ನಿನ್ನ ಕಂಗಳ ಕಾಂತಿ ಎಷ್ಟು ಪ್ರಖರ ಹೊಳೆವಂತೆ ಹಿಮಾದ್ರಿ ಶಿಖರ…ಕವಿ ಅಪ್ಪಯ್ಯ ಯು ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…
ಕಂಗಳ ಮಿಲನ
ಇಂದು ಆ ಮಂದಿರದೊಳು ನಿನ್ನ ಕಂಡಾಗ
ನನಗಾಯಿತು ನಿನ್ನ ಸುಂದರ ನಯನಗಳ ಮಿಲನ
ತಡೆಯದೆ ಹೃದಯ ಬಡಿಯಿತು
ತಂ ತನನ
ಎಂತ ಸುಂದರ ನೋಟ ನಿನ್ನ
ಮೈ ಮಾಟ
ಯಾವ ಭಗವಂತ ಸೃಷ್ಠಿಸಿದನೋ ಅಕಟಕಟ
ನಿನ್ನ ಕಂಗಳ ಕಾಂತಿ ಎಷ್ಟು ಪ್ರಖರ
ಹೊಳೆವಂತೆ ಹಿಮಾದ್ರಿ ಶಿಖರ
ಕೇಳಿಸುತಿದೆ ಮಂದಿರದಿ ಓಂಕಾರ
ಎಲ್ಲಿ ಹೋದರೂ ಯಾರ ಕಂಡರೂ
ನಿನ್ನ ಇನ್ನೊಮ್ಮೆ ನೋಡುವ ಕಾತರ
ಮನಯಾಕೊ ನಿನ್ನನು ಕಾಣುವ ಆತುರ
- ಅಪ್ಪಯ್ಯ ಯು – ಕಾಸರಗೋಡು.
