‘ನಮ್ಮ ಸ್ನೇಹದ ಹಬ್ಬ’ ಕವನ

ಗೆಳೆಯರೇ ನೀವು ನಮ್ಮ ಸಂಪತ್ತು, ಪೆನ್ಸಿಲ್ ಕೊಟ್ಟು ಬರೆದ ಕ್ಷಣಗಳು, ಶುಭಾಶಯ ಸ್ನೇಹ ದಿನದ ಶುಭಾಶಯ…ಕವಿ ಟಿ.ಪಿ.ಉಮೇಶ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಅಮ್ಮನ ಪ್ರೀತಿ ಮಮತೆಯ ನೆರಳು
ಅಪ್ಪನು ಕೊಟ್ಟ ಧೈರ್ಯದ ಬೆಳಕು
ಶಾಲೆಯಿಂದಲೇ ಸಾವಿರಾರು ನೆನಪು
ಗೆಳೆಯರೇ ನೀವು ನಮ್ಮ ಸಂಪತ್ತು
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ಬೆಂಚು ಹಂಚಿ ಕೂತ ದಿನಗಳು
ಪೆನ್ಸಿಲ್ ಕೊಟ್ಟು ಬರೆದ ಕ್ಷಣಗಳು
ಅಳುವಿನಲ್ಲೂ ನಗುವಿನಲ್ಲೂ
ಜೊತೆಯಾಗಿ ನಿಂತ ಗೆಳೆಯರೇ
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ಆಟದ ಮೈದಾನದಿ ಓಡಿದವರು
ಸೋತಾಗಲೆಲ್ಲ ಕೈಹಿಡಿದವರು
ಗೆದ್ದಾಗಲೆಲ್ಲ ಚಪ್ಪಾಳೆ ತಟ್ಟಿದವರು
ಅಂತರಂಗದ ಮಿತ್ರರೆ ನೀವೆಲ್ಲರು
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ಪುಸ್ತಕಗಳ ಪಾಠಗಳನ್ನೆಲ್ಲ ಕಲಿತು
ಜೀವನದಿ ಸರಿದಾರಿಯಲ್ಲಿ ನಡೆದು
ಒಳ್ಳೆಯ ಮಾತುಗಳನ್ನು ಕಲಿತು
ಒಡನಾಡಿಯಾಗಿ ನಾವು ಬೆಳೆದವರು
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ಮಳೆ ಬಂದಾಗಲೆಲ್ಲ ಛತ್ರಿಯಾದೆ
ಸುಡುಬಿಸಿಲ ಧಗೆಗೆಲ್ಲ ನೆರಳಾದೆ
ಕತ್ತಲಿಗೆ ಬೆಳಗೊ ದೀಪವಾದ
ನೀವೆಂದು ಬದುಕಿನ ಗೆಳೆಯರೇ
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ಕಷ್ಟ ಬಂದಾಗ ಧೈರ್ಯ ತುಂಬಿ
ನೋವು ಬಂದರೆ ಭುಜವ ನೀಡಿ
ಬೀಳುವ ಕ್ಷಣಗಳಲ್ಲಿ ಕೈಹಿಡಿದು
ಭುಜಕ್ಕೆ ಭುಜವಾದ ಮಿತ್ರರೇ
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ಜಾತಿ ಮತಗಳ ಗೋಡೆ ಮೀರಿ
ಬೇಧ ಭಾವನೆಗಳ ದೂರ ಮಾಡಿ
ಸ್ನೇಹ ಪ್ರೀತಿಯ ಸೇತುವೆ ಕಟ್ಟಿದ
ಸೌಹಾರ್ದತೆ ಮೆರೆದ ಸ್ನೇಹಿತರೇ
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ಗಿಡಮರಗಳ ಬೆಳೆಸುವ ಕೈಗಳಾಗಿ
ನೀರು ಉಳಿಸುವ ಮನಗಳಾಗಿ
ನಮ್ಮ ಭೂಮಿ ಕಾವಲುಗಾರರಾಗಿ
ಜೊತೆಗೂಡಿ ಕಲಿತಂತ ಗೆಳೆಯರೇ
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ಸುಳ್ಳು ಹೇಳದಂತ ಸತ್ಯದ ಹಾದಿ
ದುಷ್ಟತನ ದೂರ ಮಾಡುವ ನೀತಿ
ಒಳ್ಳೆಯ ಬದುಕು ಕಟ್ಟುವ ದಾರಿ
ತೋರಿದಂತ ಆತ್ಮಬಂಧು ಮಿತ್ರರೇ
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ನಿಮ್ಮ ನಗುವೆ ನಮ್ಮ ಸಂತೋಷ
ನಿಮ್ಮ ಗೆಲುವಿನಲ್ಲಿ ನಮ್ಮ ಹರ್ಷ
ಜೀವನವೆಂಬ ನಿಲ್ಲದ ಪಯಣದಲ್ಲಿ
ದಾರಿ ಮರೆಯದೆ ಜೊತೆಯಿರೋಣ
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ಕೈ ಕೈ ಹಿಡಿದುಕೊಂಡು ಸಾಗೋಣ
ಹೊಸ ಕನಸುಗಳನ್ನು ಸಾಧಿಸೋಣ
ಸ್ನೇಹವೆಂಬ ಅಮೃತಧಾರೆಯಲ್ಲಿ
ಸುಂದರ ಸಮೃದ್ಧ ಲೋಕ ಕಟ್ಟೋಣ
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ


  • ಟಿ.ಪಿ.ಉಮೇಶ್ – ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪುರಸ್ಕಾರ ಪುರಸ್ಕೃತರು, ಕವಿಗಳು,

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading