“ಅನಾದರ್​ ರೌಂಡ್​” ಪ್ರೇರಣೆ ನೀಡಿದ್ದು ಯಾರಿಗೆ?

ಆಸ್ಕರ್​ ಗೆದ್ದ ಪ್ರಖ್ಯಾತ ಡ್ಯಾನಿಶ್​ ಸಿನಿಮಾ “ಅನಾದರ್​ ರೌಂಡ್​” ಅದು. ಈ ಸಿನಿಮಾದಿಂದ ಪ್ರೇರೇಪಿತನಾಗಿ ಕಾನೂನು ವಿದ್ಯಾರ್ಥಿಯೊಬ್ಬ ವಡೋದರಾದಲ್ಲಿ ಒಂದು ಭೀಕರ ಅಪಘಾತ ಮಾಡಿದ. ತಾಯಿ ಅಸುನೀಗಿದಳು. ಇಂತಹ ಸಿನಿಮಾಗಳಿಂದ ಕಲಿಯುವುದು ಏನಿದೆ ? ಪತ್ರಕರ್ತರಾದ ಸುಧಾಕರ್ ಶಿವರಾಳಯ್ಯ ಅವರು ಈ ಸಿನಿಮಾದ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

Another Round…ಮೊನ್ನೆ ವಡೋದರಾದಲ್ಲಿ ಒಂದು ಭೀಕರ ಅಪಘಾತವಾಯ್ತು ಗೊತ್ತಾ? ಒಬ್ಬಳು ತಾಯಿಯ ಜೀವವೇ ಹೋಯ್ತು…ಗಂಡ-ಮಗಳಿಗೆ ಗಂಭೀರ ಗಾಯವಾಗಿದೆ…ಸ್ಕೂಟಿಯಲ್ಲಿ ಹೋಳಿ ಹಬ್ಬಕ್ಕೆ ಬಣ್ಣ ತೆಗೆದುಕೊಳ್ಳಲು ಹೋಗ್ತಿದ್ದವರಿಗೆ ಕಾರಿನಲ್ಲಿ ವೇಗವಾಗಿ ಬಂದು ಗುದ್ದಿದವನು ಜಸ್ಟ್​ 20 ವರ್ಷದ ಹುಡುಗ..ಅದೂ ಕೂಡ ಕಾನೂನು ವಿದ್ಯಾರ್ಥಿ. ಕಾರಿನಲ್ಲಿ ಗುದ್ದಿದ ಬಳಿಕ ರಸ್ತೆಯಲ್ಲಿ ಸಾವು-ಬದುಕಿನ ಮಧ್ಯೆ ಒಂದಿಡೀ ಕುಟುಂಬವೇ ಒದ್ದಾಡುತ್ತಿದ್ದರೂ ಇವನು ಕೆಳಗಿಳಿದು “ಅನಾದರ್​ ರೌಂಡ್​” ಅಂತಾ ಜೋರಾಗಿ ಕೂಗಿದ್ದಾನೆ.

ಟ್ವಿಸ್ಟ್​ ಏನು ಗೊತ್ತಾ? ಪೊಲೀಸರು ಅಪಘಾತ ಮಾಡಿದವನ ಮನೆಯನ್ನ ಜಾಲಾಡಿದಾಗ ಅಲ್ಲಿ ಒಂದು ಸಿನಿಮಾದ ಪೋಸ್ಟರ್​ ಸಿಕ್ಕಿದೆ…ಪ್ರಖ್ಯಾತ ಡ್ಯಾನಿಶ್​ ಸಿನಿಮಾ ಅದು. ಆಸ್ಕರ್​ ಗೆದ್ದ ಚಿತ್ರ. ಅದರ ಹೆಸರು “ಅನಾದರ್​ ರೌಂಡ್​” ಅಂತಾ. ಇವನು ಅಪಘಾತ ಮಾಡಿ ಚೀರಾಡಿದ್ದೂ “ಅನಾದರ್​ ರೌಂಡ್” ಅಂತಲೇ..ಮನೆಯಲ್ಲಿ ಸಿಕ್ಕ ಸಿನಿಮಾ ಪೋಸ್ಟರ್​ ಕೂಡ “ಅನಾದ​ರ್​ ರೌಂಡ್​”.. ಈ ಸಿನಿಮಾ ಬಗ್ಗೆ ಅಷ್ಟೊಂದು ಇನ್​ಫ್ಲುಯೆನ್ಸ್​ ಆಗಿ ಕುಡಿತದ ಚಟಕ್ಕೆ ಬಿದ್ದು ಅಪಘಾತ ಮಾಡಿ ಜೀವ ತೆಗೆದಿದ್ದಾನೆ ಆ ಹುಡುಗ…

ಅಂದಹಾಗೇ, ಅನಾದರ್​​ ರೌಂಡ್​ ಸಿನಿಮಾದಲ್ಲಿ ಬರುವ ನಾಲ್ವರು ಪಾತ್ರಧಾರಿಗಳು ಒಂದು ಕಾಲೇಜಿನಲ್ಲಿ ಲೆಕ್ಚರರ್​ ಆಗಿರ್ತಾರೆ. ಶಿಕ್ಷಕರಾಗಿದ್ದ ಅವರಿಗೆ ಲೈಫಲ್ಲಿ ಖುಷಿಯೇ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಪಾಠ ಮಾಡಿ ಮಾಡಿ ಜೀವನವೇ ಒಂಥರಾ ಜಿಗುಪ್ಸೆಯಾಗಿರುತ್ತೆ. ಮಜಾ ಇರಲ್ಲ… ಅದೇ ಟೈಮ್​ಗೆ ಸರಿಯಾಗಿ ಆ ಶಿಕ್ಷಕರ ಗ್ರೂಪಿನಲ್ಲೊಬ್ಬ ತನ್ನ ಸ್ನೇಹಿತರಿಗೆ ಸಲಹೆವೊಂದನ್ನ ಕೊಡ್ತಾನೆ. ನಾರ್ವೆಯನ್​ ಮನೋರೋಗ ತಜ್ಞನೊಬ್ಬ ತನ್ನ ಪುಸ್ತಕದಲ್ಲಿ ಉಲ್ಲೇಖಿಸಿರುವುದನ್ನ ಹೇಳ್ತಾನೆ. ಮನುಷ್ಯರಿಗೆ ಹುಟ್ಟಿದಾಗಿನಿಂದಾನೇ ಬ್ಲಡ್​ ಆಲ್ಕೋಹಾಲ್​ ಕಂಟೆಂಟ್​ ಡಿಫಿಷಿಯನ್ಸಿ ಇರುತ್ತೆ. ಆ ಕಾರಣಕ್ಕೆ ಸಂತೋಷ ಎನ್ನುವುದೇ ಇರುವುದಿಲ್ಲ. ಹಾಗಾಗಿ, ನಿತ್ಯವೂ ನಾವು 0.05 ಪರ್ಸೆಂಟ್​​ನಷ್ಟು ಆಲ್ಕೋಹಾಲ್​ ಅಂದ್ರೆ ಎಣ್ಣೆ ಸೇವಿಸಿದ್ರೆ, ಸೂಪರ್ ಡೂಪರ್​ ಆಗಿರಬಹುದು ಅಂತಾ ಹೇಳ್ತಾನೆ. ಎಲ್ಲರೂ ಎಣ್ಣೆ ಹೊಡೆಯಲು ಶುರು ಮಾಡ್ತಾರೆ. ನಾಲ್ಕೂ ಜನರು ಒಂದು ಕಂಡೀಷನ್​ನೊಂದಿಗೆ ಒಂದು ನಿರ್ಧಾರಕ್ಕೆ ಬರ್ತಾರೆ​. ತಾವು ನಿತ್ಯ ಕುಡಿಯೋದಿದ್ರೆ ಕೆಲಸದ ಅವಧಿಯಲ್ಲಷ್ಟೇ 0.05 ಪರ್ಸೆಂಟ್​ ಆಲ್ಕೋಹಾಲ್​ನ ಸೇವನೆ ಮಾಡೋಣ. ಕೆಲಸ ಮುಗಿದ್ಮೇಲೆ ಎಣ್ಣೆಯನ್ನ ಟಚ್​ ಕೂಡ ಮಾಡಂಗಿಲ್ಲ ಅಂತಾ ಕಂಡೀಷನ್​ ಹಾಕಿಕೊಳ್ತಾರೆ. ಇಲ್ಲಿ ಅವರ ಉದ್ದೇಶ ಇಷ್ಟೇ, ಮದ್ಯಪಾನ ಈ ಶಿಕ್ಷಕರ ಸಾಮಾಜಿಕ ಹಾಗೂ ವೃತ್ತಿ ಬದುಕಿನ ಮೇಲೆ ಯಾವ ರೀತಿ ಪಾಸಿಟಿವ್​ ಪರಿಣಾಮ ಬೀರಲಿದೆ ಎಂಬುದನ್ನೂ ನೋಡುವುದಾಗಿತ್ತು. ಹಾಗಾಗಿ, ನಾಲ್ವರೂ ಕೆಲಸದ ಅವಧಿಯಲ್ಲೇ ಕುಡಿಯಲು ಶುರು ಮಾಡ್ತಾರೆ. ಅಷ್ಟೇ..ಹಿಂದೆಂದೂ ಮಾಡಿರದ ರೀತಿ ಸಖತ್​ ಜೋಷ್​ನಲ್ಲೇ ವಿದ್ಯಾರ್ಥಿಗಳಿಗೆ ಪಾಠ ಮಾಡಿಬಿಡ್ತಾರೆ. ಎಣ್ಣೆಯ ಮೇಲೆ ಎಲ್ಲಿಲ್ಲದ ಪ್ರೀತಿ ನಂಬಿಕೆ ಹುಟ್ಟುತ್ತೆ. 0.05 ಪರ್ಸೆಂಟ್​​ನಷ್ಟು ಇದ್ದದ್ದು ಮುಂದೆ 1.1 ಪರ್ಸೆಂಟ್ ಆಗುತ್ತೆ. 1.1 ಪರ್ಸೆಂಟ್​ ಇದ್ದದ್ದು ಬಕೆಟ್​ಗಟ್ಟಲೆ ಹೆಂಡ ಸೇವಿಸುವಂತಾಗಿದೆ. ಹೀಗೆ, ಕುಡಿತದ ಚಟ ಜಾಸ್ತಿ ಆಗಿ ಆಗಿ ಮುಂದೇನಾಗುತ್ತೆ ಅನ್ನೋದೇ ಆ ಸಿನಿಮಾದ ಕಥೆ.

ನಾನೂ ಕೂಡ ನೋಡಿರುವ ಸಿನಿಮಾ ಅದು. ಇಂತಹ ಸಿನಿಮಾದಿಂದ ನಿಜಕ್ಕೂ ಕಲಿಯುವುದೇನಿಲ್ಲ…ನೋಡೋದಕ್ಕಷ್ಟೇ ಮಜಾ..ಆದ್ರೆ, ಅಂತಹ ಸಿನಿಮಾವನ್ನೇ ಜೀವನದ ಒಂದು ಭಾಗ ಮಾಡ್ಕೊಂಡು ಸಣ್ಣ ವಯಸ್ಸಿಗೇ ಚಟಕ್ಕೆ ಬಿದ್ದು ಒಂದು ಜೀವ ತೆಗೆದುರುವವ ಇಂತಹ ವ್ಯಕ್ತಿಗಳನ್ನ ನೋಡಿದ್ರೆ ನಿಜಕ್ಕೂ ಭಯ ಆಗುತ್ತೆ..


  • ಸುಧಾಕರ್ ಶಿವರಾಳಯ್ಯ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading