ಇಂದಿನ ಆಧುನಿಕ ಜೀವನಶೈಲಿಯಿಂದಾಗಿ ಹೊಟ್ಟೆಯಲ್ಲಿ ಉರಿ ಉಂಟಾಗುತ್ತದೆ. ಎದೆ ಉರಿ, ಹುಳಿತೇಗು, ತಲೆನೋವು, ಅರ್ಧತಲೆನೋವು, ಹೊಟ್ಟೆ ನೋವು ಇತ್ಯಾದಿ ಸಮಸ್ಯೆಗಳಿಂದ ಗ್ಯಾಸ್ಟ್ರಿಕ್ ಉಂಟಾಗುತ್ತದೆ, ಇದರ ಉಪಶಯನದ ಬಗ್ಗೆ ನಾಟಿ ವೈದ್ಯೆ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ಬೇಕಾಗುವ ಸಾಮಗ್ರಿಗಳು :
- ಒಂದು ಕಪ್ ಮಜ್ಜಿಗೆ
- ಎರಡು ಚಿಟಿಕೆ ಅಡಿಗೆ ಸೋಡಾ
- ಚಿಟಿಕೆ ಇಂಗು
ಹಾಕಿ ಕುಡಿದರೆ ಗ್ಯಾಸ್ಟ್ರಿಕ್ ತಕ್ಷಣ ಶಮನವಾಗುತ್ತದೆ.
ಫೋಟೋ ಕೃಪೆ : dailyo
ಗ್ಯಾಸ್ಟ್ರಿಕ್ ಸಮಸ್ಯೆ ಗೆ ಶಾಶ್ವತ ಪರಿಹಾರಕ್ಕಾಗಿ :
- 150 ಗ್ರಾಂ ಓಮ್ ಕಾಳು
- 21 ನಿಂಬೆ ಹಣ್ಣು
- 5 ಗ್ರಾಂ ಇಂಗು
- 150 ಗ್ರಾಂ ಸೈಂದ ಲವಣ
ಮಾಡುವ ವಿಧಾನ: ಓಮ್ ಕಾಳನ್ನು ಕಸಕಡ್ಡಿ ತೆಗೆದುಕೊಂಡು ಒಂದು ಹಣ್ಣು ನಿಂಬೆರಸ ಹಿಂಡಿ ಬಿಸಿಲಿಗೆ ಒಣಗಿಸಿ ಮಾರನೇದಿನ ಮತ್ತೊಂದು ನಿಂಬೆ ಹಣ್ಣನ್ನು ಕತ್ತರಿಸಿ ಮತ್ತೆ ರಸ ಹಾಕಿ ಮಿಶ್ರ ಮಾಡಿ ಬಿಸಿಲಿನಲ್ಲಿ ಒಣಗಿಸಿ. ಹೀಗೆ ಇಪ್ಪತ್ತೊಂದು ದಿನಗಳು ಇಪ್ಪತ್ತೊಂದು ನಿಂಬೆ ಹಣ್ಣಿನ ರಸ ಹಾಕಿ ಮಿಶ್ರ ಮಾಡಬೇಕು.
ಒಣಗಿಸಿದ ನಂತರ ಇಂಗು, ಸೈಂದ ಲವಣ ಹಾಕಿ ಚೆನ್ನಾಗಿ ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.
ಫೋಟೋ ಕೃಪೆ : kannada.boldsky
ಊಟಕ್ಕೆ ಮೊದಲು ಕಾಲು ಚಮಚದಷ್ಟು ಪುಡಿಯನ್ನು ಮೂರು ತುತ್ತು ಬಿಸಿ ಬಿಸಿ ಅನ್ನ ತೆಗೆದುಕೊಂಡು ಕಲೆಸಿ ಚೆನ್ನಾಗಿ ಜಗಿದು ತಿನ್ನಿ. ದಿನಕ್ಕೆ ಮೂರು ಹೊತ್ತು ನಾಲ್ಕು ದಿನ ಉಪಯೋಗಿಸುತ್ತಿದ್ದಂತೆ ಗ್ಯಾಸ್ಟ್ರಿಕ್ ಗುಣವಾಗಲು ಪ್ರಾರಂಭ.
ಮಾಂಸಾಹಾರ, ಹಸಿರು ಮೆಣಸಿನಕಾಯಿ, ಆಲೂಗಡ್ಡೆ ತಿನ್ನುವ ಹಾಗಿಲ್ಲ. ಗ್ಯಾಸ್ಟ್ರಿಕ್ ಗುಣವಾಗುತ್ತದೆ. ನಂತರದ ದಿನಗಳಲ್ಲಿ ದಿನಕ್ಕೆ ಎರಡು ಬಾರಿ ತೆಗೆದು ಕೊಳ್ಳಬಹುದು. ಇದೇ ಕ್ರಮದಲ್ಲಿ ತಯಾರಿಸಿದ ಮೆಡಿಸಿನ್ ಗೆ ಕಪ್ಪು ಉಪ್ಪು, ಕಪ್ಪು ಜೀರಿಗೆ ಮತ್ತು ಹಲವು ಮೆಡಿಸಿನ್ ಶಂಖ ಭಸ್ಮದಂತಹ ಹಲವಾರು ಭಸ್ಮಗಳನ್ನು ಹಾಕಿ ರೆಡಿ ಮಾಡಲಾಗಿದೆ.
ಬೇಕಾದವರು ಸಂಪರ್ಕಿಸಬಹುದು : 99801 82883
- ಸುಮನಾ ಮಳಲಗದ್ದೆ (ನಾಟಿವೈದ್ಯರು) ಸಾಗರ