ಮಹಾಕಾವ್ಯದ ಹಿರಿಮೆಯೇ ‘ರಾಮಾಯಣ ಪಾರ್ಟ್ ೧’

‘ರಾಮಾಯಣ ಪಾರ್ಟ್ 1’ ಚಲನಚಿತ್ರದ ಕುರಿತು ನಮ್ಮ ಅಚ್ಚಕನ್ನಡಿಗ ಯಶ್ ಅವರು ಇಲ್ಲಿ ರಾವಣನಾಗಿ ವಿಜೃಂಭಿಸಿದ್ದಾರೆ. ಸಿನಿಮಾ ನೋಡುಗರಿಗೆ ಅಕ್ಷರಶಃ ರೋಮಾಂಚನ ಉಂಟುಮಾಡುತ್ತದೆ. ಸಾಹಸಮಯ ಯುದ್ಧದ ಸನ್ನಿವೇಶಗಳು ಪ್ರತಿಯೊಂದರಲ್ಲೂ ಮೈಜುಮ್ಮೆನಿಸುವ ಶ್ರೀಮಂತಿಕೆ ಎದ್ದು ಕಾಣುತ್ತದೆ. ಈ ಸಿನಿಮಾದ ಕುರಿತು ಲೇಖಕರಾದ ಚೇತನ ಭಾರ್ಗವ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನೆನ್ನೆ ನಾವೆಲ್ಲರೂ ಕುಟುಂಬ ಸಮೇತ ಹೋಗಿ ವೀಕ್ಷಿಸಿದ ‘ರಾಮಾಯಣ ಪಾರ್ಟ್ 1’ ಚಲನಚಿತ್ರವು ಬಹಳ ದಿನಗಳ ಕಾಲ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತಹ ಒಂದು ಅದ್ಭುತ ಅನುಭವ. ಹಲವು ದಿನಗಳ ನಂತರ ಇಡೀ ಕುಟುಂಬ ಒಟ್ಟಾಗಿ ಸವಿದ ಈ ಮಹಾಕಾವ್ಯದ ದೃಶ್ಯ ವೈಭವ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ.

ನೆನ್ನೆ ನಾವೆಲ್ಲರೂ ಕುಟುಂಬ ಸಮೇತ ಹೋಗಿ ವೀಕ್ಷಿಸಿದ ‘ರಾಮಾಯಣ ಪಾರ್ಟ್ 1’ ಚಲನಚಿತ್ರವು ಬಹಳ ದಿನಗಳ ಕಾಲ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತಹ ಒಂದು ಅದ್ಭುತ ಅನುಭವ. ಹಲವು ದಿನಗಳ ನಂತರ ಇಡೀ ಕುಟುಂಬ ಒಟ್ಟಾಗಿ ಸವಿದ ಈ ಮಹಾಕಾವ್ಯದ ದೃಶ್ಯ ವೈಭವ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ.

ನಿರ್ದೇಶಕ ನಿತೀಶ್ ತಿವಾರಿ ಅವರ ಅಮೋಘ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ, ಮೂಲತಃ ವಾಲ್ಮೀಕಿ ರಾಮಾಯಣದಿಂದ ಪ್ರೇರಿತವಾಗಿದ್ದರೂ, ಇತರ ರಾಮಾಯಣದ ಆವೃತ್ತಿಗಳ ಪ್ರಭಾವವನ್ನೂ ಅತ್ಯಂತ ಸುಂದರವಾಗಿ ಮೈಗೂಡಿಸಿಕೊಂಡಿದೆ. ಮೊದಲ ದೃಶ್ಯದಿಂದ ಹಿಡಿದು ಕೊನೆಯವರೆಗೂ ಈ ಮಹಾಕಾವ್ಯವನ್ನು ಒಂದು ‘ದೃಶ್ಯ ಕಾವ್ಯ’ವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಸಂಪೂರ್ಣವಾಗಿ ಗೆದ್ದಿದ್ದಾರೆ.

ಫೋಟೋ ಕೃಪೆ : ಅಂತರ್ಜಾಲ

ನಮ್ಮ ಅಚ್ಚಕನ್ನಡಿಗ ಯಶ್ ಅವರು ಇಲ್ಲಿ ರಾವಣನಾಗಿ ವಿಜೃಂಭಿಸಿರುವುದು ನೋಡುಗರಿಗೆ ಅಕ್ಷರಶಃ ರೋಮಾಂಚನ ಉಂಟುಮಾಡುತ್ತದೆ. ರಾವಣನ ಪಾತ್ರದಲ್ಲಿ ಅವರ ಗತ್ತು, ತೂಕ, ವಸ್ತ್ರವಿನ್ಯಾಸ ಹಾಗೂ ಸಂಭಾಷಣೆ ಹೇಳುವ ವೈಖರಿ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. ಮಾಸ್ ಹೀರೋ ಆಗಿ ಮೆರೆದಿರುವ ಯಶ್, ಇಲ್ಲಿ ಲಂಕೇಶನ ಪಾತ್ರದ ಆಳವನ್ನು ಅರಿತು ಅದಕ್ಕೆ ಪೂರ್ಣ ಪ್ರಮಾಣದ ನ್ಯಾಯ ಒದಗಿಸಿದ್ದಾರೆ. ರಾಕ್ಷಸ ವಂಶದ ಔನ್ನತ್ಯಕ್ಕಾಗಿ ರಾವಣ ನಡೆಸುವ ಸಾಹಸ, ಆತನ ಕಠಿಣ ತಪಸ್ಸು ಹಾಗೂ ಯುದ್ಧದ ಸನ್ನಿವೇಶಗಳು ಗ್ರಾಫಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಯ (AI) ಸಹಾಯದಿಂದ ರೂಪಿತವಾಗಿದ್ದರೂ, ತೆರೆಯ ಮೇಲೆ ಅತ್ಯಂತ ನೈಜವಾಗಿ ಮೂಡಿಬಂದಿವೆ. ರಾಕ್ಷಸರ ದೈತ್ಯ ಗಾತ್ರ-ಆಕಾರಗಳು, ಮನಮೋಹಕ ಕಾಡಿನ ದೃಶ್ಯಗಳು, ಅರಮನೆಯ ದರ್ಬಾರಿನ ವೈಭವ ಹಾಗೂ ಸಾಹಸಮಯ ಯುದ್ಧದ ಸನ್ನಿವೇಶಗಳು ಪ್ರತಿಯೊಂದರಲ್ಲೂ ಮೈಜುಮ್ಮೆನಿಸುವ ಶ್ರೀಮಂತಿಕೆ ಎದ್ದು ಕಾಣುತ್ತದೆ.

ಇನ್ನೊಂದೆಡೆ, ಮರ್ಯಾದಾ ಪುರುಷೋತ್ತಮ ರಾಮನಾಗಿ ರಣಬೀರ್ ಕಪೂರ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಅವರ ಅಭಿನಯ ನಿಜಕ್ಕೂ ಅಮೋಘ. ಶಿವಧನುಸ್ಸನ್ನು ಎತ್ತುವ ರೋಮಾಂಚಕ ದೃಶ್ಯ, ಸೀತೆಯ ಸ್ವಯಂವರದ ವೈಭವ, ರಾಮನ ಪಾತ್ರದಲ್ಲಿರುವ ಆಳವಾದ ಪ್ರಶಾಂತತೆ ಹಾಗೂ ಸಾಯಿ ಪಲ್ಲವಿ ಅವರಲ್ಲಿ ಮೇಳೈಸಿರುವ ಸೀತೆಯ ಸ್ನಿಗ್ಧ ಸೌಂದರ್ಯ ನೋಡುಗರ ಗಮನ ಸೆಳೆಯುತ್ತದೆ. ಈ ಪೌರಾಣಿಕ ಪಾತ್ರಗಳಿಗೆ ಜೀವ ತುಂಬಲು ಇಬ್ಬರೂ ಕಲಾವಿದರು ಅಪಾರ ಶ್ರದ್ಧೆಯಿಂದ ತಯಾರಾಗಿರುವುದು ತೆರೆಯ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ.

ಫೋಟೋ ಕೃಪೆ : ಅಂತರ್ಜಾಲ

ಕಥೆಯ ದ್ವಿತಿಯಾರ್ಧದಲ್ಲಿ ರಾಮನ ಕಥಾನಕ ಕೊಂಚ ವೇಗವಾಗಿ ಓಡಿಸಿದಂತೆ ಭಾಸವಾದರೂ, ಬರುವ ಪ್ರತಿಯೊಂದು ಪಾತ್ರ ಹಾಗೂ ದೃಶ್ಯಗಳು ನೇರವಾಗಿ ಮನಮುಟ್ಟುತ್ತವೆ. ರಾಮ, ಸೀತೆ, ಲಕ್ಷ್ಮಣ ಹಾಗೂ ರಾವಣನ ಸುತ್ತ ಹೆಣೆದುಕೊಂಡಿರುವ ಈ ಮೊದಲ ಭಾಗದ ಕಥೆಯು, ಅಂತಿಮವಾಗಿ ಜಟಾಯುವಿನ ಹೋರಾಟ ಮತ್ತು ಮರಣದ ದೃಶ್ಯದೊಂದಿಗೆ ಮುಕ್ತಾಯವಾಗುತ್ತದೆ. ಸೀತೆಯ ರಕ್ಷಣೆಗಾಗಿ ರಾವಣನೊಡನೆ ಜಟಾಯು ನಡೆಸುವ ಆ ಭೀಕರ ಹೋರಾಟ ಮತ್ತು ಪ್ರಾಣತ್ಯಾಗ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸದೇ ಇರದು.
ಒಟ್ಟಿನಲ್ಲಿ, ಇದೊಂದು ಕಣ್ಣಿಗೂ ಮನಸ್ಸಿಗೂ ಹಬ್ಬ ನೀಡುವ ದೃಶ್ಯ ವೈಭವ. ಈ ಚಿತ್ರದ ಎರಡನೇ ಭಾಗ ಆದಷ್ಟು ಶೀಘ್ರವಾಗಿ ತೆರೆಯ ಮೇಲೆ ಮೂಡಿಬರಲಿ ಎಂದು ನಮ್ಮಂತಹ ಕೋಟ್ಯಂತರ ಪ್ರೇಕ್ಷಕ ಪ್ರಭುಗಳು ಕಾತರದಿಂದ ಕಾಯುತ್ತಿದ್ದಾರೆ.

ಫೋಟೋ ಕೃಪೆ : ಅಂತರ್ಜಾಲ

ಭಾರತೀಯ ಸಂಸ್ಕೃತಿಯ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಹಾಗೂ ಮಕ್ಕಳು ಹಾಗೂ ಈಗಿನ ಯುವ ಪೀಳಿಗೆ ರಾಮಾಯಣದ ಆದರ್ಶವನ್ನು ರೂಢಿಸಿಕೊಳ್ಳುವ ಈ ಚಲನಚಿತ್ರ ನೋಡಲೇಬೇಕಾದ್ದು . ಯಾವುದೊ genz ಕಾರ್ಟೂನ್ಗಳಲ್ಲಿ ಕಳೆದುಹೋಗಿರುವ ಈ ಪೀಳಿಗೆ ರಾಮಾಯಣದಂತಹ ಮಹಾಕಾವ್ಯದ ಹಿರಿಮೆ ಅರಿಯುವಲ್ಲಿ ಈ ಚಿತ್ರ ಮಹತ್ತರ ಪಾತ್ರ ವಹಿಸಲಿ ಎಂಬುದು ನಮ್ಮೆಲ್ಲರ ಆಶಯ

ಜೈ ಶ್ರೀರಾಮ್!


  • ಚೇತನ ಭಾರ್ಗವ

Leave a Reply

Home
Search
Menu
Recent
About
×