“ ಬಂಧಿ ಹಕ್ಕಿಯ ಆಸೆ ” ಕವಿತೆಯ ಸಾರಾಂಶ

ಡಾ. ಬಂಜಗೆರೆ ಜಯಪ್ರಕಾಶ್ ರವರ 1986 ರಲ್ಲಿ ರಚಿಸಿದ “ ಬಂಧಿ ಹಕ್ಕಿಯ ಆಸೆ ” ಎನ್ನುವ ಕವಿತೆಯ ಕುರಿತು ಡಾ.ಕೃಷ್ಣವೇಣಿ.ಆರ್. ಗೌಡ ಅವರ ನಿಲುವನ್ನು ತಪ್ಪದೆ ಮುಂದೆ ಓದಿ… 

ಇಡೀ ಕವಿತೆಯು ಅವರ ಅಂದಿನ ತಿರುಳು ಗೂಡನ್ನು ಕಟ್ಟಲು ಬಿಡದ ಯಾವುದೋ ಬಂಧನದ ಬಂಧ ಎದ್ದು ಕಾಣುವ ಹಾಗೆ.

“ನೀರು ನೆರಳಲ್ಲಿ ಒಂದು ಗುಟುಕು ಪ್ರೀತಿಗಾಗಿ ” ಸೃಷ್ಟಿಯ ಕಾಡೋಳು ಹಾತೊರೆಯ ಬೇಕಾದ ಹಕ್ಕಿ ತನ್ನ ಒಡಲಾಳದ ಬೆಂಕಿಯಲ್ಲಿ ಬಂಧಿಸಿಟ್ಟ ಅಥವಾ ಬಂಧಿಸಲ್ಪಟ್ಟ ಕಬ್ಬಿಣದ ಸಲಾಕೆಯ ಮೌನಕ್ಕೆ ಶರಣಾಗಿ ಕಣ್ಣು ಪಿಳುಕಿಸಿ ನೋಡುತಿದೆ ಜಗದ ಕಾಡನ್ನು. ಪ್ರಕೃತಿಯ ಶಕ್ತಿಯಲ್ಲಿ ಎಲ್ಲವೂ ಇದೆ. ಆದರೂ ಎಲ್ಲವೂ ಕಸಿದುಕೊಳ್ಳುತ್ತಿರುವ ಪ್ರಕೃತಿಗೆ ತನ್ನ ಮನದೊಳು ತಾನೇ ಗೊಣಗುತ್ತಿದೆ?.

ಭಾವದೊಲುಮೆಯ ಬದುಕು, ಇಲ್ಲಿ ಎಲ್ಲವೂ ಬಣ್ಣ. ಕೆರೆಕುಂಟೆಗಳೆಲ್ಲ ಬರಿದಾಗಿ ಬಿಸಿಲ ಧಗೆಗೆ ಉರಿ ಟಾರುರೊಡೊಳು ಕಾಲೆಳೆದು ಮರವೇ ಬೀಸಣಿಕೆಯ ಬೇಡುತಿದೆ. “ಮೇಲಿರಲಿ ಕಣ್ಣಿಟ್ಟ ಗಿಡುಗ, ಕೆಳಗೆ ಗುರಿಯಿಟ್ಟ ಬೇಡ, ಇದ್ದುಕೊಳ್ಳಲಿ ನರಕದ ನೆರಳಂತೆ ಕಂಟಕಗಳು”. ಸುತ್ತಲೂ ಹಸಿರು ಗುಡ್ಡದಲಿ ಬಿಸಿಲ ಜಳದ ಮಧ್ಯ ಒಂದನೊಂದು ಬಿಡದೆ ಮುತ್ತಿಕ್ಕುತ್ತ ಕೂತಿವೆ ಹಕ್ಕಿಗಳು. ಬಂದಿತೇ ಇದರ ನಡುವೆ ಅಸೂಯೆ ಎಂಬ ಸಂಕಟದ ಶಿಲುಬೆ.

ಬಿಡದ ಪಕ್ಷಿಗಳು ಅತ್ತಿತ್ತ ಅತ್ತು ನಡುವಿನೊಳು ಒದ್ದಾಡುತ್ತಿವೆ. ಸಾಲದಕ್ಕೆ ಸಲ್ಲದ ಆರೋಪ, ಸಂಕಟದ ಮಾತುಗಳು, ಕಂಟಕಕ್ಕೆ ತುತ್ತಾಗಿ ಸೋತು ಬಂಧಿತವಾದವಲ್ಲ? ಮೇಲೆ ಹಾರಲಾಗದೆ, ಕೆಳಗೆ ಇಳಿಯಲಾಗದೆ ಕಣ್ಣೀರಿಡುತ್ತಿವೆ. ಆಲೆಮನೆಯ ಕೊಪ್ಪರಿಕೆಯ ಬಿಸಿಯಲ್ಲಿ ಕತ ಕತ ಕುದಿಯುತ್ತ ಕಣ್ಣೀರು. ಇಟ್ಟರೂ ನಿಲ್ಲದ ಗಾಳಿ ಮಾತುಗಳೆoಬ ಗಾಸಿಪ್ಪುಗಳು ಸುತ್ತಲೂ ಬಂದಿಸುತ್ತಿವೆ.

ದಡ ಸೇರಲು ಹರಿಗೋಲಿಲ್ಲದೆ ನಡ ನೀರೊಳು ಏರುಪೇರಾಗಿ ಕಾಲ್ಗಳ ಬಡಿಯುತ್ತಿವೆ ಮೇಲೆ ಬರಲು. ಬಂಧಿಸಿವೆಯಲ್ಲ ಹುಸಿ ಸತ್ಯವ ಬಚ್ಚಿಟ್ಟು ತಮ್ಮ ಪೊಳ್ಳುತನದ ಸುಳ್ಳಿನ ಕಟ್ಟಡವ ಮೇಲೇರಿಸಲು. ಜಗದ ನಿಯಮಕ್ಕೆ “ ಮಾತೃತ್ವ” ದ ಸಂಬಂಧ ಸೇತುವೆಯಾಗಿದೆ. ಆದರೆ ಪರಕೀಯ ಕುರುಡುತನಕ್ಕೆ ಸಜ್ಜಾಗಿವೆ. ಹಗಲು ದರೋಡೆಯ ಕೈಗಳು. ಹೊಸತನವ ಹೊರಬಿಡದೆ ಭೋಗಿಯೊಳು ಬಂಧಿಯಾಗಿವೆ, ಕಾಣದ ಕೈಗಳು. ಇದರ ಕಾಲೆಳತಕ್ಕೆ ರಾಜಕೀಯದ ಷಡ್ಯಂತ್ರದ ಮೊಳೆ ನಿಮಿಷ ನಿಮಿಷಕ್ಕೆ ಹೊಡೆಯುತ್ತಿದೆ.

ಎಲ್ಲಿ ಸತ್ಯ ಸತ್ವದ ಗೂಡು ಹೊರಬಂದು ಕಟ್ಟುವುದು ಎಂದು?. ಇದು ಒಂದು ರೀತಿಯಲ್ಲಿ ಪ್ರಶ್ನೆಯ ಚಿಲುಮೆಯಾದರೂ ಕಾನೂನು ಚೌಕಟ್ಟೊಳು ಸತ್ಯದ ಒಲುಮೆ ಬಂಧಿಯಾಗಿ ಬುರುಕದೊಳು ಮರೆಮಾಚಿ ಕರೆದೊಯುತ್ತಿದೆ ಮತ್ತೊಂದು ಕಾನೂನು. ಎಲ್ಲಾ ಆಸೆಯ ಕಳಚಿ ಮಂಕಾಗಿದೆ. ಆದರೂ ಬಿಡದ ನೆನಪುಗಳು, ಅಳುಕುತ್ತಾ ಸಾಗಿವೆ. ಬಾಸುಂಡೆಯ ಹೊಡೆತದಿ ಸುಟ್ಟ ಗಾಯಕ್ಕೆ ಬೇಕಾಗಿದೆ. ಮಡಿವಾಳನ ಹಸಿ ನೆಲದ ಸೆರಗು. ಇದಕ್ಕಾಗಿ ಕಾಯುತ್ತಿವೆ ಬಂಧನಕ್ಕೊಳಗಾದ ಒಡಲು.

ಆದರೂ ಬಂಧಿಸಿದರಲ್ಲ  ಗೂಡನ್ನು ಕಟ್ಟಲು ಬಿಡದ ಪಾಪಿಗಳು. ಅನುಮಾನದ ಬೇಗೆ ರಾತ್ರಿ ಹಗಲೆನ್ನದೆ ಕಾಯುತ್ತಿವೆ. ರಾತ್ರಿಯ ಲಾಲ್ಟೀನ ಬೆಳಕೊಳು ಸುತ್ತಲೂ ಗಂಟೆಯ ಬಂಡತನದ ಶಬ್ದ ಹಕ್ಕಿಯ ಒಡಲನು ಎಬ್ಬಿಸಿ ಕಿವುಚುತ್ತಿದೆ.

ಚುಚ್ಚುತ್ತಿರುವ ತಂತಿಯ ಬೇಲಿಯ ಮಧ್ಯ ಚಳಿಯ ತಣ್ಣೀರು ಗಡಗಡ ನಡುಗಿಸಿ ಅಳುಕಿಸಿದೆ. ಇನ್ನೆಲ್ಲಿ ಸತ್ಯ ಸತ್ವದ ಗೂಡು?. ಸ್ವತನ ದಾರಿ ಸುತ್ತಲೂ ಗೀಜಗನ ಮುಳ್ಳ ಬೇಲಿ. ಇದಕ್ಕೆ ರೈಫಿಲ್ಲುಗಳು ತಲೆ ಎತ್ತಿ ನಿಂತಿವೆ “ ಬಂಧಿಸಿದ ಹಕ್ಕಿಯ ಬಂಧಿಸಲು ”


  • ಡಾ. ಕೃಷ್ಣವೇಣಿ. ಆರ್. ಗೌಡ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading