‘ಕನ್ನಡ ಗೀತೆ’ ಕವನ

ಕವಿ ವಿ.ಎಂ.ಎಸ್.ಗೋಪಿ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಪೂರ್ತಿಯಾಗಿ ಓದಿ…

ಕನ್ನಡ ರಾಜ್ಯೋತ್ಸವ ಮಾಡೋಣ
ಬನ್ನಿರಿ ಎಲ್ಲರೂ ಆಚರಿಸೋಣ

ನಮ್ಮೆಲ್ಲರಿಗೂ ಶುಭದಿನಾ
ಹಾಡುತ ನಲಿಯುತ ಆನಂದಿಸೋಣ

ಎಲ್ಲರೂ ಒಂದೆಡೆ ಕೂಡೋಣ
ಕನ್ನಡ ಧ್ವಜವನ್ನು ಹಾರಿಸೋಣ

ಭೇದ ಭಾವ ಮರೆಯೋಣ
ಒಂದಾಗಿ ಎಲ್ಲರೂ ನಲಿಯೋಣ

ಕನ್ನಡ ಗೀತೆಯನ್ನು ಹಾಡೋಣ
ಕನ್ನಡ ವಂದನೆ ಸಲ್ಲಿಸೋಣ

ಎಲ್ಲರೂ ಒಂದಾಗಿ ಬಾಳೋಣ
ತಾಯ್ನಾಡಿಗಾಗಿ ಡುಡಿಯೋಣ

ಕನ್ನಡ ರಾಜ್ಯೋತ್ಸವ ಮಾಡೋಣ
ಬನ್ನಿರಿ ಎಲ್ಲರೂ ಆಚರಿಸೋಣ


  • ವಿ.ಎಂ.ಎಸ್.ಗೋಪಿ – ಲೇಖಕರು, ಸಾಹಿತಿಗಳು, ಬೆಂಗಳೂರು.

Leave a Reply

Home
Search
Menu
Recent
About
×