ಡಾ.ಬಂಜಗೆರೆ ಜಯಪ್ರಕಾಶ್ ರವರು 1995ರಲ್ಲಿ ರಚಿಸಿದ ಕವಿತೆ “ಮುತ್ತಾಗಲದು ಎಂದಾದರೂ” ಕವಿತೆಯ ಕುರಿತು ಡಾ.ಕೃಷ್ಣವೇಣಿ.ಆರ್.ಗೌಡ. ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಡಾ.ಜೆಪಿಯವರ 1995 ರ ಕವಿತೆ “ ಮುತ್ತಾಗಲದು ಎಂದಾದರೂ ” ನನ್ನ ತಲೆ ಚಿಪ್ಪಿನ ಅಂಶದಲ್ಲಿ ಇಡೀ ಕವಿತೆ ಅಂಗಳದ ಸಾರ ಕಂಚಿನ ಗಂಗಾಳದಲ್ಲಿಯೂ ಮುತ್ತಿನ ಕಣ್ಣೀರ ಗೆರೆ ಅಂಚ ಒಡಲನ್ನೇ ತೇವಿಸುತ್ತಿದೆ. ಇದು ನನ್ನ ತಿರುಳೊಳು ಗುಯ್ ಗುಡುತ್ತಿದೆ.
ಹೊರ ಜಗದ ಮರುಳೊಳು ಸಿಕ್ಕಿ ಬಿದ್ದ ಮುತ್ತು ಸಂತೆಯ ಸಂಕಟವನ್ನು ಅನುಭವಿಸಿ ಚೀತ್ಕಾರದಲ್ಲಿ ಹಲವಾರು ಅಲೆಗಳು ದಿನ ಬೆಳಕಲ್ಲಿ ಬಂಧನದೊಳು ಒದ್ದಾಡುತ್ತಿವೆ. ಇದು ಅಗಸ ಭುವಿಯ ಸಂಸಾರದ ಸೆಲೆಯ ಬಿಂದು. ಅದೆಷ್ಟೋ ನಿಷ್ಕಲ್ಮಶದ ಒಡಲ ಮುತ್ತುಗಳು ಸಂತೋಷದ ಜೋಕಾಲೆಯಲಿ ತೂಗಾಡುವ ಸೊಬಗಿನಲಿ.
“ ಹಲ್ಲು ಕಿರಿದು ಕರೆಯುವ ಫೋರ್ಕುಗಳು, ಚಾಕುಗಳು, ಮನಸು ಕಿವುಚಿ ಉಪ್ಪೆಸರು ಖಾರದ ಹಾಗೆ, ಮನಸ್ಸು ಕಿವುಚುವ ತೊಟ್ಟಿಕ್ಕೋ, ರಕ್ತಾಕ್ಷು ಬಿಂದುಗಳು. ಅಸಿಡ್ ಹಾಗೆ ನನ್ನ
ಅಂಗೈ ಮೇಲೆ”.

ಡಾ.ಜೆಪಿಯವರ ಮನದ ತಿವಿತದ ನಿಲುವು, ಸಂಕಟಗಳು, ಬರವಣಿಗೆ ಮೂಲಕ ಹೊರ ಹೊಮ್ಮಿದರೂ, ಇನ್ನೊಂದು ಅರ್ಥದಲ್ಲಿ ಎಲ್ಲೋ ಗೂಡು ಕಟ್ಟಿಕೊಂಡು ಸಂತೋಷದ ನಿರ್ಲಿಪ್ತ ಮನೋಭಾವದ ಕಡಲ ಮುತ್ತುಗಳು ಯಾವುದೋ ಅವಕಾಶಕ್ಕಾಗಿ, ಯಾವುದೋ ವಂಚನೆಯ ಪ್ರತಿಕಾರಕ್ಕೆ ತಮ್ಮತನದ ಸಂಬಂಧವನ್ನೇ ಬಿಟ್ಟು ದೂರವಾಗುತ್ತಿವೆ ಅನ್ನುವ ನೆರಳು ಗೋಚರವಾಗುತ್ತಿದೆ.
ಕಳಚಿಕೊಳ್ಳದ ನಂಟಿಗೆ ಯಾವುದೋ ಕಹಿ ಸಸಿ ಕಿತ್ತು ಕೊಂಡಿತೇ?. ಸಮಾಧಾನದ ಒಗಡು ಬಯಲು, ಇದಕ್ಕೆ ಸೂರಿಲ್ಲ, ನೆರಳಿಲ್ಲ. ಆದರೂ ಬೆಂಕಿಯ ಝಳ ದೊಳು ಸುಡೋ ಉಸುಗಲಿ ಬೇಯುತ್ತಿವೆಯಲ್ಲ ಮುಗ್ಧತೆಯ ಮೊಗಗಳು. ಇದಕ್ಕೆ ಯಾವ ಬಲೆ ಬೀಸಿದೆಯೋ ಅರಿಯೆ?.
ಅನಕ್ಷರತೆಯ ಸಂಕಟಕ್ಕೆ ಆಕ್ರೋಶದ ಕಡಲು ತಿವಿಯುತ್ತ, ಎದುರು ಹಾದು ಬಾಸುಂಡೆಯ ಹಾಕಿ ಆಟ ನೋಡುತ್ತಿದೆ. ಇದಕ್ಕೆ ಸತ್ತ ಮೀನುಗಳು ಎಷ್ಟೋ?.
“ವಂಚನೆಯ ಬೆಂಕಿಯಲಿ ಚೀವ್ ಚೀವ್ ಎಂದು
ಚೀರುತ್ತ ನಿಟ್ಟುಸಿರ ಧಗೆಯಲಿ
ದೇವರೆಂಬುವನಿದ್ದು ದಂಡಿಸಬೇಕಿತ್ತು
ನೂರೆಂಟು ಬಗೆಯ ಹೊಲಸು ಜನ್ಮಗಳು
ಎಂದು ಶಾಪ ಹಾಕುತ್ತಿವೆ.
ನೂರೆಂಟು ಬಗೆಯ ಶಿಕ್ಷೆಗಳಿಗೆ ತುತ್ತಾಗಿವೆ ಮೂಕ ಮರ ಗಿಡಗಳು. ಇದಕ್ಕೆ ಯಾರ ಹಿಂಸೆಯ ನೀರು? ಮೂಕ ಮನವೂ ಅಳುತಿದೆ. ಎಲ್ಲೋ ಒಂದು ಬದಿಯಲಿ. ಎಲ್ಲವನ್ನು ಕಳೆದುಕೊಂಡೆನೆಂದು?. ಆದರೂ ಅಲೆಯ ಒಳಗೆ ಮುಳುಗಿ, ಹುಡುಕಿ ಹೋರಾಡುತ್ತಿದೆ. ಕಡಲನ್ನು ಕೇಳುತ್ತಿದೆ ಕಣ್ಣಂಚಿನ ಕಟ್ಟೆಯಲಿ.
ಇದೇ ಅಲ್ಲವೇ ಲೋಕದ ಭ್ರಮೆ. ಸತ್ತು ಬದುಕುವ ಅಡಿಯೊಳು ಮೌನದ ಮುತ್ತು. ತನ್ನ ಸುತ್ತ ತಾನೇ ಸೋತು ಬಿದ್ದು ಬೆಂದಿದೆ. ಅಲ್ಲದೇ ನೋಡುತ್ತಿದೆ. ಹೆಣ ಸುಡುವ ಇಟ್ಟಿಗೆ. ಬದುಕಲಾರದ ಬಿಂಬಕೆ. ಬರೆದಿದೆಯಲ್ಲ ಆತ್ಮಚರಿತೆ. ಎಲ್ಲೋ ಅಲೆಗಳಾಚೆ ಇರುವ ಪಯಣಕೆ ಮಾತಾಡದೆ ಮೌನ, ನಾವಿಯೊಳು ಸುಟ್ಟ ಜನ್ಮವ ನೋಡುತ ಅಳುಕಿಲ್ಲದೇ ಸಾಗುತ್ತಿದೆ. ಇಡೀ ಕ್ರೌರ್ಯ ಮನದಲ್ಲಿ ಬೂದಿಯಾಗಿದೆ. ಮತ್ತೊಂದು ಮುತ್ತು ಒಡಲ ಒಳ ಹೊಕ್ಕು ಪ್ರಶ್ನೆ ಮಾಡುತ್ತಿದೆ. ಬೇಯ ಬೇಡ ವಂಚನೆಯ ಕೊಂಡದಲಿ. ಕೊರಗುತ್ತಿದೆ ಹಾದಿ ಹಾದಿ ಸುತ್ತುತ್ತಿದೆ.
ಕೊನೆಗೂ ತಿಳಿಸುತ್ತಿದೆ. ದಂಡನೆಯ ಕಡೆಯಲ್ಲಿ ಮರಳುವಾಗ ವಧಾಸ್ಥಾನದಿಂದ ಮತ್ತೆ ಕಂಡು ಬಂದರೆ,
ಈ ಪಾತಕಿ ಮರೆತು ಹುಟ್ಟಿದರೆ
ಆವಿಸಿ ಅವಿತಿಟ್ಟು ಕೊಳ್ಳಿ ನನ್ನನ್ನು
ಅದನ್ನು ನಿಮ್ಮೆದೆಯ ಚಿಪ್ಪಿನಲಿ. ..
ಅದು ಮುತ್ತಾಗಲಿ ಎಂದಾದರೂ
ನಿಮ್ಮ ನಗು ಮುಖದ ನತ್ತಿನಲಿ
- ಡಾ. ಕೃಷ್ಣವೇಣಿ. ಆರ್. ಗೌಡ
