ಎಳನೀರು ಹಲ್ವಾ ಒಮ್ಮೆಯಾದರು ತಿಂದಿದ್ದೀರಾ? ತಿಂದಿದ್ದರೆ ನಿಮ್ಮ ರುಚಿಯ ಅನುಭವವನ್ನು ಹಂಚಿಕೊಳ್ಳಿ, ತಿಂದಿಲ್ಲವೆಂದರೆ ಒಮ್ಮೆ ನಳಪಾಕ ಪ್ರವೀಣೆ ರಮ್ಯಾ ಅವರು ಹಂಚಿಕೊಂಡ ಎಳನೀರು ಹಲ್ವಾ ಮಾಡುವ ವಿಧಾನವನ್ನು ಒಮ್ಮೆ ಮನೆಯಲ್ಲಿಯೇ ಮಾಡಿ ನೋಡಿ…

ಬೇಕಾಗುವ ಸಾಮಗ್ರಿ:
- ಎಳನೀರು ಮತ್ತು ಅದರ ಗಂಜಿ
- ಸಕ್ಕರೆ
- ತುಪ್ಪ
- ಬಣ್ಣಕ್ಕೆ ಕೇಸರಿ ದಳ
- ಕಾರ್ನ್ ಫ್ಲೋರ್
- ತುಪ್ಪದಲ್ಲಿ ಹುರಿದ ಒಣ ಹಣ್ಣುಗಳು
ತಯಾರಿಸುವ ವಿಧಾನ:
ಮೂರು ಎಳನೀರ ಗಂಜಿಯನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು ನಂತರ ಎಳನೀರು ಮತ್ತು ಸಕ್ಕರೆ ಸೇರಿಸಿ, ಮಂದ ಉರಿಯಲ್ಲಿ ಕಾಯಿಸಿಕೊಳ್ಳಬೇಕು.
ಕಾರ್ನ್ ಫ್ಲೋರ್ ಮತ್ತು ನೀರನ್ನು ಗಂಟಿಲ್ಲದಂತೆ ಕಲಸಿಕೊಳ್ಳಬೇಕು ನಂತರ ಈ ಮಿಶ್ರಣವನ್ನು ಒಲೆ ಮೇಲಿರುವ ಪಾತ್ರೆಗೆ ಹಾಕಿ ಗಂಟುಗಳ್ಗದಂತೆ ಮಗುಚಿಕೊಳ್ಳಬೇಕು ಸ್ವಲ್ಪ ಸ್ವಲ್ಪ ತುಪ್ಪ ಸೇರಿಸಿ ಕೊಳ್ಳುತ್ತ ತಳ ಬಿಡುವ ತನಕ ಮಗುಚಿಕೊಳ್ಳಬೇಕು. ಹುರಿದ ಒಣ ಹಣ್ಣುಗಳನ್ನು ಮತ್ತು ಕೇಸರಿ ಸೇರಿಸಿ ತುಪ್ಪ ಸವರಿದ ತಟ್ಟೆಗೆ ಹಾಕಿ ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ.
ರುಚಿಯಾದ ಎಳನೀರು ಹಲ್ವ ಸವಿಯಲು ಸಿದ್ಧ.
- ರಮ್ಯಾ – ನಳಪಾಕ ಪ್ರವೀಣೆ, ಬೆಂಗಳೂರು.
