ಲೇಖಕಿ ಉಷಾ ನರಸಿಂಹನ್ ಅವರ ‘ಪರ್ಷಿಯಾ ಪರಿಮಳ’ ಐತಿಹಾಸಿಕ ಕಾದಂಬರಿಯ ಕುರಿತು ಲೇಖಕರಾದ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಪರ್ಷಿಯಾ ಪರಿಮಳ
ಲೇಖಕರು: ಉಷಾ ನರಸಿಂಹನ್
ಅನನ್ಯ ಪ್ರಕಾಶನ ಮೈಸೂರು
ಮುದ್ರಣದ ವರ್ಷ: ೨೦೧೬
ಪುಟಗಳು: ೨೫೬.
ಬೆಲೆ: ರೂ. ೨೦೦
ತಮ್ಮ ಕಥೆ ಕಾದಂಬರಿಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರ್ತಿಸಿ ಕೊಂಡಿರುವ ಲೇಖಕಿ ಉಷಾ ನರಸಿಂಹನ್ ಅವರ ಈ ಐತಿಹಾಸಿಕ ಕಾದಂಬರಿಯು ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ೧೭ ನೆಯ ಶತಮಾನದ ಮೊಘಲರ ರಾಜ ಜಹಾಂಗೀರ್ ನ ಸುಲ್ತಾನಳಾಗಿದ್ದ ನೂರ್ ಜಹಾನ್ ಳನ್ನು ಕೇಂದ್ರವಾಗಿಟ್ಟುಕೊಂಡು, ಆಕೆಯ ಜನನದಿಂದ ಮರಣದವರೆಗೂ ಪ್ರಮುಖ ಸಂಗತಿಗಳು ಕತೆಯಲ್ಲಿ ಅನಾವರಣಗೊಂಡಿದೆ.
ಅರಮನೆಯ ರಾಜಾಶ್ರಯದಲ್ಲಿ ತನಗೆ ಸ್ಥಾನ ಸಿಗಲಿಲ್ಲವೆಂದು ಪರ್ಷಿಯಾ ದೇಶ ಬಿಟ್ಟು ಮಲ್ಲಿಕ್ ಮಸೂದ್ ಎಂಬ ವರ್ತಕನ ಜೊತೆಗೂಡಿ ಹಿಂದೂಸ್ಥಾನಕ್ಕೆ ವಲಸೆ ಹೊರಟಿದ್ದ ಮಿಯಾ ಬೇಗ್.ಆಗ ಆತನ ಹೆಂಡತಿ ಅಸ್ಮತ್ ೫ ತಿಂಗಳ ಗರ್ಭಿಣಿ. ಜೊತೆಗೆ ಮೂರು ಚಿಕ್ಕ ಮಕ್ಕಳು. ಬಿಸಿಲಲ್ಲಿ ಒಂಟೆ ಮತ್ತು ಕತ್ತೆಗಳ ಬೆನ್ನ ಮೇಲೆ ಕಾದ ಮರಳಿನ ಹಾದಿ ಕ್ರಮಿಸುವ ಕಷ್ಟ ಬೇಡವೆಂದು ಬೇಗ್ ನ ಅತ್ತೆ -ಮಾವ ಅವರ ವಲಸೆಯನ್ನು ತಡೆಯಲು ಪ್ರಯತ್ನಿಸಿ ಸೋತಿದ್ದರು. ಕೊನೆಗೆ ವಿಧಿಯಿಲ್ಲದೆ ಮಗಳಿಗೆ ಒಡವೆಗಳ ಉಡುಗೊರೆ ಕೊಟ್ಟು ಆಶೀರ್ವದಿಸಿ, ಬೀಳ್ಕೊಟ್ಟಿದ್ದರು. ಅವರು ಊರು ಬಿಡುವ ದೃಶ್ಯವನ್ನು ಲೇಖಕಿ ತುಂಬಾ ನೈಜವಾಗಿ ಇಲ್ಲಿ ಮೂಡಿಸಿದ್ದಾರೆ.

ಮರುಭೂಮಿಯ ಮಾರ್ಗ ಮಧ್ಯೆ ಡಕಾಯಿತರ ಆಕ್ರಮಣ, ಅಲ್ಲಲ್ಲಿ ಡೇರೆ ಹೂಡಿ ಅಡುಗೆ, ವಿಶ್ರಾಂತಿ. ಮತ್ತೆ ಮುಂದೆ ಸಾಗುವ ಪ್ರಯಾಣ, ಪ್ರತಿಕೂಲ ಪರಿಸ್ಥಿತಿಯಲ್ಲಿ ಅಸ್ಮತ್ ಳ ಹೆರಿಗೆ, ಶಾಹಿನಬಿ ಎಂಬ ಹೆಂಗಸು ಅವಳಿಗೆ ಸೂಲಗಿತ್ತಿಯಾಗಿ ಸಹಾಯ ಮಾಡುವುದು, ಶುಭ್ರಕಾಂತಿಯ ಆ ಹೆಣ್ಣು ಮಗುವಿಗೆ ತಂದೆ ಬೇಗ್ ಸ್ವರ್ಗದ ನದಿಯ “ಮೆಹರುನ್ನಿಸ್ ” ಎಂಬ ಹೆಸರಿಡುವುದು, ಮಗುವಿಗೆ ನಾಲ್ಕು ತಿಂಗಳು ತುಂಬುವಷ್ಟರಲ್ಲಿ ಅವರು ಹಿಂದುಸ್ಥಾನಕ್ಕೆ ತಲುಪಿ, ಆಗ್ರಾದ ಅಕ್ಬರ್ ಬಾದಶಹನ ಆಸ್ಥಾನದಲ್ಲಿ ಕೋಶಾಧಿಕಾರಿಯಾಗಿ ಕೆಲಸ ಗಿಟ್ಟಿಸಿದ್ದು ಎಲ್ಲವೂ ಅತ್ಯಂತ ಮಾರ್ಮಿಕವಾಗಿದೆ.
ಅದುವರೆಗೂ ಮರಳುಗಾಡಿನಲ್ಲಿ ಜೀವಿಸಿದವರಿಗೆ, ಹಿಂದೂಸ್ಥಾನದಲ್ಲಿ ಮೊಟ್ಟ ಮೊದಲಿಗೆ ಕಂಡ ಹಸಿರು ಪರಿಸರದ ಸೊಬಗು,ಇಲ್ಲಿನ ಜನರ ಸ್ನೇಹಪರತೆ, ಸರ್ವಧರ್ಮ ಸಮನ್ವಯತೆ, ಇವೆಲ್ಲಾ ಸೂಕ್ಮವಾಗಿ ಗಮನಿಸಿದಾಗ, ಓದುಗನಲ್ಲೂ ದೇಶಭಕ್ತಿ, ಹೆಮ್ಮೆ, ಭಾವೋತ್ಕಟತೆ ಸ್ಫುರಿಸುತ್ತದೆ.
ಪುಟ್ಟ ಗುಲಾಬಿ ತನ್ನ ದಳಗಳನ್ನು ಅರಳಿಸುವಂತೆ ಬೆಳೆಯುತ್ತಿದ್ದ ಮೆಹರುನ್ನಿಸ್ ಮುಂದೆ ಸಾಮ್ರಾಜ್ಞಿಯಾಗುತ್ತಾಳೆಂದು ಫಕೀರನೊಬ್ಬ ಭವಿಷ್ಯ ನುಡಿದಿದ್ದ!! . ಬಾಲ್ಯದಲ್ಲೇ ಮನಸ್ಸಿನ ವಿಕಸನದ ಹಾದಿಯೊಂದು ಅವಳ ಬದುಕನ್ನು ತುಂಬ ತೊಡಗಿತ್ತು. ರಾಜಕುಮಾರರಿಗೆ ಸುಗಂಧದ್ರವ್ಯಗಳ ಶೀಷೆಗಳನ್ನು ಕಾಣಿಕೆ ಕೊಡಲು ತಾಯಿಗೆ ಸಲಹೆ ನೀಡುವ ಮೆಹರುನ್ನಿಸಾಳು ಅಕ್ಬರನ ಮಗ ಸಲೀಂನ ಕಣ್ಣಿಗೆ ಬಿದ್ದಿದ್ದು, ಅವರಿಬ್ಬರಲ್ಲಿ ಪ್ರೇಮ ಅಂಕುರಿಸಿದಾಗ ಆಕೆಗೆ ೧೬ ವರ್ಷ.
ಆದರೆ ಸುಂದರ ಪರ್ಷಿಯನ್ ಹೆಣ್ಣೊಬ್ಬಳು ಸವತಿಯಾಗಿ ತಮ್ಮೊಡನೆ ಜನಾನಾದಲ್ಲಿರುವುದನ್ನು ಸಹಿಸದ ಹಿರಿಯ ರಾಣಿ ಮನ್ ಬಾಯಿ ಅಕ್ಬರ ಮಹಾರಾಜನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ದೂರಿ ,ಅವಳನ್ನು ಮೊಘಲ್ ಸೇನಾಧಿಕಾರಿ ನಿಷ್ಠಾವಂತ ಅಲಿಕುಲೀ ಇಸ್ತಜ್ಲುವಿನೊಂದಿಗೆ ಮದುವೆ ಮಾಡಿಸುವಲ್ಲಿ ಯಶಸ್ವಿಯಾಗುತ್ತಾಳೆ.
ತನ್ನ ಪ್ರೇಮವನ್ನು ಬದಿಗೊತ್ತಿ, ರಾಜಾಜ್ಞೆಗೆ ತಲೆಬಾಗಿ ಹೆತ್ತವರಾಸೆಯಂತೆ ಇಸ್ತಜ್ಲುವಿನೊಂದಿಗೆ ವಿವಾಹವಾಗಿ, ಲಾಡ್ಲಿ ಎಂಬ ಹೆಣ್ಣು ಮಗುವಿನ ತಾಯಿಯಾಗಿ ಗಂಡನೊಂದಿಗೆ ಬಾಳುತ್ತಿದ್ದರೂ,ಮೆಹರುನ್ನಿಸಳ ಸಹಜ ಜಾಜ್ವಲ್ಯಮಾನದ ಚೆಲುವಿಕೆಯ ಜೊತೆಗೇ ನೆನಪು ತರುವ ಅವಳೇ ತಯಾರಿಸಿದ ಅತ್ತರು, ರಾಣಿಯರ ದಿರಿಸಿನ ಮೇಲೆ ಆಕೆ ನೇಯ್ದ ನಾವೀನ್ಯದ ಕಸೂತಿ, ಬರೆದ ಶಾಯರಿಗಳು, ಆಕೆಯ ವಾಕ್ ಚಾತುರ್ಯ ರಸಿಕ ಜಹಾಂಗೀರ್ ( ಸಲೀಂ)ನನ್ನು ಸೆಳೆಯುತ್ತಿದ್ದವು.

ಮುಂದೆ ರಾಜ ಅವಳ ಮೇಲಿನ ಮೋಹದಿಂದಲೇ ಅವಳ ಪತಿಯ ಅಂತ್ಯಗಾಣಿಸಿ ಮೂರು ವರ್ಷದ ನಂತರ ಅವಳ ೩೨ ನೆಯ ವಯಸ್ಸಿನಲ್ಲಿ ಅವಳನ್ನು ಮರುವಿವಾಹ ಮಾಡಿಕೊಂಡಿದ್ದ.
ಬಾದಶಹರೆಂದರೆ ಯಾವ ಮಾಲೆ ಬೇಕಾದರೂ ಧರಿಸಬಹುದು.ಅದು ಮಾಲೆಯ ಪುಣ್ಯ. ನಿನ್ನಂತಹ ರತ್ನಹಾರವನ್ನು ಬಿಚ್ಚಲು ಮನಸ್ಸೇ ಬರುವುದಿಲ್ಲ ಎನ್ನುವ ರಾಜನ ಮನಸ್ಸಿಗೆ ಧ್ವನಿಯಾದ ಮೆಹರುನ್ನಿಸ ಳಿಗೆ ಆತನಿಟ್ಟ ಹೊಸ ಹೆಸರು’ ನೂರ್ ಜಹಾನ್.’ ಅಂದರೆ ಜಗತ್ತಿನ ಬೆಳಕು.’ ! ‘ಜಹಾಂಗೀರನೆನ್ನುವ ಜಾಹಂಗೀರನು ಮಯಣವಾಗಿ ಅವಳ ಪ್ರೇಮದ ಕಾವಿನಲ್ಲಿ ಕರಗಿ ಹೋದನು. ಎನ್ನುವ ಲೇಖಕಿಯ ಒಂದೇ ವಾಕ್ಯವೇ ಸಾಕು ಅವರಿಬ್ಬರ ಪ್ರೇಮವನ್ನು ಬಣ್ಣಿಸಲು.
ಈ ಬಿರುದನ್ನು ಅನ್ವರ್ಥಗೊಳಿಸಿದ ಕಲಾಚತುರೆಯಾದ ಅವಳು ಆಡಳಿತ, ನ್ಯಾಯ ನಿರ್ಣಯ,ರಾಜ್ಯದ ವಾಣಿಜ್ಯ ವಹಿವಾಟು ಮುಂತಾದವುಗಳಲ್ಲಿ ಸಕ್ರೀಯ ಪಾತ್ರ ವಹಿಸಿ, ಸ್ತ್ರೀ ಪರ ಕಾಳಜಿ,ಅನಾಥ ಅಬಲೆಯರ ರಕ್ಷಣೆಯಂತ ಮಹತ್ಕಾರ್ಯಗಳಲ್ಲಿ ಭಾಗಿಯಾಗಿದ್ದು ವಿಶೇಷ. !! ಸ್ತ್ರೀಯರಿಗೆ ಹೆಚ್ಚಿನ ನಿರ್ಭಂಧಗಳಿದ್ದ ಆ ಕಾಲ ಧರ್ಮದಲ್ಲಿ ಸ್ವಾತಂತ್ರ್ಯದ ಮುಕ್ತತೆ, ಆಕೆಯ ಸಾಧನೆಗಳು, ಅತ್ತರು ತಯಾರಿಕೆಯ ನೈಪುಣ್ಯತೆ, ಆಕೆಯ ಕವಿಮನದ ಶಾಯರಿ, ದೊರೆಯ ಬಗ್ಗೆ ಇರುವ ಅಪರಿಮಿತ ಪ್ರೇಮ,ಇವೆಲ್ಲವನ್ನೂ ಅತ್ಯಂತ ಸೊಗಸಾಗಿ ಲೇಖಕಿ ನಿರೂಪಿಸಿದ್ದಾರೆ.
೩೮ ವರ್ಷದ ರಾಣಿಗೆ ದೊರೆಯಿಂದ ಸಂತಾನ ದೊರೆಯದಾದಾಗ , ತನ್ನ ಅಕ್ಕ ಜಹಾನಾಳ ಮಗ ಸೈಫ್ ಅಲ್ಲಾನನ್ನು ದತ್ತು ತೆಗೆದುಕೊಳ್ಳುವ ನೂರ್ ಜಹಾನ್ ಳ ಯಾವ ಮಾತಿಗೆ ಬಾದಶಹ ಕಣ್ಣೀರಾದ?… ಕಾನೂನಿನ ವಿಷಯದಲ್ಲಿ ನಿಷ್ಠುರನಾದ ಜಹಾಂಗೀರ್ ಸೈಫ್ ನನ್ನು ಆನೆಯಿಂದ ತುಳಿಸಿದ್ದೇಕೆ?..
ಪತಿಯ ಅಫೀಮು ಮತ್ತು ಮಧ್ಯ ಸೇವನೆ ಹೆಚ್ಚಾದಾಗ,ರಾಣಿ ಆಡಳಿತ ಸೂತ್ರವನ್ನು ಹಿಡಿದು ಹಸ್ತಕ್ಷೇಪ ಮಾಡುವಳೆಂಬ ಅಸಮಾಧಾನದ ಹೊಗೆಯನ್ನು ಮೊಘಲರ ಪಾಳೆಯದಲ್ಲಿ ಹಾಕಿದವರು ಯಾರು?..
ಅದುವರೆಗಿನ ರಾಜಕೀಯದ ಸಮಪಾಕದ ಅಡುಗೆಯೂ ಸೀದ ವಾಸನೆ ಬಂದಿದ್ದೇಕೆ?. ರಾಜನ ಸ್ನೇಹಿತ ಮೊಹೋಬತ್ ನ ಪಾತ್ರವೂ ಇಲ್ಲಿ ಪ್ರಮುಖವಾಗಿ ಮೂಡಿದೆ. ತಂದೆ ಮಕ್ಕಳಲ್ಲಿಯೇ ದ್ವೇಷ ಹೊತ್ತಿಕೊಂಡ ಇದರ ಪರಿಣಾಮವೇನು?..ಎಲ್ಲವನ್ನೂ ಓದಿಯೇ ಅನುಭವಿಸ ಬೇಕು.
ಅನೇಕ ರಾಣಿಯರಿದ್ದರೂ,ರಾಜ ನೂರಳ ಬಳಿಯೇ ಇರಲೇನು ಕಾರಣ? ಎಂದು ಕೇಳಿದ ಪ್ರಶ್ನೆಗೆ ಆಕೆ ಕೊಡುವ ಉತ್ತರ ಪ್ರೇಮದ ಶ್ರೇಷ್ಠತೆ,ಪರವಶತೆಯನ್ನು ಸ್ಫುಟ ಪಡಿಸುತ್ತದೆ. ತನ್ನ ಮಗಳಂತೂ ಇದನ್ನೆಲ್ಲಾ ಕಲಿಯಲಿಲ್ಲ ಎನ್ನುತ್ತಾ….ತನ್ನ ಮೊಮ್ಮಗಳಿಗೆ ಹಳೆಯ ಚರಿತ್ರೆಯನ್ನು ಅಮೂಲಾಗ್ರವಾಗಿ ಹೇಳುತ್ತಾ, ಆಕೆಗೂ ಅತ್ತರು ತಯಾರಿಸುವುದನ್ನು ಹೇಳಿ ಕೊಡುವ ರೀತಿಯಲ್ಲೊಂದು ಸೊಬಗಿದೆ.
ಪತಿಯ ಅವಸಾನದ ನಂತರ ೨೦ ವರ್ಷಗಳ ಕಾಲ ಆಕೆ ಲಾಹೋರಿನ ಅರಮನೆಯಲ್ಲಿ ಮಗಳು ಲಾಡ್ಲಿ ಹಾಗೂ ಮೊಮ್ಮಗಳ ಜೊತೆ ಗೃಹ ಬಂಧನದಲ್ಲಿದ್ದಳು. ಆಗಲೂ ಅವಳ ಸಾತ್ವಿಕ ಜೀವನ ಅನುಕರಣೀಯ. ಬದುಕಿನ ಅನೇಕ ಸ್ಥಿತ್ಯಂತರಗಳಲ್ಲಿ ಹಾದು ಬಂದವಳ ಪಕ್ವ ಮನಸ್ಸು, ಕಾವ್ಯ,ಗಾಯನ,ಚಿತ್ರಕಲೆ, ವಾಸ್ತು ಶಿಲ್ಪ, ರಾಜ್ಯಾಡಳಿತ ಎಲ್ಲಾ ಕ್ಷೇತ್ರಗಳ ಅನುಭವವಿದ್ದ ಆಕೆ ವಿರಾಗಿಣಿಯಂತೆ “ಮಕ್ ಫಿ” ಎಂಬ ಅನಾಮಿಕ ಕಾವ್ಯನಾಮದಿಂದ ಬರೆದ ಶಾಯರಿಗಳು…. ಇದೆಲ್ಲವೂ” ಪರ್ಷಿಯಾ ಪರಿಮಳದಂತೆ ನಮ್ಮನ್ನೂ ವ್ಯಾಪಿಸುತ್ತದೆ.
ಲೇಖಕಿಯು ಸಂದರ್ಭಕ್ಕೆ ತಕ್ಕಂತೆ ಅಲ್ಲಲ್ಲಿ ನೀಡಿದ ಶಾಯರಿಗಳು ಮೋಹಕವಾಗಿದೆ.ಸುಂದರ ಶಬ್ದಗಳ ಬಳಕೆಯ ವಾಕ್ಯಗಳು,
ಎಲ್ಲಿಯೂ ಲಯ ತಪ್ಪದ ಹದವಾದ ನಿರೂಪಣೆ, ವ್ಹಾ! ಎನ್ನುವಂತಿದೆ. ಬಹುಪಾಲು ಉರ್ದು ಪಾರಂಪರಿಕ ಶಬ್ಧಗಳು ಇಲ್ಲಿ ಬಳಕೆಯಾಗಿ ಕಥೆಗೊಂದು ಆಕರ್ಷಕ ಮೆರಗು ತಂದಿದೆ. ಯಾವುದೇ ಐತಿಹಾಸಿಕ ವಿಷಯವನ್ನು ಕಾಲ್ಪನಿಕವಾಗಿಯೂ ಸತ್ಯಕ್ಕೆ ಹತ್ತಿರವಾಗಿ, ಬರೆದ ಲೇಖಕಿಯ ಬರವಣಿಗೆಯ ಕೌಶಲ್ಯದ ಕಲೆಗಾರಿಕೆ ಶ್ಲಾಘನೀಯ.
ಸಂಗ್ರಹ ಯೋಗ್ಯವಾದ ಈ ಕಾದಂಬರಿಯನ್ನು ಹೀಗೆ ಸಂಕ್ಷಿಪ್ತ ವಿವರಣೆಯಿಂದ ಹೇಳಲು ಸಾಧ್ಯವಿಲ್ಲ. ಮತ್ತೆ ಮತ್ತೆ ಓದ ಬೇಕೆನ್ನಿಸುವ ಹಾಗಿದೆ. ನಾನು ಓದಿದ ಈ ಲೇಖಕಿ ಉಷಾ ನರಸಿಂಹನ್ ಅವರ ಮೊದಲ ಪುಸ್ತಕವೇ ತುಂಬಾ ಇಷ್ಟವಾಯಿತು.ಅವರ ಈ ಅದ್ಭುತ ಬರವಣಿಗೆಗೆ ಫಿದಾ ಆಗಿದ್ದೇನೆ. ಇದು ಸಾಹಿತ್ಯ ಲೋಕಕ್ಕೆ ಅವರ ಮಹತ್ವದ ಕೊಡುಗೆ ಎನ್ನಬಹುದು.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ‘ಕಾಡು ತಿಳಿಸಿದ ಸತ್ಯಗಳು’ ಕೃತಿ ಪರಿಚಯ
- ‘ಕೃಷಿ ಬದುಕಿನ ಹೆಜ್ಜೆ ಸಾಲು’ ಕೃತಿ ಪರಿಚಯ
- ‘ಒಲ್ಲೆಯೆನದಿರು ನಮ್ಮದಲ್ಲದ ನಾಳೆಗಳ’ ಕೃತಿ ಪರಿಚಯ
- ‘ಗಾದೆ ಮಾತಿನ ಗುಟ್ಟು’ ಕೃತಿ ಪರಿಚಯ
- ‘ಕಿಚ್ಚಿಲ್ಲದ ಬೇಗೆ’ ಕೃತಿ ಪರಿಚಯ
- ‘ಅಗಸ್ತ್ಯ’ ಕೃತಿ ಪರಿಚಯ
- ‘ಸಾಂದರ್ಭಿಕ’ ಕೃತಿ ಪರಿಚಯ
- ರೇಖಾ ಕಾಖಂಡಕಿ ಅವರು ಕೃತಿ ಪರಿಚಯ
- ಗೌರಿ ಕೃತಿ ಪರಿಚಯ
- ‘ನಿಮ್ಮ ಸಿಮ್ಮ’ ಕೃತಿ ಪರಿಚಯ
- ‘ಪಣಿಯಮ್ಮ’ ಕೃತಿ ಪರಿಚಯ
- ‘ಚಿಗುರಿದ ಕನಸು’ ಕೃತಿ ಪರಿಚಯ
- ‘ಅಶ್ವತ್ಥಾಮೋ ಹತಃ’ ಪರಿಚಯ
- ‘ಹೂ ದಂಡಿ’ ಕೃತಿ ಪರಿಚಯ
- ‘ಬೂದಿ ಮುಚ್ಚಿದ ಕೆಂಡ’ ಕೃತಿ ಪರಿಚಯ
- ‘ಇಲಿಯಡ್’ ಕೃತಿ ಪರಿಚಯ
- ‘ಅಲೆಯೊಳಗಿನ ಮೌನ’ ಕೃತಿ ಪರಿಚಯ
- ‘ಹೂಲಿ ಶೇಖರರ ನಾಟಕಗಳು’ ಕೃತಿ ಪರಿಚಯ
- ‘ನನ್ನಕ್ಕ ನಿಲೂಫರ್’ ಕೃತಿ ಪರಿಚಯ
- ‘ಅರಣ್ಯಕಾಂಡ’ ಕೃತಿ ಪರಿಚಯ
- ‘ವಿಕ್ರಮಾರ್ಜುನ ವಿಜಯ’ ಕೃತಿ ಪರಿಚಯ
- ‘ಸುನೀತಗಳು’ ಕೃತಿ ಪರಿಚಯ
- ‘ಮೈ- ಮನಸ್ಸುಗಳ ಸುಳಿಯಲ್ಲಿ ಸಖಿ!’ ಕೃತಿ ಪರಿಚಯ
- ‘ಪದ್ದಣ ಮನೋರಮೆ’ ಕೃತಿ ಪರಿಚಯ
- ‘ಬ್ರಹ್ಮರಾಕ್ಷಸ’ ಕೃತಿ ಪರಿಚಯ
- ‘ಬದುಕ ಭಿತ್ತಿಯ ಚಿತ್ರಗಳು’ ಕೃತಿ ಪರಿಚಯ
- ‘ಅಮ್ರಪಾಲಿ’ ಪುಸ್ತಕ ಪರಿಚಯ
- ‘ಇದು ಕತೆಯಲ್ಲ ಜೀವನ’ ಕೃತಿ ಪರಿಚಯ
- ‘ಕೇದಗೆ ಪುಷ್ಪ’ ಕೃತಿ ಪರಿಚಯ
- ‘ಬಂಕಿಮಚಂದ್ರರ ಶ್ರೇಷ್ಠ ಕತೆಗಳು’ ಕೃತಿ ಪರಿಚಯ
- ‘ಸೀಳುದಾರಿ’ ಪುಸ್ತಕ ಪರಿಚಯ
- ‘ಲವ್ ಟುಡೆ’ ಕೃತಿ ಪರಿಚಯ
- ‘ಕ್ಲಾಸ್ ಟೀಚರ್’ ಕೃತಿ ಪರಿಚಯ
- ‘ಒಂದು ಎಂಟಾಣೆಯ ಕಥೆ’ ಕೃತಿ ಪರಿಚಯ
- ‘ನಿಮಗ ತಿಳಿಯೋದಿಲ್ಲ ಬಿಡ್ರಿ’ ಕೃತಿ ಪರಿಚಯ
- ‘ಮಾಸದ ವಿಜಯ’ ಕೃತಿಯ ಪರಿಚಯ
- ‘ಅರಳಿಮರ’ ಪುಸ್ತಕ ಪರಿಚಯ
- ‘ಆಸೆಯ ಅಲೆಗಳ ಮೇಲೆ’ ಕೃತಿ ಪರಿಚಯ
- ‘ಬರ್ಬರಿಕ’ ಕೃತಿ ಪರಿಚಯ
- ‘ನನ್ನ ದನಿಗೆ ನಿನ್ನ ದನಿಯು’ ಕೃತಿ ಪರಿಚಯ
- ‘ಅಂತರಂಗ’ ಕೃತಿ ಪರಿಚಯ
- ‘ಕಾಡುಬಳ್ಳಿ’ ಕೃತಿ ಪರಿಚಯ
- ‘ನಂಟು’ ಪುಸ್ತಕ ಪರಿಚಯ
- ‘ಶಕುನದ ಹಕ್ಕಿ’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್ – ಕಿರಿಯ ಸಹಾಯಕರು, ಲೋಕೋಪಯೋಗಿ ಇಲಾಖೆ ಉಪವಿಭಾಗ, ಸಿದ್ದಾಪುರ.
