ಕವಿ, ಲೇಖಕರಾದ ವೈ.ಎಂ.ಯಾಕೊಳ್ಳಿ ಅವರು ಲೇಖನಿಯಲ್ಲಿ ಮೂಡಿದ ತುಣುಕುಗಳನ್ನು ತಪ್ಪದೆ ಪೂರ್ತಿಯಾಗಿ ಓದಿ…
೧
ಬರೆದುದೆಲ್ಲ ಅರ್ಥ
ಮಾಡಿಕೋ ಬೇಡ ಅದು
ಒಮ್ಮೊಮ್ಮೆ ಬರಿ ಮನದ
ತಹತಹವಷ್ಟೇ ಆಗಿರಬಹುದು
೨
ಓದು ವಾದಗಳು
ವಿವರಿಸಲಾರದ
ಬಂಧವೇ
ನನ್ನ ನಿನ್ನದು
೩
ನಿನ್ನ ನೆನೆಯಲು
ಸಮಯ ಸಂದರ್ಭ
ನನಗೆ ಬೇಕಿಲ್ಲ
ಇರುವ ಪ್ರತಿ ಚಣವೂ
ಅದು ಉಸಿರ ಬಡಿತ
೪
ಎಲ್ಲ ಎಲ್ಲವನೂ
ವಿವರಿಸಲಾರೆ
ಕೆಲವು ಅರ್ಥಹೀನವಿದ್ದರೇನೆ
ಅರ್ಥ ಪಡೆದಿರುತ್ತವೆ
೫
ಅವರಿಗೆ
ಬರಿ ನನ್ನ ನಿನ್ನದೇ
ಚಿಂತೆ ಪುಣ್ಯಾತ್ಮರು
ನಮ್ಮನ್ನು ಜಗಜ್ಜಾಹಿರು
ಮಾಡಿದ ಅವರಿಗೆ
ನಾವು ಋಣಿ
- ವೈ.ಎಂ.ಯಾಕೊಳ್ಳಿ – ಹಿರಿಯ ಸಾಹಿತಿಗಳು, ಚಿಂತಕರು, ಸವದತ್ತಿ.
