ಮಾನಸ….ಇದು ಮನಸಿನ ಮಾತು (ಭಾಗ-೪)

ಹರೆಯದ ವಯಸ್ಸಿನಲ್ಲಿ ಮಕ್ಕಳ ಭಾವನೆಗಳೇ ವಿಭಿನ್ನವಾಗಿರುತ್ತದೆ. ಅವರು ನಡೆಯುವ ದಾರಿಯೇ ಸರಿ ಎನಿಸುತ್ತದೆ. ಯಾರ ಮಾತು ಕೇಳುವ ಸ್ಥಿತಿಯಲ್ಲಿ ಅವರು ಇರುವುದಿಲ್ಲ. ಹರೆಯದ ವಯಸ್ಸಿನ ಕುರಿತು ಇನ್ನಷ್ಟು ತಿಳಿಯೋಣ ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ತಪ್ಪದೆ ಓದಿ….

ಹರೆಯ ಜೀವನದಲ್ಲಿ ಒಂದು ಮುಖ್ಯ ಘಟ್ಟ. ಈ ವಯಸ್ಸಿನಲ್ಲಿ ಯಾರ ಮಾತೂ ಕೇಳದ ಮನಸ್ಥಿತಿ ಇರುತ್ತದೆ. ಮಂಗನ ಬುದ್ಧಿ ಎಂದು ಹೇಳಿದರೆ ತಪ್ಪಾಗದು. ಲಿಂಗ ಭೇದವಿಲ್ಲದೆ ಈ ವಯಸ್ಸಿನಲ್ಲಿ ಅನೇಕ ಹುಚ್ಚು ಬುದ್ಧಿಯವರನ್ನು ಕಾಣಬಹುದು.

ಈ ವಯಸ್ಸಿನಲ್ಲಿ ಕೆಲವು ಗಂಡು ಮಕ್ಕಳು ನಿಜಕ್ಕೂ ಕೋತಿ ಬುದ್ಧಿಯವರಿರುತ್ತಾರೆ. ನಿಂತಲ್ಲಿ ನಿಲ್ಲಲ್ಲ, ಕೂತಲ್ಲಿ ಕೂರಲ್ಲ ಇದು ಅವರ ಸಮಸ್ಯೆಯಲ್ಲ , ವಯಸ್ಸಿನ ಸಮಸ್ಯೆ. ಏನಾದರೂ ಸಾಧಿಸಬೇಕೆಂಬ ಛಲವಿರುತ್ತದೆ. ಹೊಸ ಆವಿಷ್ಕಾರಗಳೊಂದಿಗೆ ಸದಾ ಮನಸ್ಸು ಇಟ್ಟಿರುತ್ತಾರೆ. ಕೆಲವರು ಏನೂ ಮಾಡದೆ ಸೋಂಬೇರಿಗಳಾಗಿ ಅಪ್ಪಗಳಿಸಿದ ಆಸ್ತಿಯಲ್ಲಿ ಉಡಾಫೆ ಜೀವನ ಸಾಗಿಸುತ್ತಿರುತ್ತಾರೆ. ಇಂಥವರಿಗೆ ಮಾರ್ಗದರ್ಶನ ಬಹಳ ಮುಖ್ಯ. ಅವರಿಗೆ ಬಹಳ ಹತ್ತಿರದವರ ಬಳಿ ಅವರಿಗೆ ತಿಳಿ ಹೇಳಿಸಬಹುದು.

ಈ ವಯಸ್ಸಿನಲ್ಲಿ ಅವರಿಗೆ ಏನೇ ಹೇಳಿದರೂ ಅವರು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ತಂದೆ ತಾಯಿಯ ಮಾತಿಗಿಂತ ಸ್ನೇಹಿತರಿಗೆ ತುಂಬಾ ಬೆಲೆ ಕೊಡುತ್ತಾರೆ. ಸಿನಿಮಾ ಹೀರೋಗಳು ಇವರಿಗೆ ಮಾದರಿಯಾಗಿರುತ್ತಾರೆ. ಅವರಂತೆ ಬಟ್ಟೆ ತೊಡುವುದು, ಹಾವ ಭಾವ ಅನುಸರಿಸುವುದು, ತಲೆ ಕೂದಲಿನ ವಿನ್ಯಾಸ ಹೀಗೆ ಅವರ ರೀತಿ ನಡವಳಿಕೆ ಇರುತ್ತದೆ. ಏನೇ ತಿಳುವಳಿಕೆ ಹೇಳಿದರೂ ತಿಳಿದುಕೊಳ್ಳುವ ಮನಸ್ಥಿತಿ ಅವರಿಗಿರುವುದಿಲ್ಲ.

ಗಂಡು ಮಕ್ಕಳದು ಒಂದೊಂದು ಸಮಸ್ಯೆಯಾದರೆ ಕೆಲವು ಹೆಣ್ಣು ಮಕ್ಕಳು ಅಲಂಕಾರ ಪ್ರಿಯರಾಗಿರುತ್ತಾರೆ, ಬರೀ ಅಲಂಕಾರ ಇತರರ ಎದುರು ಚೆನ್ನಾಗಿ ಕಾಣಬೇಕೆಂಬ ತವಕ, ಆಕರ್ಷಕವಾಗಿ ಕಾಣುವಂತೆ ಅಲಂಕಾರ ಮಾಡಿಕೊಳ್ಳುವುದು, ಬೇರೆಯವರಿಗೆ ಪ್ರಭಾವ ಬೀರುವಂತೆ ವರ್ತನೆ, ಹುಡುಗರು ತನ್ನತ್ತ ನೋಡಲಿ ಎಂಬ ಅಪೇಕ್ಷೆ ಹೀಗೆ ಕೆಲವರ ಸ್ವಭಾವ ರೂಢಿಸಿಕೊಂಡು ಬರುತ್ತಾರೆ.

ಇದೆಲ್ಲ ಕ್ಷಣಿಕ ಎಂದು ಅವರಿಗೆ ತಿಳಿಯುವ ಹೊತ್ತಿಗೆ ಸಮಯ ಬಹಳ ಮುಂದೆ ಸರಿದಿರುತ್ತದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ಮುಂದೆ ಹೋಗಲಾರದೆ ಹಿಂದೆ ಸರಿಯಲಾರದೆ ಒದ್ದಾಡುವ ಪರಿಸ್ಥಿತಿಗೆ ತಲುಪುತ್ತಾರೆ. ಕೆಲವರು ಪ್ರೀತಿ ಪ್ರೇಮದಲ್ಲಿ ಬಿದ್ದು ಮೋಸ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಖಿನ್ನತೆಗೆ ಒಳಗಾಗುತ್ತಾರೆ. ಈ ಎಲ್ಲಾ ಕಾರಣಗಳೂ ಹರೆಯದಲ್ಲಿ ಮಾತ್ರ ಕಾಣಬಹುದು.

ಹರೆಯದ ವಯಸ್ಸಿನಲ್ಲಿ ತುಂಬಾ ಚೆನ್ನಾಗಿ ಕಾಣಬೇಕು ಎಂದು ಹೆಣ್ಣು ಮಕ್ಕಳಿಗೂ, ಗಂಡು ಮಕ್ಕಳಿಗೂ ಬಹಳವಾಗಿ ಇರುತ್ತದೆ. ತಮ್ಮ ರೂಪ ಹೆಚ್ಚಿಸಿಕೊಳ್ಳಲು ಜಾಹೀರಾತುಗಳನ್ನು ನೋಡಿ ಅದಕ್ಕೆ ಮಾರುಹೋಗಿ ಸೌಂದರ್ಯ ಸಾಧನಗಳನ್ನು ಉಪಯೋಗಿಸಲು ಶುರುಮಾಡುತ್ತಾರೆ. ಇದರ ಅಡ್ಡ ಪರಿಣಾಮ ಕೆಲವೊಮ್ಮೆ ಕೆಲವರಿಗೆ ಮುಖದಲ್ಲಿ ಮೊಡವೆ, ಪಿಗ್ಮೆಂಟೇಷನ್ ನಿಂದ ಬಳಲುತ್ತಾರೆ. ಇದು ಅನೇಕರಿಗೆ ಸಮಸ್ಯೆಯಾಗಿ ಕಾಡುತ್ತದೆ. ಖಿನ್ನತೆಗೆ ಒಳಗಾಗುತ್ತಾರೆ.

ಯಾರ ಮಾತೂ ಕೇಳದ ತನಗೇ ತಾನೇನೆಂದು ತಿಳಿಯದ ವಯಸ್ಸೇ ಹರೆಯ.

ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು:


  • ಚಂಪಾ ಚಿನಿವಾರ್ –  ಆಪ್ತಸಮಾಲೋಚಕಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW