ಕೋವಿಶೀಲ್ಡ್ ಅಥವಾ ಕೋವ್ಯಾಕ್ಸೀನ್ ಎರಡು ಡೋಸ್ ನಡುವೆ ಎಷ್ಟು ಅಂತರವಿದ್ದರೆ ಉತ್ತಮ ಎನ್ನುವ ಪ್ರಶ್ನೆಗೆ ಉತ್ತರವನ್ನು ವಿಜ್ಞಾನಿ ಹಾಗೂ ಬರಹಗಾರರು ಸುಧೀಂದ್ರ ಹಾಲ್ದೊಡ್ಡೇರಿ ಅವರು ನೀಡಿದ್ದಾರೆ.
ಬ್ರೆಝಿಲ್ ಹಾಗೂ ಸೌತ್ ಆಫ್ರಿಕಾ ದೇಶದಲ್ಲಿ ಕಳೆದ ವರ್ಷ ಏಪ್ರಿಲ್-ಡಿಸೆಂಬರ್ ನಡುವಿನ ಅವಧಿಯಲ್ಲಿ ೨೪,೪೨೨ ಮಂದಿಯ ಮೇಲೆ ನಡೆಸಿರುವ ವಿಸ್ತೃತ ಪ್ರಯೋಗಗಳ ಆಧಾರದ ಮೇಲೆ ಈ ನಿರ್ಣಯಕ್ಕೆ ಬರಲಾಗಿದೆ.
- ಕೋವಿಶೀಲ್ಡ್ ಡೋಸ್ ನಡುವಿನ ಅಂತರ ೧೨ – ೧೬ ವಾರಗಳು
- ಕೋವ್ಯಾಕ್ಸೀನ್ ಡೋಸ್ ನಡುವಿನ ಅಂತರ ೪- ೬ವಾರಗಳುಸಾಪ್ತಾಹಿಕ ವೈದ್ಯಕೀಯ ಜರ್ನಲ್ ‘ಲ್ಯಾನ್ಸೆಟ್’ನಲ್ಲಿ ಅಧ್ಯಯನ ವರದಿ

ಫೋಟೋ ಕೃಪೆ: The indian Express
ಮೊದಲು ೬೦ ವರ್ಷದ ಮೇಲಿನವರು, ನಂತರ ೪೫ ವರ್ಷದ ಮೇಲಿನವರಿಗೆ ವ್ಯಾಕ್ಸೀನ್ ನೀಡಿದ ನಂತರ ೧೮ ವರ್ಷ ಮೇಲ್ಪಟ್ಟವರಿಗೆ ಕೊಡಲು ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ದೇಶಾದ್ಯಂತ ವ್ಯಾಕ್ಸೀನ್ ಕೊರತೆ ಕಂಡುಬಂದಿದೆ. ಅಗತ್ಯ ಪ್ರಮಾಣದಲ್ಲಿ ವ್ಯಾಕ್ಸೀನ್ ದಾಸ್ತಾನು ಇಲ್ಲದಿರುವ ಕಾರಣ, ಎರಡು ಡೋಸ್‍ಗಳ ನಡುವಿನ ಅವಧಿಯನ್ನು ವಿಸ್ತರಿಸಲು ಸರ್ಕಾರ ಯೋಚಿಸುತ್ತಿದೆ.
ಎರಡು ಕೋವಿಶೀಲ್ಡ್ ಡೋಸ್‍ಗಳ ಸ್ವೀಕೃತಿಯ ನಡುವಿನ ಅಂತರವನ್ನು ೧೨ ರಿಂದ ೧೬ ವಾರಗಳ ತನಕ ವಿಸ್ತರಿಸಿದೆ. ಕೋವ್ಯಾಕ್ಸೀನ್ ಡೋಸ್‍ಗಳ ಸ್ವೀಕೃತಿಯ ನಡುವಿನ ಅಂತರದಲ್ಲಿ ಯಾವುದೇ ಬದಲಾವಣೆಯಿಲ್ಲ, ಮೊದಲಿನಂತೆ ೪ರಿಂದ ೬ ವಾರಗಳ ಅಂತರದಲ್ಲಿ ಪಡೆಯಬೇಕು.
ಕೋವಿಶೀಲ್ಡ್‌ನಂಥ ಸ್ಪೈಕ್ ಪ್ರೊಟೀನ್ ಆಧರಿತ ವ್ಯಾಕ್ಸೀನ್‍ಗಳ ಎರಡು ಡೋಸ್‍ಗಳ ನಡುವಿನ ಅಂತರ ೬ ವಾರಗಳಿದ್ದಲ್ಲಿ ಅದರ ಸರಾಸರಿ ಕಾರ್ಯದಕ್ಷತೆ ೫೫ .೧ % ರಷ್ಟು ಇರುತ್ತದೆ ಹಾಗೂ ಅಂತರವು ೧೨ ವಾರಗಳಿದ್ದಲ್ಲಿ ವ್ಯಾಕ್ಸೀನ್‍ನ ಸರಾಸರಿ ಕಾರ್ಯದಕ್ಷತೆ ೮೧.೩ % ಕ್ಕೆ ಏರುತ್ತದೆ.
ಇದು ಪರಿಣತರಿಂದ ಪರಿಶೀಲಿಸಲ್ಪಡುವ ಸಾಪ್ತಾಹಿಕ ವೈದ್ಯಕೀಯ ಜರ್ನಲ್ ‘ಲ್ಯಾನ್ಸೆಟ್’ನ ಫೆಬ್ರವರಿ೧೯, ೨೦೨೧ರ ಸಂಚಿಕೆಯಲ್ಲಿ ಪ್ರಕಟವಾದ ಅಧ್ಯಯನದ ಸಾರಾಂಶ. ಯು.ಕೆ., ಬ್ರೆಝಿಲ್ ಹಾಗೂ ಸೌತ್ ಆಫ್ರಿಕಾ ದೇಶದಲ್ಲಿ ಕಳೆದ ವರ್ಷ ಏಪ್ರಿಲ್-ಡಿಸೆಂಬರ್ ನಡುವಿನ ಅವಧಿಯಲ್ಲಿ ೨೪,೪೨೨ ಮಂದಿಯ ಮೇಲೆ ನಡೆಸಿರುವ ವಿಸ್ತೃತ ಪ್ರಯೋಗಗಳ ಆಧಾರದ ಮೇಲೆ ಈ ನಿರ್ಣಯಕ್ಕೆ ಬರಲಾಗಿದೆ.

ಫೋಟೋ ಕೃಪೆ: The indian Express
ಆಗಸ್ಟ್ ಹೊತ್ತಿಗೆ ಸೆರಮ್ ಇನ್‍ಸ್ಟಿಟ್ಯೂಟ್ (ಕೋವಿಶೀಲ್ಡ್) ಹಾಗೂ ಭಾರತ್ ಬಯೋಟೆಕ್ (ಕೋವ್ಯಾಕ್ಸೀನ್) ಕಂಪನಿಗಳ ಒಟ್ಟಾರೆ ಉತ್ಪಾದನೆ ತಿಂಗಳಿಗೆ ೧೭ ಕೋಟಿ ಡೋಸ್‍ಗಳಷ್ಟಾಗಲಿದೆ. ಪರಿಸ್ಥಿತಿ ಸುಧಾರಿಸುವವರೆಗೂ ೧೮ ರಿಂದ ೪೪ವರ್ಷ ವಯಸ್ಸಿನವರಿಗೆ ಅಲ್ಪ ಪ್ರಮಾಣದಲ್ಲಿ ವ್ಯಾಕ್ಸೀನ್ ನೀಡುವ ಹಾಗೂ ಈಗಾಗಲೇ ಮೊದಲ ಡೋಸ್ ವ್ಯಾಕ್ಸೀನ್ ಪಡೆದಿರುವ ೪೫ ವರ್ಷ ಮೇಲ್ಪಟ್ಟವರಿಗೆ ಎರಡನೆಯ ಡೋಸ್ ಕೊಡುವ ದಿನಾಂಕವನ್ನು ಮುಂದೂಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.
- ಸುಧೀಂದ್ರ ಹಾಲ್ದೊಡ್ಡೇರಿ (ಖ್ಯಾತ ವಿಜ್ಞಾನಿ, ವಿಜ್ಞಾನ ಬರಹಗಾರರು)
