ಒಮ್ಮೆಯಾದರೂ ಬರಲಾರೆಯಾ ಅಕ್ಕಾ..? ಡಿ.ಶಬ್ರಿನಾ ಮಹಮದ್ ಅಲಿ ಅವರ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಸಮಾಜದ ಮೌಢ್ಯತೆಯನು
ಹೋಗಲಾಡಿಸಲೆತ್ನಿಸಿದ
ಛಲಗಾರ್ತಿ ಅಕ್ಕಾ ನೀನು…
ಕೌಶಿಕ ಮಹಾರಾಜನನ್ನು
ಹಿಂಜರಿಯದೆ ತೊರೆದ
ದಿಟ್ಟ ಹೆಣ್ಣು ನೀನು…
ಜಗಜ್ಯೋತಿ ಬಸವಣ್ಣರ
ಹಾದಿಯಲಿ ಸಾಗಿ
ಜ್ಞಾನಿಯಾದ ಶಿಶರಣೆ ನೀನು
ನಿನ್ನಂತರಾಳದ
ಅಮೃತ ವಚನವನ್ನು
ಆಲಿಸುವ ಭಾಗ್ಯ
ಎನ್ನ ಕಿವಿಗಳಿಗಿಲ್ಲವಲ್ಲಾ…?
ನಿನ್ನ ದಿವ್ಯಚೇತನ ಮುಖ
ದರ್ಶನ ಪಡೆಯುವ ಭಾಗ್ಯ
ಎನ್ನ ಕಣ್ಣುಗಳಿಗಿಲ್ಲವಲ್ಲಾ
ಎಂದು ನನ್ನೀ ಮನ
ಮರಗುತ್ತಿದೆಯಲ್ಲಾ…
ನಿನ್ನ ಕನವರಿಕೆಯ
ಮನವ ತಣಿಸಲು
ಒಮ್ಮೆಯಾದರೂ
ಬರಲಾರೆಯಾ ಅಕ್ಕಾ..?
- ಡಿ.ಶಬ್ರಿನಾ ಮಹಮದ್ ಅಲಿ – ಚಳ್ಳಕೆರೆ, ಚಿತ್ರದುರ್ಗ
