‘ಜೈ ಪ್ರಜಾಪ್ರಭುತ್ವ’ ಕವನ – ಡಾ. ಲಕ್ಷ್ಮಣ ಕೌಂಟೆ
‘ಸ್ವಂತ ದುಡಿದು ಉಣ್ಣುವುದು, ಯಾರಿಗೂ ಬೇಕಿಲ್ಲ’…ಅಧಿಕಾರ ಬಯಸುವವರೇ…ಲೇಖಕ,ಕವಿ ಡಾ. ಲಕ್ಷ್ಮಣ ಕೌಂಟೆ ಅವರ ಲೇಖನದಲ್ಲಿ ಇಂದಿನ ಪ್ರಜಾಪ್ರಭುತ್ವ, ಮುಂದೆ ಓದಿ…

ಸಂತೆಯಲ್ಲೊಂದು
ಮನೆಯವ ಮಾಡಿ..!!
ಅಂದಳು ಅಕ್ಕ
ಅಂದು ಏನೇನೋ
ಭರವಸೆ ತುಂಬಿದ್ದಳು!!

ಹಾಗೆಯೇ
ಪಿತಾಮಹನ ದಯದಿಂದ
ಜನುಮ ತಾಳಿದ
ಭಾರತವೆಂಬ
ಹಿಂದೂ-ತುರ್ಕಿಸ್ತಾನದಲ್ಲಿ
ನೆಲೆ ನಿಂತ ಮೇಲೆ
ಆಜಾನ್ ಪ್ರಾರ್ಥನೆ
ಹಿಂದೂ ಮುಸ್ಲಿಮ್ ಕಲಹ
ಓಟಿನ ರಾಜಕಾರಣ
ಹಣ ಗುಡ್ಡೆ ಹಾಕುವುದಕ್ಕಾಗಿ
ಅಧಿಕಾರ ಪ್ರಾಪ್ತಿಗಾಗಿ
ಕಲ್ಲು ಹೊಡೆಸುವುದು
ಕೊಲ್ಲಿಸುವುದು
ಬೆಂಕಿ ಹತ್ತಿಸುವುದು
ಬಂದ್ ಕರ್ಫ್ಯೂ ಹೋರಾಟ
ಪ್ರತಿಭಟನೆ ಮುಂತಾದ
ರಗಳೆಗಳು ಇದ್ದವುಗಳೇ..

ಯಾರಿಗೂ ಓದಿ
ವಿದ್ಯಾವಂತರೂ ವಿಜ್ಞಾನಿಗಳೂ
ತಂತ್ರಜ್ಞಾನಿಗಳು
ಸಜ್ಜನರು ಸದ್ಗೃಹಸ್ಥರು
ಸಭ್ಯ ನಾಗರೀಕರು
ಆಗುವುದು ಬೇಕಿಲ್ಲ..
ಹಿಂದೂ ಮುಸಲ್ಮಾನ್ ಇಸಾಯಿ
ದಲಿತ ಬಲಿತ
ಮತ್ತೇನೆನೋ ಆಗಿ ಮಜಬೂತಾಗಿ
ಉಳಿದರೆ ಸಾಕು..

ನಮ್ಮ ತರುಣರನ್ನು ಸಾಕಿ ಸಲುಹಿ
ಕೆಲಸ ಕೊಡುವವರೂ
ಅವರಿರುವಲ್ಲಿಗೇ
ಬರುತ್ತಾರೆ ಹುಡುಕಿಕೊಂಡು!
ನಿಗದಿ ಪಡಿಸಿದ ಸ್ಥಳಗಳಲ್ಲಿ
ಬಾಯಿ ಬಾಯಿ ಬಡಿದುಕೊಳ್ಳಲು
ಕಲ್ಲು ಹೊಡೆಯಲೂ
ಅಗತ್ಯ ಬಿದ್ದರೂ
ಕೊಲ್ಲಲೂ ಹಚ್ಚುತ್ತಾರೆ!!

ಸ್ವಂತ ದುಡಿದು ಉಣ್ಣುವುದು
ಯಾರಿಗೂ ಬೇಕಿಲ್ಲ
ಅಧಿಕಾರ ಬಯಸುವವರೇ
ಓಟಿನ ಆಶೆಯಿಂದ
ಖಚಿತವಾಗಿ ಉಚಿತವಾಗಿ
ಉಣ್ಣುವುದಕ್ಕೆ ಕುಡಿಯುವುದಕ್ಕೆ
ಏನಾದರೂ ಕೊಟ್ಟೇ ಕೊಡುತ್ತಾರೆ!!

ಧರ್ಮಕ್ಕೂ ನಮ್ಮ ತರುಣರೇ ಇರುತ್ತಾರೆ
ಕರ್ಮಕ್ಕೂ ಅವರೇ ಇರುತ್ತಾರೆ
ಕೊಲ್ಲುವವರೂ ಅವರೇ
ಅಗತ್ಯ ಬಿದ್ದರೆ ಸಾಯುವವರೂ ಅವರೇ..
ನಮ್ಮವರ ವಿದ್ವೇಷದ ಗೋರಿಗಳ ಮೇಲೋ
ಉದ್ಘೋಷಣೆಗಳ ಮೇಲೋ
ಸ್ವಾರ್ಥ ಸಾಧಕರು ರಾಜಕಾರಣ ಮಾಡುತ್ತ
ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ

ಜೈ ಪ್ರಜಾಪ್ರಭುತ್ವ
ಜೈ ರಾಜಕಾರಣ..


  • ಡಾ. ಲಕ್ಷ್ಮಣ ಕೌಂಟೆ (ಕವಿ, ಲೇಖಕರು, ಉಪನ್ಯಾಸಕರು)

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW