ಸಾಬೂದಾನ ಕುರುಕಲು ತಿಂಡಿ

ಸಾಬೂದಾನ ಬಳಸಿ ಒಂದು ಕುರುಕಲು ತಿಂಡಿ ಮಾಡುವ ವಿಧಾನವನ್ನು ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ನಿಮ್ಮ ಮನೆಯಲ್ಲಿ ಮಾಡಿ ಸವಿಯಿರಿ…

ಬೇಕಾಗುವ ಪದಾರ್ಥಗಳು :

  • ಸಾಬುದಾನ – 1ಕಪ್
  •  ದಪ್ಪ ಅವಲಕ್ಕಿ – 1 ಕಪ್
  •  ಕಡಲೆಬೀಜ – ಅರ್ಧ ಕಪ್
  •  ಹುರಿಗಡಲೆ – ಅರ್ಧ ಕಪ್
  •  ಕೊಬ್ಬರಿ ಚೂರುಗಳು – ಸ್ವಲ್ಪ
  • ಕರಿಬೇವಿನ ಸೊಪ್ಪು-  ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಷ್ಟು
  • ಅಚ್ಚ ಮೆಣಸಿನ ಪುಡಿ – ರುಚಿಗೆ ತಕ್ಕಷ್ಟು
  • ಅರಿಶಿನ ಪುಡಿ – ಕಾಲು ಚಮಚ
  • ಕರಿಯಲು ಎಣ್ಣೆ

ಮಾಡುವ ವಿಧಾನ :

ಮೊದಲಿಗೆ ಬಾಣಲಿಯಲ್ಲಿ ಎಣ್ಣೆ ಹಾಕಿ ಕಾಯಲು ಇಡಿ. ಚೆನ್ನಾಗಿ ಕಾದ ನಂತರ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಒಂದೊಂದಾಗಿ ಕರಿಯುತ್ತ ಒಂದು ದೊಡ್ಡ ಅಗಲವಾದ ಬೇಸನ್ ಗೆ ಹಾಕಿ. ಈಗ ಉಪ್ಪು, ಖಾರ, ಅರಶಿನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. .ಒಂದೊಳ್ಳೆ ಕುರುಕಲು ತಿಂಡಿ ರೆಡಿ. ಮಾಡಿಟ್ಟರೆ ಬಿಸಿ ಬಿಸಿ ಕಾಫಿ , ಟೀ ಜೊತೆ ಒಳ್ಳೆ ಟೈಂ ಪಾಸ್.


  • ಶಕುಂತಲಾ ಸವಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading