ನಮಗೆ ಸ್ವತಂತ್ರ ಬಂದರೆ ಏನು ಸುಖವಿದೆ. ಬದಲಾಗುತ್ತಿರುವ ನಮ್ಮ ಸಂಸ್ಕೃತಿಯ ಬಗೆಗಿನ ಕಾಳಜಿಯನ್ನು ಈ ಕವನದಲ್ಲಿ ಕವಿಯತ್ರಿ ಪೂರ್ಣಿಮಾತನಯ ಅವರು ಕಟ್ಟಿಕೊಂಡಿದ್ದಾರೆ. ನಮ್ಮ ಸಂಸ್ಕೃತಿಯನ್ನು ಉಳಿಸಲು ನಾವೆಲ್ಲ ಒಂದಾಗಬೇಕಿದೆ. ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…
ಯಾವುದು ಸ್ವಾತಂತ್ರ್ಯ
ನಮ್ಮ ನೆಲವ ಪರರಿಟ್ಟ
ಹೆಸರಲ್ಲಿ ಬಾಯ ತುಂಬ
ಕೂಗುವುದೇ …..
ನಮ್ಮ ಉಸಿರಾದ ನಮ್ಮತನವ
ಕೋಮವಾದವೆಂದು ಕರೆಯುವುದೇ ..
ನಮ್ಮ ಇತಿಹಾಸ ತಿರುಚಿ ಹೊದ
ತಿರುಕರ ಪದ್ಧತಿ ಪಾಲಿಸುವುದೇ
ಸ್ವಾತಂತ್ರ್ಯ
ತಿಳಿಯೆದೆನೆಗೆ

ಬಂದವರು ವ್ಯಾಪರಕ್ಕೆ
ನಮ್ಮನು ಬಗೆದು
ಆಳಿದರು
ನರಿಯಂತೆ ಕೇಡುಗತನದಿಂ
ಟಿಕಾಣಿ ಊರಿದರು
ದೊಚಿದ್ದು ಸಾಕಾಗಿ
ಬೇರೆ ರುಚಿಯ ರಕ್ತ ಬೇಕಾಗಿ
ಬಿಟ್ಟರೆಮಗೆ ಒಡೆದ ನೆಲವ
ಬೇರಿಟ್ಟರೆಮಗೆ ಅವರ ಬಲವ
ವಿದ್ಯಾ ಪದ್ಧತಿ ಎಂಬ ಹೆಡ್ಡತನದಿಂ
ಸಾಧಿಸಿ ಸಾಗಿದರು ನಸುನಗುತ
ನಮ್ಮತನವ ಮರೆತು ನಾವು
ಸ್ವತಂತ್ರರಾಗಿಹೆವೆಂಬ ಭ್ರಾಂತು ಬಿಡಿರೈ
ನಾವು ನಾವಾಗಿಲ್ಲ
ನಮ್ಮ ತಾಯಿ ಭಾರತಿಯ
ಭಾರತವೆಂದು ಕರೆಯಲ್
ನಾಲಿಗೆ ಇಲ್ಲದ ನಮಗೆ
ದಾಸ್ಯದಲಿ ಇಟ್ಟ ಹೆಸರೇ ಹೆಮ್ಮೆ
India
ಏನು ಹಾಗೆಂದರೆ
ತಿಳಿಸಿ ಸ್ವಲ್ಪ ಗೊತ್ತಿದ್ದರೆ
ನಮ್ಮ ಊರು ನಮ್ಮದಲ್ಲ
ಪರರು ಇಟ್ಟ ಹೆಸರಿನಲ್ಲಿ
ಆ ರಣನರಿಗಳ ಸ್ಮರಿಸಬೇಕು
ನಮ್ಮ ಚಾರಿತ್ರ್ಯ ನಮಗೆ ಗೊತ್ತೆ
ಅದರ ಮರೆವಲಿ ಯಾಕೆ ಸತ್ತೆ

ಫೋಟೋ ಕೃಪೆ : madeinchina
ಹರಿದ ಬಟ್ಟೆ styleಉ
ಕಾಲಿ ಹಣೆ ಅಲಂಕಾರ
ಸೂಟು ಬೂಟು
ಶಿಷ್ಟಾಚರ
ಪಂಚೆ ಲುಂಗೆ
ಅನಾಚಾರ
ಎಲ್ಲಿಗೆ ಬಂತು ಪೀಳಿಗೆ
ಸ್ವತಂತ್ರ ಬೇಕಿತ್ತೆ ಈ ಗೋಳಿಗೆ
ನಮ್ಮತನ ತೂರಿ ಗಾಳಿಗೆ
ಯಾರ ಹಿಂಬಾಲಿಸುತಲಿಹಿರಿ
ಸ್ವತಂತ್ರರೆ ಹೇಳುವಿರ
ನಾವು ಸ್ವತಂತ್ರರು
ನಾವು ಸ್ವತಂತ್ರರು…
ನಮ್ಮ ತಾಯಿಯ
ಅಮ್ಮ ಎನ್ನದೆ ಆಂಟಿ
ಎಂದು ಬಾಯಿ ತುಂಬಿ ಕರೆವ
ನಾವು ಸ್ವತಂತ್ರರು
ನಾವು ಸ್ವ ದಿನ ತಂತ್ರ ವಿಲ್ಲದ ಸ್ವತಂತ್ರರು .!
- ಪೂರ್ಣಿಮಾತನಯ