ಬಾಳೆಕಾಯಿ ರವಾ ಫ್ರೈಯನ್ನು ರುಚಿಕರವಾಗಿ ಮಾಡುವ ವಿಧಾನವನ್ನು ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ನೀವು ಮನೆಯಲ್ಲಿ ಮಾಡಿ ಸವಿಯಿರಿ…
ಬೇಕಾಗುವ ಸಾಮಗ್ರಿಗಳು :
- ಬಾಳೆಕಾಯಿ
- ಮೆಣಸಿನ ಪುಡಿ, ಧನಿಯ ಪುಡಿ, ಜೀರಿಗೆ ಪುಡಿ, ಗರಂ ಮಸಾಲ ಪುಡಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಉಪ್ಪು, ಅರಶಿನ , ಲಿಂಬೆರಸ, ಕಾಯಿಸಿದ ಎಣ್ಣೆ
ಮಾಡುವ ವಿಧಾನ :
ಬಾಳೆಕಾಯಿಯನ್ನು ತೆಳುವಾಗಿ ಹೆಚ್ಚಿಕೊಂಡು ನೀರಿನಲ್ಲಿ ಹಾಕಿ ಇಡಿ. ಒಂದು ಪ್ಲೇಟ್ ಗೆ ಅಚ್ಚ ಮೆಣಸಿನ ಪುಡಿ, ಧನಿಯ ಪುಡಿ, ಜೀರಿಗೆ ಪುಡಿ, ಗರಂ ಮಸಾಲ ( option ), ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಅರಶಿನ , ಲಿಂಬೆರಸ, ಕಾಯಿಸಿದ ಎಣ್ಣೆ, ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ಕೊಳ್ಳಿ.
ಈಗ ಈ ಮಿಶ್ರಣದಲ್ಲಿ ಬಾಳೆಕಾಯಿಸಿ ಪೀಸ್ ಗಳನ್ನು ಅದ್ದಿ 15 ನಿಮಿಷ ನೆನೆಯಲು ಇಡಿ. ಬಾಣಲಿಯಲ್ಲಿ ಎಣ್ಣೆ ಕಾಯಲು ಇಡಿ. ಈಗ ಇನ್ನೊಂದು ಪ್ಲೇಟ್ ನಲ್ಲಿ ರವೆ, ಉಪ್ಪು, ಅರಶಿನ, ಅಚ್ಚ ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನೆನೆಯಿಟ್ಟ ಬಾಳೆಕಾಯಿಯನ್ನು ರವಾ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ.
( ಬೇಕಾದಲ್ಲಿ ಪುದೀನಾ ಚಟ್ನಿಯೊಂದಿಗೆ ಸವಿಯಿರಿ.)
ಇದೆ ತರಹ ಸುವರ್ಣ ಗೆಡ್ಡೆ ಯಲ್ಲಿ ಕೂಡ ಮಾಡಿದ್ರೆ ಚೆನ್ನಾಗಿರುತ್ತದೆ. ಆದರೆ ಸುವರ್ಣ ಗೆಡ್ಡೆ ಒಂದು ಸಲ ಕುಕ್ಕರ್ ನಲ್ಲಿ ಒಂದು ವಿಷಲ್ ಬೇಯಿಸಿಕೊಳ್ಳಬೇಕು.
- ಶಕುಂತಲಾ ಸವಿ – ನಳಪಾಕ ಪ್ರವೀಣೆ, ಮೈಸೂರು
