ಹಣೆ ಬರಹದ ಕರ್ಮಕ್ಕೆ ಅನಿವಾರ್ಯತೆ ನಾಲ್ಕು ಗೋಡೆಯಲಿ…ಕವಿ ಕೃಷ್ಣವೇಣಿ. ಆರ್.ಗೌಡ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…
ಸುತ್ತಲೂ ಕರೆದಿದೆ
ಗೊತ್ತಿಲ್ಲದ ಹುಸಿ ಹುಚ್ಚು ಪ್ರೀತಿ
ಇದಕೆ ಕಾರಣ ಕೊಡಲಾಗದೆ
ಹೊರಟಿದೆಯಲ್ಲ ಸಂಬಂಧ
ಆದರೂ ಕರುಳ ಭಾದೆ
ಬೆಂಬಿಡದೆ ಕೂಗಿದೆ
ನಿಶ್ಚಿಂತೆ ಇಲ್ಲದೆ ಮಿಲನ ಎಲ್ಲ ಮರೆತು
ಆಳದಿ ಬಿದ್ದು ಅಳುತಿದೆ
ಹಣೆ ಬರಹದ ಕರ್ಮಕೆ
ಅನಿವಾರ್ಯತೆ ನಾಲ್ಕು ಗೋಡೆಯಲಿ
ಕೂಗಿ ಕೂಗಿ ಅರಚಿ ಸುಸ್ತಾಗಿದೆ
ಹೊರಬಿಟ್ಟುಬರಲು
ಬಿಡದ ಸಂಬಂಧದ ಕಟ್ಟು ಪಾಡು
ಕಿವುಚಿ ಗಾಯ ಮಾಡಿ ಮೂಲೆಯಲಿ
ಸರಿಸಿದೆ
ತತ್ತರಿಸಿದ ದೇಹಕೆ ಯಾವ ನೆರಳಿಲ್ಲ
ಆದರೂ ಹೋರಾಟಕೆ ಸಜ್ಜಾಗಿದೆ
ರಕ್ತವೆಂಬ ಗಟ್ಟಿ ಪಾದ
ಲೋಕದ ಬೇಗೆಯಲಿ
ಇಂತಹ ಸಮರಗಳೆಷ್ಟೋ
ನಡೆದ ಅತ್ಯಾಚಾರಕೆ ಸಿಕ್ಕ
ತಿರುವುಗಳೆಷ್ಟೋ? ಅರಿಯೆ
ಬಲಿದಾನದ ಬದುಕಿಗೆ
ಎಷ್ಟೋ ಕಂದಮ್ಮಗಳ ಕಣ್ಣೀರು
ಕೆಲವು ನೆಲದೊಳು ಹೂತು ಹೋಗಿವೆ
ಹೇಳಿಕೊಳ್ಳಲಾಗದ ಸಮಾಜದಿ
ಹೆದರಿ ನೇಣು ಬಿಗಿದುಕೊಡ
ಹಗ್ಗ ನೇ ಮೌನದಿ ಹರಿದು
ಜಗವ ಕಣ್ತೆರೆಯಲು ಸೂಚನೆಗೈದಿದೆ
ಯಾಕೋ ಅರಿಯೆ ಪ್ರಸ್ತುತ
ನಿಲುವ ನೋಟ ಜಗದೊಡಲ ಎಚ್ಚರಿಸಿದರೂ
ಶ್ರೇಣಿಯಲಿ ಬದುಕು ಜಂಜಾಟವೇ
- ಕೃಷ್ಣವೇಣಿ. ಆರ್. ಗೌಡ – ವಿಜಯನಗರ ಜಿಲ್ಲೆ, ಹೊಸಪೇಟೆ.
