ಹಸಿರು ಕ್ರಾಂತಿ ಮಾಡಿ ಅನ್ನ ನೀಡುವ ರೈತರ ಶ್ರಮ ನೋಡಿ ಮನ ಖುಷಿಪಡುತ್ತಿದೆ!! …ಶರಣಗೌಡ ಬಿ ಪಾಟೀಲ ತಿಳಗೂಳ ಅವರ ಲೇಖನಿಯಲ್ಲಿ ಮೂಡಿದ ಕವಿತೆಯ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ಸೂರ್ಯ,ಚಂದ್ರ
ಯಾನ ಮಾಡಿ
ಆಕಾಶ ಪಾತಾಳದ ರಹಸ್ಯ
ಭೇದಿಸುವವರ ನೋಡಿ
ಮನ ಖುಷಿ ಪಡುತ್ತಿದೆ!
ಆಟೋಟದಲಿ
ವಿಸ್ಮಯ ತೋರಿ
ಕೇಕೆ ಚಪ್ಪಾಳೆ
ಗಿಟ್ಟಿಸಿಕೊಂಡವರ ನೋಡಿ
ಮನ ಖುಷಿ ಪಡುತ್ತಿದೆ!
ಜ್ಞಾನ ವಿಜ್ಞಾನ
ಕಲೆ ಸಾಹಿತ್ಯದಲಿ
ಛಾಪು ಮೂಡಿಸಿದ
ಸಾಧಕರಿಗೆ ನೋಡಿ
ಮನ ಖುಷಿ ಪಡುತ್ತಿದೆ!
ಹಸಿರು ಕ್ರಾಂತಿ ಮಾಡಿ
ಅನ್ನ ನೀಡುವ ರೈತರ
ಶ್ರಮ ನೋಡಿ
ಮನ ಖುಷಿಪಡುತ್ತಿದೆ!!
ಗಡಿಕಾಯುವ ಸೈನಿಕರ
ಶೌರ್ಯ ಸಹಾಸ ನೋಡಿ
ಮನ ಖುಷಿ ಪಡುತ್ತಿದೆ!!
ಮೋಸ ವಂಚನೆ ಕೊಲೆ
ಸುಲಿಗೆ ಮಾಡುವ
ದುಷ್ಟ ಭ್ರಷ್ಟರನು ನೋಡಿ
ಮನ ವ್ಯಥೆ ಪಡುತ್ತಿದೆ !!!!
- ಶರಣಗೌಡ ಬಿ ಪಾಟೀಲ ತಿಳಗೂಳ.
