ಮೊದಲು ಅಪ್ಪ ಅಮ್ಮ ಮಕ್ಕಳಿಗೆ ಊಟ ಮಾಡಿಸುವಾಗ ಚಂದಮಾಮನನ್ನು ತೋರಿಸಿಯೋ, ಪಕ್ಷಿಗಳನ್ನು ತೋರಿಸಿಯೋ ಮಕ್ಕಳಿಗೆ ತುತ್ತು ಕೊಡುತ್ತಿದ್ದರು. ಆದರೆ ಇಂದು ಅಪ್ಪ ಅಮ್ಮನೇ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಊಟ ಮಾಡಿಸುವ ಮೂಲಕ ಮಕ್ಕಳು ಮೊಬೈಲ್ ಗೆ ಅವಲಂಬನೆ ಆಗುವಂತೆ ಮಾಡಿದ್ದಾರೆ. ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಸುವುದರಿಂದ ಅದರಲ್ಲಿನ ಬೆಳಕು ಮಕ್ಕಳಿಗೆ ಹೇಗೆ ಹಾನಿಕಾರಕವಾಗಬಲ್ಲದು ಎನ್ನುವುದನ್ನು ಡಾ.ರಾಜೇಂದ್ರ ಸ್ವಾಮಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ಸ್ಕ್ರೀನ್ ಹೊರಹಾಕುವ ನೀಲಿ ಕಿರಣಗಳು ಮನುಷ್ಯನ ನಿದ್ರೆಯನ್ನು ನಿಯಂತ್ರಿಸುವ ಹಾರ್ಮೋನಾದ ಮೆಲಟೋನಿನ್ ಪ್ರಮಾಣವನ್ನು ಕುಗ್ಗಿಸುತ್ತವೆ.

ಫೋಟೋ ಕೃಪೆ : pinna
ವಿದ್ಯುತ್ ಆವಿಷ್ಕಾರವಾಗುವ ಮೊದಲು ಕತ್ತಲಾಗುತ್ತಿದ್ದಂತೆ ದೇಹದಲ್ಲಿ ಉತ್ಪತ್ತಿಯಾಗುವ ಮೆಲಟೋನಿನ್ ಮನುಷ್ಯನನ್ನು ನಿದ್ರೆಗೆ ಜಾರಿಸುತ್ತಿತ್ತು. ನಿದ್ರೆಹೋಗುವುದಕ್ಕಿಂತ ಒಂದು ಗಂಟೆಯ ಮೊದಲು ಸ್ಕ್ರೀನ್ ನೋಡುವುದನ್ನು ನಿಲ್ಲಿಸದಿದ್ದರೆ ಅರೋಗ್ಯಕರ ನಿದ್ರೆಯನ್ನು ತರಬಲ್ಲ ಮೆಲಟೋನಿನ್ ಹಾರ್ಮೋನಿನ ಪ್ರಮಾಣವು ದೇಹದಲ್ಲಿ ಏರುವುದಿಲ್ಲ. ಮಕ್ಕಳು ದೈಹಿಕ ಕಸರತ್ತು ನೀಡುವ ಆಟೋಟಗಳಲ್ಲಿ ಭಾಗವಹಿಸದಿರಲೂ ಸ್ಮಾರ್ಟ್ ಫೋನ್/ಟಿವಿ/ಕಂಪ್ಯೂಟರ್ ಮೂಲಕ ಮನೋರಂಜನೆ ಪಡೆಯುವ ವ್ಯಸನವು ಕಾರಣವಾಗಿದೆ. ಆರೋಗ್ಯದ ಮೂರು ಪ್ರಮುಖ ಆಧಾರ ಸ್ತಂಭಗಳಾದ ನಿದ್ರೆ, ವ್ಯಾಯಾಮ ಮತ್ತು ಆಹಾರ ಪದ್ಧತಿಯನ್ನು ಹಳಿ ತಪ್ಪಿಸುವಲ್ಲಿ ಈ ಸ್ಕ್ರೀನ್ ವ್ಯಸನವು ಪ್ರಮುಖ ಪಾತ್ರ ವಹಿಸುತ್ತಿದೆ.
ಸ್ಕ್ರೀನ್ ಟೈಮ್ ಹೆಚ್ಚಾದಂತೆ ಮಕ್ಕಳ ನಿದ್ರೆಯ ಅವಧಿ ಕಡಿಮೆಯಾಗುತ್ತಿದೆ. ಹೀಗಾಗಿ ಮನುಷ್ಯ ದೇಹದ ಹಸಿವನ್ನು ನಿಯಂತ್ರಿಸುವ ಹಾರ್ಮೇನ್‌ಗಳಾದ ‘ಗ್ರೆಲಿನ್’ ಮತ್ತು ‘ಲೆಪ್ಟಿನ್’ ಪ್ರಮಾಣಗಳು ಏರುಪೇರಾಗಿ ಬೊಜ್ಜಿನ ಕಾಯಿಲೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತಿದೆ.
ಸಂಪರ್ಕಿಸಿ : ದಿ ರಾಯಲ್ ಅಕಾಡೆಮಿ
7676660113.
- ಡಾ.ರಾಜೇಂದ್ರ ಸ್ವಾಮಿ (ಕೇರಳಿ ಆಯುರ್ವೇದ ಪದ್ಧತಿಯ ಆರೋಗ್ಯ ತಜ್ಞರು, ದಿ ರಾಯಲ್ ಅಕಾಡೆಮಿ ಎಂಬ ಸಂಸ್ಥೆಯ ಮೂಲಕ ಹಲವಾರು ಜೀವನ ಶಿಕ್ಷಣಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದಾರೆ), ದಾವಣಗೆರೆ.
