ್ನು ಧರಿಸಿ ಮಿಲಿಟರಿಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿ ಗುರುತಿಸಿಕೊಂಡರು. ಆಕೆಯ ಆರಂಭಿಕ ಶಿಕ್ಷಣ ಅಂಬಾಲಾದಲ್ಲಿ ಪ್ರಾರಂಭವಾಯಿತು ವಿಧಿ ಆಕೆಯನ್ನು ಜಗತ್ತಿನ ಅತ್ಯಂತ ಎತ್ತರದ ಯುದ್ಧ ಭೂಮಿಯಾದ ಲೇಹ್ ನ ಖರ್ದುಂಗ ಲಾ ದತ್ತ ಕರೆದೊಯ್ಯಿತು.

ದೇಹವನ್ನು ಮಾತ್ರವಲ್ಲ, ದೇಹದ ಒಳಗಿರುವ ಮೂಳೆಗಳನ್ನು ಕೂಡ ಕೊರೆಯುವ ಹಿಮಾಲಯದ ಕಡುಚಳಿಯಲ್ಲಿ ಆಕೆ ಗಾಯಗೊಂಡ ಸೈನಿಕರ ಶುಶ್ರೂಷೆ ಮಾಡುತ್ತಿದ್ದಳು. ಅಗತ್ಯ ಬಿದ್ದರೆ ಶಸ್ತ್ರ ಚಿಕಿತ್ಸೆ ಕೂಡ.
ಯುದ್ಧದಲ್ಲಿ ಗಾಯಗೊಂಡ ಯೋಧರಿಗೆ ನಾನು ಚಿಕಿತ್ಸೆ ನೀಡಿ ಅವರ ಕಾಳಜಿ ಮಾಡಬಲ್ಲೆನಾದರೆ ನಾನೇಕೆ ಅವರಂತೆ ಯೋಧಳಾಗಬಾರದು? ಎಂಬ ಪ್ರಶ್ನೆ ಆಕೆಯಲ್ಲಿ ಮೂಡಿತು.
ಈ ರೀತಿ ವೈದ್ಯರಿಗೆ ಮಿಲಿಟರಿಯ ಕಠಿಣ ತರಬೇತಿಯನ್ನು ನೀಡುವುದು ಅತ್ಯಂತ ಕಷ್ಟಕರ ಹಾಗೂ ಯಾವುದೇ ರೀತಿಯ ಭರವಸೆಯನ್ನು ಅವರ ಜೀವದ ಮೇಲೆ ಕೊಡುವುದು ಸಾಧ್ಯವಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಆಕೆಯ ತರಬೇತಿಗೆ ಪ್ರಾರಂಭದಲ್ಲಿ ಅವಕಾಶವನ್ನು ನೀಡಲಿಲ್ಲ…ಆದರೆ ಆಕೆ ಈಗಾಗಲೇ ತನ್ನ ಮನಸ್ಸಿನಲ್ಲಿ ಈ ಕುರಿತು ಯೋಜನೆಯನ್ನು ಮಾಡಿಕೊಂಡಿದ್ದಳು, ಪರಿಣಾಮವಾಗಿ ಆಕೆ ಬೇರೆ ಯಾವುದೇ ಆಯ್ಕೆಯನ್ನು ತನ್ನದಾಗಿಸಿಕೊಳ್ಳದೆ ಅದೇ ದಾರಿಯಲ್ಲಿ ಮುಂದುವರೆಯಲು ನಿಶ್ಚಯಿಸಿದ್ದಳು. ಮಿಲಿಟರಿ ಆಸ್ಪತ್ರೆಯಲ್ಲಿ ಗಾಯಗೊಂಡ ಯೋಧರಿಗೆ ಶಸ್ತ್ರಚಿಕಿತ್ಸೆಯ ತನ್ನ ಕರ್ತವ್ಯದ ಜೊತೆ ಜೊತೆಗೆ ಆಕೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಕಠಿಣ ತರಬೇತಿಯಲ್ಲಿ ತೊಡಗಿಕೊಂಡಳು.
ಆಗ್ರಾದಲ್ಲಿರುವ ಪ್ಯಾರಾ ಟ್ರೂಪರ್ ಗಳ ತರಬೇತಿ ಶಾಲೆಯಲ್ಲಿ ಪ್ರತಿದಿನ ನಸುಕಿನ ಜಾವದ 3 ಗಂಟೆಗೆ ಆರಂಭವಾಗುತ್ತಿದ್ದ ತರಬೇತಿಯಲ್ಲಿ ಆಕೆ ಕೇವಲ ತನ್ನ ವೈದ್ಯಕೀಯ ಜ್ಞಾನವನ್ನು ಮಾತ್ರವಲ್ಲ ಬದಲಾಗಿ ಸರಿಸುಮಾರು 65 ಕೆಜಿ ತೂಕದ ರಕ್ ಸ್ಯಾಕನ್ನು ಹೊರ ಬೇಕಾಗುತ್ತಿತ್ತು. 40 ಕಿ.ಮೀ ದೂರದವರೆಗೆ ನಡೆಯುವ ಮತ್ತು ಓಡುವ ಸಾಮರ್ಥ್ಯವನ್ನು ಪಡೆದುಕೊಳ್ಳಲು ನಿರಂತರವಾಗಿ ಆಕೆಯ ತರಬೇತಿ ನಡೆಯುತ್ತಿತ್ತು. ಚಿಕಿತ್ಸೆಯ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ನಿಖರತೆಯನ್ನು ಹೊಂದಿದ ಆಕೆಯ ಕೈಗಳು ಇದೀಗ ಮಣ್ಣಿನ ಒಡನಾಟದಲ್ಲಿ ಗಟ್ಟಿ ಮುಟ್ಟಾಗಿದ್ದವು. ಇದೀಗ ಆಕೆ ಕೇವಲ ಓರ್ವ ವೈದ್ಯಳಾಗಿರಲಿಲ್ಲ ಬದಲಾಗಿ ಹರಿತವಾದ ಆಯುಧವಾಗಿ ಬದಲಾಗಿದ್ದಳು.
2020ರ ಸೆಪ್ಟೆಂಬರ್ ತಿಂಗಳ ಆ ದಿನ ಭಾರತೀಯ ಮಿಲಿಟರಿ ಇತಿಹಾಸದ ಐತಿಹಾಸಿಕ ದಂತ ಕಥೆಯೊಂದರ ಉದಯವಾಯಿತು. ಆಗ್ರಾದ ಮಣ್ಣಿನಲ್ಲಿ ಓರ್ವ ನವ ಸ್ಪೂರ್ತಿಯ ಉದಯವಾಯಿತು. ಅತ್ಯಂತ ಗಟ್ಟಿಯಾದ ಗಾಜಿನ ತಾರಸಿಯನ್ನು ಒಡೆಯುವಂತೆ ಡಾಕ್ಟರ್ ಪಾಯಲ್ ಛಾಬ್ರಾ ಅವರು ತಮ್ಮೆಲ್ಲ ದೈಹಿಕ ಅಡೆತಡೆಗಳನ್ನು ಮೀರಿ ಭಾರತೀಯ ಮಿಲಿಟರಿ ಯೋಧರ ಸಮವಸ್ತ್ರದಲ್ಲಿ ಹೆಮ್ಮೆಯಿಂದ ತಲೆಯೆತ್ತಿ ನಿಂತಿದ್ದರು.

ಮೊದಲ ಮಹಿಳಾ ಶಸ್ತ್ರಚಿಕಿತ್ಪರಯಾಗಿ ಭಾರತದ ಮಿಲಿಟರಿ ಇತಿಹಾಸದಲ್ಲಿ ದಾಖಲಾಗಿರುವ ಆಕೆ ಎಲೈಟ್ ಪ್ಯಾರಾ ಸ್ಪೆಷಲ್ ಪೋರ್ಸ್ ನಲ್ಲಿ ಪದಗ್ರಹಣ ಮಾಡಿದಳು. ಆಕೆಯ ತಂದೆ ರಾಜೇಂದ್ರ ಛಾಬ್ರಾ ಅವರು ಹೆಮ್ಮೆಯ ಜೊತೆಗೆ ಕಂಪಿಸುತ್ತಿರುವ ಧ್ವನಿಯಲ್ಲಿ ಮಾತನಾಡಿ ಅತ್ಯಧಿಕ ಸಂಪಾದನೆಯ ಹಲವಾರು ವಿದೇಶಿ ಅವಕಾಶಗಳನ್ನು ತಿರಸ್ಕರಿಸಿದ ತಮ್ಮ ಮಗಳ ಹೃದಯ ಕೇವಲ ತಾಯ್ನಾಡಿನ ಸೇವೆಗಾಗಿ ತುಡಿಯುತ್ತಿತ್ತು ಎಂದು ಗದ್ಗದಿತರಾಗಿ ಹೇಳಿದರು.
ಶೌರ್ಯದ ನಿಜವಾದ ಪರಂಪರೆಯ ಕೊಂಡಿಯಾಗಿರುವ ಪಾಯಲ್ ಅವರು ಇದೀಗ ಮೇಜರ್ ಹುದ್ದೆಗೆ ಬಡ್ತಿಯನ್ನು ಹೊಂದಿದ್ದು ದೇಶದ ಉತ್ತರ ಗಡಿ ಭಾಗವಾದ ಲಡಾಖನಲ್ಲಿ ಸೇವೆ ಸಲ್ಲಿಸುತ್ತಿದ್ದು ಆಕೆ ನಿಜವಾದ ರಕ್ಷಕಿ ಎಂದು ಗುರುತಿಸಿಕೊಂಡಿದ್ದಾರೆ.
ತನ್ನ ಒಂದು ಕೈಯಲ್ಲಿ ಶಸ್ತ್ರಚಿಕಿತ್ಸೆಯ ಉಪಕರಣವನ್ನು ಹಿಡಿದುಕೊಂಡು ಯುದ್ಧದ ಗಾಯಾಳುಗಳನ್ನು ರಕ್ಷಿಸುವ ಕೆಲಸ ಮಾಡುತ್ತ ಭರವಸೆಯ ದೀಪವನ್ನು ಹೊತ್ತಿಸುವ ಆಕೆ ಮತ್ತೊಂದು ಕೈಯಲ್ಲಿ ಶತ್ರುಗಳನ್ನು ಹಿಡಿದು ದೇಶಕ್ಕೆ ಎದುರಾಗುವ ಯಾವುದೇ ಅಪಾಯವನ್ನು ಎದುರಿಸಲು ಸನ್ನದ್ದರಾಗಿ ನಿಂತಿದ್ದಾಳೆ.
ಮೋಡಗಳ ಮರೆಯಿಂದ ಪ್ಯಾರಾಚೂಟ್ ಸಹಾಯದಿಂದ ವೈರಿಗಳ ಗಡಿ ಪ್ರದೇಶದಲ್ಲಿ ಕೆಳಗಿಳಿದು ಹೋಗುವ ಛಾತಿಯನ್ನು ಹೊಂದಿರುವ ಆಕೆ ಮುಂದಿನ ಕ್ಷಣವೇ ಜೀವವನ್ನು ರಕ್ಷಿಸುವ ಶಸ್ತ್ರಚಿಕಿತ್ಸೆಯನ್ನು ಆಗಸದ ಅಡಿಯ ತೆರೆದ ಬಯಲಿನಲ್ಲಿ ಮಾಡುವ ಧೈರ್ಯವನ್ನು ಕೂಡ ಹೊಂದಿದ್ದಾಳೆ.
ಮೇಜರ್ ಡಾ. ಪಾಯಲ್ ಛಾಬ್ರಾ ಹೆಣ್ಣು ಮಕ್ಕಳ ಧೈರ್ಯ ಮತ್ತು ಸಾಹಸಕ್ಕೆ ಮಿತಿಯೇ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದ್ದಾಳೆ. ಆಕೆ ಆಪರೇಷನ್ ಥಿಯೇಟರ್ ನಲ್ಲಿ ಕಾರ್ಯ ನಿರ್ವಹಿಸಿದಷ್ಟೇ ಸಹಜವಾಗಿ, ಅಷ್ಟೇ ಧೈರ್ಯ ಸಾಹಸ ಹಾಗೂ ಚಾಕಚಕ್ಯತೆಯಿಂದ ಯುದ್ಧ ರಂಗದಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾಳೆ. ಪಾಯಲ್ ಛಾಬ್ರಾರಂತಹ ಹೆಣ್ಣು ಮಕ್ಕಳ ಸಂತತಿ ಸಾವಿರವಾಗಲಿ ಎಂದು ಹಾರೈಸುವ…
- ಹಿಂದಿನ ಸಂಚಿಕೆಗಳು :
- ಬದುಕಿಗೊಂದು ಸೆಲೆ (ಭಾಗ -೧)
- ಬದುಕಿಗೊಂದು ಸೆಲೆ (ಭಾಗ -೨)
- ಬದುಕಿಗೊಂದು ಸೆಲೆ (ಭಾಗ -೩)
- ಬದುಕಿಗೊಂದು ಸೆಲೆ ‘ಕೆಲ ವಿಷಯಗಳಿಗೆ ಕಿವುಡರಾಗಬೇಕು’ (ಭಾಗ – ೪)
- ಬದುಕಿಗೊಂದು ಸೆಲೆ ‘ಉದಾರತೆ ಎಂಬ ಮಾರುಕಟ್ಟೆ ತಂತ್ರ’ (ಭಾಗ- ೫)
- ಬದುಕಿಗೊಂದು ಸೆಲೆ ‘ಹೌದು! ನನಗೆ ವಯಸ್ಸಾಗುತ್ತಿದೆ’ (ಭಾಗ – ೬)
- ಬದುಕಿಗೊಂದು ಸೆಲೆ‘ಕಾಯುತ್ತಿದ್ದಾರೆ ನಿಮ್ಮವರು… ನಿಮಗಾಗಿ’ (ಭಾಗ -೭)
- ಬದುಕಿಗೊಂದು ಸೆಲೆ ‘ಹೆಣ್ಣು ಮಕ್ಕಳೇ ಎಚ್ಚರವಾಗಿ’ (ಭಾಗ – ೮)
- ಬದುಕಿಗೊಂದು ಸೆಲೆ ‘ ಮನೆಯ ಆಹಾರವೂ,ಕೌಟುಂಬಿಕ ಬಂಧವೂ’ (ಭಾಗ – ೯)
- ಬದುಕಿಗೊಂದು ಸೆಲೆ ‘ಶ್ರಾವಣ ಮಾಸ… ಶ್ರವಣ ಮಾಸ’ (ಭಾಗ – ೧೦)
- ಬದುಕಿಗೊಂದು ಸೆಲೆ ‘ಪ್ಯಾರಿಸ್ ಸುಗಂಧದ ಖ್ಯಾತಿಯ ಕೋಕೋ ಚಾನೆಲ್…. ಸತತ ಪ್ರಯತ್ನದ ಸಾಫಲ್ಯ’ (ಭಾಗ – ೧೧)
- ಬದುಕಿಗೊಂದು ಸೆಲೆ ವರಮಹಾಲಕ್ಷ್ಮಿ ಹಬ್ಬ (ಭಾಗ – ೧೨)
- ಬದುಕಿಗೊಂದು ಸೆಲೆ ‘ಸಿತಾರೆ ಜಮೀನ್ ಪರ್’ (ಭಾಗ – ೧೪)
- ಬದುಕಿಗೊಂದು ಸೆಲೆ ‘ಸಾಧನೆಯ ಶಿಖರ ಏರಲು…ಬೇಕು ಬದ್ಧತೆ’ (ಭಾಗ – ೧೫)
- ಬದುಕಿಗೊಂದು ಸೆಲೆ ‘ನನ್ನ ಪ್ರೀತಿಯ ಗಣೇಶ’ (ಭಾಗ – ೧೬)
- ಬದುಕಿಗೊಂದು ಸೆಲೆ ‘ಗಣೇಶ….ವಿಗ್ರಹ ಒಂದು ಸಂಕೇತಗಳು ನೂರು’ (ಭಾಗ – ೧೭)
- ಬದುಕಿಗೊಂದು ಸೆಲೆ ‘ನಮ್ಮ ಬದುಕು ಮತ್ತು ಆಯ್ಕೆಗಳು’ (ಭಾಗ – ೧೮)
- ಬದುಕಿಗೊಂದು ಸೆಲೆ ‘ಸ್ನೇಹ ಬಂಧ ’ (ಭಾಗ-೧೯)
- ಬದುಕಿಗೊಂದು ಸೆಲೆ ‘ಮಕ್ಕಳ ಕುರಿತು ಅತಿ ಕಾಳಜಿ…. ಖಂಡಿತ ಬೇಡ’ (ಭಾಗ-೨೦)
- ಬದುಕಿಗೊಂದು ಸೆಲೆ ‘ಮಕ್ಕಳ ಸಂಸ್ಕಾರದಲ್ಲಿ ತಾಯಿಯ ಪಾತ್ರ’ (ಭಾಗ-೨೧)
- ಬದುಕಿಗೊಂದು ಸೆಲೆ ‘ಮಗನಿಗೆ ಶಿಸ್ತಿನ ಪಾಠದ ಪತ್ರ’ (ಭಾಗ-೨೨)
- ಬದುಕಿಗೊಂದು ಸೆಲೆ ‘ಭಿತ್ತಿಯಲ್ಲಿ ನೆನಪಾಗಿ ಉಳಿದ… ಎಸ್ ಎಲ್ ಭೈರಪ್ಪ’ (ಭಾಗ-೨೩)
- ಬದುಕಿಗೊಂದು ಸೆಲೆ “ದ ಹ್ಯಾಪಿಯಸ್ ಮ್ಯಾನ ಆನ್ ದ ಅರ್ಥ’ (ಭಾಗ-೨೪)
- ಬದುಕಿಗೊಂದು ಸೆಲೆ ‘ಎಲ್ಲ ಏಟಿಗೂ ಇದಿರೇಟು….ಉತ್ತರವಲ್ಲ’ (ಭಾಗ-೨೫)
- ಬದುಕಿಗೊಂದು ಸೆಲೆ ‘ಗಂಡು ಹೆಣ್ಣು…. ಒಂದು ಸಾಮಾಜಿಕ ವಿಶ್ಲೇಷಣೆ’ (ಭಾಗ-೨೬)
- ಬದುಕಿಗೊಂದು ಸೆಲೆ ‘ಮೂಲಭೂತ ಅಭ್ಯಾಸಗಳು ಮತ್ತು ಮಕ್ಕಳು’ (ಭಾಗ-೨೭)
- ಬದುಕಿಗೊಂದು ಸೆಲೆ ‘ಬೆಳಕಿನ ಹಬ್ಬ ದೀಪಾವಳಿ ’ (ಭಾಗ-೨೮)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೨೯)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೩೦)
- ಬದುಕಿಗೊಂದು ಸೆಲೆ ‘ನಿಮ್ಮ ಮಕ್ಕಳ ವರ್ತನೆ ಮಿತಿಯಲ್ಲಿರಲಿ… ಯಾವುದೂ ಅತಿಯಾಗದಿರಲಿ ’ (ಭಾಗ-೩೧)
- ಬದುಕಿಗೊಂದು ಸೆಲೆ ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ (ಭಾಗ-೩೨)
- ಬದುಕಿಗೊಂದು ಸೆಲೆ (ಭಾಗ-೩೩)
- ಬದುಕಿಗೊಂದು ಸೆಲೆ ‘ಪ್ರೀತಿಯ ತೀವ್ರತೆ’ (ಭಾಗ-೩೪)
- ಬದುಕಿಗೊಂದು ಸೆಲೆ ‘ಖಾಲಿ ಕುರ್ಚಿ ಎಂಬ ತತ್ವವೂ…ನಮ್ಮ ಬದುಕೂ’ (ಭಾಗ-೩೫)
- ಬದುಕಿಗೊಂದು ಸೆಲೆ ‘ಒಂದು ಸುತ್ತು….ಋತುಚಕ್ರ ರಜೆಯ ಸುತ್ತ’ (ಭಾಗ-೩೬)
- ಬದುಕಿಗೊಂದು ಸೆಲೆ ‘ಮೌನ ಸಾಧನೆ’ (ಭಾಗ-೩೭)
- ಬದುಕಿಗೊಂದು ಸೆಲೆ ‘ಮಹತ್ವಕಾಂಕ್ಷಿ ಕ್ರೀಡಾ ಯೋಜನೆಗಳು ಹಾಗೂ ಕ್ರೀಡೆಯ ಭವಿಷ್ಯ??’ (ಭಾಗ-೩೮)
- ಬದುಕಿಗೊಂದು ಸೆಲೆ ‘ಮಾಧ್ಯಮಗಳ ವೈಭವೀಕೃತ ಸುದ್ದಿ ನಿರೂಪಣೆ…. ಒಂದು ವಿವೇಚನೆ’ (ಭಾಗ-೩೯)
- ಬದುಕಿಗೊಂದು ಸೆಲೆ ‘ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬನೆ’ (ಭಾಗ-೪೦)
- ಬದುಕಿಗೊಂದು ಸೆಲೆ ‘ಅವರಿವರನ್ನು ಕಂಡು ಕರುಬದಿರಿ… ನೀವು ನೀವಾಗಿಯೇ ಇರಿ’ (ಭಾಗ-೪೧)
- ಬದುಕಿಗೊಂದು ಸೆಲೆ ‘ಶ್ರೀ ಸಿದ್ದೇಶ್ವರ ಸ್ವಾಮಿಗಳು’ (ಭಾಗ-೪೨)
- ಬದುಕಿಗೊಂದು ಸೆಲೆ ‘ಯುವ ಜನತೆಗೆ ಹಣಕಾಸಿನ ಕುರಿತಾದ ಚಿನ್ನದಂತಹ ನಿಯಮಗಳು’ (ಭಾಗ-೪೩)
- ಬದುಕಿಗೊಂದು ಸೆಲೆ ‘ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹೇಗೆ ?’ (ಭಾಗ-೪೪)
- ಬದುಕಿಗೊಂದು ಸೆಲೆ ‘ದಾಂಪತ್ಯದಲ್ಲಿ ಸಮಾನತೆ ’ (ಭಾಗ-೪೫)
- ಬದುಕಿಗೊಂದು ಸೆಲೆ ‘ಹೀಗೊಂದು ವಧು/ವರ ಪರೀಕ್ಷೆ ’ (ಭಾಗ-೪೭)
- ಬದುಕಿಗೊಂದು ಸೆಲೆ ‘ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು’ (ಭಾಗ-೪೮)
- ಬದುಕಿಗೊಂದು ಸೆಲೆ ‘ಹಕ್…… ತನ್ನ ಹಕ್ಕಿಗಾಗಿ ಹೆಣ್ಣು ಮಗಳ ಹೋರಾಟ’ (ಭಾಗ-೪೯)
- ಬದುಕಿಗೊಂದು ಸೆಲೆ ಶಾಂತಿ ಸುಧಾ ಘೋಷ್ (ಭಾಗ- ೫೧)
- ಬದುಕಿಗೊಂದು ಸೆಲೆ ಪೋಲ್ಯಾಂಡ್ ದೇಶದ ಮಕ್ಕಳ ದುರಂತದ ಕತೆ (ಭಾಗ- ೫೨)
- ಬದುಕಿಗೊಂದು ಸೆಲೆ ಕಾಶಿಯ ಲತಾ ಮಂಗಳ ಕಪೂರ್ ಗೆ ಪದ್ಮಶ್ರೀ ಪುರಸ್ಕಾರ (ಭಾಗ- ೫೩)
- ಬದುಕಿಗೊಂದು ಸೆಲೆ ‘ಶಿವರಾತ್ರಿ, ಶಿವನ ಆರಾಧನೆಯ ದಿನ’ (ಭಾಗ- ೫೪)
- ಬದುಕಿಗೊಂದು ಸೆಲೆ ‘ಅಸಹನೀಯವಾಗದಿರಲಿ ವೃದ್ಧಾಪ್ಯ’ (ಭಾಗ- ೫೫)
- ಬದುಕಿಗೊಂದು ಸೆಲೆ ‘ಸಮತೋಲಿತ ಆಹಾರ’ (ಭಾಗ- ೫೬)
- ಬದುಕಿಗೊಂದು ಸೆಲೆ ‘ನವಜಾತ ಶಿಶು ವಿಜ್ಞಾನ ಶಾಸ್ತ್ರದ ಮಹಾತಾಯಿ….ಡಾಕ್ಟರ್ ಅಮಿದಾ ಫರ್ನಾಂಡಿಸ್’ (ಭಾಗ- ೫೭)
- ಬದುಕಿಗೊಂದು ಸೆಲೆ ‘ಬಣ್ಣಗಳ ಹಬ್ಬ…. ಹೋಳಿ’ (ಭಾಗ- ೫೮)
- ಬದುಕಿಗೊಂದು ಸೆಲೆ ‘ಇರಲಿ ಆಸರೆ, ಹಿರಿ ಜೀವಗಳಿಗೆ ’ (ಭಾಗ- ೫೯)
- ಬದುಕಿಗೊಂದು ಸೆಲೆ ‘ಸಂಕಲ್ಪ ಶಕ್ತಿ ಮತ್ತು ಯಶೋಗಾಥೆ ’ (ಭಾಗ- ೬೦)
- ಬದುಕಿಗೊಂದು ಸೆಲೆ ಅನುರಾಧ ಕೊಯಿರಾಲ (ಭಾಗ- ೬೧)
- ಬದುಕಿಗೊಂದು ಸೆಲೆ ‘ಗ್ರಾಮೀಣ ಬದುಕಿನಲ್ಲಿ ಯುಗಾದಿ ಹಬ್ಬದ ಸಂಭ್ರಮ’ (ಭಾಗ- ೬೨)
- ಬದುಕಿಗೊಂದು ಸೆಲೆ ‘ ಯುಥನೇಶಿಯ…. ದಯಾಮರಣಕ್ಕೆ ಅಸ್ತು’ (ಭಾಗ- ೬೩)
- ಬದುಕಿಗೊಂದು ಸೆಲೆ ‘ ವೈರುಧ್ಯಗಳ ನಡುವೆ…. ಹೆಣ್ಣಿನ ಬದುಕು’ (ಭಾಗ- ೬೪)
- ಬದುಕಿಗೊಂದು ಸೆಲೆ ‘ಗೃಹಕೃತ್ಯ…ಕಾನೂನಿನಲ್ಲಿ ಮಾನ್ಯತೆ’ (ಭಾಗ- ೬೫)
- ಬದುಕಿಗೊಂದು ಸೆಲೆ ‘ಹಿಂದಿ ಇರಲಿ ನಮ್ಮ ಪಠ್ಯದ ಭಾಗ’ (ಭಾಗ- ೬೬)
- ಬದುಕಿಗೊಂದು ಸೆಲೆ ‘ಒಂದು ಕಪ್ ಚಹಾ ಮತ್ತು ಒಂಟಿತನ’ (ಭಾಗ- ೬೭)
- ಬದುಕಿಗೊಂದು ಸೆಲೆ ‘ನಿಮ್ಮ ಮನವ ಸಂತೈಸಿಕೊಳ್ಳಿ’ (ಭಾಗ- ೬೮)
- ಬದುಕಿಗೊಂದು ಸೆಲೆ ‘ಸುಡುವ ಸೂರ್ಯನಿಗೊಂದು ಪತ್ರ’ (ಭಾಗ- ೬೯)
- ವೀಣಾ ಹೇಮಂತಗೌಡ ಪಾಟೀಲ್ – ಮುಂಡರಗಿ, ಗದಗ
