ನೀ ಇರಲು, ದೀಪಕ್ಕೇನು…?ಕವನ – ಶ್ರೀನಿವಾಸ.ಟಿ.ಗರಣಿಸುಡುವ ವಿರಹಕ್ಕೇನು? ಸುಡುತಲೆ ಇರುವುದು, ಮುತ್ತಿಕ್ಕುವ ಭಯದ ನೆರಳಿನ ಒಳಗೆ ಅವಿತು…ಕವಿ ಶ್ರೀನಿವಾಸ.ಟಿ.ಗರಣಿ ಅವರ ಲೇಖನಿಯಲ್ಲಿ ಅರಳಿದ ಕವಿತೆಯ ಸುಂದರ ಸಾಲುಗಳು, ಮುಂದೆ ಓದಿ…

ನೀ ಇರಲು , ದೀಪಕ್ಕೇನು…..?
ಕೋಣೆಯೊಳಗಿನ ದೀಪಕ್ಕೇನು ಕೆಲಸ ? ನೀನಿರಲು ,
ಬೆಳಕು ಅಲುಗಾಡಿಸಿ ದಿಕ್ಕು
ತಪ್ಪಿಸಿಬಿಟ್ಟೀತು…
ನಂದಿಸಿಬಿಡು ,
ನಿಶ್ಯಬ್ದವನ್ನೊಮ್ಮೆ ಆಲಿಂಗಿಸಿ ಬಿಡೋಣ ,
ಏದುಉಸಿರಿನ ಶಬ್ದವಷ್ಟೇ
ಗಮ್ಯವಾಗಿದ್ದು ಬಿಡಲಿ….

ನನ್ನೊಳಗೆ ನೀನು ನಿನ್ನೊಳಗೆ ನಾನು ,
ಬೆನ್ನು ತೋರಿಸಿ ಕುಳಿತುಬಿಡು..
ಅಪ್ಪಿಕೊಳ್ಳುವೆ ಒಮ್ಮೆ
ಕನಸ ಬೃಂಗವನ್ನೇರಿ ಹೊರಟು
ಬಿಟ್ಟರಾಯಿತು..
ಕತ್ತಲ ಸೀಳಿ ನಿರ್ಜನ ಲೋಕದೊಳು
ನಿನಗೆ ನಾನು ನನಗೆ ನೀನು ಅಲ್ಲಿ
ಅಷ್ಟೇ ಇಷ್ಟವಾದಂತೆ…

ಸದ್ದು ಗದ್ದಲಗಳ ನಡುವೆ
ಮೈ ಮರೆಯಲಾಗದು ,
ಕಾಡುವಂತ ಕನಸುಗಳೊಡನೆ ಬೆರತು..
ನವೀನ ಹುರುಪುಗಳು ಕಸುವು
ಕಳೆದುಕೊಳ್ಳಬಹುದು ನೋಡು….
ಈ ಹೊತ್ತು ಮಲಗಿದ ಚಂದ್ರನ ಕಾದು ,
ನೀ ದನಿಯಾಗಬೇಕು ಅಲ್ಲಿ ಕೂಗಿ
ಒಮ್ಮೆಯಾದರೂ….
ಬಳಿ ಕುಳಿತು.

ಸುಡುವ ವಿರಹಕ್ಕೇನು?
ಸುಡುತಲೆ ಇರುವುದು,
ಮುತ್ತಿಕ್ಕುವ ಭಯದ ನೆರಳಿನ ಒಳಗೆ ಅವಿತು.
ಮೈ ಮರೆಯುವ ಉನ್ಮಾದದ ಘಮಲು
ಅಳಿಸಬಹುದು ,
ಸಲಿಗೆಯ ಆಟದಿ ಸೋತು…
ತಟ್ಟನೆ ಸೊಕಿದ
ತಣ್ಣನೆ ನಿನ್ನ ಪಾದದ ಅದುರುವಿಕೆ
ನನ್ನನ್ನು ಮತ್ತಷ್ಟು ಸೆಳೆದಿದೆ..
ಬಿಗಿದಪ್ಪಲು ಸೋತು ಬಿಡೋಣ ,
ಒಮ್ಮೆಯಾದರೂ…
ನೀನೊಪ್ಪಿದರಷ್ಟೇ ,
…………. ?


  • ಶ್ರೀನಿವಾಸ. ಟಿ.ಗರಣಿ (ಕವಿಗಳು, ಲೇಖಕರು)

5 1 vote
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW