ಭಾಗ್ಯ ಆಚಾರ್ಯ ಅವರ ‘ಪಂಪಾ ದ್ವೀಪ’ ಕಾದಂಬರಿ ಕುರಿತು ಪಾಂಡುರಂಗ ಕೆ ಎಸ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಪುಸ್ತಕ : ಪಂಪಾ ದ್ವೀಪ
ಲೇಖಕಿ : ಭಾಗ್ಯ ಆಚಾರ್ಯ
ಪ್ರಕಾರ : ಕಾದಂಬರಿ
ಬೆಲೆ : 100.00
ಖರೀದಿಗಾಗಿ : 91 90356 72533
ಪ್ರೀತಿ ಕುರುಡು ಪ್ರೇಮಿ ಕುರುಡು ಎಂಬ ನುಡಿಗೆ ಪೂರಕವಾದ ಈ ಕಾದಂಬರಿ ನಿಶ್ಕಲ್ಮಷ ಪ್ರೀತಿಯ ಜಾಡನ್ನು ಯಥಾವತ್ತಾಗಿ ನಿರೂಪಿಸಿರುವ ಸ್ನೇಹಿತೆ, ಲೇಖಕಿ, ಭಾಗ್ಯ ಆಚಾರ್ಯ ಅವರ ಈ ‘ಪಂಪಾ ದ್ವೀಪ’ ದಲ್ಲಿ ಗಂಗೆಯ ಹುಡುಕಾಟ ಕಾದಂಬರಿಯು ಇತಿಹಾಸದ ಕತೆಯೊಂದ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಾನಾಚಾರಿ ಎಂಬ ಶಿಲ್ಪಿಯು ತನ್ನ ಅಂತರಾಳದ ಪವಿತ್ರ ಪ್ರೀತಿಯನ್ನು ತನ್ನಿಷ್ಟದವಳಿಗೆ ನಿವೇದಿಸಿದ ರೀತಿ ಮತ್ತು ಅವಳ ಆಸೆ ಆಕಾಂಕ್ಷೆಗಳ ಪೂರೈಕೆಗಾಗಿ ತಳಮಳಿಸಿದ ಘಳಿಗೆ ನಮ್ಮ ಕಣ್ಮುಂದೆ ಬರುವಂತೆ ಮುದ್ರಿಸಿದ್ದಾರೆ. ಪ್ರತಿಯೊಬ್ಬ ಪ್ರಾಮಾಣಿಕ ಪ್ರೇಮಿಯು ತನ್ನಿಷ್ಟ ಪ್ರೇಯಸಿಗೆ ಶರಣಾಗುವ ಪರಿಯನ್ನು ಮಾನಾಚಾರಿಯ ಚರಿತ್ರೆಯ ಓದಿ ತಿಳಿದುಕೊಳ್ಳುವ ತವಕ ನನ್ನಲ್ಲು ಶುರುವಾದಾಗ ಭಾಗ್ಯವಂತಿಯ ಜೀವನದಲ್ಲಾದ ಕೋಲಾಹಲ ಅಂದಿನ ಕಾಲಘಟ್ಟದಲ್ಲಾದ ಸತ್ಯವೆ ಎನಿಸುವುದರಲ್ಲಿ ಎರಡು ಮಾತಿಲ್ಲ.
ಎಷ್ಟೆ ನೀತಿಗೆಟ್ಟ ಮನುಷ್ಯರಾದರು ಅಂತರಾತ್ಮದ ಒಳಗೆ ಪ್ರತಿಯೊಬ್ಬ ಮನುಷ್ಯ ಕೂಡ ಪವಿತ್ರವಾಗಿಯೆ ಇರುತ್ತಾನೆ…. ಎಂದು ಹೇಳುತ್ತಾ ಹಂಪೆಯ ಇತಿಹಾಸ ಓದಲು ಈ ಕಾದಂಬರಿಯು ನನ್ನಲ್ಲಿ ಇನಷ್ಟು ಉತ್ಸಾಹ ಮೂಡುವಂತೆ ಮಾಡಿತು. ಅತ್ಯದ್ಭುತವಾದ ಕಾದಂಬರಿ ಎಲ್ಲಿಯು ತೊಡಕುಗಳಿಲ್ಲ ಅನುಮಾನಸ್ಪದವಾಗುವಂತಿಲ್ಲ..


ವ್ಯಕ್ತಿ ಹೋದರು ವ್ಯಕ್ತಿತ್ವ ಉಳಿಯುತ್ತದೆ, ಬದುಕೆಂದರೆ ಬವಣೆಯಲ್ಲ ನವಣೆಯ ರಾಶಿಯೂ ಅಲ್ಲ ಅಳಿದು ಉಳಿದು ಬೆಳೆದು ಬಾಳುವ ಕನಸಿಗೆ ಕೊಂಚ ಆತ್ಮ ತೃಪ್ತಿ ಇರಬೇಕಂತೆ. ಜನ ಜಂಗುಳಿಯಲ್ಲಿ ನಿಂತು ಮನದಂಗಳದ ಮಾತನಾಡಲು ನಿರ್ಧರಿಸಿದ ಮೇಲೆ ಮೌನದ ಪಾತ್ರ ಎನಿದೆ ಎಂದು ಯೋಚಿಸುತ್ತ ಕುಳಿತವನು ಮತ್ತದೆ ಜನ ಜಂಗುಳಿಯ ಮಾತಿಗೆ ಹೋದರೆ ಉಳುಮೆ ಮಾಡದ ಹೊಲದಲ್ಲಿ ಬೇವಿನ ಬೀಜ ಬಿತ್ತಿ ಮಾವಿನ ಫಲ ತೆಗೆಯುವೆ ಎಂಬ ಉದ್ಧಟ ತನಕ್ಕೆ ಸಾಕ್ಷಿಯಾಗಬೇಕಾಗುತ್ತದೆ….
- ಪಾಂಡುರಂಗ ಕೆ ಎಸ್
