ಸೀಬೆ (ಪೇರಲೆ) ಹಣ್ಣು ಪ್ರಯೋಜನ

ಸೀಬೆ ಹಣ್ಣು ಅಥವಾ ಪೇರಲೆ ಹಣ್ಣು ಎಲ್ಲರಿಗೂ ಗೊತ್ತು. ವರ್ಷವಿಡೀ ಸಿಗುವ ಕೆಂಪುಬಣ್ಣದ ಒಳ ತಿರುಳು ಇರುವ ಹಣ್ಣುಗಳು ಅತ್ಯಂತ ರುಚಿಕರ ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಈ ಪೇರಲೆ ಎಲೆಗಳ ಔಷಧೀಯ ಗುಣಗಳು ಮತ್ತು ಅದರ ಉಪಯೋಗಗಳ ಬಗ್ಗೆ ಈ ಲೇಖನ. – ಮಂಜುನಾಥ್ ಪ್ರಸಾದ್, ತಪ್ಪದೆ ಮುಂದೆ ಓದಿ… 

ಈ ಎಲೆಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಮ್ಮ ಆರೋಗ್ಯಕ್ಕೆ ಅವಶ್ಯವಾದ Polyphenols, Carotenoids, Flavonoids ಹಾಗೂ Tannins ಎಂಬ ಅಂಶಗಳಿದ್ದು ಇವು ನಮ್ಮ ದೇಹದ ಸಮಸ್ತ ಆರೋಗ್ಯವನ್ನು ಕಾಪಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಇದರ ಎಲೆಗಳಿಂದ ತೆಗೆದ ಸಾರವನ್ನು ಬಹುತೇಕ ಆಯುರ್ವೇದ ಔಷದಗಳಲ್ಲಿ ಸೇರಿಸಿರುತ್ತಾರೆ. ಪೇರಲೆ ಎಲೆಗಳ ಟೀ ಪುಡಿ ಸಹ ಮಾರುಕಟ್ಟೆಯಲ್ಲಿ ಸಿಗುತ್ತದೆ.

ಫೋಟೋ ಕೃಪೆ :google

ಪೇರಲೆ / ಸೀಬೆಹಣ್ಣಿನ ಎಲೆಗಳ ಪ್ರಯೋಜನಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ : 

  • ಎಲೆಗಳ ಕಷಾಯ / ಟೀ ಸೇವನೆ ನಾವು ಸೇವಿಸುವ ಎಲ್ಲಾ ಕಾರ್ಬೋಹೈಡ್ರೇಟ್ ಮತ್ತು ಸ್ಟಾರ್ಚ್ ದೇಹದಲ್ಲಿ ಗ್ಲುಕೋಸ್ ಆಗಿ ಪರಿವರ್ತನೆ ಆಗದಂತೆ ತಡೆದು ಬೊಜ್ಜು ಆಗದಂತೆ ತಡೆಯುತ್ತದೆ.
  • ಇದರ ಟೀ ಸೇವನೆ ನಮ್ಮ ದೇಹದಲ್ಲಿ Alpha – Glucosidase ನ ಪರಿಣಾಮ ತಡೆದು ರಕ್ತಕ್ಕೆ ಅವಶ್ಯಕತೆಗಿಂತ ಹೆಚ್ಚಿನ ಸಕ್ಕರೆಯ ಅಂಶ ಸೇರದಂತೆ ತಡೆದು, ಡಯಾಬಿಟಿಸ್ ನಿಯಂತ್ರಣದಲ್ಲಿ ಇರಿಸುತ್ತದೆ. 12 ವಾರಗಳ ಕಾಲ ನಿತ್ಯ ಒಂದು ಲೋಟ ಇದರ ಟೀ ಸೇವನೆ ಸಕ್ಕರೆಕಾಯಿಲೆಯನ್ನು ಸಹಜಸ್ತಿತಿಗೆ ತರುತ್ತದೆ. ಈ ಅಂಶ ವಿಶ್ವದ ಎಲ್ಲಾ ಪ್ರಾಯೋಗಾಲಯಗಳಲ್ಲಿ ಸಾಬೀತಾಗಿದೆ.
  • ಇದರ ಟೀ ಯನ್ನು ಸತತ 3 ತಿಂಗಳು ಸೇವಿಸಿದಲ್ಲಿ Cholesterol ಅಂದರೆ ಕೆಟ್ಟ ಕೊಬ್ಬು ಕರಗುವುದು. ಮದ್ಯಪಾನ ಅಬ್ಯಾಸ ಇರುವವರು ಅವಶ್ಯ ಸೇವಿಸಬೇಕು. ಅದರಿಂದ ಲಿವರ್ ಹಾಳಾಗುವುದನ್ನು ಸಾಧ್ಯವಾದಷ್ಟು ತಡೆಯಬಹುದು.
  • 2 ಹಿಡಿ ಚೆನ್ನಾಗಿರುವ ಎಲೆಗಳನ್ನು 2 ಟೀ ಚಮಚ ಅಕ್ಕಿಹಿಟ್ಟಿನ ಜೊತೆ 2 ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ, ಶೋಧಿಸಿ ದಿನಕ್ಕೆರಡು ಸಲ ಕುಡಿದರೆ ಎಂತಹ ಆಮಶಂಕೆ ಭೇದಿಯಾದರೂ ನಿಲ್ಲುತ್ತದೆ.
  • ಅಜೀರ್ಣ, ಗ್ಯಾಸ್ಟ್ರಿಕ್ ತೊಂದರೆ, ಹೊಟ್ಟೆನೋವು,ಜೀರ್ಣಾಂಗದ ತೊಂದರೆ, ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾ ಸಮಸ್ಯೆ ನಿವಾರಣೆಗೆ : 8 ಚೆನ್ನಾಗಿರುವ ಎಲೆಗಳನ್ನು 1 ಲೀಟರ್ ನೀರಿನಲ್ಲಿ ಚೆನ್ನಾಗಿ ಕುದಿಸಿ ದಿನಕ್ಕೆ 3 ಸಲ ಕುಡಿಯಬೇಕು.
  • ಸ್ವಾಶಕೋಶದ ಅಡೆತಡೆ ನಿವಾರಿಸಿ, ಕಫ ಕರಗಿಸಿ ಉಸಿರಾಟ ಸರಾಗವಾಗಿ ಆಗುವಂತೆ ಮಾಡುತ್ತದೆ. ಕೆಮ್ಮು ನಿವಾರಣೆಯಾಗುತ್ತೆ.
  • ಎಲೆಗಳನ್ನು ಸ್ವಲ್ಪ ಕಲ್ಲುಪ್ಪು ಸಹಿತ ನೀರಿನಲ್ಲಿ ಚೆನ್ನಾಗಿ ಕುದಿಸಿ ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವು, ವಸಡಿನ ಊತ ಕಡಿಮೆಯಾಗಿ ನೋವು ನಿವಾರಣೆಯಾಗುತ್ತೆ. ಗಂಟಲು ನೋವು ಮತ್ತು ಕಟ್ಟಿದ್ದರೆ ಸರಿಹೋಗುತ್ತೆ. ಇತ್ತಿಚಿನ ಎಲ್ಲಾ ಆಯುರ್ವೇದ toothpaste ಗಳಲ್ಲಿ ಸೀಬೆ ಎಲೆಗಳ ಸಾರವನ್ನು ಸೇರಿಸಿರುತ್ತಾರೆ.
  • ಡೆಂಗೆ ಜ್ವರಕ್ಕೆ ಉತ್ತಮ ಮನೆಮದ್ದು. Platelets ಗಳನ್ನು ಹೆಚ್ಚಿಸುತ್ತದೆ. ಇದಕ್ಕೆ 9 ಚೆನ್ನಾಗಿರುವ ಎಲೆಗಳನ್ನು ಆರಿಸಿಕೊಂಡು 5 ಲೋಟ ನೀರಿನಲ್ಲಿ 3 ಲೋಟಕ್ಕೆ ಇಂಗುವವರೆಗೂ ಕುದಿಸಿ, ಶೋಧಿಸಿ ತಣ್ಣಗಾದನಂತರ ದಿನಕ್ಕೆ 3 ಸಲ ಕುಡಿಯಲು ಕೊಡಬೇಕು.
  • Prostrate ಗ್ರಂಥಿ ಊತ ಮತ್ತು Prostate ಕ್ಯಾನ್ಸರ್ ಗೆ ಉತ್ತಮ ಮನೆಮದ್ದು.
  • ಅಲರ್ಜಿಗಳಿಗೆ ಕಾರಣವಾಗುವ Histamine ಅಂಶದ ಉತ್ಪಾದನೆ ಕಡಿಮೆಗೊಳಿಸುತ್ತದೆ. ಇದರಿಂದ ದೇಹದ ಅಲರ್ಜಿ ನಿವಾರಣೆಗೆ ಉಪಯುಕ್ತ.
  • ಟೀ ಸೇವನೆ ಗಂಡಸರಲ್ಲಿ ವೀರ್ಯೋತ್ಪಾದಕ ಎಂದು ವ್ಯಜ್ಞಾನಿಕವಾಗಿ ಸಾಬೀತಾಗಿದೆ.

ಫೋಟೋ ಕೃಪೆ :google

ಸೀಬೆಹಣ್ಣಿನ ಕಷಾಯದಿಂದ ಚರ್ಮವನ್ನು ತೊಳೆದುಕೊಳ್ಳುವುದರಿಂದ ಯಾವುದೇ ಹಳೆಯ ಗಾಯ, ಕಲೆ, ಮೊಡವೆ, ಗುಳ್ಳೆಗಳು, ಕಪ್ಪು ಕಲೆಗಳು ಹಾಗೂ ಇತರ ಚರ್ಮ ರೋಗಗಳು ವಾಸಿಯಾಗುತ್ತದೆ. ಚರ್ಮ ಸುಕ್ಕುಗಳು ನಿವಾರಣೆಯಾಗುತ್ತೆ.

ಎಳೆಯ ಎಲೆಗಳನ್ನು ಚೆನ್ನಾಗಿ ತೊಳೆದು ರುಬ್ಬಿಕೊಂಡು ತಲೆಗೆ ಹಚ್ಚಿದರೆ ಕೂದಲು ಸೊಂಪಾಗಿ ಬೆಳೆಯುತ್ತೆ. ತಲೆಹೊಟ್ಟು ಹೋಗುತ್ತೆ. ಅಥವ ಎಲೆಗಳ ಕಷಾಯವನ್ನು ಅದು ತಣ್ಣಗಾದ ನಂತರ ಕೂದಲುಗಳ ಬುಡಕ್ಕೆ, ಅವಶ್ಯಕತೆಗೆ ತಕ್ಕಂತೆ ವಾರದಲ್ಲಿ 1 – 3 ಸಲ ಮಸಾಜ್ ಮಾಡಿಕೊಳ್ಳುತ್ತಿರಬೇಕು. ಒಮ್ಮೆ ಮಾಡಿಟ್ಟುಕೊಂಡು spray ಬಾಟಲ್ನಲ್ಲಿ ಹಾಕಿಟ್ಟುಕೊಂಡು ಸಹ ಉಪಯೋಗಿಸಿ.

ಒಂದು 10 ಚೆನ್ನಾಗಿರುವ ಎಲೆಗಳನ್ನು ಫ್ರೆಶ್ ಆಗಿ ಕಿತ್ತು ತೊಳೆದುಕೊಂಡು ಇಟ್ಟುಕೊಳ್ಳಿ. ಒಂದೂವರೆ ಲೋಟ ನೀರನ್ನು ಒಂದು ದಪ್ಪ ತಳದ ಪಾತ್ರೆಗೆ ಹಾಕಿ ಕುದಿಸಿ. ನಂತರ ಉರಿ ಕಮ್ಮಿಮಾಡಿ ತೊಳೆದುಕೊಂಡ ಎಲೆಗಳನ್ನು ಹಾಕಿ ಪುನಃ 5 ನಿಮಿಷ ಸಣ್ಣ ಉರಿಯಲ್ಲಿಯೇ ಕುದಿಸಿ. ಈಗ ಅರ್ಧ ಚಮಚ ನೀವು ನಿತ್ಯ ಉಪಯೋಗಿಸುವ ಟೀ ಪುಡಿಯನ್ನು ಹಾಕಿ ಮತ್ತೊಂದು ನಿಮಿಷ ಕುದಿಸಿ, ಶೋಧಿಸಿ ಕುಡಿಯಿರಿ. ಸಕ್ಕರೆ / ಬೆಲ್ಲ / ಜೇನುತುಪ್ಪ ನಿಮ್ಮಿಷ್ಟ. BP ಇರುವವರು ಚೂರು ಚೆಕ್ಕೆ / ಚಿಟಿಕೆ ಚೆಕ್ಕೆ ಪುಡಿ – Cinnamon ಸೇರಿಸಿಕೊಳ್ಳಿ ( ವಿಡಿಯೋ ನೋಡಿ )

ಸೂಚನೆ : ಪ್ರತೀ ಸಾರಿಯೂ ಟೀ / ಕಷಾಯ ಮಾಡುವಾಗ ಆಗತಾನೆ ಕಿತ್ತ ಎಲೆಗಳನ್ನು ಕಿತ್ತು ಚೆನ್ನಾಗಿ ಪರೀಕ್ಷಿಸಿ, ತೊಳೆದುಕೊಂಡು ಉಪಯೋಗಿಸಿ. ತೀರ ಎಳೆಯ ಎಲೆ ಮತ್ತು ತುಂಬಾ ಬಲಿತ ಎಲೆಗಳು ಬೇಡ.

ಪ್ರತೀನಿತ್ಯ ನಿಮಗೆ ಎಲೆಗಳು ಸಿಗದೆ ಇದ್ದಲ್ಲಿ ಸಿಕ್ಕಾಗ ಆರಿಸಿಕೊಂಡು ತಂದು, ತೊಳೆದು, ಒರೆಸಿಕೊಂಡು ಬಿಡಿ ಬಿಡಿಯಾಗಿ ಆರಲು ಹಾಕಿ. ಎರಡೂ ಕಡೆ ಚೆನ್ನಾಗಿ ಒಣಗುವಂತೆ ಆಗಾಗ್ಗೆ ತಿರುಗಿಸುತ್ತಾ ಇರಿ. ಚೆನ್ನಾಗಿ ಒಣಗಿದ ನಂತರ ಪುಡಿಮಾಡಿಕೊಂಡು ಗಾಳಿಯಾಡದಂತಹ ಡಬ್ಬಿಯಲ್ಲಿ ಹಾಕಿಟ್ಟು ಉಪಯೋಗಿಸಿ. ಈ ಮಳೆಗಾಲದಲ್ಲಿ ಥಂಡಿಗೆ ಬೇಗ ಭೂಸ್ಟು ( fungus ) ಬರುತ್ತೆ ಜೋಪಾನವಾಗಿ ನೋಡಿಕೊಳ್ಳಿ.

ವಿವರಗಳು ಗ್ರೂಪ್ ಸದಸ್ಯರ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಅಲೋಪತಿ, ಆಯುರ್ವೇದ ಅಥವ ಹೋಮಿಯೋಪತಿ ಔಷಧೀಯ ಸೇವನೆ ಈಗಾಗಲೇ ಮಾಡುತ್ತಿದ್ದರೆ ಅದನ್ನು ಮುಂದುವರೆಸಿ. ವೈದ್ಯರ ಸಲಹೆ ಇಲ್ಲದೆ ನಿಲ್ಲಿಸಬೇಡಿ.


  • ಮಂಜುನಾಥ್ ಪ್ರಸಾದ್

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading