‘ಮೂಡುಬಾನು’ ಕವನ

ಒಂದೇ ತೆರದಿ ಬೆಳಕನೀಡುವನವನು, ಅವನಲ್ಲಿ ಇನಿತಿಲ್ಲ ಬೇಧ ಭಾವ…ಕವಿ ಅಪ್ಪಯ್ಯ ಯಾದವ್ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…

ಮೂಡುಬಾನಲಿ ಸೂರ್ಯ
ಮೂಡುವುದ ಕಂಡೆ
ಬೆಟ್ಟಗುಡ್ಡಗಳಾಚೆ
ಏರುವುದಕಂಡೆ

ಅವಬಂದಮೇಲೇಕೆ
ಬೆಳಗುವುದು ಲೋಕ
ಪಡುವಣದಿ ಇಳಿದಾಗ
ಕತ್ತಲಾಗುವುದು ಲೋಕ

ಮೂಡಣದಿ ಮೂಡುವನು
ನವ ಚೈತನ್ಯವ ಹೊತ್ತು
ಮಲಗಿರುವ ಚರಾಚರಕೆ
ಅವನೆ ತಾಕತ್ತು

ಗಿಡಗಂಟೆ ಮುಳ್ಳು ಪೊದೆ
ಎಲ್ಲವೂ ಅವನ ಸ್ವತ್ತು
ಎಲ್ಲರ ಮನಬೆಳಗಲೆಂದೇ
ದಿನನಿತ್ಯ ಬರುವುದವನ
ನಿಯತ್ತು

ಜನರೆಲ್ಲ ಮಲಗಿರಲಿ
ಕುಡಿದು ತೂರಾಡಲಿ
ಕಡುಕಷ್ಟ ಪಡುತ
ಬಾಳ್ವೆ ಸವೆಯಿಸಲಿ

ಎಲ್ಲರಿಗೂ ಒಂದೇ ತೆರದಿ
ಬೆಳಕನೀಡುವನವನು
ಅವನಲ್ಲಿ ಇನಿತಿಲ್ಲ
ಬೇಧ ಭಾವ

ಓಂ ಭಾಸ್ಕರಾಯ ನಮಃ


  • ಅಪ್ಪಯ್ಯ ಯಾದವ್ – ಕವಿಗಳು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading