ಕನ್ನಡದೀ ಭುವನೇಶ್ವರಿ ನಮ್ಮಯ ರಾಜೇಶ್ವರಿಗೆ ಅನುದಿನ ಮಾಡುವ ಪುಷ್ಪಾಂಜಲಿ…ಕವಿ ಶಿವದೇವಿ ಅವನೀಶಚಂದ್ರ ಅವರು ಕನ್ನಡದ ಕುರಿತು ಬರೆದ ಕವನವನ್ನು ತಪ್ಪದೆ ಪೂರ್ತಿಯಾಗಿ ಓದಿ…
ಕನ್ನಡವೆಂದರೆ ಹಳದಿ ಕೆಂಪಿನ
ಅರಶಿನ ಕುಂಕುಮ ನಾಮ
ವದನಕು ಆತ್ಮಕು ಶ್ರೇಯವ ತರುವ
ಪಾವನ ಶುಭದಾರಾಮ
ಕನ್ನಡವೆಂದರೆ ಬರಹಕು ಮಾತಿಗೂ
ಅನನ್ಯವೆನಿಸುವ ಮಧುರ ಬೆಸುಗೆ
ಎಲ್ಲರೂ ಹೃದಯಕು ನವಿರನು ತುಂಬುವ
ಪ್ರೇಮಲ ಆರ್ದ್ರತೆಯ ಒಸಗೆ
ನುಡಿಗುಡಿ ಕನ್ನಡ ಪಟ್ಟದ ಮಹಿಷಿ
ಕನ್ನಡದೀ ಭುವನೇಶ್ವರಿ ನಮ್ಮಯ ರಾಜೇಶ್ವರಿ
ನುಡಿನೀಲಾಂಜನದ ಜ್ಯೋತಿಯನುರಿಸಿ
ಅನುದಿನ ಮಾಡುವ ಪುಷ್ಪಾಂಜಲಿ
ಉಘೇ ಉಘೇ ತಾಯಿ ನಾಡನಾಳ್ದವರ
ಹೃದಯೇಶ್ವರಿ
ಜನಸಾಮಾನ್ಯರ ಮಾತಿನ ಮಂಟಪವೀ
ನಿರುತ ವರಪ್ರದಾಯಿನಿ ಮಾಹೇಶ್ವರಿ
- ಫೋಟೋ ಮತ್ತು ಶಿವದೇವಿ ಅವನೀಶಚಂದ್ರ – ಶಿಕ್ಷಕರು, ಕವಿಗಳು, ಕೊಡಗು.
