ಮೀನಾಕ್ಷಿ ಮನೋಹರ ಅವರು ಓಸಿ, ಓಸಿ ಪಾರ್ಟಿಯ ಅರ್ಥವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಓಸಿ (OC) ಅವನು ಬಿಡು. ಯಾವಾಗಲೂ ಓಸಿ. ದುಡ್ಡು ಖರ್ಚು ಮಾಡೋದೇ ಇಲ್ಲ. ಸರ್ಕಾರದ ಗ್ಯಾರಂಟಿಗಳಲ್ಲೇ ಅವರ ಜೀವನ. ಒಂಥರಾ ಎಲ್ಲಾ ಓಸಿ. ಯಾವುದೇ ಕಾರ್ಯವಾದರೂ ದುಡ್ಡು ಖರ್ಚಾಗಬಾರದು. ಕೆಲವರಿಗೆ ದುಡ್ಡಿಲ್ಲದೆಯೇ ಕೆಲಸವಾಗಬೇಕೆಂಬ ಆಸೆ. ಅಂತಹವರಿಗೆ ಓಸಿ ಪಾರ್ಟಿ ಎಂದೇ ಹೆಸರು.
ಆ ಹೆಸರು ಬಂದಿದ್ದಾದರೂ ಹೇಗೆ? ಸ್ವಲ್ಪ ಭೂತಕಾಲಕ್ಕೆ ಹೋಗಬೇಕು. ಸ್ವಲ್ಪ ವರ್ಷಗಳ ಹಿಂದೆ ನಮ್ಮ ದೇಶದಲ್ಲಿ Indian posts and telegraphs ಎಂಬ ಸಂಸ್ಥೆ ಅಸ್ತಿತ್ವದಲ್ಲಿತ್ತು. ಈಗ ಬರೀ ಭಾರತೀಯ ಅಂಚೆ ಇಲಾಖೆಯಾಗಿದೆ. ಅದು ಜನರಿಗೆ ಸಂಪರ್ಕ ಸೇವೆಯನ್ನು ಒದಗಿಸುತ್ತಿತ್ತು. Card, inland letter, money order, telegrams ಮುಂತಾದ ರೀತಿಯಲ್ಲಿ ಆ ಸೇವೆಗಳು ಇರುತ್ತಿತ್ತು.
Card, inland letter ಗಳಿಗೆ , ದುಡ್ಡು ಕೊಟ್ಟು ಕೊಂಡುಕೊಂಡು, card ಆದರೆ open communication. ಅದರಲ್ಲಿ ವಿಳಾಸ ಬರೆಯುವ ಜಾಗದಲ್ಲಿ ವಿಳಾಸ ಬರೆದರೆ ಸಾಕು. ವಿಷಯವನ್ನು ಯಾರು ಬೇಕಾದರೂ ಓದಬಹುದಿತ್ತು. ವಿಷಯ ಬರೆದು, ವಿಳಾಸ ಬರೆದು , ಅಲ್ಲಲ್ಲಿ ಇಟ್ಟಿರುತ್ತಿದ್ದ ಕೆಂಪು post box ನಲ್ಲಿ ಹಾಕಿದರೆ ಸಾಕು. ಅದನ್ನು ನಿಗದಿ ಪಡಿಸಿದ ಸಮಯದಲ್ಲಿ ಅಂಚೆಯವರು ಬಂದು, ಅದರೊಳಗೆ ಸಂಗ್ರಹವಾಗಿದ್ದ ಪತ್ರಗಳನ್ನೆಲ್ಲಾ clear ಮಾಡಿ, post officeಗೆ ತೆಗೆದುಕೊಂಡು ಹೋಗಿ, ಅದರ ಮೇಲೆ ಅಂಚೆ ಕಚೇರಿ ಮುದ್ರೆಯೊತ್ತಿ, ಅವುಗಳನ್ನು ವಿಳಾಸದ ಮೇಲೆ ಅಂಚೆ ಬ್ಯಾಗ್ ನಲ್ಲಿ ಕಟ್ಟಿ , ಆ ಊರಿಗೆ ಬರುತ್ತಿದ್ದ ಬಸ್ಸಿನಲ್ಲಿ ಅಂಚೆ ಇಲಾಖೆಯ ಮುಖ್ಯ ಕಚೇರಿಗೆ ಕಳಿಸುತ್ತಿದ್ದರು.
ಈಗ ಇಲ್ಲವೇ ಇಲ್ಲ. legragph Te. stsInland letter, envelope ಮತ್ತೆ ಎಲ್ಲಾ ಸೇವೆಗಳಿಗೂ same procedure . ಆದರೆ , ಆ ಸರ್ವೀಸ್ ಗಳ ಅವಶ್ಯಕತೆಗೆ ತಕ್ಕಂತೆ ಅವುಗಳ ಮೇಲೆ ಸ್ಟ್ಯಾಂಪ್ ಹಚ್ಚಬೇಕು. ಇಂದಿಗೂ ಅಂಚೆ ಕಚೇರಿಯಲ್ಲಿ Basic operating model ಅದೇ.
ಕೆಲವೊಮ್ಮೆ, bulk posting, ಕಛೇರಿಯ ಕಾರ್ಯ ಸಂಬಂಧ ಮಾಡುವಾಗ, ಈ stamp ಹಚ್ಚುವುದು ಯಾಂತ್ರಿಕ, recurring. ಅಂತಹ ಸಮಯದಲ್ಲಿ ಒಟ್ಟಿಗೆ ಒಂದಷ್ಟು ದುಡ್ಡನ್ನು ಒಟ್ಟಿಗೇ ಕಟ್ಟಿ, post office ನವರು ಆ ಕಂಪನಿಯ ಪತ್ರಗಳ ಮೇಲೆ, certicate of posting ಎಂಬ ಮುದ್ರೆಯೊತ್ಚುವುದು ಈಗಲೂ ಉಂಟು. ಉದಾ; LIC letters, govt intimations ಇತ್ಯಾದಿ.
ಅದು ಉಚಿತ ಸೇವೆ ಅಲ್ಲ. Diminishing balance, ಸಮಯ ಉಳಿತಾಯ , fool proof method. ಹಿಂದೆ ,ಭಾರತವನ್ನು ಬ್ರಿಟೀಷರು ಆಳಿದುದು ಗೊತ್ತಿರುವ ವಿಷಯವೇ ಆಗಿದೆ. ಅದು ಶುರುವಾಗಿದ್ದು East India company ಯ ಆಡಳಿತದಿಂದ. ಆಗ ಅವರು, ಕಂಪನಿಯ ಪತ್ರಗಳ ಮೇಲೆ On Company Service ಎಂದು ಬರೆದು, post ಮಾಡುತ್ತಿದ್ದರು. ಅದರ Short form OC.
ಅದಕ್ಕೆ ಸ್ಟ್ಯಾಂಪ್ ಹಚ್ಚದೆ, ಹಾಗೆ ಮುದ್ರೆಯೊತ್ತಿ ಪೋಸ್ಟ ಮಾಡುತ್ತಿದ್ದರಿಂದ ಅದೊಂದು ರೀತಿಯ ಬಿಟ್ಟಿ ಸೇವೆ ಎಂದು ಜನವಾಸದಲ್ಲಿ ಬೇರೂರಿತು. ಬಳಕೆ ಹೆಚ್ಚಿದಂತೆಲ್ಲ, ಸೋಮಾರಿತನಕ್ಕೆ, ಜಿಪುಣತನದ ವ್ಯಕ್ತಿತ್ವಕ್ಕೆ ಕಾಸು ಖರ್ಚು ಮಾಡದವರಿಗೆ. OC party ಎಂದೇ ಹೆಸರಾಯಿತು.
ಅಂಚೆ ಇಲಾಖೆಯಲ್ಲಿ OC ಗೆ ಮೊದಲೇ ಇಂತಿಷ್ಟು ಎಂದು ದುಡ್ಡು ಕಟ್ಟಬೇಕು. ಆದರೆ OC party ಸಿಕ್ಕಲ್ಲಿ , ದುಡ್ಡು ಮೋಸ ಹೋಗಲು ತಯಾರಿರಬೇಕು ಅಷ್ಟೇ ವ್ಯತ್ಯಾಸ. ಇಂದಿಗೂ OC party ಪದ ಬಳಕೆ ಚಾಲ್ತಿಯಲ್ಲಿದೆ. OC party ಗಳೂ ಸುತ್ಮುತ್ಲಿದ್ದಾರೆ .ಎಚ್ಚರಿಕೆ
- ಮೀನಾಕ್ಷಿ ಮನೋಹರ
