ಲೇಖಕರಾದ ವಿದ್ಯಾ ಶಿರಹಟ್ಟಿ ಅವರ ‘ಅಂತರಂಗದ ರಂಗದ ಮೇಲೆ’ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಅಂತರಂಗದ ರಂಗದ ಮೇಲೆ
ಲೇಖಕರು: ವಿದ್ಯಾ ಶಿರಹಟ್ಟಿ
ಪ್ರಕಾಶನ : ಮಹಿಮಾ ಪ್ರಕಾಶನ ಮೈಸೂರು
ಮುದ್ರಣದ ವರ್ಷ: ೨೦೨೫
ಪುಟಗಳು:೨೮೫
ಬೆಲೆ: ರೂ.೩೦೦
ಭಾರತೀಯ ಜೀವವಿಮಾ ನಿಗಮದಲ್ಲಿ ಸೇವೆ ಸಲ್ಲಿಸಿದ ಲೇಖಕಿ ವಿದ್ಯಾ ಶಿರಹಟ್ಟಿಯವರು ಆಕಾಶವಾಣಿ ನಾಟಕ ವಿಭಾಗದಲ್ಲಿ ಬಿ ಗ್ರೇಡ್ ಕಲಾವಿದೆಯಾಗಿದ್ದಾರೆ. ಇದು ಅವರು ಬರೆದ ಬಾನುಲಿ ನಾಟಕಗಳ ಸಂಕಲನ. ಇಂತಿಷ್ಟೇ ಪಾತ್ರ ಹಾಗೂ ಸಮಯದಲ್ಲಿ ದೃಶ್ಯ, ಸಂಭಾಷಣೆಗಳ ಮೂಲಕ ಕಥೆಯಲ್ಲಿ ನೀತಿಯೊಂದನ್ನು ಹೇಳಿ, ಪ್ರಸ್ತುತ ಪಡಿಸುವ ನಾಟಕ ರಚನೆ ನಿಜಕ್ಕೂ ಒಂದು ಸವಾಲಿನ – ಕೌಶಲ್ಯದ ಕೆಲಸ. ಅನೇಕ ಜಿಲ್ಲಾಮಟ್ಟದ ಬಹುಮಾನಿತ ನಾಟಕಗಳು ಇಲ್ಲಿವೆ ಅಂದಮೇಲೆ ಲೇಖಕರ ಬರವಣಿಗೆಯ ಸಾಮರ್ಥ್ಯದ ಅರಿವು ನಮಗಾಗುತ್ತದೆ .ಈಗ ಅವರ ಕೆಲವು ನಾಟಕಗಳ ಬಗ್ಗೆ ತಿಳಿಯೋಣವೇ.

ಆಯುಷ್ಯಕ್ಕೊಂದಿಷ್ಟು ರೇಷನ್.
ಆ ಕುಟುಂಬದಲ್ಲಿ ಹಾಸಿಗೆ ಹಿಡಿದ ೮೦ ವರ್ಷದ ಅಜ್ಜಿಯನ್ನು ಒಯ್ಯದೇ ಯಮಧರ್ಮ ೨೦ ವರ್ಷದ ಯುವಕನ ಪ್ರಾಣಹರಣ ಮಾಡಿದ್ದಕ್ಕೆ ಅಳುವಿನ ಆಕ್ರಂದನವಾಗಿತ್ತು. ಆದ್ದರಿಂದ ಇನ್ನುಮುಂದೆ ೮೦ ವರ್ಷದವರೆಗೆ ಯಾವುದೇ ಮಾನವಜೀವಿಯ ಪ್ರಾಣವನ್ನು ತೆಗೆಯುವುದಿಲ್ಲವೆಂದು ತೀರ್ಮಾನಿಸಿದ ಯಮನಿಗೆ, ನಾರದರು ಈ ಬಗ್ಗೆ ಭೂಲೋಕಕ್ಕೆ ಹೋಗಿ ಜನರ ಅಭಿಪ್ರಾಯ ಸಂಗ್ರಹಿಸುವಂತೆ ಸಲಹೆ ನೀಡುತ್ತಾರೆ.
ಅದರಂತೆ ವಿವಿಧ ರೀತಿಯ ಜನರ ತರಾವರಿ ಅಭಿಪ್ರಾಯಗಳನ್ನು ಕೇಳುವಾಗ ನಗೆಯುಕ್ಕುತ್ತದೆ. ಅದರ ಜೊತೆಗೆ ಸಾವಿಗೂ ರೂಲ್ ಮಾಡಬ್ಯಾಡ್ರಿ. ಸಾವು ಕಳ್ಳ ಬೆಕ್ಕಿನಂತೆ ಸಣ್ಣ ಹೆಜ್ಜೆ ಇಟ್ಟುಗೋತ ಬರಬೇಕು. ಅದು ಬರೋತನಕ ನಾವು ಹುಲಿ ಹಂಗ ಬಾಳಿ ಅದುಬಂದಾಗ ಗಪ್ಪ ಅಂತಾ ಹೋಗೋ ಮನಸ್ಸಿನ ತಯಾರಿ ಇಟಗೋ ಬೇಕು. ಸಾವು ಬರೋತನಕ ಬದುಕೋದು ಮಹತ್ವದ್ದು.ಬದುಕು ಅಂದರ ಪಂಚಾಮೃತದಂಗ ಸವಿ ಬೇಕು ಎನ್ನುವ ಮಾತು ಎಷ್ಟು ಸತ್ಯವಾದದ್ದು ಎನಿಸಿತು.
ಪ್ರಕೃತಿನೇ ಗುರು
ಇಲ್ಲಿ ೮ ಪಾತ್ರಗಳು ಬರುತ್ತದೆ. ಕಸೂತಿ ಹೆಣಿಗೆ ಮಾಡುತ್ತಿದ್ದ ಚಿಗವ್ವ ನೀರಿನ ಕೊಡಹಿಡಿದು ಉಸ್ಸೆನ್ನುತ್ತಾ ಬಂದ ನಿಂಗವ್ವನಿಗೆ “ಅಟ್ಟ ಹತ್ತಲಾರದಾಂವ ಬೆಟ್ಟ ಹತ್ತತಾನೇನು?” ಇಷ್ಟಕ್ಕೇ ದಣಿದು ಬಿಟ್ಟೆಯಲ್ಲಾ ಎಂದು ನಗುತ್ತಾಳೆ. ಆಗ ನಿಂಗವ್ವ ತನ್ನ ಸಂಸಾರದ ಕಷ್ಟ ಹೇಳುತ್ತಾ, ನೇಯ್ಗೆ ಮಾಡುತ್ತಾ ಖುಷಿಯಾಗಿರುವುದು ನಿನ್ನದೇ ಪಾಡು ನೋಡು ಎನ್ನುತ್ತಾಳೆ.
‘ದಾರದಾಗೆ ನೇಯ್ದು ಹೂವು ಅರಳುವಾಗ ಪಾಯಸ ಕುಡಿದಷ್ಟು ಸಿಹಿ ಎನಿಸುವುದು ನೀನೂ ಕಸೂತಿ ಕಲಿತುಕೋ … ಎಂದಾಕೆ ನುಡಿದಾಗ, ತನ್ನ ಬಾಳು ಬರೀ ಮನೆಕೆಲಸಕ್ಕೆ ಸೀಮಿತವೆಂದು ಬೇಸರಿಸುವ ನಿಂಗವ್ವನಿಗೆ ನಮ್ಮಂತಾ ಮನಿಷಾರಿಂದನೇ ಕಥೆ ಅಕ್ಕಾವು ನೋಡು… ಎನ್ನುತ್ತಾ ಮೂವರು ಹೆಣ್ಣುಮಕ್ಕಳು ಪ್ರಕೃತಿಯಿಂದಲೇ ಕಲಿತ ಜೀವನ ಪಾಠದ ಚೆಂದದೊಂದು ಕಥೆಯನ್ನು ಹೇಳುತ್ತಾಳೆ.ಅದೇನೆಂದು ನೀವೂ ಓದಿ.

ನಾಟಕ ಫ್ರಮ್ ಹೋಮ್
ಪೌರಾಣಿಕ ಹಾಗೂ ಜನಸಾಮಾನ್ಯರನ್ನು ಸಮೀಕರಿಸಿ ಬರೆದ ವಿನೋದಮಯ ಕಿರುನಾಟಕವಿದಾಗಿದೆ. ಲಕ್ಷ್ಮೀದೇವಿಯು ತನ್ನ ಪತಿ ಶ್ರೀಮನ್ನಾರಾಯಣನು ಸದಾ ಭಕ್ತರ ಮೊರೆ ಕೇಳುತ್ತಾ ಅವರ ಕಷ್ಟ ನಿವಾರಿಸುತ್ತಲೇ ಭೂಲೋಕ ಸಂಚಾರ ಮಾಡುತ್ತಿದ್ದರೆ ತನಗಿಲ್ಲಿ ಬೇಸರ ಬರುವುದಿಲ್ಲವೇ?. ಹಾಗಾಗಿ ಮನೆಯಿಂದಲೇ ಕೆಲಸ ಮಾಡಲು ಸೂಚಿಸುತ್ತಾಳೆ. ಆಗ ಬಂದ ನಾರದನು ಭೂಲೋಕದಲ್ಲಿ ಬಟ್ಟೆ ತೊಳೆಯಲು ಬಂದ ಇಬ್ಬರು ಗೃಹಿಣಿಯರು ತಮಗೆ ಮಾತ್ರ ಮನೆಕೆಲಸದಿಂದ ಎಂದೂ ಮುಕ್ತಿಯಿಲ್ಲವೆಂದು ಮಾತಾಡುವುದನ್ನು ಲಕ್ಷ್ಮೀದೇವಿಗೆ ತೋರಿಸಿ, ಸಮಸ್ಯೆಯ ಇನ್ನೊಂದು ಮುಖದ ಬಗ್ಗೆ ಚರ್ಚಿಸುತ್ತಾನೆ.
ಅಂದಿನ ಪೌರಾಣಿಕ ವ್ಯಕ್ತಿಗಳನ್ನು ಇಂದಿನ ಸಾಮಾಜಿಕ ಜನಜೀವನ ವಿಷಯಗಳ ಜೊತೆ ವಿಸ್ಮಯವೆನ್ನುವಂತೆ ಒಳಗೊಳಿಸಿ ಅನೇಕ ಸಂಗತಿಗಳನ್ನು ಹಾಸ್ಯಮಯವಾಗಿ ಜೋಡಿಸಿದ್ದು ಒಂದು ಬಗೆಯ ಕೌತುಕವೇ ಎಂದು ನನಗನ್ನಿಸಿತು.
• ಕರ್ನಾಟಕದ ಏಕೀಕರಣದ ಹಣತೆ ಬೆಳಗಿಸಿದ ಜಯದೇವಿ ತಾಯಿ ಲಿಗಾಡೆ ಪ್ರಥಮ ಹರಿದಾಸ ಮಹಿಳೆ ಗಲಗಲಿ ಅವ್ವನವರು ಮತ್ತು ಬೆಳವಾಡಿ ಮಲ್ಲಮ್ಮನವರ ಕುರಿತ ಮಾಹಿತಿಯುಳ್ಳ ಕಿರುನಾಟಕವಿದೆ.
• ಕಿವುಡ ಹೆಂಡತಿಯನ್ನು ಕಟ್ಟಿಕೊಂಡ ಗಂಡನ ಫಜೀತಿ, ಅತ್ತೆ ಸೊಸೆಯರ ಮುದ್ದು, ಸಂಸಾರಕ್ಕೊಂದಿಷ್ಟು ಒಗ್ಗರಣೆ, ಮುಂತಾಗಿ ನಗೆ ನಾಟಕಗಳು ಬಲು ಸೊಗಸಾಗಿವೆ. ಇದೇ ರೀತಿ ಇಲ್ಲಿರುವ ಪಕ್ಕಾ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಎಲ್ಲಾ ನಾಟಕಗಳೂ ಒಂದಕ್ಕಿಂತ ಒಂದು ಚೆಂದವಾಗಿದೆ. ಹಾಗೂ ಓದುತ್ತಲೇ ನಾವೂ ದೃಶ್ಯವನ್ನು ಕಲ್ಪಿಸಿಕೊಳ್ಳುವಷ್ಟು ಸಶಕ್ತವಾಗಿ ಪಾತ್ರಗಳಲ್ಲಿ ಮಾತಿನ ಮೂಲಕ ಕಥೆಯನ್ನು ಅರ್ಥಮಾಡಿಸುವ ಲೇಖಕರ ಬರವಣಿಗೆಯ ಶೈಲಿ, ಅಲ್ಲಲ್ಲಿ ಗಾದೆಮಾತನ್ನು ಬಳಸಿದ ರೀತಿ ಮೆಚ್ಚುಗೆಯಾಯಿತು.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ‘ಅಗಸ್ತ್ಯ’ ಕೃತಿ ಪರಿಚಯ
- ‘ಸಾಂದರ್ಭಿಕ’ ಕೃತಿ ಪರಿಚಯ
- ರೇಖಾ ಕಾಖಂಡಕಿ ಅವರು ಕೃತಿ ಪರಿಚಯ
- ಗೌರಿ ಕೃತಿ ಪರಿಚಯ
- ‘ನಿಮ್ಮ ಸಿಮ್ಮ’ ಕೃತಿ ಪರಿಚಯ
- ‘ಪಣಿಯಮ್ಮ’ ಕೃತಿ ಪರಿಚಯ
- ‘ಚಿಗುರಿದ ಕನಸು’ ಕೃತಿ ಪರಿಚಯ
- ‘ಅಶ್ವತ್ಥಾಮೋ ಹತಃ’ ಪರಿಚಯ
- ‘ಹೂ ದಂಡಿ’ ಕೃತಿ ಪರಿಚಯ
- ‘ಬೂದಿ ಮುಚ್ಚಿದ ಕೆಂಡ’ ಕೃತಿ ಪರಿಚಯ
- ‘ಇಲಿಯಡ್’ ಕೃತಿ ಪರಿಚಯ
- ‘ಅಲೆಯೊಳಗಿನ ಮೌನ’ ಕೃತಿ ಪರಿಚಯ
- ‘ಹೂಲಿ ಶೇಖರರ ನಾಟಕಗಳು’ ಕೃತಿ ಪರಿಚಯ
- ‘ನನ್ನಕ್ಕ ನಿಲೂಫರ್’ ಕೃತಿ ಪರಿಚಯ
- ‘ಅರಣ್ಯಕಾಂಡ’ ಕೃತಿ ಪರಿಚಯ
- ‘ವಿಕ್ರಮಾರ್ಜುನ ವಿಜಯ’ ಕೃತಿ ಪರಿಚಯ
- ‘ಸುನೀತಗಳು’ ಕೃತಿ ಪರಿಚಯ
- ‘ಮೈ- ಮನಸ್ಸುಗಳ ಸುಳಿಯಲ್ಲಿ ಸಖಿ!’ ಕೃತಿ ಪರಿಚಯ
- ‘ಪದ್ದಣ ಮನೋರಮೆ’ ಕೃತಿ ಪರಿಚಯ
- ‘ಬ್ರಹ್ಮರಾಕ್ಷಸ’ ಕೃತಿ ಪರಿಚಯ
- ‘ಬದುಕ ಭಿತ್ತಿಯ ಚಿತ್ರಗಳು’ ಕೃತಿ ಪರಿಚಯ
- ‘ಅಮ್ರಪಾಲಿ’ ಪುಸ್ತಕ ಪರಿಚಯ
- ‘ಇದು ಕತೆಯಲ್ಲ ಜೀವನ’ ಕೃತಿ ಪರಿಚಯ
- ‘ಕೇದಗೆ ಪುಷ್ಪ’ ಕೃತಿ ಪರಿಚಯ
- ‘ಬಂಕಿಮಚಂದ್ರರ ಶ್ರೇಷ್ಠ ಕತೆಗಳು’ ಕೃತಿ ಪರಿಚಯ
- ‘ಸೀಳುದಾರಿ’ ಪುಸ್ತಕ ಪರಿಚಯ
- ‘ಲವ್ ಟುಡೆ’ ಕೃತಿ ಪರಿಚಯ
- ‘ಕ್ಲಾಸ್ ಟೀಚರ್’ ಕೃತಿ ಪರಿಚಯ
- ‘ಒಂದು ಎಂಟಾಣೆಯ ಕಥೆ’ ಕೃತಿ ಪರಿಚಯ
- ‘ನಿಮಗ ತಿಳಿಯೋದಿಲ್ಲ ಬಿಡ್ರಿ’ ಕೃತಿ ಪರಿಚಯ
- ‘ಮಾಸದ ವಿಜಯ’ ಕೃತಿಯ ಪರಿಚಯ
- ‘ಅರಳಿಮರ’ ಪುಸ್ತಕ ಪರಿಚಯ
- ‘ಆಸೆಯ ಅಲೆಗಳ ಮೇಲೆ’ ಕೃತಿ ಪರಿಚಯ
- ‘ಬರ್ಬರಿಕ’ ಕೃತಿ ಪರಿಚಯ
- ‘ನನ್ನ ದನಿಗೆ ನಿನ್ನ ದನಿಯು’ ಕೃತಿ ಪರಿಚಯ
- ‘ಅಂತರಂಗ’ ಕೃತಿ ಪರಿಚಯ
- ‘ಕಾಡುಬಳ್ಳಿ’ ಕೃತಿ ಪರಿಚಯ
- ‘ನಂಟು’ ಪುಸ್ತಕ ಪರಿಚಯ
- ‘ಶಕುನದ ಹಕ್ಕಿ’ ಕೃತಿ ಪರಿಚಯ
- ‘ಪರ್ಷಿಯಾ ಪರಿಮಳ’ ಕೃತಿ ಪರಿಚಯ
- ‘ತೀರದ ತುಡಿತ’ ಕೃತಿ ಪರಿಚಯ
- ‘ಅಪೂರ್ವ ಕುಸುಮಗಳು’ ಕೃತಿ ಪರಿಚಯ
- ‘ಹುಲಿ ವೇಷ’ ಕೃತಿ ಪರಿಚಯ
- ‘ಆನೆ ಸಾಕಲು ಹೊರಟವಳು’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್ – ಕಿರಿಯ ಸಹಾಯಕರು, ಲೋಕೋಪಯೋಗಿ ಇಲಾಖೆ ಉಪವಿಭಾಗ, ಸಿದ್ದಾಪುರ.
