ಉದ್ದಿನ ಕಾಳಿನ ವಡೆ ಸ್ಟ್ರೀಟ್ ಫುಡ್ ಅಲ್ಲ. ಮನೆಯಲ್ಲೇ ಮಾಡಬಹುದಾದ ರುಚಿಕರ ಆಹಾರ, ನಳಪಾಕ ಪ್ರವೀಣೆ ಪಾರ್ವತಿ ಜಗದೀಶ ಅವರು ಮಾಡುವದನ್ನು ಹೇಳಿಕೊಟ್ಟಿದ್ದಾರೆ, ತಪ್ಪದೆ ಮನೆಯಲ್ಲಿ ಮಾಡಿ ರುಚಿ ಹೇಗಿತ್ತು ಹೇಳಿ…

ಬೇಕಾಗುವ ಸಾಮಗ್ರಿ :
ಉದ್ದಿನ ಬೆಳೆ – ಒಂದು ಬಟಲು
ಬೆಳ್ಳುಳ್ಳಿ – ಒಂದೆರಡು ಎಸಳು
ಜೀರಿಗೆ – ಸ್ವಲ್ಪ
ಹಸಿಮೆಣಸಿನಕಾಯಿ -ಸ್ವಲ್ಪ
ಕರಿಬೇವು -ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಹಸಿ ಶುಂಠಿ – ಅರ್ಧ ಇಂಚು
ಇಂಗು – ಚಿಟಿಕೆ
ಮಾಡುವ ವಿಧಾನ :
ಸಿಪ್ಪೆ ಇರುವ ಉದ್ದಿನಬೇಳೆ (ಅಂಗಡಿಯಲ್ಲಿ ಸಿಗುತ್ತೆ ) ತೆಗೆದುಕೊಂಡು ನಾಲ್ಕು ತಾಸು ನೀರಲ್ಲಿ ನೆನಸ್ಕೊಂಡು ನಂತರ ಚೆನ್ನಾಗಿ ಕಿವುಚಿ ತೊಳೆದು ಬೇಳೆ, ಜೊತೆಗೆ ಒಂದೆರಡು ಎಸಳು ಬೆಳ್ಳುಳ್ಳಿ, ಒಂದು ಚಮಚ ಜೀರಿಗೆ, ರುಚಿಗೆ ಬೇಕಾದಷ್ಟು ಹಸಿ ಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು,ಅರ್ಧ ಇಂಚು ಹಸಿ ಶುಂಠಿ, ಚಿಟಿಕೆ ಇಂಗು ಹಾಕಿ ನುಣ್ಣಗೆ ರುಬ್ಬಿಕೊಂಡು ಅದಕ್ಕೆ ಒಂದೆರಡು ಚಮಚ ಚಿರೋಟಿ ರವೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಬೆರಸಿ, ಅಜವಾನ ಚಿಟಿಕೆ ಸೋಡಾ ಹಾಕಿ. ಕಾದ ಎಣ್ಣೆಯಲ್ಲಿ ಹದವಾಗಿ ಕರೆದು ತೆಗೆದರೆ ಬಿಸಿ, ಬಿಸಿ ರುಚಿಯಾದ ಉದ್ದಿನಬೇಳೆ ( ಸಿಪ್ಪೆ ಸಮೇತ ) ವಡೆ ಸವಿಯಲು ಸಿದ್ದ.
- ಪಾರ್ವತಿ ಜಗದೀಶ
