ಸಾಯಂಕಾಲಕ್ಕೊಂದು ರುಚಿಕರ ಆಹಾರ

ಸಂಜೆ ಸಮಯ ಎಲ್ಲರೂ ಇಷ್ಟಪಡುವ ಆರೋಗ್ಯಕರ, ರುಚಿಕರ ಆಹಾರವನ್ನು ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

.

ಬೇಕಾಗುವ ಪದಾರ್ಥಗಳು :

  • ಮೈದಾ – 1 ಕಪ್
  • ಅಕ್ಕಿ ಹಿಟ್ಟು – 2 ಸ್ಪೂನ್
  • ಉಪ್ಪು – ರುಚಿಗೆ ತಕ್ಕಷ್ಟು
  • ಮೊಳಕೆ ಹೆಸರು ಕಾಳು – ಸ್ವಲ್ಪ
  • ಕ್ಯಾರೆಟ್ ತುರಿ – ಸ್ವಲ್ಪ
  • ಅಚ್ಚಮೇಣಸಿನ ಪುಡಿ – ರುಚಿಗೆ ತಕ್ಕಷ್ಟು
  • ಲಿಂಬೆರಸ – ಸ್ವಲ್ಪ

ಮಾಡುವ ವಿಧಾನ :

ಮೊದಲಿಗೆ ಮೈದಾ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು ಹಾಕಿ ಚೆನ್ನಾಗಿ ಬೆರೆಸಿ, ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ ಇಡಿ. ಈಗ ಹೆಸರು ಕಾಳು, ಕ್ಯಾರೆಟ್ ತುರಿ ಮಿಕ್ಸ್ ಮಾಡಿ ಉಪ್ಪು, ಖಾರ, ಲಿಂಬೆರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಕಲಸಿಟ್ಟ ಹಟ್ಟಿನಿಂದ ಪೂರಿ ಲಟ್ಟಿಸಿಕೊಳ್ಳಿ.

This slideshow requires JavaScript.

 

ಒಂದು ಪೂರಿ ಮೇಲೆ ಕಲಸಿಟ್ಟ ಮೊಳಕೆ ಕಾಳಿನ ಮಿಶ್ರಣ ಇಟ್ಟು ಅದರ ಮೇಲೆ ಇನ್ನೊಂದು ಪೂರಿ ಮುಚ್ಚಿ ಸುತ್ತ ಮಡಚಿ ಜೋರಾಗಿ ಪ್ರೆಸ್ ಮಾಡಿ ಫುಲ್ ಕವರ್ ಆದ ಮೇಲೆ ಕಾದ ಎಣ್ಣೆಯಲ್ಲಿ ಹೂಂಬಣ್ಣ ಬರುವ ತನಕ ಕರಿಯಿರಿ. ರುಚಿಯಾದ ಪ್ಯಾಟೀಸ್ ರೆಡಿ. ಟೊಮೆಟೊ ಸಾಸ್ ಜೊತೆ ಸವಿಯಿರಿ. ತ್ರಿಕೋನ, ರೌಂಡ್ ಹೇಗೆ ಬೇಕಾದ್ರೂ ಯಾವ ಸೈಜ್,ಯಾವ ಆಕಾರ ಬೇಕಾದ್ರೂ ಮಾಡಬಹುದು.


  • ಶಕುಂತಲಾ ಸವಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading