‘ಕನ್ನಡ ಬಳ್ಸಿ’ ಕವನ

ಹುಡುಕ್ರಪ್ಪ ಕನ್ನಡ ನಿಮ್ಮ ಮಾತ್ನಾಗೆ ಕಿತ್ತಾಕಿ ಪರಭಾಸೆ ಕಸವಾ ಅತ್ಲಾಗೆ…ಕವಿ ರವಿನಾಗ್ ತಾಳ್ಯ ಅವರ ಕನ್ನಡ ಕುರಿತು ಬರೆದ ಕವನವನ್ನು ಪೂರ್ತಿಯಾಗಿ ಓದಿ…

ಕನ್ನಡ ಬಳ್ಸಿ ಕನ್ನಡ ಬಳ್ಸಿ
ಬುದ್ವಂತ ಕನ್ನಡಿಗ್ರೇ ಕನ್ನಡ ಬಳ್ಸಿ

ಕನ್ನಡ ಬಳಸುತ್ತ ಕನ್ನಡ ಉಳ್ಸಿ
ಇಂಗ್ಲೀಸು ಮೋಹ ನಿಮಗ್ಯಾಕೆ ಜಾಸ್ತಿ

ನಿಮ್ ಕನ್ನಡದೊಳ್ಗೆ ಇಂಗ್ಲೀಸೇ ಜಾಸ್ತಿ
ಕಲಬೆರಕೆ ಕನ್ನಡ ನಿಮ್ಮಿಂದ್ಲೇ ಜಾಸ್ತಿ

ಕನ್ನಡದೊಳ್ಗೆಲ್ಲ ಪರಭಾಸೆ ಸೇರ್ಬಿಟ್ಟು
ಕನ್ನಡ ಪದಗಳ ಕನ್ನಡಿಗ್ರೇ ಮರೆತ್ಬಿಟ್ಟು

ಅದ್ವಾನ ಮಾಡ್ಬಿಟ್ರಿ ಕನ್ನಡ ಕೆಡಿಸಿಟ್ಟು
ಯಾವುದು ಕನ್ನಡ ಯಾವುದು ಪರಭಾಸೆ

ನಿಂಗ್ಯಾರು ಯತ್ವಾಸ ತಿಳ್ಸೋರು ಕೂಸೆ
ರಾಗೀಲಿ ಸಾಸ್ವೆ ಆಗೋಯ್ತೆ ನಂಭಾಸೆ

ಹುಡುಕ್ರಪ್ಪ ಕನ್ನಡ ನಿಮ್ಮ ಮಾತ್ನಾಗೆ
ಕಿತ್ತಾಕಿ ಪರಭಾಸೆ ಕಸವಾ ಅತ್ಲಾಗೆ

ಹಡೆದವ್ವನ ಜೀವ ಐತೆ ನಿಮ್ಮ ಕೈನಾಗೆ
ಕನ್ನಡ ಪದವಿ ಗಳ್ಸೋರು ಯಾರು

ಕನ್ನಡ ಪುಸ್ತಕ ಓದೋರು ಯಾರು
ಮೋಹದ ಮೋಡಿಗೆ ಸಡ್ಲಾತು ತಾಯಿಬೇರು

ಕನ್ನಡ ಪ್ರೀತೀನ ಮಕ್ಳಲ್ಲಿ ಬೆಳ್ಸಿ
ಕನ್ನಡ ಓದಲು ಆಸಕ್ತಿ ಮೂಡ್ಸಿ

ಕನ್ನಡ ಸಾಹಿತ್ಯ ರುಚಿಯ ತೋರ್ಸಿ
ಹನ್ನೊಂದ್ನೇ ತಿಂಗ್ಳಷ್ಟೇ ಕನ್ನಡ ಪ್ರೀತೀನಾ?

ಕನ್ನಡ ಬಳಸಿದ್ರೆ ಅಂತಸ್ತು ಕಮ್ಮಿನಾ?
ಕೊಟ್ಟಿಲ್ವೆ ಕರುನಾಡು ನಿಮ್ಗೆ ಜೀವ್ನಾನ

ಅಚ್ಚ ಕನ್ನಡವಾ ಮಾತಾಡೋ ಜಾಣ
ಸ್ವಚ್ಛ ಕನ್ನಡವಾ ತಿಳಿಸೋ ಜಾಣ

ಕನ್ನಡವ ಕನ್ನಡವಾಗಿ ಉಳಿಸೋ ಜಾಣ
ಕನ್ನಡ ಬಳ್ಸಿ ಕನ್ನಡ ಬಳ್ಸಿ

ಬುದ್ವಂತ ಕನ್ನಡಿಗ್ರೇ ಕನ್ನಡ ಬಳ್ಸಿ
ನಾಳಿನ ಜನಕೆ ಕನ್ನಡ ಉಳ್ಸಿ


  • ರವಿನಾಗ್ ತಾಳ್ಯ – ಕವಿಗಳು

Leave a Reply

Home
Search
Menu
Recent
About
×