ಜನಪ್ರಿಯ ಲೇಖಕಿ ವಸುಮತಿ ಉಡುಪರ ಅವರ ‘ಪಾತಾಳ ಗರಡಿ’ ಕೃತಿಯಲ್ಲಿ ೧೪ ಸಣ್ಣ ಕಥೆಗಳಿದ್ದು, ಮಾಲತಿ ರಾಮಕೃಷ್ಣ ಭಟ್ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಪೂರ್ತಿಯಾಗಿ ಓದಿ…
ಕೃತಿ : ಪಾತಾಳ ಗರಡಿ
ಲೇಖಕರು: ವಸುಮತಿ ಉಡುಪ
ಪ್ರಕಾಶಕರು : ವಿಜಯ ಸಾಹಿತ್ಯ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ : ೨೦೦೭.
ಪುಟಗಳು:೧೬೮
ಬೆಲೆ:೯೫.
ಜನಪ್ರಿಯ ಲೇಖಕಿ ವಸುಮತಿ ಉಡುಪರ ಈ ಕಥಾ ಸಂಕಲನದಲ್ಲಿ ೧೪ ಸಣ್ಣ ಕಥೆಗಳಿವೆ. ಬಹುತೇಕ ಕಥೆಗಳು ವಾರಪತ್ರಿಕೆಗಳಲ್ಲಿ ಪ್ರಕಟ ವಾದಂತವು. ಒಂದು ಅಪೂರ್ಣ ಕಥೆ. ಇದು ಕಥೆಯ ಶೀರ್ಷಿಕೆ. ಕೇಶವ ಮತ್ತು ಕಲಾವತಿಯರದು ಹತ್ತು ವರ್ಷಗಳ ದಾಂಪತ್ಯ. ಅವರ ಕಣ್ಮಣಿಯಾದ ನಾಲ್ಕು ವರ್ಷದ ಏಕೈಕ ಮಗ ಅವಿನಾಶ ರಸ್ತೆಯಲ್ಲಿ ಬಿದ್ದ ಬೆಂಕಿ ಪೆಟ್ಟಿಗೆಹೆಕ್ಕಲು ಹೋಗಿ ಕಾರಿನಡಿಗೆ ಸಿಕ್ಕಿ ಆಕಸ್ಮಿಕ ಮರಣವಪ್ಪಿ ಹೆತ್ತವರನ್ನು ದುಃಖದ ಕಡಲಿಗೆ ನೂಕಿದ್ದ.
ಕೇಶವನಂತೂ ಯಾರಿಗಾಗಿ ದುಡಿಯಬೇಕು ? ಎಂದು ನಿರಾಸೆಯಿಂದ ಒದ್ದಾಡಿದರೆ, ಕಲಾವತಿಯ ಪಾಡಂತೂ ಹೃದಯ ವಿದ್ರಾವಕ. “ಈ ಬದುಕು ಪೂರ್ವ ನಿಶ್ಚಿತ ಎನ್ನುವುದಾದರೆ, ಮಾನವ ಅದಕ್ಕಾಗಿ ಹೋರಾಟ ನಡೆಸುವುದರಲ್ಲಿ ಅರ್ಥವೇನಿದೆ? ಎನಿಸಿದರೂ… ಹೀಗೇ ಸುಮ್ಮನೆ ಉಳಿದರೆ ಸೇವೆದು ಹೋಗುತ್ತಿರುವ ಕಲಾವತಿಯನ್ನು ತಾನು ಹೆಚ್ಚುದಿನ ಉಳಿಸಿ ಕೊಳ್ಳಲಾರೆ ಎನ್ನುವ ವಾಸ್ತವ ಕೇಶವನ ಧೃತಿಗೆಡಿಸು ತ್ತದೆ.ಇದೀಗ ಹಲವು ದಿನಗಳ ಚಿಂತನ ಮಂಥನ ನಡೆಸಿದ ಕೇಶವನೆದಿರು ಹೊಸದಾರಿಯೊಂದು ಗೋಚರಿಸಿದೆ. ಭವಿಷ್ಯ ಯಾವತ್ತೂ ಬರಡಲ್ಲ. ಮುನ್ನುಗ್ಗ ಬಲ್ಲವರನ್ನು ಅದು ತೆರೆದ ತೋಳು ಗಳಿಂದ ಸ್ವಾಗತಿಸಿ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ.ಎನ್ನಿಸಿದಾಗ ಕಲಾವತಿಗೆ ಅವನು ತಿಳಿಸಿ ಹೇಳಿದ್ದಾದರೂ ಏನು?… ಓದಿ…

- ಹಣೆಬರಹ. ಚೆನ್ನಾಗಿ ಓದುವ ಕಿರಿಯ ಮಗ ಗೋಪಿಯ ಬಗ್ಗೆ ಚಿಂತೆ ಇಲ್ಲ. ಅಷ್ಟೇನೂ ಬುದ್ಧಿವಂತನಲ್ಲದ ಹಿರಿಯ ಮಗ ಗೋವಿಂದಂದೇ ತಮಗೆ ಚಿಂತೆ ಎಂದು ಊರೆಲ್ಲಾ ಸಾರುತ್ತಿದ್ದ ರಾಮಣ್ಣನ ಇಬ್ಬರು ಗಂಡುಮಕ್ಕಳಲ್ಲಿ ಕೊನೆಗೂ ಅದೃಷ್ಟದಾಟದಲ್ಲಿ ಗೆದ್ದವರು ಯಾರು? ಈಗ ರಾಮಣ್ಣ ಏನು ಹೇಳುತ್ತಾರೆ?..
• ಕಾಲೇಜು ದಿನಗಳಲ್ಲೇ ಕತೆ ಕವನ ಬರೆಯುತ್ತಾ ಹಾಯಾಗಿದ್ದ ಯುವತಿಯೊಬ್ಬಳು ಮನೆಯವರು ನೋಡಿದ ಹುಡುಗನನ್ನು ಮದುವೆಯಾಗಿ ತನ್ನೆಲ್ಲಾ ಕನಸುಗಳನ್ನು ಮರೆತು ಅಲ್ಲಿನಂತೇ ಹೊಂದಿಕೊಂಡು ಬಾಳುವ ಕತೆ “ಕಳೆದು ಹೋದವಳು.”
ಮದುವೆ ಸಮಸ್ಯೆಗಳ ಅಂತ್ಯವಲ್ಲ,ಆರಂಭ ಹುಡುಗೀ ಖುಷಿ ಪಡದಿರು ಪರೀಕ್ಷೆ ಇರುವುದು ಮುಂದೆ… ಮದುಮಗಳಿಗೆ ಎಂಬ ತಲೆಬರಹದಡಿ ಹಿಂದೆ ತಾನು ಬರೆದಿದ್ದ ಹನಿಗವನವನ್ನು ನೆನಪಿಸಿಕೊಂಡು , ತನ್ನಂತೆ ಇರುವ ಬಹಳ ಮಂದಿ ಹೆಣ್ಣುಗಳ ಬಗ್ಗೆ ಹೇಳುವ ತನ್ನ ಸೋಲು… ಏನೂ ಇಲ್ಲದೆಯೂ ಬಹಳಷ್ಟನ್ನು ಹೇಳುತ್ತದೆ.
- ಮನೆಯಲ್ಲಿದ್ದುಕೊಂಡೇ ಸುಳಿವೇ ನೀಡದೇ, ವಿಧವೆಯಾದ ನಾದಿನಿಯ ನಡತೆಯ ಬಗ್ಗೆ ಸಂದೇಹ ಪಡುತ್ತಾ ಗಂಡನಲ್ಲಿ ಚಾಡಿ ಹೇಳುತ್ತಾ,ಆರು ವರ್ಷ ಸಂಸಾರ ಮಾಡಿ ಕೊನೆಗೆ ಯಾರೊಂದಿಗೋ ಓಡಿಹೋದ ಪತ್ನಿಯ ಬಗೆಗಿನ* ಅನ್ಯ ಎಂಬ ಕಥೆಯನ್ನು ಲೇಖಕಿ ನಾಜೂಕಾಗಿ ನಿರೂಪಿಸಿದ ರೀತಿ ಚೆನ್ನಾಗಿದೆ.
-
ಪಾತಾಳ ಗರಡಿ ಅಣ್ಣನ ೫ ವರ್ಷದ ಮಗಳನ್ನು ಸ್ವಂತ ಮಗಳಂತೆ ಪ್ರೀತಿಸುತ್ತಾ ಹಚ್ಚಿಕೊಂಡ ೩೫ ರ ಭಾಮಾ ಕಾರಣಾಂತರಗಳಿಂದ ಇನ್ನೂ ಅವಿವಾಹಿತೆಯಾಗಿ ಉಳಿದಿದ್ದಳು. ಒಮ್ಮೆ ದೇವಸ್ಥಾನಕ್ಕೆ ಹೋದಾಗ ತಪ್ಪಿಸಿಕೊಂಡ ಮಗು ರೇವತಿಯನ್ನು ಯಾರೋ ತಂದು ಇವಳ ಬಳಿ ಬಿಟ್ಟು ಸದ್ಯ ನಿಮ್ಮಮಗಳು ಸಿಕ್ಕಳಲ್ಲ… ಅಂದಾಗಿನಿಂದ ಭಾಮಾಳಿಗೂ ತನ್ನದೇ ಆದ ಮಗುವೊಂದು ಬೇಕೆಂಬ ಬಯಕೆ ಮೂಡಿತ್ತು… ನಂತರ ನಡೆದಿದ್ದೇನು?.
• ರಂಗಣ್ಣನ ಹೆಂಡತಿ ಸುಭದ್ರೆ ಮೊದಲಿನಿಂದಲೂ ಪ್ರತಿ ಸಣ್ಣ ಸಂಗತಿಯನ್ನೂ ತನ್ನ ಕಲ್ಪನೆಯ ಭೂತಗನ್ನಡಿಯೊಳಗಿನಿಂದಲೇ ನೋಡಿ ಕಿರಿ ಕಿರಿ ಮಾಡುವ ಸ್ವಭಾವದವಳು. ಮಕ್ಕಳೆಲ್ಲ ಉದ್ಯೋಗ ಹಿಡಿದು ದೂರದ ನಗರಗಳಲ್ಲಿ ನೆಲೆಸಿ ಪತಿಯೂ ನಿವೃತ್ತಿ ಪಡೆದ ಮೇಲೆ ಅವಳು ಇನ್ನಷ್ಟು ಕೊರಗುತ್ತಾ ಬದುಕಿನಲ್ಲಿ ನಿರಾಸಕ್ತಿ ಬೆಳೆಸಿ ಕೊಂಡಳು. ದಿನೇ ದಿನೇ ಒಗಟಾಗುತ್ತಾ, ಸ್ವಸ್ಥವಾಗಿರಲು ಸಿದ್ಧವಿಲ್ಲದ ಅವಳ ಅಸ್ವಸ್ಥ ಮನಸ್ಸನ್ನು ಸರಿಪಡಿಸಲು,ಮುದುಡಿ ಹೋಗಿದ್ದ ಅವಳ ಜೀವನಾಸಕ್ತಿ ಯನ್ನು ಪುನಶ್ಚೇತನ ಗೊಳಿಸಲು ರಂಗಣ್ಣ ಮಾಡಿದ ನಿರ್ಧಾರವಾದರೂ ಏನೆಂಬುದನ್ನು *ಹೀಗೂ ಹಲವರು ಎನ್ನುವ ಕಥೆಯಲ್ಲಿ ಲೇಖಕಿ ಬಹಳ ವಾಸ್ತವವಾಗೆನ್ನುವಂತೆ ಮೂಡಿಸಿದ್ದಾರೆ.

ಇಲ್ಲಿನ ಎಲ್ಲ ಕಥೆಗಳೂ ಮೆಚ್ಚುಗೆಯಾಗುವಂತಿವೆ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ‘ಅಗಸ್ತ್ಯ’ ಕೃತಿ ಪರಿಚಯ
- ‘ಸಾಂದರ್ಭಿಕ’ ಕೃತಿ ಪರಿಚಯ
- ರೇಖಾ ಕಾಖಂಡಕಿ ಅವರು ಕೃತಿ ಪರಿಚಯ
- ಗೌರಿ ಕೃತಿ ಪರಿಚಯ
- ‘ನಿಮ್ಮ ಸಿಮ್ಮ’ ಕೃತಿ ಪರಿಚಯ
- ‘ಪಣಿಯಮ್ಮ’ ಕೃತಿ ಪರಿಚಯ
- ‘ಚಿಗುರಿದ ಕನಸು’ ಕೃತಿ ಪರಿಚಯ
- ‘ಅಶ್ವತ್ಥಾಮೋ ಹತಃ’ ಪರಿಚಯ
- ‘ಹೂ ದಂಡಿ’ ಕೃತಿ ಪರಿಚಯ
- ‘ಬೂದಿ ಮುಚ್ಚಿದ ಕೆಂಡ’ ಕೃತಿ ಪರಿಚಯ
- ‘ಇಲಿಯಡ್’ ಕೃತಿ ಪರಿಚಯ
- ‘ಅಲೆಯೊಳಗಿನ ಮೌನ’ ಕೃತಿ ಪರಿಚಯ
- ‘ಹೂಲಿ ಶೇಖರರ ನಾಟಕಗಳು’ ಕೃತಿ ಪರಿಚಯ
- ‘ನನ್ನಕ್ಕ ನಿಲೂಫರ್’ ಕೃತಿ ಪರಿಚಯ
- ‘ಅರಣ್ಯಕಾಂಡ’ ಕೃತಿ ಪರಿಚಯ
- ‘ವಿಕ್ರಮಾರ್ಜುನ ವಿಜಯ’ ಕೃತಿ ಪರಿಚಯ
- ‘ಸುನೀತಗಳು’ ಕೃತಿ ಪರಿಚಯ
- ‘ಮೈ- ಮನಸ್ಸುಗಳ ಸುಳಿಯಲ್ಲಿ ಸಖಿ!’ ಕೃತಿ ಪರಿಚಯ
- ‘ಪದ್ದಣ ಮನೋರಮೆ’ ಕೃತಿ ಪರಿಚಯ
- ‘ಬ್ರಹ್ಮರಾಕ್ಷಸ’ ಕೃತಿ ಪರಿಚಯ
- ‘ಬದುಕ ಭಿತ್ತಿಯ ಚಿತ್ರಗಳು’ ಕೃತಿ ಪರಿಚಯ
- ‘ಅಮ್ರಪಾಲಿ’ ಪುಸ್ತಕ ಪರಿಚಯ
- ‘ಇದು ಕತೆಯಲ್ಲ ಜೀವನ’ ಕೃತಿ ಪರಿಚಯ
- ‘ಕೇದಗೆ ಪುಷ್ಪ’ ಕೃತಿ ಪರಿಚಯ
- ‘ಬಂಕಿಮಚಂದ್ರರ ಶ್ರೇಷ್ಠ ಕತೆಗಳು’ ಕೃತಿ ಪರಿಚಯ
- ‘ಸೀಳುದಾರಿ’ ಪುಸ್ತಕ ಪರಿಚಯ
- ‘ಲವ್ ಟುಡೆ’ ಕೃತಿ ಪರಿಚಯ
- ‘ಕ್ಲಾಸ್ ಟೀಚರ್’ ಕೃತಿ ಪರಿಚಯ
- ‘ಒಂದು ಎಂಟಾಣೆಯ ಕಥೆ’ ಕೃತಿ ಪರಿಚಯ
- ‘ನಿಮಗ ತಿಳಿಯೋದಿಲ್ಲ ಬಿಡ್ರಿ’ ಕೃತಿ ಪರಿಚಯ
- ‘ಮಾಸದ ವಿಜಯ’ ಕೃತಿಯ ಪರಿಚಯ
- ‘ಅರಳಿಮರ’ ಪುಸ್ತಕ ಪರಿಚಯ
- ‘ಆಸೆಯ ಅಲೆಗಳ ಮೇಲೆ’ ಕೃತಿ ಪರಿಚಯ
- ‘ಬರ್ಬರಿಕ’ ಕೃತಿ ಪರಿಚಯ
- ‘ನನ್ನ ದನಿಗೆ ನಿನ್ನ ದನಿಯು’ ಕೃತಿ ಪರಿಚಯ
- ‘ಅಂತರಂಗ’ ಕೃತಿ ಪರಿಚಯ
- ‘ಕಾಡುಬಳ್ಳಿ’ ಕೃತಿ ಪರಿಚಯ
- ‘ನಂಟು’ ಪುಸ್ತಕ ಪರಿಚಯ
- ‘ಶಕುನದ ಹಕ್ಕಿ’ ಕೃತಿ ಪರಿಚಯ
- ‘ಪರ್ಷಿಯಾ ಪರಿಮಳ’ ಕೃತಿ ಪರಿಚಯ
- ‘ತೀರದ ತುಡಿತ’ ಕೃತಿ ಪರಿಚಯ
- ‘ಅಪೂರ್ವ ಕುಸುಮಗಳು’ ಕೃತಿ ಪರಿಚಯ
- ‘ಹುಲಿ ವೇಷ’ ಕೃತಿ ಪರಿಚಯ
- ‘ಆನೆ ಸಾಕಲು ಹೊರಟವಳು’ ಕೃತಿ ಪರಿಚಯ
- ‘ಅಂತರಂಗದ ರಂಗದ ಮೇಲೆ’ ಕೃತಿ ಪರಿಚಯ
- ‘ಪ್ರತಿಜ್ಞೆ’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್ – ಕಿರಿಯ ಸಹಾಯಕರು, ಲೋಕೋಪಯೋಗಿ ಇಲಾಖೆ ಉಪವಿಭಾಗ, ಸಿದ್ದಾಪುರ.
