‘ಹಳೆ ಪಳೆಯ ಸಂಜೆಯಲ್ಲಿ’ ಕವನ

 

ವಯಸ್ಸಾದಾಗ ದೇವಾಲಯಗಳೂ ಔಷಧಾಲಯಗಳೂ ಹತ್ತಿರವಾಗುತ್ತವೆ…ಕವಿ, ಲೇಖಕರಾದ ವೈ.ಎಂ.ಯಾಕೊಳ್ಳಿ ಅವರು ಲೇಖನಿಯಲ್ಲಿ ಮುಪ್ಪಾದಾಗ, ತಪ್ಪದೆ ಮುಂದೆ ಓದಿ…

ವಯಸ್ಸಾದಾಗ
ಗೋಡೆಯ‌ ಮೇಲಿನ
ಗಡಿಯಾರವೂ
ನಿಲ್ಲುತ್ತದೆ

ಹಳೆಯದಾದಂತೆ
ಹೊಸದೆನಿಸಿದ ಗಾಡಿಯೂ
ರಿಪೇರಿಗೆ ಬರುತ್ತದೆ

ಹೊಸ ಹರೆಯದ
ಹುಡುಗ ಹುಡುಗಿಯರ
ಮುಖದ ಮೇಲಿನ
ಮೊಡವೆ ಗುರುತುಗಳು
ಸುರುಳಿ ಬಿದ್ದ
ಚರ್ಮದ ತಿರುವುಗಳಾಗುತ್ತವೆ

ಮರೆತು ಹೋದ
ಹುಡುಗಿ
ಗಂಡನೊಂದಿಗೆ
ಅದೇಕೋ
ಆಸ್ಪತ್ರೆಯ ತಿರುವಿನಲ್ಲೇ
ಎದುರಾಗುತ್ತಾಳೆ

ಬಣ್ಣ ಬಳಿದು
ಅಲಂಕೃತ ಗೊಂಡಿದ್ದ
ಹಳೆಮನೆ ಗೆದ್ದಲು
ಬಣ್ಣಕ್ಕೆ ತಿರುಗಿ
ಮಾಸಿದಂತೆ
ಕಾಣುತ್ತದೆ.

ದೇವಾಲಯಗಳೂ
ಔಷದಾಲಯಗಳೂ
ಹತ್ತಿರವಾಗುತ್ತವೆ

ತಿರುಗುವ ಕಾಲದ
ಗಡಿಯಾರ
ಅಣಕಿಸುತ್ತದೆ
ಅಂಕಿ ಗಿರಗಿರನೆ
ಸುತ್ತುತ್ತವೆ

ನಾನೂ ನೀನೂ
ಹಳಬರಾಗುತ್ತೇವೆ
ಗೆಳೆಯ, ಬಾರದೂರಿನ
ದಾರಿ ಸಮಿಪಿಸುತ್ತದೆ.


  • ಡಾ. ವೈ.ಎಂ.ಯಾಕೊಳ್ಳಿ – ಹಿರಿಯ ಸಾಹಿತಿಗಳು, ಚಿಂತಕರು, ಸವದತ್ತಿ

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW