ಹೂಲಿಶೇಖರ್ ಅವರು ಉತ್ತರ ಕರ್ನಾಟಕ ಭಾಷೆಯಲ್ಲಿ ಸಾಕಷ್ಟು ಹಿಡಿತವನ್ನು ಸಾಧಿಸಿದವರು, ಅದಕ್ಕೆ ಉತ್ತಮ ಉದಾಹರಣೆ ಎಂಬಂತೆ ‘ಮೂಡಲ ಮನೆ’ ಧಾರವಾಹಿಯ ಚಿತ್ರ ಸಂಭಾಷಣೆಗಾಗಿ ಈಟಿವಿ ಪ್ರಶಸ್ತಿ ಸಂದಿತು. ಬರವಣಿಗೆಯನ್ನೇ ಉಸಿರಾಗಿಸಿಕೊಂಡಿರುವ ಅವರು, ತಮ್ಮ ೭೦ ನೇಯ ವಯಸ್ಸಿನಲ್ಲೂ ಅದೇ ಉತ್ಸಾಹ, ಅದೇ ಹುರುಪಿನೊಂದಿಗೆ ಒಟ್ಟು ಐದು ಪುಸ್ತಕಗಳು ತರಲಿದ್ದಾರೆ. ಸಾಧನ ಪ್ರಕಾಶನದಲ್ಲಿ ಮೂರು ಪುಸ್ತಕಗಳು, ಬೆರಗು ಪ್ರಕಾಶನದಲ್ಲಿ ಒಂದು ಪುಸ್ತಕ, ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ ಕಲಬುರಗಿ ಪ್ರಕಾಶನದಲ್ಲಿ ಒಂದು ಪುಸ್ತಕ ಮುದ್ರಣಗೊಳ್ಳಲಿದೆ. ಎಲ್ಲಾ ಪುಸ್ತಕಗಳನ್ನು ಓದಿ…

‘ಕರಿಯು ಕನ್ನಡಿಯೊಳಗೆ’ ನಾಟಕಕ್ಕೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರೆತಿದೆ. ಡಾ. ಎಂ.ಎಂ.ಕಲಬುರ್ಗಿಯವರನ್ನು ಒಂದು ರಂಗ ಪಾತ್ರವಾಗಿ ನಿರ್ಮಿಸಿದ ಈ ನಾಟಕ ಸರಳ ಸಜ್ಜನಿಕೆಯಲ್ಲೂ ಅನುಭವಗೊಳ್ಳಿಸುತ್ತದೆ.ರಂಗದಲ್ಲಿ ಯಶಸ್ವಿ ಪ್ರಯೋಗ ಕಂಡ ನಾಟಕವಿದು.

- ಬೆರಗು ಪ್ರಕಾಶನ
ಇದು ಹೂಲಿಶೇಖರ್ ರು ಬರೆದ ಮೊದಲ ಕಾದಂಬರಿ. ಮಲ್ಲಿಗೆ ಮಾಸ ಪತ್ರಿಕೆ ಏರ್ಪಡಿಸಿದ್ದ ಕಾದಂಬರಿ ಸ್ಪರ್ಧೆಯಲ್ಲಿ ವಿಶೇಷ ಬಹುಮಾನ ಪಡೆದ ಕದಡಿದ ಕೆರೆ ಇದು. ಇದೇ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಕಂತುಗಳಾಗಿ ಪ್ರಕಟಗೊಂಡು ಜನಮನ್ನಣೆ ಗಳಿಸಿದೆ.

ಶಾಲಾ ಮಾಸ್ತರರಾಗಿ ಆದರ್ಶ ಬದುಕಿನಲ್ಲಿ ಗುರಿಯತ್ತ ಸಾಗುತ್ತಿದ್ದ ಶಂಕರನಿಗೆ ಆಘಾತ ತಂದ ಬದುಕಿನ ಕ್ಷಣಗಳೇನು? ಅವನ ಸಾತ್ವಿಕ ಬದುಕನ್ನು ಹೊಸಕಿ ಹಾಕಿದ ಘಟನೆಗಳೇನು? ಸುಲಲಿತ ಸರಳ ಭಾಷೆ ನವಿರಾದ ಕತೆಗಾರಿಕೆಯಿದು. ಡಾ.ಬೆಟ್ಟಗೆರೆ ಕೃಷ್ಣಶರ್ಮ ಅವರು ಮೆಚ್ಚಿಗೆ ಗಳಿಸಿದ ಕತೆಯಿದು. ಈಗಾಗಲೇ ಸಣ್ಣಕತೆ ಕಾದಂಬರಿ ಲೋಕದಲ್ಲಿ ವಿಶಿಷ್ಟ ಸ್ಥಾನ ಗಳಿಸಿರುವ ಲೇಖಕರಿವರು.
‘ಒಂದು ಬಾಟಲಿ ರಕ್ತ’ ಕಥಾ ಸಂಗ್ರಹ. ಜೀವನಕ್ಕೆ ಹತ್ತಿರವಾದ ಇವು ಕುತೂಹಲಕರವಾಗಿದೆ. ಹೂಲಿಶೇಖರ್ ದಟ್ಟ ಅನುಭವಗಳೇ ಇಲ್ಲಿ ಕತೆಯಾಗಿವೆ. ವಸ್ತು ನಿರೂಪಣೆ ಭಾಷೆ ಸಹಜವಾಗಿದ್ದು ಓದುವ ಕುತೂಹಲ ಇಮ್ಮಡಿಸುತ್ತದೆ. ಮತ್ತೆ ಮತ್ತೆ ಓಡಿಸಿಕೊಳ್ಳುತ್ತವೆ. ಇಲ್ಲಿಯ ಹಲವು ಕತೆಗಳು ತೆಲಗು, ತಮಿಳು ಮಾಳಿಯಾಳಂ ಮರಾಠಿ ಭಾಷೆ ಗಳಿಗೂ ಅನುವಾದಗೊಂಡು ಪ್ರಕಟವಾಗಿದೆ.ಇವರ ಕತೆಗಾರಿಕೆಯನ್ನು ಓದುಗರು ಮೆಚ್ಚಿದ್ದಾರೆ. ಓದುತ್ತಿದ್ದಾರೆ.

‘ಕಡಲ ಬೆಕ್ಕು’ ಹೂಲಿಶೇಖರ್ ಅವರ ರೋಚಕ ಪತ್ತೇದಾರಿ ಕಾದಂಬರಿ. ಎಂಬತ್ತರ ದಶಕದಲ್ಲಿ ಭಾರತವು ಕಾರವಾರದಲ್ಲಿ ಸೀ ಬರ್ಡ್ ನೌಕಾ ನೆಲೆಯನ್ನು ನಿರ್ಮಾಣಿಸಲು ಆರಂಭವಾದಾಗ ವೈರಿ ದೇಶಗಳು ಗಾಬರಿಯಾದವು.

ಭಾರತದ ನೌಕಾ ಬಲ ಹೆಚ್ಚಿಸಿದ ಆತಂಕದಿಂದ ಗಂಬರಿಗೊಂಡವು. ದೇಶದ ಬಲ ಛಿದ್ರಗೊಳಿಯಲು ವೈರಿ ದೇಶಗಳು ಒಳ ತಂತ್ರ ನಡೆಸಲು ಭಾರತದತ್ತ ಬ್ಲಾಕ್ ಕ್ಯಾಟ್ ಅಥವಾ ಕಡಲ ಬೆಕ್ಕು ) ಎಂಬ ಯುದ್ಧ ಹಡಗನ್ನು ಕಾರವಾರಕ್ಕೆ ರಹಸ್ಯವಾಗಿ ಕಲಿಸುತ್ತವೆ. ಮತ್ತು ಭಾರತದ ನೌಕೆ ಸೇನೆ ವೈರಿಗಳನ್ನು ಸದೆಬಡಿದು ನೌಕಾ ನೆಲೆಯನ್ನು ಯಶಸ್ವಿಗೊಳಿಸುವ ಈ ಕಥೆಯಿದು. ಸಿನಿಮಾ ರೀತಿಯಲ್ಲಿ ನಡೆಯುವ ಕಥೆ ಓದುಗರನ್ನು ರೋಮಾಚನಗೊಳಿಸುತ್ತದೆ.ಪತ್ತೇದಾರಿ ಕಾದಂಬರಿಯಲ್ಲೂ ಹೂಲಿಶೇಖರ್ ಅವರು ಗಟ್ಟಿಗರು ಎನ್ನಬಹುದು. ಇದು ಲೇಖಕರ ಕಾಲ್ಪನಿಕ ಕತೆಯನ್ನು ರೋಚಕವಾಗಿ ಬರೆದಿದ್ದಾರೆ.
- ಸಾಧನ ಪ್ರಕಾಶನ
ಕತೆ, ನಾಟಕ, ಕಾದಂಬರಿ ಎಲ್ಲದರಲ್ಲೂ ಹೂಲಿಶೇಖರ್ ತಮ್ಮದೇಯಾದ ಛಾಪನ್ನು ಮೂಡಿಸಿದ್ದಾರೆ. ಪ್ರತಿ ಕೃತಿಗಳು ವಿಭನ್ನ ಕಥಾ ಹಂದರವನ್ನು ಒಳಗೊಂಡಿದೆ. ಓದಿ ನೋಡಿ.
(ಐದನೇಯ ಪುಸ್ತಕ ರಂಗ ಪುರಂದರ ನಾಟಕ ಸದ್ಯದಲ್ಲೇ ಸಿದ್ಧವಾಗಲಿದೆ)