ನೂತನ ಪರಿಕರಗಳೇ ಪರಿಸರನಾಶಕ್ಕೆ ಕಾರಣ

ಇಂದಿನ ಜಗತ್ತು ದಿನ ಕಳೆದಂತೆ ಹವಾಮಾನದ ತಾಪಮಾನ ಏರಿಕೆಯನ್ನು ಕಾಣುತ್ತಿದೆ. ಇದಕ್ಕೆ ಕಾರಣ ಅರಣ್ಯನಾಶ ಹಾಗೂ ಮಾರ್ಡನ್ ಜಗತ್ತು. ವಿನಯ್ ಮುಂಗ್ರಾಣಿ ತಪ್ಪದೆ ಮುಂದೆ ಓದಿ…

ದಿನ ದಿನವೂ ಹೊಚ್ಚ ಹೊಸ ರೀತಿಯ ಪ್ರಯೋಗಗಳು, ಆವಿಷ್ಕಾರಗಳು, ನೂತನ ವಿದ್ಯುತ್ ಕಾಂತಿಯ ಅಲೆಗಳು ಇವುಗಳನ್ನು ಹೆಚ್ಚು ಉನ್ನತೀಕರಿಸಲು ನಮ್ಮ ಬುಧ್ಧಿವಂತಿಕೆಯೂ ಸಹಿತ ಹವಾಮಾನದ ಏರಿಕೆಗೆ ಕಾರಣವಾಗಿದೆ.

ನಾವೂ ಪ್ರತಿದಿನ ಯಾವುದಾದರೂ ಒಂದು ಮೊಬೈಲ್ ಪೋನ್ ನ್ನು ನಾವು ನೋಡಿದರೆ ನಮಗೆ ಗೊತ್ತಾಗುತ್ತದೆ. ಆ ಒಂದು ಪೋನ್ ನ್ನು ಮಾಡಲು ಎಷ್ಟು ಪರಿಕರಗಳನ್ನು ಬಳಸಲಾಗಿದೆ ಮತ್ತು ಅದರಿಂದ ನಮ್ಮ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಯಾರೂ ಸಹ ಊಹಿಸಿರುವುದಿಲ್ಲ. ಏಕೆಂದರೆ ನಾವು ಅದನ್ನು ಕೇವಲ ಬಳಸುವದರಲ್ಲಿ ಮಂತ್ರಮುಗ್ಧನಾಗಿ ಕುಳಿತುಕೊಳ್ಳುತ್ತೇವೆ. ಇದು ನಮಗೆ ಯಾವಾಗ ಅರಿವಾಗುವುದೋ ನಾ ಕಾಣೆ.

ಇನ್ನೊಂದು ರೀತಿಯಲ್ಲಿ ನೋಡುವುದಾದರೆ ಇವೆಲ್ಲವೂ ನಮ್ಮ ನವ ಯುಗದ ನವ ಪರಿಕರಗಳಂತೂ ಹೌದು, ಆದರೆ ಇವು ನಮ್ಮ ಜೀವನವನ್ನು ಹಾಳುಮಾಡುವ ಮೂಲಸಾಧನವಾಗಿ ಹೋಗಿದೆ. ಈ ಮೊಬೈಲ್ ಪೋನ್ ಗಳು ಮತ್ತು ಇನ್ನಿತರ ಪರಿಕರಗಳು ನಮ್ಮ ಜೀವನಕ್ಕೆ ಹೆಚ್ಚು ಅಪಾಯಕಾರಿ, ಹಾಗಾದರೆ ನಾವು ಈ ಪರಿಕರಗಳನ್ನು ಉಪಯೋಗಿಸುವುದರಿಂದ ಯಾವ ಯಾವ ರೀತಿಯ ಖಾಯಿಲೆಗಳಿಗೆ ತುತ್ತಾಗಬಹುದು ಎಂದು ನಾವು ನೋಡಿದರೆ ಅದರಲ್ಲಿ ಶೇಕಡಾ ೨೦ ರಷ್ಟು ಭಾಗ ಕ್ಯಾನ್ಸರ್ ಅನ್ನು ಅನುಭವಿಸಿದರೆ ಇನ್ನೂ ಉಳಿದ ೮೦ ಶೇಕಡಾದಷ್ಟು ಜನರು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ನಾವು ಈಗ ಯೋಚಿಸಬಹುದು ನಮ್ಮ ದೇಹಕ್ಕೆ ತುತ್ತನ್ನು ತರುವ ಈ ನೂತನ ಪರಿಕರಗಳು ಇನ್ನು ನಮ್ಮ ಪರಿಸರಕ್ಕೆ ಎಷ್ಟು ಹಾನಿಯನ್ನು ಉಂಟು ಮಾಡಬಹುದೆಂದು? ಹೌದು ಈಗೀನ ಎಲ್ಲಾ ನೂತನ ಆವಿಷ್ಕಾರಗಳು, ಪರಿಕರಗಳು ಒಂದು ರೀತಿಯ ಅಸಡ್ಡಾಳತನವನ್ನು ತೋರಿಸುತ್ತಿದೆ. ಹೌದು, ಯಾಕೆ? ಎಂದು ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಗಳು ಹುಟ್ಟಬಹುದು. ಆದರೆ ಇದು ಸತ್ಯವಾದ ಮಾತು.

ನಾವು ಬಳಸುವ ನೂತನ ಪರಿಕರಗಳು ನಮ್ಮ ಪರಿಸರದಿಂದಲೇ ತಯಾರಾಗಿ ಹಾಗೆಯೇ ಇನ್ನೂ ಕೆಲವು ಪರಿಸರಕ್ಕೆ ಅಡ್ಡ ಪರಿಣಾಮ ಉಂಟುಮಾಡುವ ರೀತಿಯಲ್ಲಿ ಆರಂಭವಾಗಿ ಇಂದು ಪ್ರಪಂಚದೆಲ್ಲೆಡೆ ಸಂಚರಿಸುತ್ತಿವೆ. ಇವು ನಮ್ಮ ಪರಿಸರವನ್ನು ಹಾಳು ಮಾಡುವಲ್ಲಿ ಎತ್ತಿದ ಕೈ ಆಗಿದೆ. ಇದರಿಂದ ಹವಾಮಾನದಲ್ಲಿ ತಾಪಮಾನ ಏರಿಕೆ ಕಾಣುತ್ತದೆ.

ಹಾಗಾದರೆ ಇವನ್ನು ತಪ್ಪಿಸಲು ಸಾಧ್ಯವಿಲ್ಲವೇ? ಎಂದು ನಿಮಗನ್ನಿಸಬಹುದು. ಆದರೆ ಪ್ರತಿಯೊಂದು ಸಮಸ್ಯಡಗೂ ತನ್ನದೇ ಆದ ನಿವಾರಣಾ ಉಪಾಯ ವಿರುತ್ತದೆ, ಇದಕ್ಕೂ ಇದೆ. ನಾವು ದಿನ ನಿತ್ಯ ಬಳಸುವ ನೂತನ ಪರಿಕರಗಳನ್ನು ಪರಿಸರ ಹಾನಿಯತ್ತ ಸಾಗದೇ ಇರಿವ ಹಾಗೆ ತಯಾರು ಮಾಡುವುದು ಬಿಟ್ಟರೆ ನಾವು ಇದನ್ನು ಬಳಸಿವುದನ್ನು ಕಡಿಮೆ ಮಾಡುವುದೇ ಇದಕ್ಕೆ ಶಾಶ್ವತ ಪರಿಹಾರವಾಗಿದೆ.

ಈಗಲಾದರೂ ಜನ ಎಚ್ಚೆತ್ತು ಕೊಂಡು ಎಲ್ಲರೂ ಒಗ್ಗೂಡಿ ಪರಿಸರ ವಿನಾಷವನ್ನು ತಪ್ಪಿಸಲು ಪ್ರಯತ್ನ ಮಾಡಬೇಕಾಗಿದೆ.


  • ವಿನಯ್ ಮುಂಗ್ರಾಣಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading