‘ದಾಸೋತ್ತಮ ಕನಕದಾಸ’ ಕವನ

ಹೃದಯದ ಭಕ್ತಿಗಿಂತ ಮೇಲು ಜಾತಿಯಿಲ್ಲಯೆಂದವರು!…ಕವಿ ಟಿ.ಪಿ.ಉಮೇಶ್ ಅವರ ಲೇಖನಿಯಲ್ಲಿ ಕನಕದಾಸ ಜಯಂತಿ ಪ್ರಯುಕ್ತ ಒಂದು ಕವಿತೆ, ತಪ್ಪದೆ ಪೂರ್ತಿಯಾಗಿ ಓದಿ…

ರಾಜವೈಭವದ ಮಡಿಲಲ್ಲಿ ಹುಟ್ಟಿ ಬೆಳೆದು
ಹರಿನಾಮದ ಬೆಳಕಿನಲ್ಲಿ ಹೊಳೆದು ನಿಂತವರು!

ಕಿರೀಟವ ಕಳಚಿ ಭಕ್ತಿಯ ಕಿರೀಟವ ತೊಟ್ಟು
ಅರಮನೆಯ ಬಿಟ್ಟು ಹರಿಪಾದವ ಹಿಡಿದವರು!

ಖಡ್ಗ ಹಿಡಿದ ಕೈಯಲ್ಲಿ ತಂಬೂರಿ ಹಿಡಿದು
ಕೀರ್ತನೆಯ ದಾರಿಯಲ್ಲಿ ಜಗವನ್ನೇ ಬೆಸೆದವರು!

ಜಾತಿಯ ಗೋಡೆಗೆ ಭಕ್ತಿಯ ಏಟು ಕೊಟ್ಟು
ಮನುಜರೆಲ್ಲ ಒಂದೆಂಬ ಮಂತ್ರವ ಸಾರಿದವರು!

ದೇವರ ಮುಂದೆ ಕಿರಿಯವರಿಲ್ಲ ಹಿರಿಯವರಿಲ್ಲ
ಹೃದಯದ ಭಕ್ತಿಗಿಂತ ಮೇಲು ಜಾತಿಯಿಲ್ಲಯೆಂದವರು!

ಕುಲದ ಕಟ್ಟು ಕಳಚಿ ಸಮತೆಯ ಬೀಜ ಬಿತ್ತಿ
ಮಾನವ ಪ್ರೀತಿಯ ಮಹಾಮಂಟಪ ಕಟ್ಟಿದವರು!

ಅಂದು ಅರಸರಾಗಿದ್ದವರು ಕನಕದಾಸರು
ಇಂದು ಜನಮನದ ಸಾಮ್ರಾಟರಾದವರು!

ಕನಕದಾಸರೆಂದರೆ ಕೇವಲ ಕೀರ್ತನೆಯಲ್ಲ
ಕಾಲದ ಕತ್ತಲೆ ತೊಲಗಿಸಲು ಬೆಳಕಾದ ಕ್ರಾಂತಿ!

ಭಕ್ತಿಯೆಂದರೆ ಕೇವಲ ಆರಾಧನೆಯಲ್ಲ
ಮನುಜರೆಲ್ಲರು ಒಂದೆಂಬ ಬಾಳ ಬದುಕಿನ ನೀತಿ!


  • ಟಿ.ಪಿ.ಉಮೇಶ್ – ರಾಷ್ಟ್ರಪ್ರಶಸ್ತಿ ಪುರಸ್ಕೃತರು, ಕವಿಗಳು, ಲೇಖಕರು.

Leave a Reply

Home
Search
Menu
Recent
About
×