’51 ಬಿಸಿನೆಸ್ ಐಡಿಯಾಗಳು’ ಕೃತಿ ಪರಿಚಯ

‘ಮೂವತ್ತು ರೂಪಾಯಿ ಇಟ್ಟುಕೊಂಡು ಬೆಂಗಳೂರಿಗೆ ಬಂದು, ಕೋಟಿ ರೂಪಾಯಿ ಗಳಿಸುವ ತನಕದ “ನನ್ನ ಬದುಕೇ” ಈ ಪುಸ್ತಕಕ್ಕೆ ಬೆನ್ನುಡಿ’ ಎಂಬ ವೀರಕಪುತ್ರ ಅವರ ಆತ್ಮವಿಶ್ವಾಸದ ಮಾತು ಈ ಪುಸ್ತಕವನ್ನು ಚುಂಬಕದಂತೆ ಸೆಳೆಯುತ್ತದೆ. ಸ್ವಂತ ಉದ್ಯೋಗ ಪ್ರಾರಂಭಿಸಲು ಬಯಸುವವರಿಗೆ ಒಂದು ಅತ್ಯುತ್ತಮ ಕೈಪಿಡಿ ಯಾವುದು ಎಂದು ಹುಡುಕುವವರಿಗೆ ಇದೇ ಕಡೆಯ ನಿಲ್ದಾಣ.  ಕವಿತಾ ಹೆಗಡೆ ಅಭಯಂ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಓದಿ…

ಪುಸ್ತಕ : 51 ಬಿಸಿನೆಸ್ ಐಡಿಯಾಗಳು
ಲೇಖಕರು : ವೀರಕಪುತ್ರ ಶ್ರೀನಿವಾಸ
ಬೆಲೆ : 150.00
ಪ್ರಕಾಶನ :ವೀರಲೋಕ ಬುಕ್ಸ್

ಬಂಡವಾಳ ಕಡಿಮೆ ಅಥವಾ ಶೂನ್ಯವಿದ್ದರೂ ಹೇಗೆ ಹೊಸ ಉದ್ಯಮಗಳನ್ನು ಆರಂಭಿಸಬಹುದು ಎಂಬ ಉನ್ನತ ಆಸೆ ಹೊತ್ತವರಿಗೆ ಇದೊಂದು ಸಮರ್ಪಕವಾದ ಮಾರ್ಗದರ್ಶನ.

  • ಕಡಿಮೆ ಹೂಡಿಕೆಯಲ್ಲಿ ಶುಭಾರಂಭದ ಕನಸು ನನಸು: ಈ ಪುಸ್ತಕದಲ್ಲಿ ವಿವರಿಸಲಾದ 51 (?) ಬಿಸಿನೆಸ್ ಐಡಿಯಾಗಳು ಖಂಡಿತ ಒಂದು ಹೊಳಹು ನೀಡುತ್ತವೆ. ವಿಭಿನ್ನ ಆಸಕ್ತಿಯುಳ್ಳವರಿಗೆ ತಮ್ಮ ಆಯ್ಕೆ ಯಾವುದೆಂದು ನಿರ್ಧಾರ ಮಾಡಲು ಸೂಕ್ತ ವಿವರಗಳಿವೆ.

    ವ್ಯಾಪಾರಕ್ಕೊಂದು ದಾರಿದೀಪ: ಬಿಸಿನೆಸ್ ಹೇಗೆ ಶುರು ಮಾಡಬೇಕು, ಮಾರುಕಟ್ಟೆಯಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಮತ್ತು ಬಂಡವಾಳದ ನಿರ್ವಹಣೆ ಎಂದರೇನು ಎಂಬ ಸರಿಯಾದ ಮಾಹಿತಿಗಾಗಿ ಇಲ್ಲಿ ಹುಡುಕಿದರೆ ಉತ್ತರ ನಿಶ್ಚಿತ.

  • ಎಲ್ಲೆಡೆಯೂ ಸಲ್ಲುವ ಹೆಗ್ಗಳಿಕೆ: ನೀವು ಹಳ್ಳಿ, ದಿಲ್ಲಿ ಅಲ್ಲಿ ಇಲ್ಲಿ ಅನ್ನದೇ ಎಲ್ಲಿ ಬೇಕಾದರೂ ಸ್ವಂತ ಉದ್ಯೋಗ ಮಾಡುವ ಅಪೇಕ್ಷೆಯುಳ್ಳವರಾಗಿರಲಿ, ಇಲ್ಲಿ ನಿಮಗೊಪ್ಪುವ ಸಲಹೆಗಳಿವೆ.
  • ಅನುಭವದ ರಸಪಾಕ: ಅಂದು ಕಿಸೆಯಲ್ಲಿದ್ದುದು ಕೇವಲ ಮೂವತ್ತು ರೂಪಾಯಿಗಳು! ಅದು ಹೆಚ್ಚು ಕಡಿಮೆ ಬರಿಗೈಯಲ್ಲಿ ಬೆಂಗಳೂರಿಗೆ ಬಂದ ಹಾಗೆ! ಇಂದು ಕೋಟಿ ರೂಪಾಯಿ ದುಡಿಯುವವರೆಗಿನ ಶ್ರೀನಿವಾಸ ಅವರ ಹಾದಿ ಹಸನಾಗಿತ್ತೋ ಅಥವಾ ಕಠಿಣವಿತ್ತೋ ಎಂದು ಚಿಂತಿಸುವವರಿಗೆ ಮತ್ತು ಲೇಖಕರ ಸ್ವಂತ ಬದುಕಿನ ಅನುಭವಗಳ ಬಗ್ಗೆ ವಿಶೇಷ ಕುತೂಹಲವುಳ್ಳವರಿಗೆ ಇದು ಸಾಧನೆಗೊಂದು ಪ್ರೇರಣೆ.
  • ಸ್ವಂತ ಉದ್ಯೋಗವನ್ನು ಯಾರು ಆರಂಭಿಸಬಹುದು, ಅಗತ್ಯ ಕೌಶಲ್ಯ, ಹೂಡಿಕೆ, ಆದಾಯ ಮತ್ತು ಲಾಭ, ಮುನ್ನೆಚ್ಚರಿಕೆಗಳು, ನೋಂದಣಿ, ಸಾಲ ಮತ್ತು ಯೋಜನೆಗಳು, ಬೆಳವಣಿಗೆಗೆ ಅವಕಾಶಗಳು, ಬ್ರೇಕ್ ಈವನ್ ಸಮಯ ಮತ್ತು ಒಟ್ಟಾರೆ ಎಂಬ ತಲೆಬರಹಗಳ ಅಡಿಯಲ್ಲಿ ಒಂದು ಉದ್ಯಮದ ಬಗ್ಗೆ ಸಮಗ್ರ ಮಾಹಿತಿ ದೊರಕುವ ಹಾಗೆ ವ್ಯವಸ್ಥಿತವಾಗಿ ಬರೆದಿದ್ದು ತುಂಬಾ ಸಹಾಯಕ. ಇದು ಶ್ರೀಮಂತರಿಗಾಗಿ ಅಲ್ಲ, ಶ್ರೀಮಂತರಾಗಲು ಬಯಸುವವರಿಗೆ ಎಂಬ ಮಾತು ಗಮನ ಸೆಳೆಯುತ್ತದೆ.

  • ವೀರಲೋಕ ಪ್ರಕಾಶನದ ಈ ಪುಸ್ತಕ ಬಿಸಿನೆಸ್ ಮಾಡಬೇಕು ಎಂದು ಯಾರೇ ಸಲಹೆ ಕೇಳಿದರೂ ಈ ಪುಸ್ತಕವನ್ನು ಸೂಚಿಸಬಹುದು. ಈಗಾಗಲೇ ಐವತ್ತು ಸಾವಿರ ಪ್ರತಿಗಳನ್ನು ಪ್ರೀತಿಯ ಓದುಗರಿಗೆ ತಲುಪಿಸುವ ದಾಖಲೆಯತ್ತ ಸಾಗಿರುವ ವೀರಕಪುತ್ರ ಅವರು ಲಕ್ಷದತ್ತ ಸಾಗಲಿ ಎಂದು ಮನದುಂಬಿ ಹಾರೈಸುವೆ. ತಮ್ಮ ಮೊದಲ ಪುಸ್ತಕ ದುಡಿವ ಕನಸು ಹೊತ್ತವರಿಗೆ ಉಪಯುಕ್ತವಾದದ್ದಾಗಿರಲಿ ಎಂಬ ಯತ್ನ ಅವರ ಅಂತಃಕರಣ ಹಾಗೂ ಕಳಕಳಿಗೆ ಸಾಕ್ಷಿ. Veerakaputra M Srinivasa ಅವರಿಗೆ ಹಾರ್ದಿಕ ಶುಭಾಶಯಗಳು

  • ಕವಿತಾ ಹೆಗಡೆ ಅಭಯಂ – ಶಿಕ್ಷಕರು, ಲೇಖಕರು, ಹುಬ್ಬಳ್ಳಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading