‘ಬಾಗಿಲು ತೆರೆಯೇ ಸೇಸಮ್ಮ’ ಕೃತಿ ಪರಿಚಯ

ಲೇಖಕರಾದ ಶರತ್ ಭಟ್ ಸೇರಾಜೆ ಅವರ ‘ಬಾಗಿಲು ತೆರೆಯೇ ಸೇಸಮ್ಮ’ ಕೃತಿಯಲ್ಲಿ ಜನರು ಇಂಗ್ಲೀಷ್ ವ್ಯಾಮೋಹ ಬೆಳೆಸಿಕೊಂಡು ಕನ್ನಡವನ್ನು ಎಷ್ಟು ಕಡೆಗಣಸಿದ್ದಾರೆ ಎಂಬುದನ್ನು ತೋರಿಸುತ್ತಾ ಮಾತೃಭಾಷಾ ಕಲಿಕೆಗೆ ಒತ್ತು ನೀಡಿದ್ದಾರೆ. ಈ ಕೃತಿಯ ಕುರಿತು ಸಾವಿತ್ರಿ ಶ್ಯಾನುಭಾಗ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ: ಬಾಗಿಲು ತೆರೆಯೇ ಸೇಸಮ್ಮ
ಲೇಖಕರು :ಶರತ್ ಭಟ್ ಸೇರಾಜೆ
ಬೆಲೆ:೧೫೦
ಪುಟ:೧೩೨
ಪ್ರಕಾಶನ: ಅಂಕಿತ ಪುಸ್ತಕ

‘ನಹಿ‌ ಜ್ಞಾನೇನ ಸದೃಶಂ’ಎನ್ನುವ ಮಾತಿದೆ.ಜ್ಞಾನವೆಂಬ ಸಾಗರಕ್ಕೆ‌ ಅಂತ್ಯವೆಂಬುದಿಲ್ಲ.ಅದೊಂದು ನಿರಂತರ ಕ್ರಿಯೆ.ಯಾವುದಾದರೂ ವಿಷಯವಿರಲಿ ಅದನ್ನು ಚೆನ್ನಾಗಿ ಓದಿ,ಅರ್ಥೈಸಿಕೊಂಡು,ಅದರ ಆಳಕ್ಕಿಳಿದು,ನಮಗೆ ಅರ್ಥವಾಗುವ ಸಾಮಾನ್ಯ ಭಾಷೆಯಲ್ಲಿ ನಮಗೆ ಓದಿಗೆ ವಿಷಯಗಳು ಸಿಗುವಂತೆ ಅವರ ಲೇಖನಗಳನ್ನು ‘ ಬಾಗಿಲು ತೆರೆಯೇ ಸೇಸಮ್ಮ’ ಮೂಲಕ ನಮಗೆ ನೀಡಿರುವ ಶರತ್ ಭಟ್ ಸೇರಾಜೆ ಯವರ ಪುಸ್ತಕವನ್ನು ಓದುವ ಅವಕಾಶ ಈ ಸದ್ಯ ಲಭಿಸಿತು.

ಕಬ್ಬಿಣದ ಕಡಲೆಯಾದ ಗಣಿತವಿರಲಿ,ವಿಜ್ಞಾನದ ಸಣ್ಣ ಅಥವಾ ದೊಡ್ಡ ವಿಷಯವಿರಲಿ,ವ್ಯಾಕರಣದ ವಿಷಯವಿರಲಿ ಪ್ರತಿಯೊಂದು ನಾವು ಅದರ ಹಿನ್ನೆಲೆಯನ್ನು ತಿಳಿದ ತುಂಬಾ ಸಮಯ ವ್ಯಯಿಸಿ ಓದಿದರೂ ಒಮ್ಮೊಮ್ಮೆ ನಮಗೆ ಅರ್ಥವಾಗದಿರಬಹುದು.ಆದರೆ ಅವನ್ನೆಲ್ಲ‌ ನಮ್ಮ ಭಾಷೆಯಲ್ಲೇ ನಮಗರಿವಾಗುವಂತಹ ಶೈಲಿಯಲ್ಲಿ ನಮ್ಮ ಮುಂದೆ ಪ್ರಸ್ತುತಪಡಿಸಿರುವ ಅವರ ಲೇಖನಗಳು ಮನಸೆಳೆಯುತ್ತವೆ.

ಜನರಿಂದ ಜನರಿಗೆ ಕೆಲವು ಸುಳ್ಳು ಸುದ್ದಿಗಳು ಹಬ್ಬಿ,ಸುಳ್ಳು ವಿಷಯ ಹರಡುವಂತೆ ಒಂದರಂತೆ ಇನ್ನೊಂದು ಸಿನಿಮಾ,ಹಾಡು,ಲೇಖನವಿರಬಹುದಯ ಎಂದು ಸಾಮ್ಯ ಹುಡುಕಿ,ಅವರು ಇನ್ನೊಬ್ಬರ ಕಾಪಿ ಹೊಡೆದಿರಬಹುದು ಎಂದೆಲ್ಲ ಊಹಿಸುವ ನಮಗೆ ಒಂದು ಸಿನಿಮಾದ ಸಣ್ಣ ದೃಶ್ಯದಿಂದ ಸ್ಫೂರ್ತಿ ಪಡೆದು ಇನ್ನೊಂದು ಬಹುದೊಡ್ಡ ಸಿನಿಮಾ ಮಾಡುವುದರ ಹಿಂದಿನ ಬಹುಶ್ರಮವನ್ನು ನಾವು ಹುಡುಕಬೇಕು,ಕಾಪಿ ಎಂದು ಅದನ್ನು ತುಚಛವೆಣಿಸಬೇಡಿ ಎಂದು ಕಿವಿಮಾತು ಕೂಡ ಹೇಳಿದ್ದಾರೆ.

ಭಾಷೆ ಬಳಸುತ್ತಾ ನಾವು ಮಾಡುವ ಸಣ್ಣ ತಪ್ಪುಗಳು ಬೇರೆಯದೇ ಅರ್ಥ ನೀಡಬಹುದು. ಕೋಟ್ಯಧಿಪತಿ, ನಾಗರಿಕತೆ, ಪ್ರಧಾನತೆ ಹೀಗೆ ನಾವು ಸರಿಯಾದ ಪದವನ್ನು ಎಲ್ಲಿ ದೀರ್ಘ ಬಳಸದೇ ಉಪಯೋಗಿಸಬೇಕು. ಎಲ್ಲಿ ನಾವು ಅಪಭ್ರಂಶ ಮಾಡುವುದು ಎಂದು ಎತ್ತಿ ತೋರಿಸುತ್ತಾ ಭಾಷೆಯ ಬೆಳವಣಿಗೆಯ ಕಾಳಜಿ ತೋರಿದ್ದಾರೆ. ಉದ್ಯೋಗ ಪಡೆಯಲು ಇಂಗ್ಲೀಷ್ ಭಾಷೆ ಅವಶ್ಯವಾದರೂ ಅದರ ಎಷ್ಟು ಬಳಕೆಯಾಗುತ್ತದೆ. ಆದರೆ ಜನರು ಇಂಗ್ಲೀಷ್ ವ್ಯಾಮೋಹ ಬೆಳೆಸಿಕೊಂಡು ಕನ್ನಡವನ್ನು ಎಷ್ಟು ಕಡೆಗಣಸಿದ್ದಾರೆ ಎಂಬುದನ್ನು ತೋರಿಸುತ್ತಾ ಮಾತೃಭಾಷಾ ಕಲಿಕೆಗೆ ಒತ್ತು ನೀಡಿದ್ದಾರೆ.

ಹೀಗೆ ಬೇರೆ ಬೇರೆ ವಿಷಯಗಳನ್ನು, ಕೆಲವು ನಮಗೆ ತಿಳಿದಿರುವ, ತಿಳಿದು ಮರೆತಿರುವ,ತಿಳಿಯದೇ ಇರುವ ಮಾಹಿತಿಗಳನ್ನು ನೀಡುತ್ತಾ, ಅವರು ಬರೆದಿರುವ ಲೇಖನಗಳು ಅವರೇ ಹೇಳುವಂತೆ ಅವರ ಫೇಸ್‌ಬುಕ್‌ ನ‌ ಪುಟದಲ್ಲಿ ಬರೆದಿರುವ ಅನೇಕ ಲೇಖನಗಳಲ್ಲಿ ಆರಿಸಿ ನಮ್ಮ ಮುಂದೆ ಈ ಪುಸ್ತಕದಲ್ಲಿ ನೀಡಿದ್ದಾರೆ.ಒಮ್ಮೆ ಈ ಪುಸ್ತಕವನ್ನು ಓದಿ ನೀವೂ ಸಹ ಆಸ್ವಾದಿಸಿ.


  • ಸಾವಿತ್ರಿ ಶ್ಯಾನುಭಾಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading