ನೊಬೆಲ್ ಪ್ರಶಸ್ತಿ ಪುರಸ್ಕೃತೆ ಆನ್ನಿ ಕಾರ್ಸನ್

೨೦೨೬ ರ ಪ್ರಶಸ್ತಿ ನೊಬೆಲ್ ಪ್ರಶಸ್ತಿಯನ್ನು ಗೆದ್ದ ಆನ್ನಿ ಕಾರ್ಸನ್ ಮೊದಲ ಕೆನಡಾದ ಮಹಿಳೆಯಾಗಿದ್ದಾಳೆ. ಹುಟ್ಟಿದ್ದು ಟೊರೊಂಟೊದಲ್ಲಿ, ಈಗ ಐಸ್ ಲ್ಯಾಂಡ್ ನಲ್ಲಿ ನೆಲೆಸಿದ್ದಾರೆ. ಅವರ ಸಾಧನೆಯ ಕುರಿತು ಲೇಖಕರಾದ ಟಿ.ಎಸ್.ರಘುನಾಥ್ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಪೂರ್ತಿಯಾಗಿ ಓದಿ…

ಕೆನಡಾಕ್ಕೆ ದಕ್ಕಿದ ಈ ಪ್ರಶಸ್ತಿಯನ್ನು ಪಡೆದ ಮೂರನೇ ವ್ಯಕ್ತಿ. (ಸಾಲ್ ಬೆಲ್ಲೊ೧೯೭೬ ಬಹಳ ಚಿಕ್ಕವಯಸ್ಸಿನಲ್ಲೇ ಅಮೇರಿಕ ಸಂಯುಕ್ತ ಸಂಸ್ಥಾನಕ್ಕೆ ವರ್ಗಾವಣೆ ಹೊಂದಿದ್ದು, ಅದನ್ನು ಪರಿಗಣಿಸಬೇಕೇ ಎನ್ನುವ ಪ್ರಶ್ನೆಯೂ ಇದೆ). ಎರಡನೆಯ ವ್ಯಕ್ತಿ ಆಲಿಸ್ ಮುನ್ರೋ (೨೦೧೩). ಅವರು ಸಮಕಾಲೀನ ಸಣ್ಣ ಕಥೆಗಳ ಜನಕ ಎನ್ನುವ ಹೆಸರು ಪಡೆದಿದ್ದಾರೆ. ಮೂರನೆಯ ವ್ಯಕ್ತಿಯಾಗಿ, ಮೊದಲ ಮಹಿಳೆಯಾಗಿ, ಆನ್ನಿ ಕಾರ್ಸನ್, ಅವರ ಕಾವ್ಯಕ್ಕೆ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈಕೆ ಟೊರೊಂಟೊದಲ್ಲಿ ಜನಿಸಿದ್ದು ಈಗ ಐಸ್ ಲ್ಯಾಂಡ್ ನಲ್ಲಿ ನೆಲೆಸಿದ್ದಾರೆ. ಈಕೆಯ ಸಾಹಿತ್ಯದ ವಿಶಿಷ್ಟತೆಯೆಂದರೆ, ಅಭಿಜಾತ ಸಾಹಿತ್ಯವನ್ನು ಪುನರ್ – ಸೃಷ್ಟಿ ಮಾಡಿದ್ದಾರೆ.

ಆನ್ನಿ ಕಾರ್ಸನ್ ಆಕೆಯ ಪದವಿ, ಸ್ನಾತಕೋತ್ತರ ಹಾಗೂ ಪಿ ಹೆಚ್ಡಿಯನ್ನು ಟೊರೊಂಟೊ ವಿಶ್ವ ವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ. ಹಾಗೆಯೇ ಕೆನಡಾ ಮತ್ತು ಯುಎಸ್ ವಿಶ್ವ ವಿದ್ಯಾಲಯಗಳಲ್ಲಿ ಬೋಧನೆ ಮಾಡಿದ್ದಾರೆ.

ಆನ್ನಿ ಕಾರ್ಸನ್ ಗೆ ನೊಬೆಲ್ ಪ್ರಶಸ್ತಿಯನ್ನು ನೀಡಿರುವುದು ಒಂದು ಪ್ರಾಯೋಗಿಕತೆ ಮತ್ತು ಕಾಲ್ಪನಿಕತೆಗೆ ನೀಡಿದ್ದಾಗಿದೆ. ಪ್ರತಿ ವರ್ಷವೂ, ನೊಬೆಲ್ ಪ್ರಶಸ್ತಿ ಪ್ರಕಟವಾಗುವ ಮೊದಲು ಸಾಧ್ಯತೆಯುಳ್ಳ ಸ್ಪರ್ಧಿಗಳ ಬಗ್ಗೆ ವಿಮರ್ಶಕರಲ್ಲಿ ಒಂದು ಬಲವಾದ ಊಹಾಪೋಹೆ ಇದ್ದೆ ಇರುತ್ತದೆ. ಎಷ್ಟೋ ವರ್ಷಗಳ ಕಾಲ ಅದರ ನಾಮಿನೇಷನ್ ಗಳನ್ನ ರಹಸ್ಯವಾಗಿಯೇ ಇಡುತ್ತಾ ಬಂದಿರುವ ಸ್ವೀಡಿಷ್ ಅಕಾಡೆಮಿಯು ಕೆಲವೊಮ್ಮೆ ಪರಮಾಶ್ಚರ್ಯಗಳನ್ನು ಹುಟ್ಟು ಹಾಕಿದೆ. ಆದರೆ ಈ ವರ್ಷ ಅದು ಬುಕ್ ಮೇಕರ್ ಗಳ ಫೆವರಿಟ್ ಅನ್ನುವ ೭೬ ವರ್ಷದ, ಕೆನಡಾದ ಮಹಿಳೆ, ಕವಿಯಿತ್ರಿ, ಪ್ರಬಂಧಕಾರ್ತಿ, ಅನುವಾದಕಿ ಹಾಗೂ ನಾಟಕಕಾರ್ತಿಯಾದ ಅನ್ನಿ ಕಾರ್ಸನ್ ಅವರನ್ನು ಆಯ್ಕೆ ಮಾಡಿದೆ.

ಹಾಗೆಯೇ ಅದು ಎರಡು ಮೂರು ವರ್ಷಗಳಿಗೊಮ್ಮೆ ಮಹಿಳಾ ಲೇಖಕಿಯನ್ನು ಮಾನ್ಯಮಾಡುವಂಥ ಒಂದು ಪದ್ಧತಿಗೆ ಇಂಬು ಮಾಡಿಕೊಟ್ಟಿದೆ. ಆನ್ನಿ ಕಾರ್ಸನ್ ಅವರು ಸಾಹಿತ್ಯದಒಟ್ಟು ೧೨೩ ಜನ ನೊಬೆಲ್ ಪ್ರಶಸ್ತಿ ವಿಜೇತರಲ್ಲಿ ೧೯ ನೆಯ ಮಹಿಳೆಯಾಗಿದ್ದಾರೆ. ಅಕಾಡೆಮಿಯ ಪ್ರಶಂಸೆಯ ಮಾತುಗಳಲ್ಲಿ ಇವರು ಒಬ್ಬ ಎದೆಗಾರಿಕೆಯ ಮತ್ತು ಸಂಶೋಧನಾತ್ಮಕ ಕೃತಿ ರಚನೆ ಮಾಡಿದವರಾಗಿದ್ದು ,ಇವುಗಳಲ್ಲಿ ನಾಟಕೀಯ ಸಂಭಾಷಣೆಗಳಿದ್ದು ಅಭಿಜಾತ ಪರಂಪರೆಯಲ್ಲಿ ಬಂದಂತವುಗಳಾಗಿವೆ .ಆ ಮೂಲಕ ಕಾವ್ಯ , ಗದ್ಯ, ಪಾಂಡಿತ್ಯ ಎನ್ನುವುದಕ್ಕಿರುವ ಗಡಿರೇಖೆಗಳನ್ನು ಕೆಡವುತ್ತಾ ನಿರಂತರವಾಗಿ ಹೊಸ ಸ್ವರೂಪಗಳನ್ನೇ ಕಾರ್ಸನ್ ಸೃಷ್ಟಿಮಾಡಿದ್ದಾರೆ. ಕಾರ್ಸನ್ ಅವರು ನಿರಂತರವಾಗಿ ಸಮಕಾಲೀನ ಹಾಗೂ ವೈಯಕ್ತಿಕ ಸಂಭಾಷಣೆಗಳೊಂದಿಗೆ ಅಭಿಜಾತವನ್ನೂ ತರುತ್ತಾರೆ ಮಾತ್ರವಲ್ಲ ಅವುಗಳನ್ನು ವಿಲಕ್ಷಣ ರೀತಿಯಲ್ಲಿ ಒಂದರ ಮಗ್ಗುಲಲ್ಲಿ ಒಂದನ್ನು ಇರಿಸುತ್ತಾರೆ. ಇವರಿಗೆ ರಂಗಭೂಮಿಯ ನಿರ್ದೇಶಕರೊಂದಿಗೆ, ನೃತ್ಯ ತಜ್ಞರೊಡನೆ ಹಾಗೂ ದೃಶ್ಯ ಕಲಾವಿದರೊಡನೆ ಒಡನಾಟವಿದ್ದು ಯಾವುದೆಲ್ಲಾ ಸಾಹಿತ್ಯವನ್ನು ಒಳಗೊಳ್ಳುತ್ತದೋ ಅಂತಹ ತಿಳುವಳಿಕೆಯನ್ನು ಹಿಗ್ಗಿಸುತ್ತಾರೆ

ಪುರಾತನ ಗ್ರೀಕ ಹಾಗೂ ಅಭಿಜಾತ ಸಾಹಿತ್ಯಗಳ ಉತ್ತಮ ಪಾಂಡಿತ್ಯವನ್ನು ಪಡೆದಿರುವಂಥ ಕಾರ್ಸನ್ ಅವರ ಕೃತಿಗಳು ಪ್ರಣಯ, ಆಸೆಗಳು, ಆಧ್ಯಾತ್ಮಿಕತೆ ಹಾಗೂ ಪ್ರಾಚೀನತೆಗಳನ್ನು ಅನ್ವೇಷಿಸುತ್ತವೆ. ಅವಳ ಮೊದಲ ಕೃತಿ eros the bittersweet (೧೯೮೬) ಎನ್ನುವ ಕೃತಿಯು ಗ್ರೀಕ್ ಕಥನಕ್ಕೆ ಸಂಬಂಧಿಸಿದ sappho ಎನ್ನುವ ಪ್ರೌಢ ಪ್ರಬಂಧ ಅಥವಾ phd ನಿಬಂಧದ ಪುನರ್ – ಪರಿಶೀಲನೆಯ ರೂಪವಾಗಿದೆ. ಇದು ಕೊರತೆ ಎನ್ನುವ ಗ್ರೀಕ್ ಚಿಂತನೆಯ ಮೂಲಕ ಸುಖ ಮತ್ತು ಆಸೆಯಿಂದಾಗುವ ನೋವನ್ನು ಪರಿಶೀಲಿಸುವುದಾಗಿದೆ. short talks ಎನ್ನುವುದು ( ೧೯೯೨ ) ಸಂಕ್ಷಿಪ್ತ ಸರಣಿಯಾಗಿದ್ದು ಭಾವಗೀತಾತ್ಮಕ ಗದ್ಯ -ಕಾವ್ಯವನ್ನೊಳಗೊಡಿದೆ.

‘ನೀವೇನಾದರೂ ಪ್ರೀತಿ ಮತ್ತು ದುಃಖಗಳ ಅರ್ಥವನ್ನು ಹುಡುಕಾಟ ನಡೆಸುವ ಭಾಷೆಯೊಂದನ್ನು ನೋಡುತ್ತಿದ್ದಲ್ಲಿ , ಅದೆಲ್ಲವೂ ನಮ್ಮ ನ್ನು ಮಾನವೀಯವಾಗಿ ಮಾಡುತ್ತಿದ್ದಲ್ಲಿ ಅದಕ್ಕೆ ನೀವು ಆನ್ನಿ ಕಾರ್ಸನ್ ರ ಕೃತಿಗಳಿಗೆ ಮೊರೆಹೋಗಬೇಕು.’ ಎನ್ನುವುದು ಒಂದು ಅಭಿಪ್ರಾಯ.

‘ಕೃತಿಕಾರನ ಗುರಿಯೆಂದರೆ, ಸಣ್ಣ ಸಂಗತಿಗಳನ್ನು ಗಮನಿಸುವುದು ಅದಕ್ಕೆ ಕಾರಣವೆಂದರೆ, ದೊಡ್ಡ ವಿಷಯಗಳನ್ನು ಗಮನಿಸುವುದಕ್ಕೆ ಡೆಸ್ಕರ್ಟೆಸ್ ನಂಥ ಜನರಿದ್ದಾರೆ. ನನಗೆ ಅಂತಹ ಕೆಲಸವನ್ನು ಮಾಡಲಾಗುವುದಿಲ್ಲ. ಜನರು ಹೇಗೂ ಮಾಡುವಂಥ ವಿಷಯಗಳ ಕಡೆ ಕೇಂದ್ರೀಕರಿಸಲು ಇಲ್ಲವೇ ಈಗಾಗಲೇ ಇರುವಂಥ ವಾಡಿಕೆಯ ವಿಷಯಗಳಿಗಿಂತ ಭಿನ್ನವಾದುದನ್ನು ನೋಡಲು ನಾನು ಕಲಿತಿದ್ದೇನೆ. ಹಾಗಿರುವಾಗ ಅದು ಯಾವಾಗಲೂ ಅಚ್ಚರಿಹುಟ್ಟಿಸುವಂಥದ್ದೇ’ ಎಂದು ನೊಬೆಲ್ ಪ್ರಶಸ್ತಿ ವಿಜೇತೆಯಾಗಿರುವಂಥ ಕೆನಡಾದ ಬರೆಹಗಾರ್ತಿ ಆನ್ನಿ ಕಾರ್ಸನ್ ಅವರು ಅಭಿಪ್ರಾಯ ಪಡುತ್ತಾರೆ. ಯಾವ ವಿಷಯಗಳ ಕಡೆ ಗಮನ ಹರಿಸಬೇಕು ಎನ್ನುವ ಕಲೆಯ ಬಗ್ಗೆ ಒಬ್ಬ ಕೃತಿಕಾರ ಮಾತಾಡುತ್ತಿರುವುದು ಇದೆ ಮೊದಲೇನಲ್ಲ. ಹಾಗೆ ಅದು ಕೊನೆಯದೂ ಏನಲ್ಲ. ಆದರೆ ಅದು ಯಾವ ರೀತಿಯ ಸಣ್ಣ ವಿಷಯಗಳಿಗೆ ಅವರು ಗಮನ ಹರಿಸುತ್ತಾರೆ ಎನ್ನುವ ಕುತೂಹಲಕಾರೀ ವಿಷಯವು ಆಕೆ ಏನನ್ನು ನೋಡುತ್ತಾರೆ. ಯಾವಾಗ ನೋಡುತ್ತಾರೆ, ಹೇಗೆ ನೋಡುತ್ತಾರೆ ಎನ್ನುವುದು ಹಾಗೆಯೇ ಅವರು ನೋಡುವಂಥದ್ದನ್ನು ಮಹತ್ತರ ವಿಷಯಗಳಿಗೆ ವಿಸ್ತಾರಗೊಳ್ಳುವಂತೆ ಯಾವ ರೀತಿಯಲ್ಲಿ ಸಂಪರ್ಕಿಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ.

೨೦೦೮ ರ ಡಿಸೆಂಬರ್ ನಲ್ಲಿ ಕಾರ್ಸನ್ ಅವರು ಬಹು -ಶಿಸ್ತೀಯ ಸಹಯೋಗದ ತುಣುಕೊಂದನ್ನು stacks ಶೀರ್ಷಿಕೆಯಲ್ಲಿ ಪ್ರದರ್ಶಿಸುತ್ತಾರೆ. ಅದು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಪ್ರದರ್ಶನ ಕಲೆಗಳಿಗೆ ಸಂಬಂಧಪಟ್ಟ ಸ್ಕಿರ್ಬಾಲ್ ಕೇಂದ್ರದಲ್ಲಿ. ಅದರ ಮೊದಲ ಅಭ್ಯಾಸ ಕ್ರಿಯೆಯ ಪುನರಾವರ್ತನೆಯಲ್ಲಿ, ಇದು ಕಲಾಶಿಲ್ಪಿ ಪೀಟರ್ ಕೋಲ್ ಮತ್ತು ಕೊರಿಯೋಗ್ರಾಫ್ರ್ ಜೋನಾ ಬೊಕೈರ್ ಅವರೊಂದಿಗೆ ಮಾಡಿಕೊಂಡಿದ್ದ ಸಹಯೋಗವಾಗಿತ್ತು. ಕೋಲ್, ಸ್ಟ್ಯಾಕ್ ಬಾಕ್ಸ್ ಗಳನ್ನ ರಂಗದ ಮೇಲೆಲ್ಲಾ ಇರಿಸಿದರೆ, ನೃತ್ಯಗಾರ್ತಿಯರು ( ಆಡಮ್ ವೀನರ್ಟ್ ಮತ್ತು ಸೈಲಾಸ್ ರೀನರ್) ಅವನ್ನು ಪುನರ್ ವ್ಯವಸ್ಥೆಗೊಳಿಸಿದಾಗ, ಕಾರ್ಸನ್ ಒಂದೆಡೆ ನಿಂತು ಆಕೆಯ ಕವಿತೆಯನ್ನು ಹೇಳುತ್ತಾ ಹೋದಂತೆ ಅವರಿಬ್ಬರೂ ರಂಗದಲ್ಲೆಲ್ಲಾ ಚಲಿಸಿದರು. ನಂತರದ ಪುನರಾವರ್ತನೆಗಳಲ್ಲಿ ಕವಿಗಳು ಕಾಣಿಸಿಕೊಂಡರು ಹಾಗೆಯೇ ಸಹಯೋಗದಲ್ಲಿರುವವರಾದ ಡೆನಿಸ್ ಸ್ಮಿತ್ ಹಾಗೂ ರಾಬರ್ಟ್ ಕ್ಯೂರಿಯಂಥವರು ಅಲ್ಲಿದ್ದರು.

ಹಲವಾರು ಮೂಲವಸ್ತುಗಳನ್ನೊಳಗೊಂಡ ನಾಟಕವಾಗಿದ್ದರೂ ಕೂಡಾ ಅದನ್ನು ಹೊರತುಪಡಿಸಿ ಆನ್ನಿ ಕಾರ್ಸನ್ನಳ `stacks ನಲ್ಲಿರುವ ಕಾವ್ಯಗುಣವನ್ನು ಅಲಕ್ಷಿಸಲಾಗುವುದಿಲ್ಲ. ಕಾರ್ಸನ್ನಳ ಸಾಹಿತ್ಯಿಕ ತರಬೇತಿಯಿದ್ದುದು ಅಭಿಜಾತ ಕೃತಿಗಳಲ್ಲಿ. ಇದು ಅವಳನ್ನು ಹುರಿದುಂಬಿಸುತ್ತಾ ತೌಲನಿಕ ಸಾಹಿತ್ಯ, ಮಾನವ ಶಾಸ್ತ್ರ, ಚರಿತ್ರೆ ಮತ್ತು ಕಲಾವಿಷಯಗಳಲ್ಲಿ ವ್ಯಾಪಕ ಶ್ರೇಣಿಯ ಆಸಕ್ತಿಯನ್ನಿಟ್ಟುಕೊಳ್ಳಲು ಕಾರಣವಾಗಿದೆ. ಅವಳದು ಅತ್ಯಾವಶ್ಯವಾಗಿ ಅಂತರ -ಶಿಸ್ತೀಯ ತಿಳುವಳಿಕೆಯಾಗಿದ್ದು, ಅವಳ ಕೆಲಸವು ಹುಟ್ಟಿಸುವ ಭಾವನೆಯೆಂದರೆ, ಪುರಾತನ ಗ್ರೀಕ್ ಮತ್ತು ಲ್ಯಾಟಿನ್ ಗಳೆನ್ನುವುದರ ಜೊತೆಗೆ ವರ್ಜೀನಿಯ ವೂಲ್ಫ್, ಕೀಟ್ಸ್ ಮತ್ತು ಗೆರ್ಟ್ರೂಡ್ ಸ್ಟೆಯಿನ್ ರಂಥ ಮೌಲಿಕ ಹರಳುಗಳನ್ನು ಬೆಸೆದು ಮಾಡಿದ ಅಮೂಲ್ಯ ಹಾರವೊಂದರ ಭಾವನೆಯನ್ನು ಹುಟ್ಟಿಸುತ್ತದೆ.

ಔಪಚಾರಿಕವಾಗಿ ಅವಳ ಸಾಹಿತ್ಯಿಕ ಸೃಷ್ಟಿಯನ್ನು ಅತ್ಯುತ್ತಮ ರೀತಿಯ ‘ಮಿಶ್ರ ಸೃಷ್ಟಿ ( cross genre ) ಎನ್ನಬಹುದಾಗಿದೆ. ಅವಳ ಸಾಹಿತ್ಯಿಕ ಆಟವೆನ್ನುವ ಲವಲವಿಕೆ ಹಾಗೂ ವಿಚಾರಣೆಗಳು ಅವಳ ಕೃತಿಗಳಿಗೆ ಚಲ ನೆಯನ್ನು ನೀಡುತ್ತಾ ಕಾರ್ಸನ್ ಕೃತಿಗಳು ಇತರರಿಗಿಂತ ಭಿನ್ನವೆನ್ನವ ಹಾಗೆ ಮಾಡಿಬಿಟ್ಟಿವೆ. ಆಕೆಯ ಸೃಜನಶೀಲತೆಯ ಲವಲವಿಕೆಯು ಆಳವನ್ನಾಗಲೀ ಇಲ್ಲವೇ ತೀವ್ರತೆಯನ್ನಾಗಲೀ ಹೊರತುಪಡಿಸಿಲ್ಲ, ಈ ಅಂಶವು ಅವಳ ಪ್ರತಿಯೊಂದು ಕೃತಿಯಲ್ಲೂ ಕಂಡುಬರುವಂಥದಾಗಿದೆ.

ಪ್ರೀತಿ ಮತ್ತು ಯಾತನೆಯನ್ನು ಕುರಿತ ಅನ್ವೇಷಣೆ. ಕಾರ್ಸನ್ನಳ nox ಎನ್ನುವ ಕೃತಿಯು ಅವಳ ಹಿರಿಯ ಸಹೋದರ ಮೈಕೆಲ್ ಕಾರ್ಸನ್ ನನ್ನು ಕುರಿತ ಸ್ಮರಣೆಯ ಶೋಕಗೀತೆಯಾಗಿದೆ. ಆ ಸಹೋದರನು ಕ್ರಿಸ್ತ ಶಕ ೨೦೦೦ ರಲ್ಲಿ ತೀರಿಕೊಂಡಿದ್ದನು. ಇದೊಂದು ಕೈಗಳಿಂದಲೇ ಸಿದ್ಧವಾದ ಸ್ಕ್ರಾಪ್ ಬುಕ್ ಆಗಿದ್ದು ಮಗುವೊಂದು ಮಾಡಬಹುದಾದ ಇಲ್ಲವೇ ಮಾಡಬೇಕೆಂದು ಕನಸುಕಾಣುವಂಥ ಕೃತಿಯಾಗಿದೆ. nox ಎನ್ನುವ ಕೃತಿಯು ಕುಟುಂಬಕ್ಕೆ ಸೇರಿದ ಫೋಟೋಗ್ರಾಫ್ ಗಳು, ಪತ್ರಗಳು, ಕೊಲ್ಯಾಜ್ ಮತ್ತು ಕೈ -ಬರವಣಿಗೆಯ ಟಿಪ್ಪಣಿಗಳನ್ನೊಳಗೊಂಡಿದ್ದು, ಇವೆಲ್ಲವನ್ನೂ ಅಂಟು ಹಚ್ಚಿ ಜೋಡಿಸಲಾಗಿದೆ. ಅದರ ಉದ್ದಕ್ಕೂ ಪ್ರತಿ ಪದದ ಲ್ಯಾಟಿನ್ ಭಾಷಾಂತರ ಹಾಗೂ ಶಬ್ದಕೋಶದ ಕಾಣಿಸುವಿಕೆಗಳಿದ್ದು ಅವು ಕ್ಯಾತುಲಸ್ ನನ್ನು ಭಾಷಾಂತರಿಸಲಾಗದ `poem ೧೦೧ ಎನ್ನುವ ಶೀರ್ಷಿಕೆಯನ್ನು ಹೊತ್ತಿದೆ. ಕ್ಯಾತುಲಸ್ ಎನ್ನುವುದು ಮನೆಯಿಂದ ದೂರದಲ್ಲೆಲ್ಲೋ ತೀರಿಕೊಂಡ ಸಹೋದರನ ಒಂದು ಸ್ಮರಣೀಯ ಶೋಕಗೀತೆಯಾಗಿದೆ.

nox ಕೃತಿಯ ಒಳಗಡೆ ಒಂದು ಕ್ರಮಬದ್ಧತೆಯಿಲ್ಲದ ಫೋಟೋಗ್ರಾಫ್ ಗಳನ್ನ ಸಂವಾದಗಳು ಪ್ರದರ್ಶಿತವಾಗಿರುವುದನ್ನು ಕಾಣಬಹುದಾಗಿದೆ. ೧೯೭೯ ರಲ್ಲಿ ಅವನು ಕೆನಡಾದಿಂದ ಪಲಾಯನ ಮಾಡಿಯಾದ ಮೇಲೆ ಸಹೋದರನೊಂದಿಗೆ ಅವಳು ನಡೆಸಿದ ಮಾತುಕತೆಗಳಿವೆ. ಅವಳ ಮಾತಿನ ವಿನಿಮಯವು ಮಾದಕ ದ್ರವ್ಯಗಳ ಅಕ್ರಮ ದಂಧೆಯನ್ನು ಕುರಿತ ಅವನ ಮೇಲಿದ್ದ ಆರೋಪಕ್ಕೆ ಸಂಬಂಧಪಟ್ಟಿದ್ದಾಗಿತ್ತು. ಅವಳು ಮತ್ತೆ ಅವನನ್ನು ಎಂದೂ ಭೇಟಿಯಾಗಲೇ ಇಲ್ಲ . nox ಎನ್ನುವ ಆ ಕೃತಿಯ ಪ್ರತಿ ಪುಟದಲ್ಲೂ ನೆರಿಗೆಗಳು , ಮಸಿ ಚಿತ್ತುಗಳು ಮತ್ತು ಗುರುತುಗಳಿವೆ.

ಈ ಹೋಲಿಕೆಗೆ ಕ್ಯಾತುಲಸ್ಸೇ ಏಕಾಗಬೇಕಿತ್ತು ಎನ್ನುವುದಕ್ಕೆ ಕಾರ್ಸನ್ ಹೀಗೆ ಬರೆಯುತ್ತಾಳೆ ; ಕ್ಯಾತುಲಸ್ ಕವಿತೆ ೧೦೧ ರ ಬಗ್ಗೆ ನಾನು ವಿವರಣೆ ನೀಡ ಬಯಸುತ್ತೇನೆ. ಕ್ಯಾತುಲಸ್ ಕವಿತೆ ರಚನೆಯಾಗಿದ್ದು ಅವನ ಸಹೋದರನು ಟ್ರೋಡ್ ಎನ್ನುವಲ್ಲಿ ತೀರಿಕೊಂಡಿದ್ದಾಗ. ಅವನ ಸಾವನ್ನು ಹೊರತುಪಡಿಸಿ ಬೇರೇನೂ ವಿಷಯ ತಿಳಿದಿರಲಿಲ್ಲ. ಕ್ಯಾತುಲಸ್ ವೆರೋನ ದಿಂದ ಏಷ್ಯಾ ಮೈನರ್ ಗೆ ಪ್ರಯಾಣ ಮಾಡಿರುವಂತೆ ತಿಳಿದು ಬಂದು ಅಲ್ಲೇ ಸಮಾಧಿಗೊಂಡ ಹಾಗೆ ಕಂಡುಬರುತ್ತದೆ. ಬಹುಷಃ ಅವನು ಶೋಕ ಗೀತೆಯನ್ನು ಅಲ್ಲೇ ವಾಚಿಸಿರಬೇಕು. ಅದನ್ನು ನಾನು ಹೈ ಸ್ಕೂಲ್ ನಲ್ಲಿ ಲ್ಯಾಟಿನ್ ತರಗತಿಯಲ್ಲಿ ಮೊದಲ ಸಲ ಓದಿದಾಗಿಂದ ಇಷ್ಟಪಟ್ಟಿದ್ದೆ. ಅನೇಕ ಸಲ ಅದನ್ನು ಭಾಷಾಂತರಿಸಲು ಕೂಡಾ ಪ್ರಯತ್ನ ಮಾಡಿದ್ದೆ. ಆ ರೋಮನ್ ಶೋಕ ಗೀತೆಯ ಭಾವತೀವ್ರತೆ ಹಾಗೂ ನಿಧಾನ ಗತಿಯನ್ನು ಇಂಗ್ಲಿಷ್ ನಲ್ಲಿ ಹಿಡಿಯಲು ಸಾಧ್ಯವಾಗಲಿಲ್ಲ. ಕ್ಯಾತುಲಸ್ ಶಬ್ದಜಾಲವನ್ನು ಅಂದಾಜು ಮಾಡುವುದು ಯಾರೊಬ್ಬರಿಗೂ ಸಾಧ್ಯವಿಲ್ಲ. (ಲ್ಯಾಟಿನ್ ನಲ್ಲಿ) ಅದು ಅತ್ಯಂತ ತೀವ್ರವಾದ ಯಾತನೆಯನ್ನೊಳಗೊಂಡ ಗಹನ ವಾತಾವರಣವಿದ್ದು ಅದು ಎಲ್ಲಾ ಎಲೆಗಳನ್ನು ಕಳೆದುಕೊಂಡ ಮರವೊಂದು ಬೆಳ್ಳಿಯಂತಾಗಿ ಗಾಳಿಯಲ್ಲಿ ನಿಂತಿರುವುದನ್ನು ಧ್ವನಿಸುತ್ತದೆ. ೧೦೧ ಕವಿತೆಯನ್ನು ನಾನು ಎಷ್ಟು ಇಷ್ಟಪಟ್ಟಿದ್ದೇನೋ ಆ ರೀತಿಯ ಭಾಷಾಂತರವನ್ನು ನಾನೆಂದೂ ತಲುಪಲಾಗಲೇ ಇಲ್ಲ. ಆದರೆ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ ನಂತರ ಅದನ್ನೊಂದು room ಆಗಿ ಭಾಷಾಂತರಿಸಲು, ಅದರಲ್ಲೂ ಖಚಿತವಾಗಿ ಅಜ್ಞಾತವೆನ್ನುವಂಥ ರೂಮ್ ಅಲ್ಲದ, ಒಬ್ಬರು ಬೆಳಕಿಗೆ ಸ್ವಿಚ್ ಹುಡುಕುವಂಥದ್ದನ್ನು ಮಾಡಲು ಯೋಚಿಸಿದೆ. ಅದು ಕೊನೆಗೊಳ್ಳುವುದಿಲ್ಲವೆಂದು ನಾನು ಊಹಿಸುತ್ತೇನೆ. ಒಬ್ಬ ಸಹೋದರನು ಕೊನೆಗೊಳ್ಳುವುದೇ ಇಲ್ಲ. ನಾನು ಅಲೆದಾಡುತ್ತಲೇ ಇರುತ್ತೇನೆ ,ಅವನು ಕೊನೆಗೊಳ್ಳುವುದೇ ಇಲ್ಲ.

ಅವಳ ಬರವಣಿಗೆಯಲ್ಲಿರುವಂಥ ನಿರೋಧಿಸಲಾಗದ ಒಂದು ಸೆಳೆತವೆಂದರೆ ಅದು ಅಭಿಜಾತ ಪಾಂಡಿತ್ಯದೊಂದಿಗೆ, ಕಚ್ಚಾ ಎನ್ನುವಂಥ ಆಧುನಿಕತೆಯ ಅಪಾಯಗಳಿಗೆ ತನ್ನನ್ನು ಒಡ್ಡಿಕೊಳ್ಳುವಂಥದ್ದನ್ನು ಮಿಶ್ರಣ ಗೊಳಿಸುವಂಥ ವಿರಳ ಸ್ವಭಾವವಾಗಿರುತ್ತದೆ. ಅದನ್ನು ‘ಪ್ರಲೋಭನೆಗೆ ಒಳಗಾಗು ವಂಥ ವಿಚಿತ್ರಸ್ಥಿತಿ’ ಎಂದು ಕರೆಯಲಾಗಿದೆ. ಅಭಿಜಾತ ಸಾಹಿತ್ಯಗುಣವುಳ್ಳ ಒಬ್ಬ ಲೇಖಕಿಯಾಗಿ ‘ಗಾಳಿಯನ್ನು ಕೇಳಿಸಿಕೊಳ್ಳುವವಳು’ ಎಂದು ಹೆಸರಾಗಿ, ಕಾರ್ಸನ್ ಸಾಂಪ್ರದಾಯಿಕ ಕವಿಯಂತೆ ನಿರ್ವಹಣೆ ಮಾಡುವುದನ್ನು ಕಡಿಮೆ ಮಾಡಿಕೊಂಡು, ಮಾನವ ಅಂತರಂಗದ ಪುರಾತತ್ವ ಶಾಸ್ತ್ರಜ್ಞೆಯಾಗಿ ನಿರ್ವಹಣೆ ಮಾಡುತ್ತಾಳೆ. ಪ್ರೀತಿ, ಯಾತನೆ ಮತ್ತು ಆಸೆಗಳೆನ್ನುವ ಸಮಕಾಲೀನ ಕಲಸುಮೇಲೋಗರದ ವಾಸ್ತವತೆಗಳನ್ನು ಪ್ರಕಾಶಮಾನಕ್ಕೆ ತರಲು ಪ್ರಾಚೀನತೆಯ ಘಟಕಗಳ ಮೂಲಕ ಸೋಸುವ ಕ್ರಿಯೆಯನ್ನು ನಡೆಸುತ್ತಾಳೆ.

ಆಸೆ ಎನ್ನುವುದರ ರೇಖಾಗಣಿತ

ಅವಳ ಅತ್ಯಂತ ಪ್ರಾಥಮಿಕ ಎನ್ನುವಂತ eros of bitter sweet ಎನ್ನುವ ಕೃತಿಯಲ್ಲಿ ಕಾರ್ಸನ್ ಅವಳನ್ನು ಬದುಕಿನುದ್ದಕ್ಕೂ ಕಾಡಿ ರುವಂಥ ಗೀಳು ಎನ್ನುವುದಾದಲ್ಲಿ ಅದನ್ನು ಅವಳು ‘ಆಸೆಯ ಪೂರೈಕೆ ‘ಎಂದು ಕರೆಯುತ್ತಾಳೆ. sappho ಮತ್ತು ಪ್ಲೇಟೋ ಅವರಿಂದ ಪಡೆದುಕೊಂಡ ಅವಳು ಪ್ರೀತಿ ಎನ್ನುವುದು ಮೂಲಭೂತವಾಗಿ ಪ್ರಣಯಿ ಮತ್ತು ಪ್ರಣಯಿನಿಯ ಮಧ್ಯೆ ಇರುವಂಥ ಒಂದು ತೆರವು ಎಂದು ವ್ಯಾಖ್ಯಾನಿಸುತ್ತಾಳೆ. ಈ ರೀತಿಯ ಖಚಿತವಾದ ನೋವಿನಿಂದ ಅವಳ ಕೃತಿಗಳ ಸೆಳೆತವು ಕಂಡುಬರುತ್ತದೆ – ಅದು ಬಯಸುವಿಕೆಯ ತಿಳುವಳಿಕೆಯು ಪ್ರೀತಿಯಿಂದ ಪ್ರತ್ಯೇಕವಾದುದೇನಲ್ಲ, ಬದಲಾಗಿ ಅದನ್ನು ಶಕ್ತಿಯುತವನ್ನಾಗಿ ಮಾಡುವುದು ಅದೇ ಆಗಿರುತ್ತದೆ. ಅವಳು ಆಟೋಬಯಾಗ್ರಫಿ of ರೆಡ್ ನಲ್ಲಿ ಬರೆಯುವಂತೆ ಅಂತರವು ತೆರವಿಲ್ಲದ ಕಡೆಯಿಂದ ವಿಸ್ತಾರಗೊಂಡು ಏನನ್ನು ಪ್ರೀತಿಸಬೇಕು ಎನ್ನುವ ಅಂಚಿನ ಕಡೆಗೆ ಸರಿಯುತ್ತದೆ.

ಕಾರ್ಸನ್ ರೂಢಿಗತ ನೇಯ್ಗೆಯನ್ನು ನಿರಾಕರಿಸುವುದಕ್ಕೆ ಪ್ರಸಿದ್ಧರು. ಹಾಗೆಯೇ ಆಧುನಿಕ `ಭಾವಗೀತಾತ್ಮಕ ಪ್ರಬಂಧ’ ಎನ್ನುವುದರ ಆದ್ಯ ಪ್ರವರ್ತಕರು. ಈ ಪ್ರಕಾರವು ಆತ್ಮೀಯವಾದ ಭಿನ್ನವಿಸುವಿಕೆಯನ್ನೊಳಗೊಂಡ ಕಥಾನಕದೊಂದಿಗೆ ತಣ್ಣಗಿನ ಅಕಾಡೆಮಿಕ್ ವಿಶ್ಲೇಷಣೆಯಲ್ಲಿ ಮಿಶ್ರಣಗೊಂಡಿರುತ್ತದೆ.

she treats translation not as a stagnant window to the past but as a dynamic space for transgression and play .

ಆನ್ನಿ ಕರ್ಸರ್ ಕೃತಿಗಳು ಮತ್ತು ಅವುಗಳ ಸಂಕ್ಷಿಪ್ತ ವಿವರಗಳು :

ಪ್ರಧಾನ ಗುಣ ಅವಳ ಕೃತಿಗಳಲ್ಲಿ ಕಾಣಿಸಿಕೊಳ್ಳುವ ರೀತಿ ಬಹು ಮುಖ್ಯ ನಿದರ್ಶನಗಳು.

ಪ್ರಕಾರವನ್ನು ತೊಡೆದುಹಾಕಿದ್ದು – ಕಾವ್ಯ , ಗದ್ಯ , ಅನುವಾದ, ಫೋಟೋಗ್ರಫಿ ರಚನಾತ್ಮಕ ನಾಟಕವೆಲ್ಲವುಗಳನ್ನೂ ಬೆಸೆದಿದ್ದು , float, glass irony ಅಂಡ್ god.

ಪ್ರಗತಿಶೀಲ ಎದೆಗಾರಿಕೆಯನ್ನು ತೋರಿಸಿದ್ದು– ಯಾತನೆ ಮತ್ತು ಆಸೆಗಳಂಥ ಮಧ್ಯವರ್ತಿಗಳಿಲ್ಲದ ಪ್ರವೇಶ ದ್ವಾರಗಳನ್ನು ತೀವ್ರತರವಾದ ಪಾಂಡಿತ್ಯದ ಮೂಲಕ ಪರಿವರ್ತನೆ ಮಾಡಿದ್ದು– ,nox ,the glass essay.

ಕಾಲಾಭಾಸವೆನ್ನುವಂಥದ್ದನ್ನು ಪುನರ್ -ವಿಶ್ಲೇಷಣೆಗೆ ಒಳಪಡಿಸಿದ್ದು– ,ಪುರಾತನ ಗ್ರೀಕ್ ಪುರಾಣ ಕಲ್ಪನೆಗಳನ್ನು ಬಳಸಿಕೊಂಡು ಆಧುನಿಕ ,ವಿಲಕ್ಷಣ ಅಥವಾ ಆಳವಾದ ಆಪ್ತ ಮಾನವ ಗುಣಗಳನ್ನು ಪುನರ್ ರಚಿಸುವುದು.

ಆನ್ನಿ ಕಾರ್ಸನ್ —ಕೆಲವು ಮುಖ್ಯ ಕೃತಿಗಳ ಪ್ರವೇಶ.

autobiography of red – ಕಾವ್ಯವಾಗಿ ಹೊರಬಿದ್ದ ಕಾದಂಬರಿ . ಗ್ರೀಕ್ ಪುರಾಣ ಕಲ್ಪನೆಯ ಘಟಕವೊಂದನ್ನು ಪುನರ್ ಕಲ್ಪಿಸಿಕೊಂಡು , ಆಧುನಿಕ , ವಿಲಕ್ಷಣವೆನ್ನುವ , ನಮ್ಮ ಕಾಲಕ್ಕೆ ಹೊಂದಿಕೆಯಾಗುವ ಹಾಗೆ ಒಂದು ರೋಮ್ಯಾನ್ಸ್ .ರೆಕ್ಕೆಗಳನ್ನುಳ್ಳ ಕೆಂಪು ರಾಕ್ಷಸ ,ಗೆರಿಯೋನ್ ಎನ್ನುವ ವ್ಯಕ್ತಿ ಫೋಟೋಗ್ರಫಿ ಯ ಅನ್ವೇಷಣೆಯಲ್ಲಿ ಹೆರಾಕ್ಲೆಸ್ ನೊಂದಿಗೆ ಪ್ರೀತಿಗೆ ಬೀಳುತ್ತಾನೆ . ಅದು ಆಳವಾಗಿ ತಟ್ಟುವುದಾಗಿದ್ದು ,ಶೋಧನಾತ್ಮಕವಾಗಿದ್ದು ,ಗಣನೀಯ ವಾಗಿ ಪ್ರವೇಶವನ್ನು ಒದಗಿಸುತ್ತದೆ.

the beauty of the husband ( ೨೦೦೧ ) ಇದು ಉಪಶೀರ್ಷಿಕೆಯನ್ನು ಸಹ ಹೊಂದಿದ್ದು, an essay on narrative verse in ೨೯ tangos’ ಎನ್ನುವ ಈ ಕೃತಿಯು ಟಿ ಎಸ್ ಈಲಿಯಟ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದು ಮದುವೆಯ ಅಂಗರಚನೆಯನ್ನು ಶೋಧಿಸುತ್ತಾ, ಅದರ ಯಾತನಾಮಯವಾದ ಕ್ಷಣಭಂಗುರತೆಯನ್ನು ಹೇಳುವುದಾಗಿದೆ.
ಶಾರ್ಟ್ ಟಾಕ್ಸ್ – (ಗ್ಲಾಸ್, ಐರನಿ ಮತ್ತು ಗಾಡ್, ೧೯೯೨ ಇದರಿಂದ ಆಯ್ಕೆಮಾಡಿದ್ದು ) ಗದ್ಯ – ಪದ್ಯಗಳ ಹೈಬ್ರಿಡ್ ಪ್ರಕಾರ. ಇದು ಅವಳ ಚುರುಕಾದ, ತಾತ್ವಿಕತೆಯ ತಿಳುವಳಿಕೆಯನ್ನು ತೋರಿಸಿಕೊಡುವುದಾಗಿದೆ.

ode to the sublime by monika vitti : pop ಕಲ್ಚರ್ , film ಮತ್ತು ಅಭಿಜಾತ ಪುರಾಣ ಕಲ್ಪನೆಯನ್ನು ಮಿಶ್ರಣ ಮಾಡಿದ್ದನ್ನು ತೋರಿಸಿಕೊಡುವುದಾಗಿದೆ.

fathers old blue cardigan ; ಮರೆವಿನ ಖಾಯಿಲೆಯನ್ನು ಕುರಿತಂತೆ ತಂದೆಯ ಅನುಭವವನ್ನು ಪ್ರತಿಬಿಂಬಿಸುವ ವೈಯಕ್ತಿಕ ಆದರೆ ಆಳವಾದ ಮನಸ್ಸಿಗೆ ತಟ್ಟುವಂಥ ಭಾವಗೀತೆ.

if not , winter : fregments of sappho (೨೦೦೨) ತಾಂತ್ರಿಕವಾಗಿ ಇದೊಂದು ಅನುವಾದ ಕೃತಿ. sappho ಪುನರ್ ರಚನೆ.


  • ಟಿ.ಎಸ್.ರಘುನಾಥ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading