ಕೊಡಗು ಮೂಲದ ಲೇಖಕರಾದ ಹೇಮಂತ್ ಪಾರೇರಾ ಅವರ ವಿನೂತನ ಕಾದಂಬರಿ ಪ್ರಸ್ತುತ ‘ಶಕುನದ ಹಕ್ಕಿ.’ ಈಗಾಗಲೇ ತಮ್ಮ ಮೂರು ಕೃತಿಗಳ ಮೂಲಕ ಕನ್ನಡ ಓದುಗರನ್ನು ತಲುಪಿರುವ ಇವರ ನಾಲ್ಕನೆಯ ಈ ಕೃತಿಯು ಇಸ್ಪೀಟ್ ಆಟದ ದುಷ್ಪರಿಣಾಮಗಳನ್ನು ಕೇಂದ್ರವಾಗಿಟ್ಟುಕೊಂಡು ಬರೆದ ಸಾಮಾಜಿಕ ಕಾದಂಬರಿ. ಈ ಕೃತಿಯ ಕುರಿತು ಲೇಖಕರಾದ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಶಕುನದ ಹಕ್ಕಿ.
ಲೇಖಕರು: ಹೇಮಂತ್ ಪಾರೇರಾ.
ನಂದಿತ ಪ್ರಕಾಶನ ಮೈಸೂರು.
ಮುದ್ರಣದ ವರ್ಷ: ೨೦೨೬.
ಪುಟಗಳು: ೩೨೮.
ಬೆಲೆ: ರೂ. ೪೦೦.
ಖರೀದಿಗಾಗಿ : 97433 53597
ವಿಭಿನ್ನ ಕಥಾವಸ್ತು, ಕೊಡಗಿನ ಹಸಿರು ಮಡಿಲಿನ ಪ್ರಕೃತಿಯ ಸೌಂದರ್ಯದ ಬಣ್ಣನೆ, ಮಾನವ ಸಂಬಂಧದ ಭಾವಸೂಕ್ಷ್ಮತೆ, ಇಸ್ಪೀಟು ಆಟದ ಮೂಲದ ಮಾಹಿತಿ, ಜೊತೆಗೆ ಹೊಸತನದ ನಿರೂಪಣೆಯೊಂದಿಗೆ ಲೇಖಕರ ಬರವಣಿಗೆ ಓದುಗನನ್ನು ಸೆಳೆಯುವಂತಿದೆ.

ಕಥೆಯ ಸಂಕ್ಷಿಪ್ತ ಸಾರಾಂಶ ಹೀಗಿದೆ :
ಪ್ರೀತಮ್ ಮೈಸೂರು ಜಿಲ್ಲೆಯ ಚಿಲ್ಕುಂಡದಲ್ಲಿ ನೆಲೆಸಿ ವ್ಯವಸಾಯದ ಜೊತೆ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ . ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಪ್ರೀತಮ್ ಮತ್ತು ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಭರತ್ ನನ್ನು ತಾಯಿ ಭಾಗೀರಥಿ ಕಷ್ಟಪಟ್ಟು ಸಾಕಿದ್ದರು. ಇವನ ಹೆಂಡತಿ ಸದ್ಗುಣಿ ವರ್ಣಿಕಾಳಿಗೆ ಇನ್ನೂ ಮಕ್ಕಳಿಲ್ಲದ ಕೊರಗು. “ಗಿರಿಜನರ ಬದುಕು ಬವಣೆ”ಯ ಕುರಿತ ಉತ್ತಮ ವರದಿಗಾಗಿ ಸಂದ ಪ್ರಶಸ್ತಿಯನ್ನು ಸ್ವೀಕರಿಸಲು ಪ್ರೀತಮ್ ಬೆಂಗಳೂರಿಗೆ ಹೊರಟು ನಿಂತಾಗ, ಸ್ನೇಹಿತ ಹರೀಶ್ ತನ್ನ ತೋಟದ ಮನೆಯಲ್ಲಿ ನಡೆಯುವ ಇಸ್ಪೀಟು ಕೂಟಕ್ಕೆ ಬರಲು ಆಹ್ವಾನ ನೀಡುತ್ತಾನೆ.ಆದರೆ ಅಂದಿನ ಪ್ರಯಾಣದ ತುರ್ತನ್ನು ತಿಳಿಸಿ ಅವನು ಹೊರಡುತ್ತಾನೆ.
ಬೆಳಗಿನ ನಸುಕಲ್ಲಿ ಆಳಹಕ್ಕಿಯೊಂದರ ಕರ್ಕಶಕೂಗು ಕೇಳಿ ಭೀತನಾದ ಪ್ರೀತಮನಿಗೆ ಹಿಂದಿನ ದಿನ ಬುಡುಬುಡಿಕೆಯವನು ಹೇಳಿದ ಶಕುನದ ನೆನಪಾಗಿ ಮತ್ತೂ ಭಯವಾಗಿತ್ತು. ಹಾಗಾದರೆ ಹಾಲಕ್ಕಿಯವನು ನುಡಿದ ಆ ಶಕುನವಾದರೂ ಏನು?.
ಅಂದು ಸನ್ಮಾನ ಸ್ವೀಕರಿಸಿದ ಖುಷಿಯಲ್ಲಿದ್ದಾಗಲೇ, ಗೆಳೆಯ ವಿನೋದ ಫೋನ್ ಮಾಡಿ,ಊರಲ್ಲಿ ಪೊಲೀಸರು ಇಸ್ಪೀಟಾಡುತ್ತಿದ್ದ ಗುಂಪನ್ನು ಹಿಡಿದಿದ್ದು, ಅದರಲ್ಲಿ ರಜೆಗೆಂದು ಊರಿಗೆ ಬಂದಿದ್ದ ಇವನ ತಮ್ಮ ಭರತ್ ಕೂಡ ಇದ್ದು, ತಪ್ಪಿಸಿಕೊಂಡು ಓಡುವಾಗ ಬಿದ್ದು ಪೆಟ್ಟಾಗಿದೆ ಎನ್ನುವ ವಿಷಯ ತಿಳಿಸಿದಾಗ, ಗಾಬರಿಯಿಂದ ಪ್ರೀತಮ್ ಕಾರನ್ನೇರಿ ಅಲ್ಲಿಂದ ಊರಿಗೆ ಮರಳಿದ್ದ.ಅಲ್ಲಿನ ಅವಾಂತರವನ್ನು ನೀವು ಓದಿಯೇ ಅನುಭವಿಸಬೇಕು. ಅಷ್ಟು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ.
ಜೀಪ್ ನಲ್ಲಿ ತೋಟದ ಮನೆಗೆ ಹೋಗುವ ಭರದಲ್ಲಿ ಗೆಳೆಯರು ಹೊಲದಲ್ಲಿ ನುಗ್ಗಿಸಿ, ಮೇಯುತ್ತಿದ್ದ ದನಗಳು ಬೆದರಿ ಓಡಿ ತರಕಾರಿ ಬೆಳೆಗಳನ್ನು ಹಾಳುಮಾಡಿದ್ದು, ಒಂದಕ್ಕೊಂದು ಕೊಂಡಿಯಂತೆ ಸೇರಿ ಗೆಳೆಯರಾದ ಶರೀಫ,ಮೋಹನ,ಹರೀಶ, ಜಗ, ಭರತ, ಕುಮಾರ ಇವರೆಲ್ಲಾ ಮೈಮೇಲೆ ತಂದುಕೊಂಡ ಅಪಾಯದ ಪ್ರಸಂಗಗಳು , ನಂತರದ ದಿನಗಳಲ್ಲಿ ಅವರೊಳಗೆ ಇಷ್ಟು ವರ್ಷಗಳ ಸ್ನೇಹದಲ್ಲುಂಟಾದ ಅಸಮಾಧಾನ ಇವು ಬಹಳ ನೈಜವಾಗಿ ಮೂಡಿದೆ.
ಹಾಗಾದರೆ ಅವರು ಇಸ್ಪೀಟು ಆಡುತ್ತಿದ್ದ ಸುದ್ದಿಯನ್ನು ಪೊಲೀಸರಿಗೆ ತಿಳಿಸಿದ್ದು ಯಾರು? ಭರತ ಅವಿತು ಕೊಂಡಿದ್ದೆಲ್ಲಿ? … ಪ್ರೀತಮ್ ಪೆಟ್ಟಾದವರನ್ನುಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವುದು , ಪೊಲೀಸರಿಂದ ಅವರನ್ನು ಬೇಲ್ ಮೇಲೆ ಬಿಡಿಸಲು ಸ್ಟೇಷನ್, ಕೋರ್ಟ್ ಎಂದು ಅಲೆದಾಡುವುದು, ವಿಳಂಬನೀತಿಯ ನಡುವೆಯೂ ಹೋದಲ್ಲೆಲ್ಲಾ ಖರ್ಚಾಗುವ ಹಣ, ಇದು ತಪ್ಪೆಂದು ಗೊತ್ತಿದ್ದರೂ ವ್ಯವಸ್ಥೆಯಡಿ ಸರಿಯೆಂದು ಹೇಳಲಾಗದೇ ಹೊರಬರುವ ಮಧ್ಯಮವರ್ಗದ ಜನರ ಅನಿವಾರ್ಯತೆಯ ಪಾಡು ,ದೊಡ್ಡತಪ್ಪು ಮಾಡಿದವರಿಗಿಂತ, ತಮಾಷೆಯ ಜೂಜಾಡಿದ ಹುಡುಗರನ್ನು ಹಿಡಿದು ಮಹಾಕಳ್ಳರಂತೆ ನೋಡುವ ಪೊಲೀಸರ ರೀತಿ, ಇವೆಲ್ಲಾ ಇಂದಿನ ವಾಸ್ತವವೇ ಆದರೂ ಲೇಖಕರು ಅದನ್ನು ಚಿತ್ರಿಸಿದ ರೀತಿ ಅನನ್ಯ.

ಇಸ್ಪೀಟ್ ಆಟವನ್ನು ಚೀನಾದ ರಾಜಕುಮಾರಿ” ಟಾಂಗ್ ಚಾಂಗ್ ” ಎಂಬಾಕೆ ಕಂಡುಹಿಡಿದು ಮನರಂಜನೆಗಾಗಿ ತನ್ನ ಕುಟುಂಬವರ್ಗ ಹಾಗೂ ಸ್ನೇಹಿತೆಯರೊಡನೆ ಆಡುತ್ತಿದ್ದಳಂತೆ! ಎನ್ನುವ ಮಾಹಿತಿಯನ್ನು ಕಥಾನಾಯಕ ಪ್ರೀತಮ್ ತನ್ನ ಲಾಯರ್ ಗೆಳೆಯ ಪ್ರದೀಪನೊಂದಿಗೆ ಸಂಭಾಷಿಸುವ ಮೂಲಕ ಅದರ ಮೂಲ ಇತಿಹಾಸವನ್ನು ತಿಳಿಸುವ ರೀತಿ ಮೆಚ್ಚುಗೆಯಾಗುತ್ತದೆ. ಅಂತೆಯೇ, ಯಾರಿಗೂ ತೊಂದರೆಯಾಗದಂತೆ,ಬೇಸರ ಕಳೆಯಲು ಗೆಳೆಯರೆಲ್ಲಾ ಸೇರಿ ಕಂಡುಹಿಡಿದ ಆ ಹೊಸಮಾದರಿಯ ಇಸ್ಪೀಟು ಆಟದ ಪಟ್ಟು ಹೇಗಿದೆಯೆಂದು ಲೇಖಕರು ವಿವರಿಸಿದ ಪರಿಯೂ ಚೆನ್ನಾಗಿದೆ.
ಪೊಲೀಸ್ ಠಾಣೆಯಲ್ಲಿ ವೃದ್ಧ ಧರ್ಮಪಾಲ ಶ್ಯಾನುಭೋಗರು,ಇಸ್ಪೀಟ್ ಆಟವೆಂದರೆ ಲಾಟರಿಯ ತರ.ಇದರ ಗೀಳಿಗೆ ಬಲಿಯಾದ ವ್ಯಕ್ತಿಗಳು ವ್ಯಸನಿಯಾಗಿ ಸರ್ವಸ್ವವನ್ನು ಕಳೆದು ಕೊಂಡವರಿದ್ದಾರೆ ಎನ್ನುತ್ತಾ , ಹೇಳಿದ ಮಾದೇವನ ಕಥೆ ಏನು?. ಅವನ ಮಗಳು ಪುನರ್ವಿಯದು ಆತ್ಯಹತ್ಯೆಯಾ? ಅಥವಾ ಕೊಲೆಯೇ ?.
ಮದ್ಯೆ ಕಥೆಯು ಹೊಸತಿರುವಿನಿಂದ ತೆರೆದುಕೊಳ್ಳುತ್ತಾ ,ಸಮಾಜದ ಅಂಕು -ಡೊಂಕನ್ನು ತೆರೆದಿಡುವ ಪತ್ರಕರ್ತ ಪ್ರೀತಮ್ ನ ಪತ್ತೆದಾರಿಕೆಯಿಂದ , ಕುತೂಹಲಕಾರಿಯಾಗಿ ಸಾಗುತ್ತದೆ.
ಕೋರ್ಟಿನಲ್ಲಿ ಕೆಲಸ ಮಾಡುತ್ತಿದ್ದ ವರ್ಷಾ ಮತ್ತು ಭರತ್ ಪ್ರೀತಿಸುತ್ತಿರುವ ಸುದ್ದಿ ಪ್ರೀತಮ್ ಗೆ ಗೊತ್ತಾಗಿದ್ದು ಹೇಗೆ?..ಅವರ ಮನೆಗೆ ಗೊಬ್ಬರದ ವ್ಯಾಪಾರಿಗಳ ಸೋಗಿನಲ್ಲಿ ಹೋದಾಗ ಅವಳು ಪುನರ್ವಿಯ ತಂಗಿ,ಸತ್ತ ಮಾದೇವನ ಕಿರಿಯ ಮಗಳು ಎಂಬುದು ಅವನಿಗೆ ಅಚ್ಚರಿ ತರುತ್ತದೆ. ಅವರ ಕುಟುಂಬದಲ್ಲಾದ ಅವಘಡಗಳ ಹಿಂದೆ ಯಾರ ಕೈವಾಡವಿದೆ? ಎಂಬ ಸತ್ಯವನ್ನು ಬೇಧಿಸಲು ಹೋದಾಗ ತನ್ನ ಜೀವಕ್ಕೂ ಅಪಾಯವಿರುವುದನ್ನು ಲೆಕ್ಕಿಸದ ಪ್ರೀತಮ್ ತನ್ನ ಪ್ರಾಣ ಸ್ನೇಹಿತ ಹರೀಶನ ವಿಶ್ವಾಸ ದ್ರೋಹದಿಂದ ನೋವನ್ನು ಅನುಭವಿಸುತ್ತಾನೆ.
ರಾಜೇಗೌಡನ ಪಾತ್ರ ರಾಜಕೀಯದ ಬಗ್ಗೆ ಓದುವಾಗ,ಕೆಲವೊಮ್ಮೆ ಸಮಾಜದಲ್ಲಿ ಗಣ್ಯರೆನ್ನಿಸಿಕೊಂಡ ವ್ಯಕ್ತಿಗಳ ರಾಜಕೀಯ ಪ್ರಭಾವ ಹಾಗೂ ಹಣ ಏನೆಲ್ಲಾ ಅಪರಾಧಗಳನ್ನು ಮಾಡಿಸಿ,ಅದನ್ನು ಕಾನೂನಿನ ತೆಕ್ಕೆಗೆ ಬಾರದಂತೆ ನಾಶಪಡಿಸಿ ಬಿಡುತ್ತದೆ ಎನ್ನಿಸಿದರೂ, ಇದು ಇಂದಿನ ವಾಸ್ತವಕ್ಕೆ ಹಿಡಿದ ಕನ್ನಡಿ.
- ಇಲಿಗೆ ಬೆಕ್ಕು ಆಶ್ವಾಸನೆ ನೀಡಿದಂತಿತ್ತು.
- ಬಟ್ಟೆಯಲ್ಲಿ ಒಂದು ದಾರದ ಎಳೆ ತುಂಡಾದರೂ ಇಡೀ ಬಟ್ಟೆಯೇಹರಿದು ಹೋಗುವಂತೆ ಸಂಬಂಧಗಳು ಕೂಡ. ಹೀಗೆ ಇಲ್ಲಿ ಬಳಕೆಯಾದ ಕೆಲವು ವಾಕ್ಯಗಳು ಹಾಗೂ
ಉದಾಹರಣೆಗೆ ” ಏನ್ಲಾ ಪ್ರೀತಮಣ್ಣ ಎತ್ತಕಡೆ ಹೊಂಟಿಯೋ?. “ಎಲ್ಲಾದ್ರೂ ಹೋಗಿ ಸಾಯೋಣ ಅಂತ ಹೊರಟಿವ್ನಿ ಬರ್ತೀಯಾ?. ” ಯಾಕ್ಲಾ ಹಾಳು ಬಾಯಿಂದ ಒಳ್ಳೇದೇ ಬರಕಿಲ್ವಾ? ನೀವೆಲ್ಲಾ ಬದುಕಿ ಬಾಳಬೇಕು ಕನ್ಲಾ ಇಂತಹ ಆಡುನುಡಿಗಳು ಗಮನಸೆಳೆಯುತ್ತದೆ.
ಇಸ್ಪೀಟು ಜೂಜಿಗೆ ಸಿಕ್ಕಿ ಜಮೀನು ಕಳೆದುಕೊಂಡ ಮಾದೇವನ ಕುಟುಂಬದ ದುರ್ಗತಿ, ಆತನ ಮಗಳು ಪುನರ್ವಿಯ ಸಾವು, ಶಾಲೆಗೆ ದಾನವಾಗಿ ಕೊಟ್ಟ ಜಮೀನು ಕಬಳಿಸುವ ಹುನ್ನಾರದ ದೊಡ್ಡ ಜನರು,”ಕೊಕೊನಟ್ ಗಾರ್ಡನ್” ಎಂಬ ಅತಿಥಿ ಗೃಹದ ಹಿನ್ನಲೆ ಇದನ್ನೆಲ್ಲಾ ಬೇಧಿಸುವ ಯತ್ನದಲ್ಲಿ ಪ್ರೀತಮ್ ಜಯಶಾಲಿಯಾದನೆ?. ಶಕುನದ ಹಕ್ಕಿ ನುಡಿದ ಭವಿಷ್ಯವಾಣಿ ನಿಜವಾಯಿತೇ?. ಎಲ್ಲವನ್ನೂ ತಿಳಿಯಲು ಕಾದಂಬರಿಯನ್ನು ಓದಿ.
ನಿಜಕ್ಕೂ ಈ ಕೃತಿಯನ್ನು ಓದಿದ ಮೇಲೆ ಲೇಖಕರಾದ ಶ್ರೀ ಹೇಮಂತ್ ಪಾರೇರಾ ಅವರು ಮುಂಬರುವ ದಿನಗಳಲ್ಲಿ ಇನ್ನಷ್ಟು ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಬೆಳಗಿ , ಬೆಳೆಯಬಲ್ಲರು ಎನ್ನಿಸಿತು. ಶುಭವಾಗಲಿ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ‘ಅಗಸ್ತ್ಯ’ ಕೃತಿ ಪರಿಚಯ
- ‘ಸಾಂದರ್ಭಿಕ’ ಕೃತಿ ಪರಿಚಯ
- ರೇಖಾ ಕಾಖಂಡಕಿ ಅವರು ಕೃತಿ ಪರಿಚಯ
- ಗೌರಿ ಕೃತಿ ಪರಿಚಯ
- ‘ನಿಮ್ಮ ಸಿಮ್ಮ’ ಕೃತಿ ಪರಿಚಯ
- ‘ಪಣಿಯಮ್ಮ’ ಕೃತಿ ಪರಿಚಯ
- ‘ಚಿಗುರಿದ ಕನಸು’ ಕೃತಿ ಪರಿಚಯ
- ‘ಅಶ್ವತ್ಥಾಮೋ ಹತಃ’ ಪರಿಚಯ
- ‘ಹೂ ದಂಡಿ’ ಕೃತಿ ಪರಿಚಯ
- ‘ಬೂದಿ ಮುಚ್ಚಿದ ಕೆಂಡ’ ಕೃತಿ ಪರಿಚಯ
- ‘ಇಲಿಯಡ್’ ಕೃತಿ ಪರಿಚಯ
- ‘ಅಲೆಯೊಳಗಿನ ಮೌನ’ ಕೃತಿ ಪರಿಚಯ
- ‘ಹೂಲಿ ಶೇಖರರ ನಾಟಕಗಳು’ ಕೃತಿ ಪರಿಚಯ
- ‘ನನ್ನಕ್ಕ ನಿಲೂಫರ್’ ಕೃತಿ ಪರಿಚಯ
- ‘ಅರಣ್ಯಕಾಂಡ’ ಕೃತಿ ಪರಿಚಯ
- ‘ವಿಕ್ರಮಾರ್ಜುನ ವಿಜಯ’ ಕೃತಿ ಪರಿಚಯ
- ‘ಸುನೀತಗಳು’ ಕೃತಿ ಪರಿಚಯ
- ‘ಮೈ- ಮನಸ್ಸುಗಳ ಸುಳಿಯಲ್ಲಿ ಸಖಿ!’ ಕೃತಿ ಪರಿಚಯ
- ‘ಪದ್ದಣ ಮನೋರಮೆ’ ಕೃತಿ ಪರಿಚಯ
- ‘ಬ್ರಹ್ಮರಾಕ್ಷಸ’ ಕೃತಿ ಪರಿಚಯ
- ‘ಬದುಕ ಭಿತ್ತಿಯ ಚಿತ್ರಗಳು’ ಕೃತಿ ಪರಿಚಯ
- ‘ಅಮ್ರಪಾಲಿ’ ಪುಸ್ತಕ ಪರಿಚಯ
- ‘ಇದು ಕತೆಯಲ್ಲ ಜೀವನ’ ಕೃತಿ ಪರಿಚಯ
- ‘ಕೇದಗೆ ಪುಷ್ಪ’ ಕೃತಿ ಪರಿಚಯ
- ‘ಬಂಕಿಮಚಂದ್ರರ ಶ್ರೇಷ್ಠ ಕತೆಗಳು’ ಕೃತಿ ಪರಿಚಯ
- ‘ಸೀಳುದಾರಿ’ ಪುಸ್ತಕ ಪರಿಚಯ
- ‘ಲವ್ ಟುಡೆ’ ಕೃತಿ ಪರಿಚಯ
- ‘ಕ್ಲಾಸ್ ಟೀಚರ್’ ಕೃತಿ ಪರಿಚಯ
- ‘ಒಂದು ಎಂಟಾಣೆಯ ಕಥೆ’ ಕೃತಿ ಪರಿಚಯ
- ‘ನಿಮಗ ತಿಳಿಯೋದಿಲ್ಲ ಬಿಡ್ರಿ’ ಕೃತಿ ಪರಿಚಯ
- ‘ಮಾಸದ ವಿಜಯ’ ಕೃತಿಯ ಪರಿಚಯ
- ‘ಅರಳಿಮರ’ ಪುಸ್ತಕ ಪರಿಚಯ
- ‘ಆಸೆಯ ಅಲೆಗಳ ಮೇಲೆ’ ಕೃತಿ ಪರಿಚಯ
- ‘ಬರ್ಬರಿಕ’ ಕೃತಿ ಪರಿಚಯ
- ‘ನನ್ನ ದನಿಗೆ ನಿನ್ನ ದನಿಯು’ ಕೃತಿ ಪರಿಚಯ
- ‘ಅಂತರಂಗ’ ಕೃತಿ ಪರಿಚಯ
- ‘ಕಾಡುಬಳ್ಳಿ’ ಕೃತಿ ಪರಿಚಯ
- ‘ನಂಟು’ ಪುಸ್ತಕ ಪರಿಚಯ
- ಮಾಲತಿ ರಾಮಕೃಷ್ಣ ಭಟ್ – ಕಿರಿಯ ಸಹಾಯಕರು, ಲೋಕೋಪಯೋಗಿ ಇಲಾಖೆ ಉಪವಿಭಾಗ, ಸಿದ್ದಾಪುರ.
