ಕವಿಯತ್ರಿ ಅಂಜನಾ ಗಾಂವ್ಕರ್ ಅವರು ಬರೆದ ‘ಹಿತವಾದ ಕನಸುಗಳು’ ಸುಂದರ ಕವನ ಓದುಗರ ಮುಂದೆ, ತಪ್ಪದೆ ಓದಿ…
ಸುರಿವ ಮಳೆಯ ಆರ್ಭಟ,
ಕವಿತೆಗೂ ಪ್ರೀತಿಯಂತೆ,
ನಿದ್ದೆ ಬಿಡುವ ಮನಸಿಲ್ಲ.
ಹಿತವಾದ ಕನಸುಗಳ
ಬೆಚ್ಚಗಿನ ಭಾವಗಳಂತೆ.
ಕಥೆಗೆ ಅಂತ್ಯವೇ ಆರಂಭ,
ಪದಗಳ ಅಳಲು,
ಬರೀ ಬಿಕ್ಕುಗಳ ಸದ್ದಡಿ
ಯಾರೂ ಓದಿಯಾರು ಎಂದು.
ಕಂಡರೆ ಸಾಕು ಈ ಅಕ್ಷರಗಳೆಲ್ಲ
ಮುಖ ತಿರುಗಿಸುವರೇ,
ಹುಡುಕಿ ಕರೆದು ಸಾಕಾಗಿದೆ
ಜೋಡಿಸಲು ಸಾಧ್ಯವೇ ?
ಒಂಟಿ ಬಾನು, ಜೊತೆ ನಾನು,
ತಾರೆಗಳೂ ರಜೆಯಂತೆ,
ಮಳೆಯು ಕಾರಣ ಎಂದು
ಒಕ್ಕರಣೆ ಬೇರೆ ಅರ್ಜಿಯಲಿ.
ಕಲಿತಿದ್ದೇನೆ, ಬಿಂದುವಿನಲಿ
ನೆನೆಯಲು, ನೆನೆದು ನೆನೆದು
ಮರೆತಂತೆ ನಟಿಸಲು, ಮತ್ತೆ…
ಮಳೆಯ ಜತೆ ಜಗಳವಾಡಲು,
ಇಲ್ಲದ ಚಂದ್ರನ ಹುಡುಕಲು…
- ಅಂಜನಾ ಗಾಂವ್ಕರ್ (ಕವಿಯತ್ರಿ)
