ನಗರದಲ್ಲಿನ ಶಾಲೆಗೆ ಹೋಗುವ ಮಕ್ಕಳ ಮತ್ತು ಅವರ ತಾಯಂದಿರ ಕಥೆ ಕುರಿತು ಲೇಖಕರಾದ ದೇವರಾಜ ಚಾರ್ ಅವರು ಓದುಗರೊಂದಿಗೆ ತಮ್ಮ ಚಿಂತನೆಯನ್ನು ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…
ಶಾಲೆಗೆ ಹೋಗುವ ಮಕ್ಕಳ ಸ್ಥಿತಿಯನ್ನು ನೋಡಿದರೆ ಅಯ್ಯೋ ಅನಿಸುತ್ತದೆ. ಹಾಗೆ ಮಕ್ಕಳ ತಾಯಂದಿರು ಪಡುವ ಕಷ್ಟವನ್ನು ನೋಡಿದರೂ ಸಹ ಅಯ್ಯೋ ಅನಿಸುತ್ತದೆ. ಒಂದಿಷ್ಟು ವರ್ಷಗಳ ಹಿಂದೆ ಸಿನಿಮಾ ನಟಿ ಐಶ್ವರ್ಯ ರೈ ತನ್ನ ಮಗಳನ್ನು ಚಿಕ್ಕ ಮಗುವಿನಿಂದ ಇಲ್ಲಿಯ ತನಕ ನೋಡಿಕೊಳ್ಳುವ ರೀತಿ ನೋಡಿ ಐಶ್ವರ್ಯ ರೈ ಎಷ್ಟು possessieve ಅನ್ನುತ್ತಿದ್ದರು. ಇತ್ತೀಚಿಗೆ ಸಾಮಾನ್ಯ ಸ್ಥಿತಿಯಲ್ಲಿರುವ ತಾಯಂದಿರು ಸಹ ತುಂಬಾ ಕಾಳಜಿ ವಹಿಸುತ್ತಾರೆ.
ಮಕ್ಕಳು ಒಂದಿರಲಿ ಅಥವಾ ಎರಡಿರಲಿ, ಹೆಣ್ಣಿರಲಿ/ ಗಂಡಿರಲಿ ತಾಯಿಯ ಸ್ವಭಾವದಲ್ಲಿ ಏರಿಳಿತವಿಲ್ಲ. ಮಕ್ಕಳ ಮೇಲೆ ಸದಾ ನಿಗಾ ವಹಿಸುತ್ತಾರೆ. ಮಕ್ಕಳು ಚೆನ್ನಾಗಿ ಓದಬೇಕು. ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಎಲ್ಲಾ ಕಿರು ಪರೀಕ್ಷೆಯಲ್ಲಿ, ವಾರ್ಷಿಕ ಪರೀಕ್ಷೆಯಲ್ಲಿ ಮತ್ತು ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಿ ತರಗತಿಗೆ ಮೊದಲನೆಯವನಾ/ಳಾ ಗಿರಬೇಕು ಎಂದು ಆಸೆ ಪಡುತ್ತಾರೆ.
ಉತ್ತಮ ಶಾಲೆಗೆ ಸೇರಿಸಬೇಕು. ನಗರ, ಪಟ್ಟಣಗಳಲ್ಲಿ ಸಾಮಾನ್ಯವಾಗಿ ಖಾಸಗಿ ಶಾಲೆಗೆ ಸೇರಿಸುತ್ತಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರು ಸರಿ. ಖರ್ಚು ಎಷ್ಟಾದರೇನಂತೆ ಪ್ರತಿಷ್ಠಿತ ಶಾಲೆಗೆ ಸೇರಿಸುತ್ತಾರೆ. ಮಗುವಿನ ಜೊತೆ ತಾವು ಸಹ ಮಗು ಆಗುತ್ತಾರೆ. ಮಗುವಿನ ತಂದೆಯು ಸಹ ಸಹಕರಿಸುತ್ತಾರೆ. ಮಗುವಿಗೆ ಎರಡು ವರ್ಷ ಆಗುವಷ್ಟರಲ್ಲಿ ಮಗುವನ್ನು ಪ್ರೀ ಕೆಜಿ ಎಂದರೆ ನರ್ಸರಿ. ಪ್ರಿ ಸ್ಕೂಲ್ ಅಂದರೆ ಎಲ್ಕೆಜಿ, ಯು ಕೆ ಜಿ ಹೀಗೆ ಮನೆಯಿಂದ ಹೊರಗಿರುತ್ತೆ.

ಫೋಟೋಕೃಪೆ : google
ಪ್ರಾರಂಭದಲ್ಲಿ ಬೆನ್ನಿಗೊಂದು ಸಣ್ಣ ಬ್ಯಾಗ್ ಬರುತ್ತೆ. ಕೈಯಲ್ಲಿ ಒಂದು snacks ಬ್ಯಾಗ್ ಇರುತ್ತೆ. ಮಕ್ಕಳು ಬೆಳೆಯುತ್ತಾ ಹೋದಂತೆ ಬ್ಯಾಗ ಸಹ ದೊಡ್ಡದಾಗುತ್ತೆ.ಸ್ನಾಕ್ಸ್ ಬ್ಯಾಗ್ ಹೋಗಿ ತಿಂಡಿ ಬಾಕ್ಸ್ ಬರುತ್ತೆ.ಮಗು ಮೊದಮೊದಲು ಇಷ್ಟಪಡದೆ ಹಠ ಮಾಡುತ್ತೆ. ತಿಂಡಿಯ ಆಸೆಗೂ ಮತ್ತೊಂದಕ್ಕೂ ಶಾಲೆಗೆ ಹೋಗುವುದನ್ನು ರೂಢಿಸಿಕೊಳ್ಳುತ್ತೆ.
ಬೆಳಗ್ಗೆ ಯಾವುದಾದರೂ ಶಾಲೆಯ ಹತ್ತಿರ ಹೋಗಿ ಗಮನಿಸಿದರೆ ಮಕ್ಕಳ, ಪೋಷಕರ ಮನಸ್ಥಿತಿ ಎದ್ದು ಕಾಣುತ್ತೆ. ತಾಯಿಯ ಮುಖದಲ್ಲಿ ಆತಂಕ ಇರುತ್ತೆ. ಲೇಟ್ ಆಯಿತೇನೋ ಎನ್ನುವ ಚಿಂತೆ.ಮಗುವಿಗೆ ಬೇರೆ ರೀತಿ ಚಿಂತೆ. ಇವತ್ತು ಶಾಲೆಗೆ ಹೋಗಲ್ಲ ಅನ್ನುತ್ತೆ. ಟೀಚರ್ ಬೈತಾರೋ ಅಂತಲೂ ಶಾಲೆಯಿಂದ ಬಂತ ನಂತರ ನಿನಗೆ ಮೊಬೈಲ್ ಕೊಡ್ತೀನಿ ಅಂತಲೂ ಮಕ್ಕಳನ್ನು ಸಮಾಧಾನ ಮಾಡುತ್ತಾರೆ
ಕೆಲವು ಮಕ್ಕಳು ನಿದ್ದೆಗಣ್ಣಿನಲ್ಲಿ ಇರುತ್ತಾರೆ. ಒಂದನೇ ತರಗತಿಗೆ ಬಂದ ಮೇಲಂತೂ ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಿಗೆ ಕಳುಹಿಸಲು ತಯಾರಿ. ಸ್ವಿಮ್ಮಿಂಗ್,ಯೋಗ,ಡ್ಯಾನ್ಸ್ ಇತ್ಯಾದಿ. ತಾಯಂದಿರು ಸಹಜವಾಗಿ ತಮ್ಮ ಮಕ್ಕಳು ಎಲ್ಲದರಲ್ಲೂ ಮುಂದೆ ಬರಬೇಕು ಅನ್ನುವ ಆಸೆ ಇಟ್ಟುಕೊಂಡಿರುತ್ತಾರೆ.
ಸ್ಕೂಲ್ ಬ್ಯಾಗ್, ಊಟದ ಬ್ಯಾಗ್ ಜೊತೆಗೆ ಯಾವುದಾದರೂ ಒಂದು ಇವುಗಳಲ್ಲಿ…ಯೋಗ ಮ್ಯಾಟ್, ಸ್ವಿಮ್ಮಿಂಗ್ ಡ್ರೆಸ್, ಮ್ಯೂಸಿಕಲ್ ಇನ್ಸ್ಟ್ರುಮೆಂಟ್ ಇತ್ಯಾದಿ ಇರುತ್ತದೆ. ತಾಯಂದಿರು ಬೆಳಗ್ಗೆ ಎದ್ದು ಅಡಿಗೆ ತಯಾರಿ.ನಂತರ ಮಗು ಸ್ನಾನ, ಯೂನಿಫಾರಂ ತೊಡಿಸಬೇಕು. ಮಕ್ಕಳಿಗೆ ತಿಂಡಿ ತಿನಿಸುವುದರಲ್ಲಿ ತಾಯಂದಿರು ಹೈರಾಣಾಗುತ್ತಾರೆ. ಬಾಕ್ಸ್ ರೆಡಿ ಮಾಡಬೇಕು,ಸ್ಕೂಲ್ ಬ್ಯಾಗ್ ನಲ್ಲಿ ಪುಸ್ತಕ ಪೆನ್ನು ಇತ್ಯಾದಿ ಇಡಬೇಕು. Shoe ರೆಡಿ ಮಾಡಿ ತೊಡಿಸಬೇಕು.ಕೆಲವು ತಾಯಿಂದರು ತಾವೇ ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಾರೆ. ಬಸ್ ಸ್ಟಾಪ್ ಹತ್ತಿರ ಬಿಡಬೇಕು ಅಥವಾ ಸ್ಕೂಲ್ಗೆ ಬಿಡಬೇಕು.
ಒಂದು ದಿನ ಶಾಲೆಯ ಹತ್ತಿರ ಗಮನಸಿದಾಗ ಒಂದು ಸಣ್ಣ ಮಗು ತಾಯಿ ಮಗುವನ್ನು ಬಿಟ್ಟು ಹೋಗ ಬೇಕಾದರೆ, ಮಗು ಕೆನ್ನೆ ತೋರಿಸಿ ನೀನು ಪಪ್ಪಿ ಕೊಡುವುದನ್ನು ಮರೆತಿದ್ದೀಯಾ ಅಂತ ಸೂಚನೆ ಕೊಡುತ್ತೆ. ನಗುವಿನ ಮುಗ್ಧತೆ, ತಾಯಿಯ ಕಣ್ಣಿನಲ್ಲಿ ನೀರು ತುಂಬಿಕೊಳ್ಳುವು ದನ್ನು ನೋಡಿ ಮನಸ್ಸಿಗೆ ಒಂಥರಾ ಆಯ್ತು.

ಫೋಟೋಕೃಪೆ : google
ಹೀಗೆ ಬೆಳಗಿನ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಸಾಯಂಕಾಲ ಶಾಲೆ ಬಿಡುಗಡೆಯ ವೇಳೆ ಶಾಲೆಯ ಮುಂದೆಯೋ ಅಥವಾ ಶಾಲೆಗೆ ಹತ್ತಿರದ ಬಸ್ಟಾಪ್ ಹತ್ತಿರವು ಕಾಯುತ್ತಿರುತ್ತಾರೆ. ಮಗು ಅಮ್ಮನ ನೋಡಿ ಸಂತೋಷಪಡುತ್ತದೆ. ಕೆಲವು ಮಕ್ಕಳು ಖುಷಿಯಿಂದ ಶಾಲೆಯಲ್ಲಿ ನಡೆದ ವರದಿ ಕೊಡುತ್ತವೆ. ಮಗು ಮನೆಗೆ ಬಂದ ನಂತರ ಅದರ ಮುಖ ಕೈ ಕಾಲು ಸ್ವಚ್ಛ ಮಾಡಿ ತಿಂಡಿ ಕೊಡುತ್ತಾರೆ.
ನಂತರದಲ್ಲಿ ಮಕ್ಕಳನ್ನು ಹೊರಗೆ ಕಳುಹಿಸುತ್ತಾರೆ. ಬೇರೆ ಮಕ್ಕಳ ಜೊತೆ ಆಟವಾಡು ಎಂದು.ತಾಯಿಗೆ ನೆಮ್ಮದಿ ಇರುವುದಿಲ್ಲ ಏನಾದರೂ ಪೆಟ್ಟು ಮಾಡಿಕೊಳ್ಳುತ್ತೋ, ವಾಹನಗಳು ಓಡಾಡುತ್ತವೆ ಬೇರೆ ಅಂತ ಯೋಚಿಸುತ್ತಾರೆ.ಆಟವಾಡಿ ಬಂದ ನಂತರ ಹೋಮ್ ವರ್ಕ್ ಮಾಡಿಸಬೇಕು.ಕೆಲವು ಶಾಲೆಯವರು ಹೋಂ ವರ್ಕ್ ಅನ್ನುವುದರ ಬದಲು ಫನ್ ವರ್ಕ ಎಂದು ಕರೆಯುತ್ತಾರೆ. ರಾತ್ರಿ ಊಟ ಮಾಡಿಸುವುದರಲ್ಲಿ ಹ ರಸಹಾಸ ಪಡಬೇಕು.ನಿದ್ರೆ ಬರಿಸಲು ಕಥೆ ಹೇಳಬೇಕು.
ಶಾಲಾ ದಿನಾಚರಣೆಗೆ ತಯಾರಿ :
ವರ್ಷಕ್ಕೊಂದು ಬಾರಿ ಶಾಲಾ ದಿನಾಚರಣೆ ನಡೆಸುತ್ತಾರೆ. ಸುಮಾರು ಒಂದು ತಿಂಗಳ ತಯಾರಿ ಇರುತ್ತೆ. ದಿನಾಚರಣೆಯನ್ನು ಶಾಲೆಯಲ್ಲಿ ಮಾಡುವುದಿಲ್ಲ, ಕಾರಣ ಜಾಗದ ಸಮಸ್ಯೆ. ಯಾವುದಾದರೂ ದೊಡ್ಡ ಸಭಾಂಗಣದಲ್ಲಿ ಮಾಡುತ್ತಾರೆ. ದಿನಾಚರಣೆಗಾಗಿ ಬೇರೆ ಹಣ ತೆಗೆದುಕೊಳ್ಳುತ್ತಾರೆ. programme ನಡೆಸಲು ಇವೆಂಟ್ ಮ್ಯಾನೇಜ್ಮೆಂಟ್ ಗೆ ವಹಿಸುತ್ತಾರೆ. ಹೆಚ್ಚಾಗಿ ಡಾನ್ಸ್ ಪ್ರೋಗ್ರಾಮ್ ಇರುತ್ತೆ. ಹೆಚ್ಚಾಗಿ ಸಿನಿಮಾ ಹಾಡುಗಳಿಗೆ ನೃತ್ಯ ಮಾಡಿಸುತ್ತಾರೆ.ಇವನ್ನೆಲ್ಲ ನೋಡಿಕೊಳ್ಳಲು ಕ್ರೋರಿಯೋಗ್ರಾಫರ್ ಇರುತ್ತಾರೆ. Costume ಬೇರೆ ಕೂಡಿಸಬೇಕು. ಕೆಲವು ಶಾಲೆಯವರು ಮಕ್ಕಳ ತಂದೆ ತಾಯಿ ಮತ್ತು ಅಜ್ಜಿ ತಾತ ಇವರನ್ನು ಸಹ ಪ್ರೋಗ್ರಾಂಗೆ ಸೇರಿಸಿಕೊಳ್ಳುತ್ತಾರೆ.
ಪರೀಕ್ಷೆ ತಯಾರಿ :
ಕಿರುಪರೀಕ್ಷೆಗೆ ಎಲ್ಲಾ ವಿಷಯಗಳನ್ನು ಹೇಳಿ ಕೊಡಬೇಕು. ಅದೇ ಸ್ವತಃ ಮಾಡುವಂತೆ ಪ್ರೇರೇಪಿಸಬೇಕು. ವಾರ್ಷಿಕ ಪರೀಕ್ಷೆಗಳಿಗೆ ಸಾಕಷ್ಟು ಪಾಠಗಳಿರುತ್ತವೆ.ಅವರಿಗೆ ಹೇಳಿ ತಯಾರು ಮಾಡಬೇಕು.
ಹೀಗೆ ಪ್ರಾಜೆಕ್ಟ್ ವರ್ಕ್, ಪ್ರತಿಭಾ ಅನ್ವೇಷಣೆಗೆ, ಜಯಂತಿಗಳಿಗೆ ಮಕ್ಕಳನ್ನು ತಯಾರು ಮಾಡಿ ಹುರಿದುಂಬಿಸಬೇಕಾಗುತ್ತದೆ.
ಹೀಗಿದೆ ಮಕ್ಕಳ ತಾಯಂದಿರ ದಿನಚರಿ.
- ದೇವರಾಜ ಚಾರ್- ಮೈಸೂರು
