ಸೋರೆಕಾಯಿ ಹಲ್ವಾ ರುಚಿ

ಸೋರೆಕಾಯಿ ಹಲ್ವಾ ಒಂದು ರುಚಿಕರವಾದ ಮತ್ತು ಆರೋಗ್ಯಕರ ಸಿಹಿ ಖಾದ್ಯವಾಗಿದ್ದು, ಇದನ್ನು ಮಾಡುವ ವಿಧಾನವನ್ನು ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಬೇಕಾಗುವ ಪದಾರ್ಥಗಳು :

  • ಸೋರೆಕಾಯಿ – ಒಂದು ತುಂಡು
  • ಸಕ್ಕರೆ – ಒಂದು ಕಪ್
  • ಗೋಡಂಬಿ – ಸ್ವಲ್ಪ
  • ದ್ರಾಕ್ಷಿ – ಸ್ವಲ್ಪ
  • ಬಾದಾಮಿ –  ಸ್ವಲ್ಪ
  • ತುಪ್ಪ – ಅರ್ಧ ಕಪ್
  • ಹಾಲು – ಒಂದು  ಕಪ್

ಮಾಡುವ ವಿಧಾನ :

ಸೋರೆಕಾಯಿ ಸಿಪ್ಪೆ ತೆಗೆದು ತೊಳೆದು ತುರಿದು ಕೊಳ್ಳಿ. ಒಂದು ಬಾಣಲಿಗೆ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ, ಬಾದಾಮಿ ಹಾಕಿ ಫ್ರೈ ಮಾಡಿ. ತುರಿದ ಸೋರೆಕಾಯಿ ಹಾಕಿ ಚೆನ್ನಾಗಿ ಹುರಿಯಿರಿ.

ಮುಕ್ಕಾಲು ಭಾಗ ಹುರಿದ ನಂತರ ಇನ್ನೂ ಸ್ವಲ್ಪ ತುಪ್ಪ ಹಾಗೂ ಸಕ್ಕರೆ ಏಲಕ್ಕಿ ಪುಡಿ ಹಾಕಿ. ಇನ್ನೂ ಸ್ವಲ್ಪ ಹೊತ್ತು ಹುರಿದು ಹಾಲು ಹಾಕಿ. ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ.
ತಳ ಬಿಡಲು ಪ್ರಾರಂಭಿಸಿದಾಗ ಬೌಲ್ ಗೆ ವರ್ಗಾಯಿಸಿ. ರುಚಿಯಾದ ಸೋರೆಕಾಯಿ ಹಲ್ವಾ ರೆಡಿ.


  • ಶಕುಂತಲಾ ಸವಿ – ನಳಪಾಕ ಪ್ರವೀಣೆ, ಮೈಸೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading