Andy ಜೈಲಿನಲ್ಲೇ ಹತ್ತು ವರ್ಷ ಕಳೆದುಬಿಡ್ತಾನೆ. ಹೀಗೆ ಕೈದಿಯಾಗಿಯೇ ಇಪ್ಪತ್ತು ವರ್ಷಗಳು ಉರುಳಿಬಿಡುತ್ವೆ. ಜೈಲಧಿಕಾರಿಗಳಿಗೆ ತುಂಬಾ ಹತ್ತಿರವಾಗುವ ಆಡಿಗೆ ಅವರು ಮಾಡುವ ಅಕ್ರಮಗಳ ಬಗ್ಗೆಯೂ ಚೆನ್ನಾಗಿಯೇ ಗೊತ್ತಿರುತ್ತೆ.ಮುಂದೇನಾಯಿತು,The shawshank redemption ಸಿನಿಮಾದ ಕುರಿತು ಸುಧಾಕರ್ ಶಿವರಾಳಯ್ಯ ಅವರ ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ…
ಯಾವುದೇ ಒಂದು ಸಿನಿಮಾ ನೋಡಿದ ಕೂಡಲೇ ಕಾಡಬೇಕು..ನಿದ್ದೆಗೆಡಿಸಬೇಕು..ವರ್ಷಗಳು ಕಳೆದ್ರೂ ಅದರ ಚಿತ್ತು, ಮತ್ತು ಎರಡೂ ಫ್ರೆಶ್ ಆಗಿರಬೇಕು.. ಆಗ ಮಾತ್ರ ಆ ಚಿತ್ರ ಹಾಗೂ ಚಿತ್ರದ ಪಾತ್ರಗಳು, ಹಾಗೂ ಅದನ್ನ ತೆಗೆದವರು ಎಲ್ಲರೂ ಸಿನಿಪ್ರಿಯರ ಮನಸ್ಸಲ್ಲಿ ಅಚ್ಚಳಿಯದೇ ಉಳಿಯೋದಕ್ಕೆ ಸಾಧ್ಯ…ಹಾಗೇ, ಒಂದು ಕಾದಂಬರಿಯಾಧಾರಿತ ಕತೆಯನ್ನ ಊಹೆಗೂ ಮೀರಿದ ರೀತಿ ತೆರೆಯ ಮೇಲೆ ಕಟ್ಟಿಕೊಟ್ಟಿದ್ದ ಸಿನಿಮಾ ಅಂದ್ರೆ ದಿ ಶಾಶಂಕ್ ರಿಡಂಪ್ಷನ್ (The Shashank Redemption)…ನನ್ನ ಪ್ರಕಾರ….BEST OF ALL TIME ..ಈ ಸಿನಿಮಾ ತೆರೆಯ ಮೇಲೆ ಬಂದು 3 ದಶಕಗಳು ಕಳೆದಿದ್ರೂ, ಇದರ ನೇಮು, ಫೇಮು ಇವತ್ತಿಗೂ ಸುಕ್ಕುಗಟ್ಟಿಲ್ಲ…ಡೇ ಬೈ ಡೇ ಈ ಚಿತ್ರಕ್ಕೆ ಫಿದಾ ಆಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆಯೇ ಹೊರತು, ಒಪ್ಪಿಕೊಳ್ಳದವರು ಬೆರಳೆಣಿಯಷ್ಟು ಮಾತ್ರ.. ಒಂದು ಲೆಕ್ಕದಲ್ಲಿ ಹೇಳ್ಬೇಕು ಅಂದ್ರೆ ಈ ಚಿತ್ರವನ್ನ ನೋಡದ ಸಿನಿ ವಿದ್ಯಾರ್ಥಿಗಳು, ಅಪ್ಪಟ ಸಿನಿಮಾ ಪ್ರೇಮಿಗಳು ಸಿಗಲಿಕ್ಕಿಲ್ಲ..ರಿಲೀಸ್ ಆಗಿ 30 ವರ್ಷಗಳಾದ್ರೂ ಇವತ್ತಿಗೂ ಶಾಶಂಕ್ ರೇಟಿಂಗ್ ಮೀಟರ್ನಲ್ಲಿ ಟಾಪ್ ಆಗಿ ನಿಲ್ಲಲು ಅದರ ನಿರ್ದೇಶಕರೇ ಮೂಲ ಕಾರಣ…ಹಾಲಿವುಡ್ನ ಲೆಜೆಂಡರಿ ಡೈರೆಕ್ಟರ್ ಫ್ರ್ಯಾಂಕ್ ದಾರಬಂತ್ ಅಚ್ಚುಕಟ್ಟಾದ ಮೇಕಿಂಗ್ ಮೂಲಕ ಚಿತ್ರಪ್ರೇಮಿಗಳ ಹೃದಯ ಗೆದ್ದಿದ್ದರು. ಪ್ರಾಮಿಸಿಂಗ್ ಡೈರೆಕ್ಟರ್ ಆಗಿ ಹೊರಹೊಮ್ಮಿದ್ರು.

ಭರವಸೆ.. ಅಂದ್ರೆ ಹೋಪ್..ಈ ಸಿನಿಮಾದ ಮುಖ್ಯ ಅಸ್ತ್ರ..ಯಾವುದೇ ಪಾತ್ರಗಳನ್ನ ಕೊಟ್ಟರೂ ಚಚ್ಚಿ ಚಿಂದಿ ಉಡಾಯಿಸಬಲ್ಲ ಹಾಲಿವುಡ್ನ ಲೆಜೆಂಡರಿ ನಟ ಟಿಮ್ ರಾಬಿನ್ಸ್ ಈ ಸಿನಿಮಾದ ನಾಯಕ..Andy ಎನ್ನುವ ಜೈಲಿನ ಕೈದಿಯ ಪಾತ್ರದಲ್ಲಿ ಕಾಣಿಸಿಕೊಳ್ತಾರೆ.. ಇನ್ನು, ಟಿಮ್ ರಾಬಿನ್ಸ್ ರೀತಿಯೇ ಕೊಟ್ಟ ಪಾತ್ರಗಳ ಪರಕಾಯ ಪ್ರವೇಶ ಮಾಡುವಂತಹ ಮಾರ್ಗನ್ ಫ್ರೀಮನ್ ಹಾಲಿವುಡ್ನ ಮತ್ತೊಬ್ಬ ಲೆಜೆಂಡ್…ರೆಡ್ ಎನ್ನುವ ಕೈದಿಯಾಗಿ ನಟಿಸಿರುವ ಅವರದ್ದೂ ಎಷ್ಟೇ ವರ್ಷಗಳೂ ಉರುಳಿದ್ರೂ ನೆನಪಲ್ಲಿ ಉಳಿಯುವಂತಹ ಪಾತ್ರ..
ಹಲವು ಜನರಿಗೆ ಮನೆಯಿದ್ದು, ಕೈತುಂಬಾ ಸಂಬಳ ಇದ್ದು, ಒಂದೊಳ್ಳೆ ಕುಟುಂಬ, ಸ್ನೇಹಿತರ ಸಂಗಡಗಳಿದ್ದರೂ ಜೀವನದಲ್ಲಿ ಭರವಸೆ ಅನ್ನೋದೇ ಇರೋದಿಲ್ಲ..ಆ ರೀತಿ ‘ಹೋಪ್-ಲೆಸ್’ ಆಗಿ ಬದುಕುವವರು ಈ ಸಿನಿಮಾನ ನೋಡ್ಲೇಬೇಕು.. ಗುರು, ಜೀವನದಲ್ಲಿ ಎಲ್ಲಾ ಇದ್ದು ಭರವಸೆನೇ ಇಲ್ಲ ಅಂದ್ರೆ ಹೆಂಗೆ? ಶಾಶಂಕ್ ಜೈಲಲ್ಲಿದ್ದ Andy ನಾ ನೋಡು ಗುರು ಅಂತಾ ಮೆಲ್ಲಗೆ ನಮ್ಮ ಅಂತರಾತ್ಮವನ್ನ ಈ ಚಿತ್ರ ಬಡಿದೆಬ್ಬಿಸುತ್ತೆ.. ಜೀವನ ಮಾಡುವುದಕ್ಕಾಗಿಯೇ ಎಷ್ಟೆಲ್ಲಾ ಹೋರಾಟ ಮಾಡ್ಬೇಕು ಗುರು ಎನ್ನುವ ಪ್ರಶ್ನೆ ಹುಟ್ಟಿಸುತ್ತೆ…
ಇನ್ನು, ಕಥೆಗೆ ಬರುವುದಾದ್ರೆ ಇಡೀ ಚಿತ್ರ ನಡೆಯೋದು ಒಂದೇ ಜೈಲಿನಲ್ಲಿ.. ಶಾಶಂಕ್ ಎನ್ನುವ ಕಾಲ್ಪನಿಕ ಊರಿನಲ್ಲಿರೋ ದೊಡ್ಡ ಜೈಲೇ ಈ ಸಿನಿಮಾದ ಮೂಲಸ್ಥಳ.Aadi ಎನ್ನುವ ಬ್ಯಾಂಕ್ ಉದ್ಯೋಗಿ ತನ್ನ ಹೆಂಡತಿ ಹಾಗೂ ಆಕೆಯ ಬಾಯ್ಫ್ರೆಂಡ್ನ ಕೊಂದ ಆರೋಪ ಹೊತ್ತು ಜೈಲು ಶಿಕ್ಷೆಗೆ ಗುರಿಯಾಗ್ತಾನೆ..ಅದೂ ಜೀವಾವಧಿ ಶಿಕ್ಷೆ…ಬಟ್, ಆಡಿ ನಿಜವಾಗ್ಲೂ ಆ ಕೊಲೆಗಳನ್ನ ಮಾಡಿದ್ನಾ ಎಂಬುದಕ್ಕೆ ಉತ್ತರ ಸಿನಿಮಾದ ಕೊನೆ ಕೊನೆಯಲ್ಲಿ ಸಿಗಲಿದೆ….ಜೀವಾವಧಿ ಶಿಕ್ಷೆ ಎಂದ ತಕ್ಷಣ ಜೀವನವೇ ಮುಗಿದು ಹೋಯ್ತು ಎಂದುಕೊಳ್ಳುವ ಎಷ್ಟೋ ಕೈದಿಗಳಿದ್ದಾರೆ. ಜೀವನದ ಮೇಲೆ ಭರವಸೆಯನ್ನೇ ಕಳೆದುಕೊಂಡುಬಿಟ್ಟಿರ್ತಾರೆ.. ಆದ್ರೆ, Andy ತಾನಿದ್ದ ಜೈಲಿನಲ್ಲಿ ಅದೆಷ್ಟೇ ಚಿತ್ರಹಿಂಸೆ ಅನುಭವಿಸಿದ್ದರೂ ಹೋಪ್ಸ್ ಎನ್ನುವ ಅಸ್ತ್ರವನ್ನ ಬಿಡುವುದಿಲ್ಲ. ಆದ್ರೆ, ಜೈಲಿಗೆ ಬರುವ Andyಗೆ ಪರಿಚಯವಾಗಿ ಒಳ್ಳೆಯ ಸ್ನೇಹಿತನಾಗುವ ರೆಡ್ಗೆ ಹೊರಗಿನ ಪ್ರಪಂಚ ಹಾಗೂ ಹೊಸ ಜೀವನದ ಬಗ್ಗೆ ಭರವಸೆಯೇ ಇರುವುದಿಲ್ಲ…ಇನ್ನೂ ಲೈಫ್ ಇದೆ, ಬದುಕುವ ಉತ್ಸಾಹವಿದೆ, ಜೈಲಿಂದ ಹೊರಗೆ ಒಂದು ದಿನ ಹೋಗಿಯೇ ಹೋಗ್ತೀನಿ ಅಂತಲೇ ಜೀವಿಸುವ ಆಡಿಗೆ, ಹಾಗೆಲ್ಲ ಕನಸು ಕಾಣ್ಬೇಡ ಅಂತಾ ರೆಡ್ ಪಾಠ ಮಾಡ್ತಾನೆ ಇರ್ತಾನೆ…ಯಾಕಂದ್ರೆ, ಚಿತ್ರದಲ್ಲಿ ನಾಯಕನಿಗೆ ಆಗಿದ್ದದ್ದು ಬರೀ ಜೀವಾವಧಿ ಶಿಕ್ಷೆಯಲ್ಲ.. ಡಬಲ್ ಜೀವಾವಧಿ ಶಿಕ್ಷೆ.

ಅಂದಹಾಗೇ, ಶಾಶಂಕ್ ಜೈಲಿನಲ್ಲಿದ್ದ ಅಧಿಕಾರಿಗಳು, ಹಾಗೂ ಅಲ್ಲಿನ ವಾರ್ಡನ್ ಯಾರೂ ಮನುಷ್ಯರಗಿರುವುದಿಲ್ಲ….ಅವರೆಂಥಾ ರಾಕ್ಷಸರು ಎನ್ನುವುದಕ್ಕೆ ಸಿನಿಮಾ ಶುರುವಿನಲ್ಲಿ ತೋರಿಸುವ ಸೀನ್ ಒಂದೇ ಸಾಕು… ಹೀಗಿರುವಾಗ ಹೇಗೋ ಆಡಿ ಆ ಜೈಲಿನ ಅಧಿಕಾರಿಗಳ ಜೊತೆಗೆ ಸಲುಗೆ ಬೆಳೆಸಿಕೊಳ್ತಾನೆ. ಅದೇಗೆ ಅನ್ನೋದು ಕೂಡ ಇಂಟರೆಸ್ಟಿಂಗ್…ಆ ಸಲುಗೆ ಒಂದು ರೀತಿ ಆಡಿಗೆ ವರವಾದ್ರೆ, ಕೊನೆ ಕೊನೆಗೆ ಜೀವಕ್ಕೆ ಕುತ್ತುತರುವಂಥಹ ಪರಿಸ್ಥಿತಿಯನ್ನೂ ತಂದಿಟ್ಟುಬಿಡುತ್ತೆ…ಬಟ್, ಎಂಥಹ ಪರಿಸ್ಥಿತಿಯಲ್ಲೂ ಆಡಿ ಕುಗ್ಗುವುದಿಲ್ಲ.. ಸಹಕೈದಿಗಳು ಪರಿಪರಿಯಾಗಿ ಹಿಂಸಿಸಿದ್ರೂ ಮತ್ತೆ ಎದ್ದು ತನ್ನ ಕೆಲಸದಲ್ಲಿ ತೊಡಗಿಕೊಳ್ತಾ ಇರ್ತಾನೆ… ಆಡಿಯ ಬಳಿ ಒಂದು ಬೈಬಲ್ ಇರುತ್ತೆ.. ಆ ಬೈಬಲ್ ಯಾಕಿರುತ್ತೆ? ಅದನ್ನ ಓದುವ ಅಭ್ಯಾಸವಿತ್ತಾ ಎನ್ನುವುದಕ್ಕೆ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಸಿಗುವ ಉತ್ತರ ರೋಚಕ…ಹಾ… ಬೈಬಲ್ ಜೊತೆಗೆ ಒಂದು ಪೋಸ್ಟರ್, ಹಾಗೂ ಸುತ್ತಿಗೆಯೂ ಆಡಿಯ ಕೋಣೆ ಸೇರಿರುತ್ತವೆ..
ನೋಡ್ತಾ ನೋಡ್ತಾ ಇರುವಂತೆಯೇ ಆಡಿ ಜೈಲಿನಲ್ಲೇ 10 ವರ್ಷ ಕಳೆದುಬಿಡ್ತಾನೆ…ಹೀಗೆ, ಕೈದಿಯಾಗಿಯೇ 20 ವರ್ಷಗಳು ಉರುಳಿಬಿಡುತ್ವೆ…ಜೈಲಧಿಕಾರಿಗಳಿಗೆ ತುಂಬಾ ಹತ್ತಿರವಾಗುವ ಆಡಿಗೆ ಅವರು ಮಾಡುವ ಅಕ್ರಮಗಳ ಬಗ್ಗೆಯೂ ಚೆನ್ನಾಗಿಯೇ ಗೊತ್ತಿರುತ್ತೆ.. ಬಟ್, ಆ ಆಕ್ರಮಗಳು ಕೊನೆಗೆ ಅದೇಗೆ ಚಿತ್ರದ ನಾಯಕನಿಗೆ ವರವಾಗುತ್ತೆ ಎನ್ನುವುದೂ ಕೂಡ ಕ್ಲೈಮ್ಯಾಕ್ಸ್ನಲ್ಲೇ ಗೊತ್ತಾಗೋದು…ಶಾಶಂಕ್ ಜೈಲಿಗೆ ಕೈದಿಯಾಗಿ ಬರುವ ಟಾಮಿ ಪಾತ್ರಧಾರಿ ಹೇಳುವ ಒಂದು ಸಣ್ಣ ಕತೆ ಸಿನಿಮಾ ಮತ್ತೊಂದು ತಿರುವನ್ನ ಪಡೆದುಕೊಳ್ಳೋದಕ್ಕೆ ಕಾರಣವಾಗುತ್ತೆ.. ಆಡಿ ಜೈಲಿನಿಂದ ಹೊರಹೋಗಬೇಕೆನ್ನುವ ಕನಸಿಗೆ ರೆಕ್ಕೆ ಕಟ್ಟುತ್ತದೆ. ಬಹುಶಃ ಜೈಲಧಿಕಾರಿಗಳು ಮನುಷ್ಯತ್ವ ಉಳ್ಳವರಾಗಿದ್ದಿದ್ರೆ Andy ‘ಅಡ್ಡ’ದಾರಿ ಹಿಡಿಯುವ ಹಾಗೇ ಮಾಡ್ತಾ ಇರಲಿಲ್ಲ…ಅದೆಷ್ಟೇ ಪ್ರಬಲವಾದ ಸಾಕ್ಷ್ಯಗಳನ್ನ ತಂದರೂ ಆಡಿಯನ್ನ ಜೈಲಿನಿಂದ ಆಚೆ ಹೋಗದಂತೆ ಅಲ್ಲಿನ ವಾರ್ಡನ್ ತಡೀತಾನೆ .
ವಾರ್ಡನ್ಗೇಕೆ Andy ಮೇಲೆ ಅಷ್ಟು ಕೋಪ? ಅದು ನಿಜವಾಗಲೂ ಇಂಟರೆಸ್ಟಿಂಗ್…20 ವರ್ಷಗಳ ಸೆರೆವಾಸ.. ಒಂದು ಸಣ್ಣ ಸುತ್ತಿಗೆ 2 ದಶಕದ ಕಂಬಿ ಹಿಂದಿನ ನರಕಕ್ಕೆ ಮುಕ್ತಿ ಹಾಡಿದ್ದೇಗೆ ಅನ್ನೋದೇ ದಿ ಶಾಶಂಕ್ ರಿಡಂಪ್ಷನ್…Andy ಜೈಲಿಂದ ಆಚೆ ಬರ್ತಾನೆ.. ತಪ್ಪಿಸಿಕೊಂಡೇ ಬರ್ತಾನೆ.. ಅದೇಗೆ ಬರ್ತಾನೆ ಎನ್ನುವುದೇ ಕಥೆಯ ಥ್ರಿಲ್ಲಿಂಗ್ ಲೈನರ್…ಇನ್ನು, ಸಿನಿಮಾದಲ್ಲಿ ಜೈಲಿನ ಲೈಬ್ರರಿಯನ್ನ ನೋಡಿಕೊಳ್ತಿದ್ದ ತಾತಪ್ಪನೊಬ್ಬ (ಬ್ರೂಕ್) ಆತ್ಮಹತ್ಯೆ ಮಾಡಿಕೊಳ್ಳುವ ಸೀನ್ ಹಾಗೂ ಅವನು ಕಾಗೆಯೊಂದರ ಜೊತೆಗೆ ಹೊಂದಿದ್ದ ಬಾಂಧವ್ಯ ಇವತ್ತಿಗೂ ಹಾರ್ಟ್ ಟಚಿಂಗ್.
ಹಾ! Andy ಗೆ ಜೈಲಿಂದ ಆಚೆ ಹೋಗುವ ಕನಸು ಕಾಣ್ಬೇಡ ಅಂತಾ ಪಾಠ ಮಾಡ್ತಿದ್ದ ರೆಡ್ಗೆ ಜೈಲಿನಲ್ಲಿ Andy ಒಂದು ಮಾತು ಹೇಳಿರ್ತಾನೆ.. ಜೈಲಿಂದ ರಿಲೀಸ್ ಆದ್ಮೇಲೆ ಒಂದು ಜಾಗಕ್ಕೆ ಹೋಗಿ ಅಲ್ಲಿರುವ ಕಲ್ಲೊಂದರ ಕೆಳಗೆ ಏನಿರುತ್ತೆ ನೋಡು ಅಂತಾ ತಿಳಿಸಿರ್ತಾನೆ…. ಆಡಿ ಜೈಲಿನಲ್ಲಿದ್ದಾಗಲೇ ರೆಡ್ಗೆ ಹಾಗೇ ಹೇಳಿದ್ದೇಕೆ? ಅನ್ನೋದಕ್ಕೆ ಉತ್ತರ ಮತ್ತದೇ ಹೋಪ್… ಅಂದಹಾಗೇ, Andy ಗೂ ಆ ಜಾಗಕ್ಕೂ ಇರುವ ನಂಟೇನು? ರೆಡ್ ರಿಲೀಸ್ ಆಗ್ತಾನಾ.. ಆಗಿ ಆಡಿಹೇಳಿದ ಜಾಗಕ್ಕೆ ಹೋಗ್ತಾನಾ? ಹೋದ್ರೆ ಏನ್ ಲಾಭ ಎಂಬುದನ್ನೂ ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ ನಿರ್ದೇಶಕ..ಅಂದಹಾಗೇ, ಮೂಲ ಕಾದಂಬರಿಯಲ್ಲಿ ಇಡೀ ಕಥೆಯನ್ನ Explain ಮಾಡುವವನೇ ಈ ರೆಡ್.. ಭರವಸೆ ಎನ್ನುವುದು ಮನುಷ್ಯನ ಪ್ರಬಲ ಆಯುಧ.. Once you choose Hope anything is possible ಎನ್ನುವ ಸ್ಟ್ರಾಂಗ್ ಮೆಸೇಜ್ ಈ ಸಿನಿಮಾ ನೋಡಿದಮೇಲೆ ನನಗಂತೂ ಸಿಕ್ಕಿತ್ತು…ನನ್ನ ಪ್ರಕಾರ The Shawshank Redemption..Forever Masterpiece
- ಸುಧಾಕರ್ ಶಿವರಾಳಯ್ಯ – ಪತ್ರಕರ್ತರು, ಲೇಖಕರು.
