‘ಅಯೋಧ್ಯೆಯ ರಾಮ’ ಕವನ

ಮನಸ್ಸಿನಲ್ಲಿ ರಾಮ ಜನನ. ಭರತನಾಳಿದ ಭಾರತದೇಶ. ಕರುಣಾಮಯಿ ಶ್ರೀ ರಾಮಚಂದ್ರನು…ರಾಮನವಮಿ ಪ್ರಯುಕ್ತ ಕವಿ ಸಂಧ್ಯಾ ಟಿ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ… 

ಅಪದಾಮಪಹರ್ತಾರಂ
ದಾತಾರಂ ಸರ್ವಸಂಪದಾಂ
ಲೋಕಾಭಿರಾಮಂ ಶ್ರೀ ರಾಮಂ
ಭೂಯೋ ಭೂಯೋ ನಮಾಮ್ಯಹಂ//

ಮನಸ್ಸಿನಲ್ಲಿ ಯಾವುದೇ ರೀತಿಯ ಅಪನಂಬಿಕೆ, ಅಹಂಕಾರಾದಿ ತಾಕಲಾಟವಿಲ್ಲದ ಶುದ್ಧ ಮನಸ್ಸು ಅಯೋಧ್ಯೆ ಎನಿಸುವುದು. ಆ ಮನಸ್ಸಿನಲ್ಲಿ ರಾಮ ಜನನ. ಭರತನಾಳಿದ ಭಾರತದೇಶ. ಭರತನಲ್ಲಿ ವಾಯು ದೇವರ ಸನ್ನಿಧಾನ ಹೆಚ್ಚು, ಭಕ್ತಿಗೆ ಅಭಿಮಾನಿ ದೇವತೆ ಭಾರತೀದೇವಿ.ಹೀಗೆ ನಮ್ಮ ಭಾರತ ದೇಶ ಪರಮಾತ್ಮನ ಜನ್ಮಭೂಮಿಯಾಗಿದೆ. ಹೀಗಾಗಿ ಬದುಕಿಗೆ “ಹರಿ ಸರ್ವೋತ್ತಮ ವಾಯು ಜೀವೋತ್ತಮ”ಎನ್ನುವುದು ತಾರಕ ಮಂತ್ರ ಎನಿಸಿದೆ.

ಹರಿ ಎಂದರೆ ಎಲ್ಲ ಕಡೆಗೂ ವ್ಯಾಪ್ತ. ಅದರಂತೆ ಗಾಳಿಯು ಎಲ್ಲ ಕಡೆಗೂ ವ್ಯಾಪ್ತ ಪ್ರಕೃತಿ ವಾಯು ಇರದೆ ಇದ್ದರೆ ನಾವು ಬದುಕುವುದು ಹೇಗೆ? ಹರೇ ಎಂದರೆ ಬ್ರಹ್ಮ, ವಿಷ್ಣು ಮಹೇಶ್ವರ. ಶ್ರೀ ಎಂದರೆ ಜ್ಞಾನ ಸಂಪತ್ತು ನಿವಾಸ ಎಂದರೆ ವಾಸಸ್ಥಳ. ಕಾರಣ ಹರೇ ಶ್ರೀನಿವಾಸ.ಈ ಭರತ ಭೂಮಿಯಲ್ಲಿ ದೈವೀ ಭಕ್ತರು ತಮ್ಮ ಸುಸಂಸ್ಕೃತ ಧರ್ಮ ಎಂದರೆ ಧನಾತ್ಮಕ ಚಿಂತನೆಯನ್ನು ಬೆಳಿಸಿದ ದೇಶ ಭಾರತದೇಶ. ಪ್ರಕೃತಿಯಲ್ಲಿಯ ಗಾಳಿ ಬೆಳಕನ್ನು ಹಿಡಿದು ಹಾಕಲು ಸಾಧ್ಯವಿಲ್ಲ.ಎಂದು ಎಲ್ಲರಿಗೂ ಗೊತ್ತು. ಆದರೆ ಆ ಗಾಳಿ ಬೆಳಕು ಎರಡೂ ಯಾರಿಗೂ ತೊಂದರೆಕೊಡದೆ ಉಪಕಾರ ಮಾಡುತ್ತಾ ಸಂವಿಧಾನದಿಂದ ತಮ್ಮ ಕಾರ್ಯಗಳನ್ನು ಮಾಡುತ್ತಿರುತ್ತವೆ.ಈ ಉಪಕಾರದಲ್ಲಿ ಬ್ರಹ್ಮ ಇರುವನು.

ಗಾಳಿ ಬೆಳಕು ಎಲ್ಲರಿಗೂ ಸಮಾನತೆಯಾಗಿ ದೇಹಕ್ಕೆ ಸ್ಪರ್ಶ ಕೊಡುವವು.ಇದಕ್ಕೆ ವಾತ್ಸಲ್ಯ,ಕರುಣೆ ಸೌಹಾರ್ದತೆಯ ಸಂವಿಧಾನದ ನಡೆ.ಇದೆ ಹರಿ ಹರರಿಂದ ಆಗುವ ಸ್ಥಿತಿ ಲಯ.ಬ್ರಹ್ಮ ಕ್ಷಣ ಕ್ಷಣಕ್ಕೂ ನಮ್ಮ ಮನಸ್ಸಿನಲ್ಲಿ ಹೊಸತನ್ನು ಸೃಷ್ಟಿಸುವನು.ಸತ್ಯ ತುಂಬಾ ವಿಶಾಲ ಮತ್ತು ಸೂಕ್ಷ್ಮ ವೂ ಹೌದು.ಆ ರಹಸ್ಯದಲ್ಲಿ ನಮಗೆ ನಂಬಿಕೆ ಇಲ್ಲಾ ಅಂತಾದರೆ ಸುಳ್ಳು ಹುಟ್ಟುವುದು.ಅದರ ಸಂತತಿ ತುಂಬಾ ದೊಡ್ಡದು.ಅದರಲ್ಲಿ ನಮ್ಮ ಶರೀರ ಜಡವಾಗುತ್ತದೆ ಸಾಕ್ಷಿ ಸಿಗದೆ ಆತ್ಮ ಬಡಿದಾಡುತ್ತ ಮತ್ತೆ ಭೂಮಿ ತತ್ವ ತಿಳಿಯದೆ ಜನನ.ಜನನದ ಸಂಸ್ಕಾರ ತಿಳಿಯದಿದ್ದರೆ ಮೃತ್ಯು,ಮೋಕ್ಷಗಳ ಅರಿವು ಆಗುವುದಿಲ್ಲ.

ಭಾರತದಲ್ಲಿ ರಾಮನ ಜನನ ಎಂದು ಅಕ್ಷಯವಾದ ಜ್ಞಾನದಲ್ಲಿ ಅಕ್ಷರವಾಗಿ ಮೂಡಿದ್ದರೂ ಅಜ್ಞಾನದ ಮಾಯೆಯಲ್ಲಿ ತೊಡಗಿ ಎಷ್ಟೊಂದು ಜೀವಿಗಳ ಕೊಲೆ ನಡೆಯಿತು.ಆದರೂ ಸತ್ಯವೆನ್ನುವ ಶ್ರೀ ರಾಮನ ಶಿಲಾಮೂರ್ತಿ ಶಿಲ್ಪಿಯಿಂದ ಶುದ್ಧ ಮನಸ್ಸಿನಿಂದ ಸೃಷ್ಟಿಯಾಗಿ ಧರ್ಮಕ್ಷೇತ್ರೆ ಕುರುಕ್ಷೇತ್ರೇ ಅನ್ನುವ ರೀತಿಯಲ್ಲಿಯೇ ಶ್ರೀ ರಾಮಚಂದ್ರ ದೇವರ ಪ್ರಾಣಪ್ರತಿಷ್ಟೆ ಆಗಿರುವದಂತೂ ನಿಜ .ಶ್ರವಣ, ಕೀರ್ತನ, ಸ್ಮರಣೆ, ಪಾದ ಸೇವನೆ, ಅರ್ಚನೆ, ವಂದನೆ,ಸಖ್ಯ ಆತ್ಮ ನಿವೇದನೆ ಈ ನವಭಕ್ತಿಯನೊಳಗೊಂಡ ಕಾಲವು ಸಜ್ಜನರಲ್ಲಿ ಮೂಡುತ್ತ ರಾಮ ನವಮಿಯ ಹಬ್ಬವು ಪುಳಕಿತವಾಗಲಿ.ಪರಾಭವ ಸಂವತ್ಸರವು ತನ್ನ ಪಾದವನ್ನಿಟ್ಟಾಯಿತು. ಗುರು ,ಶಿಷ್ಯ ಸಂಹಿತೆಯು ಬಲಗೊಳ್ಳಲಿ,ಮಾನವೀಯತೆಯ ಸ್ವರೂಪ ಧೃಡತೆಯಿಂದ ಸುಭದ್ರವಾಗಿ ಸಂವಿಧಾನದ ಮೂಲಕ ಎಲ್ಲೆಡೆ ವ್ಯಾಪ್ತಗೊಳ್ಳಲಿ. ಈ ಕಲಿಯುಗದಲ್ಲಿ ಅಗೋಚರನಾದ ಸರ್ವೋತ್ತಮನಾದ ದೋಷವರ್ಜೀತನಾದ ಪರಮಾತ್ಮನು ಹುಟ್ಟಿ ಬರುವುದಿಲ್ಲ.ಸಜ್ಜನರಲ್ಲಿ ಆವೇಶ,ಅಂತರಾತ್ಮನಾಗಿ ಅವತಾರ ತೋರಿಸುವನು. ಅದು ಪೂರ್ಣಗೊಳ್ಳಲಿ ಎಂದು ಆತ್ಮವಿಶ್ವಾಸದ ಸಾಕ್ಷಿಯಿಂದ ಪ್ರಾರ್ಥನೆ ಸಲ್ಲಿಸುವ ಅವಕಾಶ ಮಾನವ ಧರ್ಮಕ್ಕಿದೆ.ಕಾರಣ ಪವಿತ್ರ,ಸತ್ಯವನ್ನು ಯೋಚಿಸಿ ಪ್ರಾರ್ಥನೆ ಸಲ್ಲಿಸೋಣ.ಅಂದರೆ ಮಾತು, ಕ್ರಿಯೆ, ಕಾರಣದಲ್ಲಿ ಸ್ವಲ್ಪ ಲೋಪವಾದರೆ ಪುಣ್ಯಕ್ಕೆ ಅವಕಾಶ ಕೊಡುವನು ಕರುಣಾಮಯಿಯಾದ ಶ್ರೀ ರಾಮಚಂದ್ರನು. ಎಲ್ಲ ಸಾತ್ವಿಕರಲ್ಲಿ ಪರಮಾತ್ಮನ ಗುಣಗಳ ಶ್ರವಣ, ಕೀರ್ತನಾದಿ ಶುಭ ತತ್ವಗಳು ಉದ್ಭವಿಸಿ ಆ ಅಮೃತ ಸಾಗರದಲ್ಲಿ ಜೀವನ ನೌಕೆಯು ಸಾಗಲಿ.

ಕಲಿಯ ಮಾಯೆಯಿಂದ ಕ್ಷಣದ ಸುಖಕ್ಕಾಗಿ ಯೋಚನೆ ಮಾಡದೆ ದುಷ್ಕೃತ್ಯ ಗಳು ನಡೆಯುತ್ತಿವೆ.ಪುರಾಣದಲ್ಲಿ ಸಪ್ತರ್ಷಿಗಳು ಬ್ರಹ್ಮನ ಮಾನಸ ಪುತ್ರರು ಎಂದು ಕೇಳುತ್ತೇವೆ.ಕೆಲವರು ಇದನ್ನು ಯೋಚಿಸುತ್ತ ಸತ್ಯವನ್ನು ಕಾಣಲು ಪ್ರಯತ್ನಿಸುತ್ತಾರೆ.ಅದನ್ನು ಸುಳ್ಳು ಎಂದು ಹೇಳುವದಿರಲಿ ಇದರಲ್ಲಿ ಜಾತಿ,ಪಂಗಡ ಮೂಢ ನಂಬಿಕೆ ಅಂಧ ಧರ್ಮ ಅಲ್ಲದೇ ಅದರಲ್ಲಿ ಸಂವಿಧಾನ ಹೀಗೆ ಏನೇನೋ ಮಾತನಾಡುತ್ತಾರೆ.ಇದು ಪ್ರತ್ಯಕ್ಷ ನಡೀತಾ ಇದೆ.ಇದು ಅಹಂದಮದವೋ ದುಡ್ಡಿನ ದಾಹವೋ ಮಕ್ಕಳು,ದೊಡ್ಡವರೆನ್ನದೆ ಮನಸ್ಸಿನಲ್ಲಿ ಅಸುರೀ ಭಾವ ತಂದುಕೊಂಡು ರಾಕ್ಷಸರಂತೆ ವರ್ತನೆ ನಡೀತಾ ಇದೆ.ಈ ದುರ್ಮಾಯೆಯ ಆವೇಶ ಕಡಿಮೆ ಆಗಿ ಬ್ರಹ್ಮ ಸಂಪತ್ತಾದ ಜಗನ್ಮಾತೆಯ ಅನುಗ್ರಹ ಎಲ್ಲೆಡೆ ಪಸರಿಸಲಿ.
ಅಯೋಧ್ಯೆಯ ಶ್ರೀ ರಾಮಚಂದ್ರನ ಅನುಗ್ರಹದಿಂದ ಎಲ್ಲೆಡೆಯೂ ಶಾಂತಿ ಸತ್ಯದ ಆವೇಶ ಮೂಡಿ ಬರಲಿ.ಎಲ್ಲರಿಗೂ ಶ್ರೀ ರಾಮನವಮಿಯ ಶುಭಾಶಯಗಳು.ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರೇ ಶ್ರೀನಿವಾಸ.

ಜಯ ಜಯ ರಾಮ ಶ್ರೀ ರಾಮ
ಜಯ ಜಯ ರಾಮ ರಘುರಾಮ
ಜಯ ಜಯ ಶಬರಿಯ ಸತ್ಯ ರಾಮ
ಜಯ ಜಯ ಅಹಲ್ಯಾ ಸುಖ ರಾಮ
ಜಯ ಜಯ ಮಾರುತಿ ಪ್ರಿಯರಾಮ
ಜಯ ಜಯ ವಿಭೀಷಣ ಮನರಾಮ
ಜಯ ಜಯ ರಾಮ ಸೀತಾರಾಮ
ಜಯ ಜಯ ರಾಮ ಜಾನಕಿ ರಾಮ
ಜಯ ಜಯ ಅಯೋಧ್ಯೆಯ ರಾಜಾ ರಾಮ
ಜಯ ಜಯ ದಶರಥಕೌಸಲ್ಯ ರಾಮ
ಜಯ ಜಯ ರಾಮ ಕೋದಂಡರಾಮ
ಜಯ ಜಯ ರಾಮ ಆತ್ಮಾರಾಮ


  • ಸಂಧ್ಯಾ ಟಿ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading