ಇಂದು ಸುಮಂಗಲ ದೀಕ್ಷಿತ ಅವರ ಜನುಮದಿನ, ಅವರ ಸ್ವರಚಿತ ಕವನ ಆಕೃತಿಕನ್ನಡಯಲ್ಲಿ ಪ್ರಕಟಿಸುವ ಮೂಲಕ ಸುಮಂಗಲ ದೀಕ್ಷಿತ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರುತ್ತೇವೆ…
ಚೆಂಗುಲಾಬಿ ಹೂವೆ
ನೀನದೆಷ್ಟು ಚಲುವೆ
ಅರಳಿ ನಗುವ ಸುಮವೇ
ನಿನ್ನಲೆಷ್ಟು ಘಮವೇ
ಸೊಬಗಸಿರಿಯಲಿಲ್ಲ
ನಿನ್ನಷ್ಟು ಚಲುವೆ
ಪ್ರೀತಿ ಪ್ರೇಮಕೆ ನೀನೆ
ದ್ಯೋತಕ ಸುಮವೇ
ಪ್ರೀತಿ ಪರಿಭಾಷೆಗೆ
ನಿನ್ನದೇ ಕಾಣಿಕೆ
ವಧುವ ಹೆರಳಲೂ
ನಿನ್ನದೇ ಶ್ರoಗಾರ
ವರಮಾಲೆಯ ತುಂಬಾ
ನಿನ್ನದೇ ಅಂದ ಚಂದ
ಹೊಸಿಲ ತುಂಬೆಲ್ಲ
ನಿನ್ನದೇ ಚೆಲುವು
ತೋರಣದಲೂ ನಿನ್ನದೇ
ಚಲುವ ಬಲೆಯೂ
ದೇವನ ಪಾದವ ಸೇರಿ
ನೀನಾದೆ ಧನ್ಯಳು
- ಸುಮಂಗಲ ದೀಕ್ಷಿತ
