ಪ್ರಕೃತಿಯನ್ನು ಉಳಿಸುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ. ಅಕಾಲಿಕ ಮಳೆಯಿಂದ ಅಡಿಕೆ ಬೆಳೆಗಾರರಿಗೆ ಈ ಮಳೆ ತುಂಬಾ ನೋವನ್ನು ಉಂಟು ಮಾಡಿದೆ. ಈ ಕುರಿತು ಓದುಗರೊಂದಿಗೆ ವಿನಯ್ ಮುಂಗ್ರಾಣಿ ಅವರು ತಮ್ಮ ಚಿಂತನ ಲೇಖನವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಹೊಸ ವರ್ಷದ ಸಂತಸದಲ್ಲಿ ಎಲ್ಲರೂ ಮುಳುಗಿರುವಾಗ ಅಕಾಲಿಕವಾಗಿ ಮಳೆಯು ಸುರಿದು ಚಳಿ-ಸೆಕೆ ಮಿಶ್ರಿತ ವಾತಾವರಣವನ್ನು ಉಂಟುಮಾಡಿದೆ. ಇವುಗಳಿಂದ ಜನರ ಆರೋಗ್ಯದಲ್ಲಿ ಏರು ಪೇರಾಗಿ ಎಲ್ಲರೂ ಗಾಬರಿಯಾಗುವಂತೆ ಮಾಡಿದೆ ಹಾಗೆ ಈ ಮಳೆಯಿಂದ ಬೆಳೆಗಾರರಿಗೆ ನಷ್ಟ ವಾಗುರುವುದು ಸಾಧ್ಯತೆ ಕಾಣತೊಡಗಿದೆ. ಈ ವಾತಾವರಣದ ಏರು ಪೇರಿನಿಂದ ಜನರ ಆರೊಗ್ಯ ಹದಗೆಟ್ಟಿದ್ದು ಎಲ್ಲರೂ ಆಸ್ಪತ್ರೆಯ ಕಡೆಗೆ ಮುಖಮಾಡಿ ನೊಡಿದ್ದಾರೆ. ಇದು ಒಂದು ಅಹಿಕರ ವಿಷಯ ಎಂದು ಭಾವಿಸ ಬೇಕಾಗಿದೆ. ಜನರು ಆಸ್ಪತ್ರೆಗೆ ಹೆಚ್ಚಾಗಿ ಬರುತ್ತಿರುವುದರಿಂದ ವೈದ್ಯರು ಸಲಹೆಗಳನ್ನು ನೀಡಲು ಮುಂದಾಗಿದ್ದಾರೆ. ವೈದ್ಯರು ಹೇಳಿರುವ ಪ್ರಕಾರ ಹೆಚ್ಚಾಗಿ ಈ ಚಳಿಗಾಲ ಬೇಸಿಗೆಕಾಲದ ಮಧ್ಯೆ ಮಳೆಯಾದಾಗ ಹೆಚ್ಚಾಗಿ ಜ್ವರ ಮತ್ತು ಶೀತದ ಪ್ರಕರಣಗಳು ಬರುವುದು ಹೆಚ್ಚು ಈತರಹದ ಸನ್ನಿವೆಷಗಳಲ್ಲಿ ಜನರು ಹೆಚ್ಚು ಮುಂಜಾಗ್ರತಾ ಕ್ರಮವಾಗಿ ಬಿಸಿನೀರು ಮತ್ತು ಬಿಸಿ ಬಿಸಿಯಾದ ಆಹಾರಗಳನ್ನು ತಿನ್ನುವುದು ಒಳ್ಳೆಯದು ಎಂದು ವೈದ್ಯರು ಸಲಹೆಗಲನ್ನು ನೀಡಿತ್ತಿದ್ದಾರೆ.

ಇದು ಒಂದು ಕಡೆಯಾದರೆ ಮತ್ತೊಂದು ಕಡೆಯಿಂದ ಅಡಿಕೆ ಬೆಳೆಗಾರರಿಗೆ ಈ ಮಳೆ ತುಂಬಾ ನೋವನ್ನು ಉಂಟು ಮಾಡಿದೆ. ಈ ಹೊಸ ವರ್ಷದ ಸಮಯದಲ್ಲಿ ಅಡಿಕೆ ಬೆಳೆಗಾರರು ಅಡಿಕೆಯನ್ನು ಮರದಿಂದ ಕೊಯ್ದು ಮಾರಾಟ ಮಾಡುವ ದಿನಗಳಿವು. ಇಂಥ ಸಮಯದಲ್ಲಿ ಅಕಾಲಿಕ ಮಳೆಯಿಂದ ಇವರು ವರ್ಷ ಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಯು ಹಾನಿಯಾಗುತಿದೆ. ಆಗ ಇದರಿಂದ ಅವರು ಮನೆಯನ್ನು ತೂಗಿಸಿಕೊಂಡು ಹೋಗುವುದು ಬಹಳ ಕಷ್ಟವಾಗ ತೊಡಗುತ್ತದೆ. ಇವೆಲ್ಲಾ ಹಾನಿಯಾಗಲು ಕಾರಣ ಈ ಒಂದು ಸಣ್ಣ ಮಳೆ. ಇಂಥ ಮಳೆಯೂ ಈಗಿನ ಕಾಲಮಾನದಲ್ಲಿ ಧಿಡೀರನೆ ಬರಲು ಕಾರಣವೇನು. ಅದು ಇನ್ನೊಂದು ಸ್ವಲ್ಪ ದಿನ ಆದಮೇಲೆ ಈ ಮಳೆಗೆ ಹೊಯ್ಯಲು ಆಗಲಿಲ್ಲವೆ ಎಂಬ ಹಲವಾರು ಪ್ರಶ್ನೆಗಳು ನಮ್ಮಲ್ಲಿ ಮೂಡಬಹುದು. ಆದರೆ ಇದಕ್ಕೆ ಕಾರಣ ನಾವೆ ಎನ್ನುವ ಉತ್ತರ ಇವರಿಗೆ ತಿಳಿದೇ ಇಲ್ಲ. ನಾವು ಹಲವು ಕಡೆ ಬಿಸಾಡುವ ಪ್ಲಾಸ್ಟಿಕ್‌ಗಳಿಂದ ಹಾಗೂ ಪರಿಸರದಲ್ಲಿ ಬೆಳೆಯುವ ಮರ-ಗಿಡಗಳನ್ನು ಕಡಿಯುವುದರಿಂದ ಆಗಿರಬಹದು. ಇಂತ ಕೆಲಸಗಳಿಂದ ನಮ್ಮ ಪ್ರಕೃತಿಯನ್ನು ನಾವೇ ಹಾಳು ಮಾಡುತ್ತಿರುವುದು ಯಾರ ಗಮನಕ್ಕೂ ಬಾರದೇ ಇರುವುದು ತುಂಬಾ ಬೇಸರದ ಸಂಗತಿಯಾಗಿದೆ.

ಪ್ರಕೃತಿಯನ್ನು ಉಳಿಸುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ. ಆದರೆ ಇದು ಈಗಿನ ಕಾಲದಲ್ಲಿ ನಾವು ಕಾಣದೆ ಇರುವುದನ್ನು ನಾವು ನೋಡಬಹುದಾಗಿದೆ. ಪರಿಸರವನ್ನು ನಾಷಮಾಡುತ್ತಿರುವುದರಿಂದಲೇ ಆಯಾ ಕಾಲಕ್ಕೆ ಮಳೆಯು ಸರಿಯಾಗಿ ಆಗದೆ ಯಾವಾಗ ಬೇಕೆಂದರಾವಾಗ ಮಳೆಯಾಗುತ್ತಿರುವುದು. ಇದರಿಂದ ನಮಗೆ ನಷ್ಟ ಹೊರತು ಬೇರೆಯವರಿಗಲ್ಲ. ಇವುಗಳನ್ನು ನಾಷಮಾಡದೆ ಸರಿಯಾದ ಕ್ರಮದಲ್ಲಿ ಇಟ್ಟರೆ ಎಲ್ಲವೂ ಸುಗಮ ರೀತಿಯಲ್ಲಿ ಹೊಗುತ್ತದೆ. ಇಲ್ಲವಾದರೆ ಇದೇ ರೀತಿ ಯಾವಾಗಬೇಕೇಂದರೆ ಆವಾಗ ಮಳೆಯಾಗಿ ನಮ್ಮ ಆರೋಗ್ಯ ಸ್ಥಿತಿ ಏರು ಪೇರಾಗಿ ನಾವು ಬೆಳೆದ ಬೆಳೆಗಳು ನಾಷವಾಗುತ್ತದೆ.
ಸರಿಯಾದ ಕ್ರಮದಲ್ಲಿ ನೆಡೆಯ ಬೇಕಾದ ಜವಾಬ್ದಾರಿ ನಮ್ಮೆಲ್ಲರ ಹೊಣೆಯಾಗಿದೆ.
- ವಿನಯ್ ಮುಂಗ್ರಾಣಿ – ಎಸ್ ಡಿ ಎಂ ಕಾಲೇಜ್ , ಉಜಿರೆ.
